• Home
  • »
  • News
  • »
  • entertainment
  • »
  • Actor Upendra: ಹಂಪಿಗೆ ರಿಯಲ್ ಸ್ಟಾರ್ ಉಪೇಂದ್ರ ಭೇಟಿ!

Actor Upendra: ಹಂಪಿಗೆ ರಿಯಲ್ ಸ್ಟಾರ್ ಉಪೇಂದ್ರ ಭೇಟಿ!

ಉಪೇಂದ್ರ

ಉಪೇಂದ್ರ

ಹಂಪಿಗೆ ಭೇಟಿ ಕೊಟ್ಟ ನಟ ಉಪೇಂದ್ರ ವಿರೂಪಾಕ್ಷೇಶ್ವರ ದೇವಾಲಕ್ಕೆ ಭೇಟಿ ನೀಡಿ ವಿರೂಪಾಕ್ಷ, ಪಂಪಾದೇವಿ ಹಾಗೂ ಭುವನೇಶ್ವರಿ ದೇವಿ ‌ದರ್ಶನ ಪಡೆದರು.

  • Share this:

ವಿಶ್ವವಿಖ್ಯಾತ ಹಂಪಿಗೆ ರಿಯಲ್ ಸ್ಟಾರ್ (Real Star) ಉಪೇಂದ್ರ (Upendra) ಅವರು ಸೋಮವಾರ ಭೇಟಿ ನೀಡಿ, ಪ್ರಮುಖ ಸ್ಮಾರಕಗಳನ್ನು ವೀಕ್ಷಣೆ ಮಾಡಿದ್ದಾರೆ. ಮೊದಲು ವಿರೂಪಾಕ್ಷೇಶ್ವರ ದೇವಾಲಕ್ಕೆ ಭೇಟಿ ನೀಡಿ ವಿರೂಪಾಕ್ಷ, ಪಂಪಾದೇವಿ ಹಾಗೂ ಭುವನೇಶ್ವರಿ ದೇವಿ ‌ದರ್ಶನ ಪಡೆದರು. ಅ.11ರಿಂದ 13ರವರೆಗೆ ಹೊಸಪೇಟೆ ಸುತ್ತಮುತ್ತಿಲಿನ ಪ್ರದೇಶದಲ್ಲಿ ನಟ ಉಪೇಂದ್ರ ರವರೇ ನಿರ್ದೇಶಿಸಿ, ನಟಿಸುತ್ತಿರುವ ಯುಐ ಸಿನಿಮಾ (Cinema) ಶೂಟಿಂಗ್ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹಂಪಿಗೆ (Hampi) ಭೇಟಿ ನೀಡಿದ ಅವರು ವಿಜಯವಿಠಲ ದೇವಾಲಯ ಸೇರಿದಂತೆ ವಿವಿಧ ಸ್ಮಾರಕಗಳನ್ನು ವೀಕ್ಷಣೆ ಮಾಡಿ‌ ಕಣ್ತುಂಬಿಕೊಂಡರು. ಹೊಸಪೇಟೆಯ (Hosapete) ಸರಸ್ವತಿ ಹಾಗೂ ಲಕ್ಷ್ಮಿ ಚಿತ್ರಮಂದಿರಗಳಲ್ಲಿ (Theater) ಕೂಡ ಮೂರು ದಿನಗಳ ಕಾಲ ಯುಐ ಸಿನಿಮಾ ಶೂಟಿಂಗ್ ನಡೆಯಲಿದೆ. ಚಿತ್ರೀಕರಣದಲ್ಲಿ (Shooting) ಸ್ಥಳೀಯ ಕಲಾವಿದರು ಹಾಗೂ ಸಾರ್ವಜನಿಕರೂ ಭಾಗವಹಿಸಿ, ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳಲು ಚಿತ್ರ ತಂಡ ಅವಕಾಶ ನೀಡಿದೆ.


ಲಹರಿ ಫಿಲಂಸ್ ಮತ್ತು ವೀನಸ್ ಎಂಟರ್ ಟೈನರ್ಸ್ ಜಂಟಿ ನಿರ್ಮಾಣದಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ಲಹರಿ ಫಿಲಂಸ್ ಮನೋಹರನ್ ಹಾಗೂ ಕೆ.ಪಿ ಶ್ರೀಕಾಂತ್ ಚಿತ್ರದ ನಿರ್ಮಿಸುತ್ತಿದ್ದಾರೆ. ರಾ ರಾ ರಕ್ಕಮ್ಮ ಖ್ಯಾತಿಯ ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.




ಅದ್ಧೂರಿಯಾಗಿ ನಡೆದಿತ್ತು ಲಾಂಚ್


ಉಪೇಂದ್ರ ಅವರ ಯುಐ ಚಿತ್ರದ ಲಾಂಚ್​ನಲ್ಲಿ ಕಿಚ್ಚ ಸುದೀಪ್, ದುನಿಯಾ ವಿಜಯ್, ಧನಂಜಯ, ಮತ್ತು ವಸಿಷ್ಟ ಸಿಂಹ ಸೇರಿದಂತೆ ಇತರ ಗಣ್ಯರು ಸೇರಿದಂತೆ ನಟ ಶಿವರಾಜ್‌ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಏಳು ವರ್ಷಗಳ ನಂತರ ‘ಯುಐ’ ಚಿತ್ರದ ಮೂಲಕ ಉಪೇಂದ್ರ ನಿರ್ದೇಶನಕ್ಕೆ ಮರಳುತ್ತಿದ್ದಾರೆ. 2015 ರಲ್ಲಿ ಬಿಡುಗಡೆಯಾದ 'ಉಪ್ಪಿ2' ಅವರ ಕೊನೆಯ ನಿರ್ದೇಶನದ ಸಿನಿಮಾ.


ನಿರ್ದೇಶಕರಾಗಿ 30 ವರ್ಷ


1992 ರಲ್ಲಿ 'ತರ್ಲೆ ನನ್ನ ಮಗ' ಚಿತ್ರದ ಮೂಲಕ ನಿರ್ದೇಶಕರಾಗಿ ಕೆಲಸ ಮಾಡಿದ ಉಪೇಂದ್ರ 30 ವರ್ಷಗಳನ್ನು ಪೂರೈಸುತ್ತಿದ್ದಾರೆ. ತಮ್ಮ ಸೃಜನಶೀಲತೆ, ವಿಭಿನ್ನ ಚಿತ್ರಕಥೆ, ಬೋಲ್ಡ್ ಡೈಲಾಗ್‌ಗಳು, ವಿಭಿನ್ನ ಪ್ರಕಾರಗಳನ್ನು ತೆರೆ ಮೇಲೆ ತೋರಿಸುವ ನಟ, ಅದ್ಭುತ ಮೇಕಿಂಗ್ ಮತ್ತು ನಿರೂಪಣೆಯಿಂದ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದಾರೆ.


ಹೇಗಿದೆ ಸಿನಿಮಾ ಪೋಸ್ಟರ್


ಯುಐ ಸಿನಿಮಾದ ಮುಹೂರ್ತದ ನಂತರ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ಬಿಡುಗಡೆ ಮಾಡಿರುವ ಪೋಸ್ಟರ್ ನಲ್ಲಿ ಇನ್ನೊಂದು ಪೋಸ್ಟರ್ ಅಡಗಿರುವಂತೆ ಇದನ್ನು ಡಿಸೈನ್ ಮಾಡಲಾಗಿದೆ. ಕುದುರೆಯ ಮುಖಕ್ಕೆ UI ಎಂಬ ಚಿಹ್ನೆ ನೀಡಿ, ಅರ್ಧ ಮುಖದಲ್ಲಿ ಉಪೇಂದ್ರ ಅವರ ಮುಖವನ್ನು ಸೇರಿಸಲಾಗಿದೆ.


ಇದನ್ನೂ ಓದಿ: Kantara: ಕಾಂತಾರ ಸಿನಿಮಾದ ವರಾಹ ರೂಪಂ ಟ್ಯೂನ್ ಕಾಪಿ ಮಾಡಿದ್ದಾ? ಮಲಯಾಳಂನ ಹಳೆ ಆಡಿಯೋ ಈಗ ವೈರಲ್


ಮೊದಲ ನಿರ್ದೇಶನದ ಸಿನಿಮಾ ಮುಹೂರ್ತ ಆಮಂತ್ರಣ


ಇತ್ತೀಚೆಗೆ ಉಪೇಂದ್ರ ಅವರು ತಮ್ಮ ಮೊದಲ ನಿರ್ದೇಶನ ಸಿನಿಮಾ ಮೂಹೂರ್ತದ ಆಮಂತ್ರಣ ಪತ್ರಿಕೆಯನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. 31 ವರ್ಷಗಳ ಹಿಂದೆ ಎಂದು ಕ್ಯಾಪ್ಶನ್ ಕೊಟ್ಟು ಉಪೇಂದ್ರ ಅವರು ಫೋಟೋ ಶೇರ್ ಮಾಡಿದ್ದಾರೆ.









View this post on Instagram






A post shared by Upendra (@nimmaupendra)





ಇದನ್ನೂ ಓದಿ: Real Star Upendra: ಅಭಿಮಾನಿಗಳ ತಲೆಗೆ ಮತ್ತೆ ಹುಳ ಬಿಟ್ಟ ಉಪ್ಪಿ, 'UI' ಚಿತ್ರದ ಪೋಸ್ಟರ್ ಬಿಡುಗಡೆ


ಇತ್ತೀಚೆಗಷ್ಟೇ ಕಬ್ಜ ಟೀಸರ್ ರಿಲೀಸ್ ಆದಾಗ ಅಭಿಮಾಣಿಗಳು ಖುಷ್ ಆಗಿದ್ದರು. ಸಾಕಷ್ಟು ನಿರೀಕ್ಷೆ ಹುಟ್ಟಿಸಿರೋ ಸಿನಿಮಾದಲ್ಲಿ ನಟಿ ಶ್ರಿಯಾ ಶರಣ್ ಅಭಿನಯಿಸುತ್ತಿದ್ದಾರೆ. ಇದರಲ್ಲಿ ಉಪೇಂದ್ರ ಅವರನ್ನು ಮಾಸ್ ಲುಕ್​ನಲ್ಲಿ ಕಾಣಬಹುದು.

Published by:Divya D
First published: