ಸ್ಯಾಂಡಲ್ವುಡ್ನ (Sandalwood) ಖ್ಯಾತ ನಟ (Actor), ನಿರ್ದೇಶಕ (Director), ನಿರ್ಮಾಪಕ (Producer), ಸಂಗೀತ ನಿರ್ದೇಶಕ (Music Director) ವಿ. ರವಿಚಂದ್ರನ್ (V. Ravichandran) ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಹಲವು ಜನಪ್ರಿಯ ಚಿತ್ರಗಳಲ್ಲಿ (Cinema) ನಟಿಸಿ ಸೈ ಎನಿಸಿಕೊಂಡ ರವಿಚಂದ್ರನ್, ಆಮೇಲೆ ಕಿಚ್ಚ ಸುದೀಪ್ (Kichcha Sudeep), ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಸೇರಿದಂತೆ ಹಲವು ನಟರಿಗೆ ತಂದೆಯಾಗಿ (Father) ಅಭಿನಯಿಸಿ, ಸೈ ಎನಿಸಿಕೊಂಡಿದ್ದಾರೆ. ಇದೀಗ ವಿ. ರವಿಚಂದ್ರನ್ ತೆಲುಗು ಚಿತ್ರರಂಗಕ್ಕೂ (Telugu Film Industry) ಹೋಗಲಿದ್ದಾರೆ ಎಂಬ ಸುದ್ದಿ ಟಾಲಿವುಡ್ (Tollywood) ಗಲ್ಲಿಯಿಂದ ಬಂದಿದೆ. ಇತ್ತ ಈ ಸುದ್ದಿ ಕೇಳಿ ಕ್ರೇಜಿಸ್ಟಾರ್ ಅಭಿಮಾನಿಗಳು (Fans) ಸಂತಸಗೊಂಡಿದ್ದಾರೆ. ಹಾಗಿದ್ರೆ ರವಿಚಂದ್ರನ್ ತೆಲುಗು ಚಿತ್ರರಂಗಕ್ಕೆ ಹೋಗ್ತಾರಾ? ಯಾರ ಜೊತೆ ಕ್ರೇಜಿಸ್ಟಾರ್ ತೆರೆ ಹಂಚಿಕೊಳ್ಳಲಿದ್ದಾರೆ? ಅಭಿಮಾನಿಗಳ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಮತ್ತೆ ತೆಲುಗಿಗೆ ಹೋಗ್ತಾರಾ ರವಿಚಂದ್ರನ್?
ಕ್ರೇಜಿಸ್ಟಾರ್ ರವಿಚಂದ್ರನ್ ಈಗ ಫುಲ್ ಬ್ಯುಸಿ. ಒಂದೆಡೆ ರೀಲಿಸ್ಗೆ ಅವರ ಸಿನಿಮಾಗಳು ರೆಡಿಯಾಗಿವೆ. ಮತ್ತೊಂದೆಡೆ ಸಿನಿಮಾಗಳ ಮೇಲೆ ಸಿನಿಮಾ ಮಾಡ್ತಿದ್ದಾರೆ. ಇದರ ನಡುವೆಯೇ ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಡ್ರಾಮಾ ಜ್ಯೂನಿಯರ್ಸ್ನಲ್ಲಿ ಕ್ರೇಜಿಸ್ಟಾರ್ ಆ್ಯಕ್ಟ್ ಮಾಡ್ತಿದ್ದಾರೆ. ಇದೀಗ ಅವರ ಅಭಿಮಾನಿಗಳು ಖುಷಿ ಪಡುವ ಸುದ್ದಿಯೊಂದು ಬಂದಿದೆ. ಅದೇನಪ್ಪಾ ಅಂದ್ರೆ ರವಿಚಂದ್ರನ್ ಅವರು ತೆಲುಗು ಸಿನಿಮಾದ ಸ್ಟಾರ್ ನಟರೊಬ್ಬರ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಆ್ಯಕ್ಟ್ ಮಾಡ್ತಿದ್ದಾರಂತೆ.
ಮಹೇಶ್ ಬಾಬು ಜೊತೆ ಆ್ಯಕ್ಟ್ ಮಾಡ್ತಾರಾ ರವಿಚಂದ್ರನ್?
ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಇತ್ತೀಚಿನ ಚಿತ್ರ ‘ಸರ್ಕಾರು ವಾರಿ ಪಾಟ’ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಹೀಗಾಗಿ ಮುಂದಿನ ಸಿನಿಮಾಗೆ ಮಹೇಶ್ ಬಾಬು ರೆಡಿಯಾಗ್ತಿದ್ದಾರೆ. ಈಗಾಗಲೇ ತಮ್ಮ ಮುಂದಿನ ಸಿನಿಮಾವನ್ನು ತ್ರಿವಿಕ್ರಮ್ ಅವರ ನಿರ್ದೇಶನದಲ್ಲಿ ಮಾಡಲು ಮುಂದಾಗಿರುವ ಮಹೇಶ್ ಬಾಬು, ಈ ಸಿನಿಮಾವನ್ನು ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತೆ ಚಿತ್ರಿಸಲು ನೋಡುತ್ತಿದ್ದಾರೆ. ಈ ಸಿನಿಮಾದಲ್ಲಿ ರವಿಚಂದ್ರನ್ ಆ್ಯಕ್ಟ್ ಮಾಡ್ತಾರೆ ಎನ್ನಲಾಗ್ತಿದೆ.
ಇದನ್ನೂ ಓದಿ: Malashri: ಮತ್ತೆ ಬಣ್ಣದ ಲೋಕದತ್ತ ಮುಖ ಮಾಡಿದ ಕನಸಿನ ರಾಣಿ, ‘ನೈಟ್ ಕರ್ಫ್ಯೂ‘ ವಿಧಿಸಲು ಸಜ್ಜಾದ ಮಾಲಾಶ್ರೀ
ಪ್ರಿನ್ಸ್ಗೆ ತಂದೆಯಾಗ್ತಾರಾ ಕ್ರೇಜಿಸ್ಟಾರ್?
ಈ ಸಿನಿಮಾದಲ್ಲಿ ಮಾಸ್ ಅಂಶಗಳ ಜೊತೆಗೆ ಸಾಕಷ್ಟು ಫ್ಯಾಮಿಲಿ ಎಮೋಷನ್ಸ್ ಇರಲಿದೆಯಂತೆ. ಈ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ನಟ ಅನಿಲ್ ಕಪೂರ್ ಮಹೇಶ್ ಬಾಬು ಅವರ ತಂದೆಯ ಪಾತ್ರವನ್ನು ಮಾಡಲಿದ್ದಾರಂತೆ ಎನ್ನಲಾಗ್ತಿತ್ತು. ಆದರೆ ಅದು ಕನ್ಫರ್ಮ್ ಆಗಿಲ್ಲ. ಇದೀಗ ಈ ಪಾತ್ರಕ್ಕೆ ವಿ. ರವಿಚಂದ್ರನ್ ಅವರ ಹೆಸರು ಕೇಳಿ ಬರುತ್ತಿದೆ.
ಈ ಚಿತ್ರದಲ್ಲಿ ಮಹೇಶ್ ಅವರ ತಂದೆಯ ಪಾತ್ರ ಬಹುಮುಖ್ಯವಾಗಿರಲಿದೆ ಎನ್ನುತ್ತವೆ ಚಿತ್ರ ಮೂಲಗಳು. ಹಾಗಾಗಿಯೇ ದಕ್ಷಿಣ ಭಾಗದ ಚಿತ್ರರಂಗದಲ್ಲಿ ಪರಿಚಯವಿರುವ ನಾಯಕನಾದರೆ ಇಲ್ಲಿನ ಪ್ರೇಕ್ಷಕರಿಗೆ ಪಾತ್ರ ತುಂಬಾ ಕನೆಕ್ಟ್ ಆಗಲಿದೆ ಎಂಬುದು ಚಿತ್ರತಂಡದ ಆಶಯ. ಹಾಗಾಗಿ ಮಹೇಶ್ ಬಾಬು ತಂದೆಯಾಗಿ ಕ್ರೇಜಿಸ್ಟಾರ್ ನಟಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: Brahmastra: ನಿರ್ದೇಶಕ ಎಸ್ಎಸ್ ರಾಜಮೌಳಿಗೆ ಅಯ್ಯಾನ್ ಮುಖರ್ಜಿ ಮೇಲೆ ಬೇಸರವಂತೆ; ಕಾರಣ ಏನು ಗೊತ್ತಾ?
ತೆಲುಗು ಚಿತ್ರರಂಗಕ್ಕೆ ರವಿಚಂದ್ರನ್ ಹೊಸಬರೇನಲ್ಲ
ರವಿಚಂದ್ರನ್ ಅನೇಕ ಸಿನಿಮಾಗಳು ತೆಲುಗಿಗೆ ಡಬ್ ಆಗಿವೆ. ಅಲ್ಲದೇ ಒಂದೆರಡು ಸಿನಿಮಾದಲ್ಲೂ ರವಿಚಂದ್ರನ್ ಗೆಸ್ಟ್ ರೋಲ್ ಮಾಡಿದ್ದಾರೆ. ಇದೀಗ ಮಹೇಶ್ ಬಾಬು ಸಿನಿಮಾದಲ್ಲಿ ರವಿಚಂದ್ರನ್ ನಟಿಸಿದರೆ ದೊಡ್ಡ ಮಟ್ಟದಲ್ಲಿ ತೆಲುಗಿನಲ್ಲಿ ನಟಿಸಿದಂತೆ ಆಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ