ಪ್ರಪಂಚವೇ ಒಮ್ಮೆ ತಿರುಗಿ ನೋಡುವಂತೆ ಕನ್ನಡ ಚಿತ್ರಗಳು (Kannada Films) ಎಲ್ಲೆಡೆ ಸದ್ದು ಮಾಡುತ್ತಿವೆ. ಕಾಂತಾರ, KGF, ವಿಕ್ರಾಂತ್ ರೋಣ, ಚಾರ್ಲಿ ಸಿನಿಮಾಗಳು ಕನ್ನಡ ಚಿತ್ರರಂಗವನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿವೆ. ಕನ್ನಡಿಗರಿಗೆ ಮಾತ್ರ ಈ ಸಿನಿಮಾಗಳು ಸೀಮಿತವಾಗದೇ, ಬೇರೆ ಭಾಷೆ (Other Language), ಬೇರೆ ಜನ ಇಷ್ಟಪಡುವಂತೆ ಮಾಡುತ್ತಿವೆ. ಈ ಸಾಲಿಗೆ ಸೇರಲು ಉಪೇಂದ್ರ (Upendra) ಅಭಿನಯದ ಕಬ್ಜ (Kabzaa) ಚಿತ್ರ ಸಿದ್ಧವಾಗಿದೆ. ಈಗಾಗಲೇ ಟೀಸರ್ ನೋಡಿ ಜನ ಸಿನಿಮಾ ನೋಡಬೇಕೆಂದು ಕಾತುರರಾಗಿದ್ದಾರೆ. ಈಗ ಟೈಟಲ್ ಸಾಂಗ್ (Song) ರಿಲೀಸ್ ಆಗಿದೆ. ಹೈದ್ರಾಬಾದ್ನಲ್ಲಿ ದೊಡ್ಡ ಇವೆಂಟ್ ಮಾಡಿ, ಸಿನಿಮಾದ ಹಾಡನ್ನು ರಿಲೀಸ್ ಮಾಡಿದ್ದಾರೆ. ಕಬ್ಜ, ಕಬ್ಜ ಅಬ್ಬರಿಸಿ ಬಂದ ಕಬ್ಜ ಎಂದು ಎಲ್ಲರ ಬಾಯಲ್ಲೂ ಗುನುಗುವಂತೆ ಮಾಡುತ್ತಿದೆ.
ಕಬ್ಜ ಸಿನಿಮಾದ ಟೈಟಲ್ ಟ್ರ್ಯಾಕ್
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾ ಬಹು ನಿರೀಕ್ಷೆಯ ಸಿನಿಮಾ ಆಗಿದೆ. ಕಬ್ಜ ಚಿತ್ರದ ನಿರ್ದೇಶಕ-ನಿರ್ಮಾಪಕ ಆರ್.ಚಂದ್ರು ತುಂಬಾ ಖುಷಿಯಲ್ಲಿಯೇ ಇದ್ದಾರೆ. ಅಪ್ಪು ಬರ್ತ್ ಡೇ ದಿನ ಅಂದರೆ ಮಾರ್ಚ್ 17 ರಂದು ಸಿನಿಮಾ ಬಿಡುಗಡೆ ಆಗಲಿದೆ. ಎಲ್ಲರು ಸಿನಿಮಾ ನೋಡಲು ಕಾಯ್ತಾ ಇದ್ದಾರೆ. ಶನಿವಾರ ಸಂಜೆ 7 ಗಂಟೆಗೆ ಹೈದ್ರಾಬಾದ್‍ನಲ್ಲಿ ಕಬ್ಜ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ.
ಕಬ್ಜ ಚಿತ್ರಕ್ಕೆ ಕೆಜಿಎಫ್ ರವಿ ಬಸ್ರೂರು ಸಂಗೀತ ನಿರ್ದೇಶನ
ಕಬ್ಜ ಚಿತ್ರದ ಹಾಡುಗಳೆಲ್ಲಾ ಅದ್ಭುತವಾಗಿವೆ ಎಂದು ಹೇಳಲಾಗ್ತಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಟೈಟಲ್ ಸಾಂಗ್ ಮೋಡಿ ಮಾಡುತ್ತಿದೆ. ಕೆಜಿಎಫ್ ಚಿತ್ರ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಒಳ್ಳೆ ಸಂಗೀತ ನೀಡಿದ್ದಾರೆ. ಮ್ಯೂಸಿಕ್ ಮನಸ್ಸಿನಲ್ಲಿ ಉಳಿಯುವಂತೆ ಇದೆ.
ಭೂಗತ ಲೋಕದ ಕಥೆ
ಕಬ್ಜ ಸಿನಿಮಾ ಸ್ವಾತಂತ್ರ್ಯಪೂರ್ವದ ಭೂಗತ ಲೋಕದ ಕಥೆ. ಕೆಜಿಎಫ್ ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ. ಉಪೇಂದ್ರಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದು, ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ಮುಂತಾದವರು ಅಭಿನಯಿಸಿದ್ದಾರೆ.
ಬಿಗ್ ಫೈಟ್ಸ್ ಕಬ್ಜ ಚಿತ್ರದ ಸ್ಪೆಷಲ್
ಬಿಗ್ ಸ್ಟಾರ್ ಗಳ ಕಬ್ಜ ಚಿತ್ರದಲ್ಲಿ ಫೈಟ್ಸ್ ಜಾಸ್ತಿ ಇದೆ. ಚಿತ್ರ ಕಥೆಯಲ್ಲಿ ಮಾಸ್ ಮತ್ತು ಕ್ಲಾಸ್ ಟಚ್ ಕೂಡ ಇದೆ. ಇದರಿಂದ ಇಲ್ಲಿ ಫೈಟ್ಸ್‍ಗೆ ಜಾಸ್ತಿ ಒತ್ತುಕೊಡಲಾಗಿದೆ. ಚಿತ್ರದಲ್ಲಿ ಹೆಚ್ಚು ಕಡಿಮೆ 8 ಫೈಟ್ಸ್ ಇರೋದು ವಿಶೇಷ. ಇರೋ ಫೈಟ್ಸ್ ಎಲ್ಲ ಮೇಜರ್ ಫೈಟ್ಸ್ ಆಗಿವೆ. ಇವುಗಳನ್ನ ಅಷ್ಟೇ ಅದ್ಭುತವಾಗಿಯೇ ಕ್ಯಾಮೆರಾಮನ್ ಎ.ಜೆ.ಶೆಟ್ಟಿ ಸೆರೆ ಹಿಡಿದಿದ್ದಾರೆ.
IMDB ಪಟ್ಟಿಯಲ್ಲಿ ಕಬ್ಜ ಸಿನಿಮಾ
ನಾನು ನನ್ನ ಕೆಲಸವನ್ನ ಮಾಡಿಕೊಂಡು ಹೋಗುತ್ತಿದ್ದೇನೆ. ನಮ್ಮ ಸಿನಿಮಾ IMDB ಪಟ್ಟಿಯಲ್ಲಿ ಬಂದಿದೆ ಅನ್ನೋದೇ ದೊಡ್ಡ ಖುಷಿ ತಂದಿದೆ. IMDB ಅನ್ನೋದು ಸುಮ್ನೆ ಅಲ್ಲ. ಎಲ್ಲವನ್ನೂ ಅಳೆದು ತೂಗಿಯೇ ಪಟ್ಟಿ ಮಾಡುತ್ತಾರೆ ಎಂದು ಆರ್.ಚಂದ್ರು ಹೇಳಿದ್ದಾರೆ.
ಇದನ್ನೂ ಓದಿ: Saanya Iyer: 'ಸಿಂಗಾರ ಸೀರೆ'ಯಲ್ಲಿ ಸಾನ್ಯಾ ಐಯ್ಯರ್ ಸೂಪರ್!
ಆರ್.ಚಂದ್ರು ಸಿನಿಮಾ ಜರ್ನಿಯಲ್ಲಿ ಇಲ್ಲಿವರೆಗೂ ಚಿತ್ರಗಳು ಕರ್ನಾಟಕದಲ್ಲಿಯೇ ಹೆಚ್ಚು ಸದ್ದು ಮಾಡಿದ್ದವು. ಅದು ಬಿಟ್ಟರೇ ಟಾಲಿವುಡ್‌ನಲ್ಲೂ ಗಮನ ಸೆಳೆದಿದ್ದವು. ಆದರೆ ಕನ್ನಡದ ಕಬ್ಜ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ಹೋಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ