Super Star Movie: ಉಪೇಂದ್ರ ಅಣ್ಣನ ಮಗ ನಿರಂಜನ್ ಅಭಿನಯದ ಸೂಪರ್​​ ಸ್ಟಾರ್ ಟೀಸರ್ ರಿಲೀಸ್

Super Star Movie: ನಟ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಅವರ ಸಿನಿಮಾ ಸೂಪರ್ ಸ್ಟಾರ್ ಟೀಸರ್ ರಿಲೀಸ್ ಆಗಿದೆ. ಇನ್​ಸ್ಟಾಗ್ರಾಮ್​ನಲ್ಲಿ ಟೀಸರ್ ಶೇರ್ ಮಾಡಲಾಗಿದ್ದು ಉತ್ತಮ ಪ್ರತಿಕ್ರಿಯೆ ಗಳಿಸಿದೆ.

ನಿರಂಜನ್ ಸುಧೀಂದ್ರ

ನಿರಂಜನ್ ಸುಧೀಂದ್ರ

  • Share this:
ಸ್ಯಾಂಡಲ್​​ವುಡ್​ನಲ್ಲಿ (Sandalwood) ಮಿಂಚಲು ರೆಡಿಯಾಗಿರುವ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ (Niranjan Sudhindra) ಅವರ ಸಿನಿಮಾ ಟೀಸರ್ ಈಗ ವೈರಲ್ ಆಗಿದೆ. ಆಗಸ್ಟ್ 22ರಂದು ಮುಂಬರುವ ಸೂಪರ್​ಸ್ಟಾರ್ ಸಿನಿಮಾದ ಟೀಸರ್ (Teaser) ರಿಲೀಸ್ ಮಾಡಲಾಗಿದೆ. ನಟ ನಿರಂಜನ್ ಅವರು ಸಿನಿಮಾದ ಟೀಸರ್ ಅನ್ನು ತಮ್ಮ ಇನ್​ಸ್ಟಾಗ್ರಾಮ್ (Instagram) ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ (Video) ಈಗಾಗಲೇ 25 ಸಾವಿರಕ್ಕೂ ಹೆಚ್ಚು ವ್ಯೂಸ್ ಗಳಿಸಿದ್ದು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆಯನ್ನು ಗಳಿಸುತ್ತಿದೆ. ಸೂಪರ್ ಸ್ಟಾರ್ ಟೀಸರ್. ನೆಕ್ಸ್ಟ್ ಲೆವೆಲ್ ಎಂಟ್ರಿ ಹೀಗಿರುತ್ತದೆ. ಇದಕ್ಕೆ ನಿಮ್ಮೆಲ್ಲರ ಪ್ರೀತಿ ಬೇಕಾಗಿದೆ. ಇದು ನಮ್ಮ ತಂಡದಿಂದ ಚಿಕ್ಕ ಬರ್ತ್​ಡೇ ಪ್ರೆಸೆಂಟ್. ನಾವು ನಿಮಗೆ ಇನ್ನಷ್ಟು ತೋರಿಸಲಿದ್ದೇವೆ. ರೆಡಿಯಾಗಿರಿ ರಂದು ಟೀಸರ್ ಪೋಸ್ಟ್ ಮಾಡುವಾಗ ಕ್ಯಾಪ್ಶನ್ ಕೊಟ್ಟಿದ್ದಾರೆ.

ನಿರಂಜನ್ ಸುಧೀಂದ್ರ ಅವರು ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ 'ನಮ್ಮ ಹುಡುಗರು' ಸಿನಿಮಾ ಮಾಡಿದ್ದಾರೆ. ಜೊತೆಗೆ ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಇದೀಗ 'ಸೂಪರ್ ಸ್ಟಾರ್‌' ಹೆಸರಿನ ಪ್ಯಾನ್ ಇಂಡಿಯಾ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಆದಾಗಲೂ ಇದನ್ನು ಸಿನಿಪ್ರಿಯರು ಮೆಚ್ಚಿಕೊಂಡಿದ್ದರು.

ಹೇಗಿದೆ ಟೀಸರ್?

ಟೀಸರ್​ನಲ್ಲಿ ಒಂದಷ್ಟು ಫೈಟಿಂಗ್ ಸೀನ್​ಗಳನ್ನು ತೋರಿಸಲಾಗಿದ್ದು ಎಲ್ಲಿಯೂ ನಿರಂಜನ್ ಅವರ ಮುಖವನ್ನು ತುಂಬಾ ಹತ್ತಿರದಿಂದ ತೋರಿಸಲಾಗಿಲ್ಲ. ಟೀಸರ್​ನಲ್ಲಿ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿರುವ ನಿರಂಜನ್ ಅವರನ್ನು ಶ್ಯಾಡೋ ರೀತಿಯಲ್ಲಿ, ವಿಭಿನ್ನ ಕ್ಯಾಮೆರಾ ಆ್ಯಂಗಲ್​ಗಳಲ್ಲಿ ಕಂಡುಬಂದಿದ್ದಾರೆ. ಕೆಲವೊಂದು ಡಿಫರೆಂಟ್ ಫೈಟಿಂಗ್ ಸೀನ್ ಸುಂದರವಾಗಿ ಮೂಡಿಬಂದಿದೆ.

'ರಮಾಸ್ ಮೀಡಿಯಾ ಕ್ರಿಯೇಷನ್ಸ್'

ವಿಶೇಷವೆಂದರೆ, ಈ ಸಿನಿಮಾದ ಮೂಲಕ ತೆಲುಗಿನ 'ರಮಾಸ್ ಮೀಡಿಯಾ ಕ್ರಿಯೇಷನ್ಸ್' ಕನ್ನಡಕ್ಕೆ ಕಾಲಿಟ್ಟಿದೆ. ಸಂಸ್ಥೆಯ ಲೋಗೋವನ್ನು ಉಪೇಂದ್ರ ರಿಲೀಸ್ ಮಾಡಿದರು. ನಿವೃತ್ತ ಪೊಲೀಸ್ ಅಧಿಕಾರಿ ಸತ್ಯನಾರಾಯಣ ಹಾಗೂ ಅವರ ಮಗಳು ರಮಾ ಈ ಸಂಸ್ಥೆಯ ರೂವಾರಿಗಳು.

ಇದನ್ನೂ ಓದಿ: 'ಸೂಪರ್​ ಸ್ಟಾರ್'​ ಆಗಲು ಹೊರಟಿರುವ ಉಪೇಂದ್ರ ಕುಟುಂಬದ ಕುಡಿ!

ಚಿಕ್ಕಪ್ಪನ ಸಿನಿಮಾ ಟೈಟಲ್ ತೆಗೆದುಕೊಂಡು ಶೀರ್ಷಿಕೆ ಕೊಟ್ಟಿದ್ದೇನೆ

ಉಪೇಂದ್ರ ಕೂಡ 'ಸೂಪರ್ ಸ್ಟಾರ್‌' ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಈಗ ಅವರ ಅಣ್ಣನ ಮಗ ಕೂಡ 'ಸೂಪರ್ ಸ್ಟಾರ್‌' ಶೀರ್ಷಿಕೆಯ ಸಿನಿಮಾದಲ್ಲಿ ಕಾಣಿಸುತ್ತಿದ್ದಾರೆ. ತಮ್ಮ ಸಿನಿಮಾ ಬಗ್ಗೆ ಮಾತನಾಡಿರುವ ನಿರಂಜನ್ ಅವರು 'ನಾನು ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮವಹಿಸುತ್ತಿದ್ದೇನೆ. ಏಕೆಂದರೆ ಸೂಪರ್ ಸ್ಟಾರ್ ನನ್ನ ಚಿಕ್ಕಪ್ಪನ ಸಿನಿಮಾದ ಟೈಟಲ್. ಅವರಿಂದ ಅನುಮತಿ ಪಡೆದು ಶೀರ್ಷಿಕೆ ಇಟ್ಟಿದ್ದೇನೆ. ಆ ಹೆಸರಿಗೆ ಧಕ್ಕೆ ಬಾರದ ಹಾಗೆ ನೋಡಿಕೊಳ್ಳುವುದೇ ನನ್ನ ಆದ್ಯತೆ. ನಮ್ಮ ಮೇಲೆ ನಂಬಿಕೆಯಿಟ್ಟು ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ರಮಾಸ್ ಮೀಡಿಯಾ ಕ್ರಿಯೇಷನ್ಸ್‌ಗೆ, ನಿರ್ದೇಶಕರಿಗೆ ಧನ್ಯವಾದಗಳು' ಎಂದಿದ್ದರು.






ಅಣ್ಣನ ಮಗನಿಗೆ ಉಪ್ಪಿ ಹಾರೈಕೆ

ಅಣ್ಣನ ಮಗನಿಗೆ ಹಾರೈಸಿದ ಉಪೇಂದ್ರ, 'ಪಕ್ಕದ ರಾಜ್ಯದಿಂದ ಕನ್ನಡ ಚಿತ್ರವೊಂದರ ನಿರ್ಮಾಣಕ್ಕೆ ಆಗಮಿಸಿರುವ ರಮಾಸ್ ಮೀಡಿಯಾ ಕ್ರಿಯೇಷನ್ಸ್‌ಗೆ ಒಳ್ಳೆಯದಾಗಲಿ. ನಮ್ಮ ನಿರಂಜನ್ ಸುಧೀಂದ್ರ ಬಹಳ ಶ್ರಮ ಜೀವಿ. ಇತ್ತೀಚೆಗೆ 'ಸೂಪರ್ ಸ್ಟಾರ್' ಚಿತ್ರದ ಸಾಹಸ ಸನ್ನಿವೇಶವೊಂದನ್ನು ನಾನು ಹಾಗೂ ಸುದೀಪ್ ನೋಡಿ ಸಂತೋಷಪಟ್ಟೆವು ಎಂದಿದ್ದರು.

ಇದನ್ನೂ ಓದಿ: Hunter: 'ಹಂಟರ್' ಆದ 'ಸೂಪರ್ ಸ್ಟಾರ್;​​ ಹ್ಯಾಟ್ರಿಕ್ ಸಂಭ್ರಮದಲ್ಲಿ ನಿರಂಜನ್ ಸುಧೀಂದ್ರ

ಆರ್​ ವಿಬಿ ಸಿನಿಮಾಸ್​ ಬ್ಯಾನರ್​ನಡಿ ಸಿನಿಮಾ ಮೂಡಿಬರಲಿದೆ. ರಮೇಶ್​​ ಬಾಬು ಅವರದೇ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ರಾಘವೇಂದ್ರ ವಿ ಸಂಗೀತ ಸಂಯೋಜನೆ, ಯೋಗಿ ಛಾಯಾಗ್ರಹಣ ಮತ್ತು ವಿಜಯ್​​ ಎಂ ಕುಮಾರ್​​ ಸಂಕಲನ ಮಾಡಲಿದ್ದಾರೆ.
Published by:Divya D
First published: