ಎಕ್ಸ್ ಕ್ಯೂಸ್ ಮಿ ಚಿತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ (Sandalwood) ತನ್ನದೇ ಛಾಪು ಮೂಡಿಸಿದ್ದ ನಟ ಸುನೀಲ್ ರಾವ್ (Sunil Raoh). ಅನೇಕ ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದರು. ಅಲ್ಲದೇ ಇದರ ನಡುವೆ ಅಲ್ಲೊಂದು ಇಲ್ಲೊಂದು ಎಂಬಂತೆ ವೆಬ್ ಸಿರೀಸ್ ಗಳನ್ನು ಮಾಡುತ್ತಾ ಕನ್ನಡಿಗರನ್ನು ರಂಜಿಸುತ್ತಿದ್ದರು. ಆದರೆ ಇದೀಗ ಬರೋಬ್ಬರಿ 12 ವರ್ಷಗಳ ನಂತರ ಸುನೀಲ್ ರಾವ್ ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ ನೀಡುತ್ತಿದ್ದಾರೆ. ಹೌದು, "ತುರ್ತು ನಿರ್ಗಮನ" (Thurthu Nirgamana) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಿ ಬಂದಿದ್ದು, ಚಿತ್ರದ ಪ್ರಮುಖ ಪಾತ್ರದಲ್ಲಿ ಸುನೀಲ್ ರಾವ್ ನಟಿಸುತ್ತಿದ್ದಾರೆ. ಅಲ್ಲದೇ ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್ ಗೆ (Trailer) ಎಲ್ಲಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
12 ವರ್ಷಗಳ ನಂತರ ಸುನೀಲ್ ರೀ ಎಂಟ್ರಿ:
ಹೌದು, ಎಕ್ಸ್‌ಕ್ಯೂಸ್ ಮಿ ಚಿತ್ರದ ಮೂಲಕ ಮುನ್ನಲೆಗೆ ಬಂದಿದ್ದ ನಟ ಸುನೀಲ್ ರಾವ್ ಮತ್ತೆ ನಿಧಾನವಾಗಿ ತೆರೆಮರೆಗೆ ಸರಿದರು. ಆದರೆ ಇದೀಗ ಮತ್ತೆ ಚಿತ್ರಂಗದತ್ತ ಮುಖಮಾಡಿರುವ ಅವರು, ನಿರ್ದೇಶಕ ಹೇಮಂತ್ ಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ‘ತುರ್ತು ನಿರ್ಗಮನ‘ ಚಿತ್ರದ ಮೂಲಕ ಸ್ಯಾಂಡಲ್ ವುಡ್ಗೆ ಬರೋಬ್ಬರಿ 12 ವರ್ಷಗಳ ನಂತರ ಕಂಬ್ಯಾಕ್ ಮಾಡುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ‘ನಿರ್ದೇಶಕ ಹೇಮಂತ್ ಕುಮಾರ್ ಕಥೆ ಹೇಳಿದಾಗ ನನಗೆ ತುಂಬಾನೇ ಇಷ್ಟವಾಯಿತು. ಏಕೆಂದರೆ ಅವರು ಅಷ್ಟು ಚೆನ್ನಾಗಿ ಕಥೆಯನ್ನು ರೂಪಿಸಿದ್ದರು. ಅಲ್ಲದೇ ಕೇವಲ ನಾನು ಮಾತ್ರವಲ್ಲ ಯಾರೇ ನಟರು ಕೇಳಿದ್ದರೂ, ಬೇಡ ಅನ್ನದಂತಹ ಕಥೆಯನ್ನು ಹೇಮಂತ್ ನನ್ನ ಮುಂದೆ ಹೇಳಿದ್ದರು. ಹೀಗಾಗಿ ನಾನು ಈ ಚಿತ್ರಕ್ಕೆ ಒಪ್ಪಿಗೆ ನೀಡಿದೆ. ಇನ್ನು, ನಾನು ಸುಮಾರು 12 ವರ್ಷಗಳಿಂದ ಸಿನಿಮಾ ಮಾಡಿಲ್ಲ.ಆದರೆ, ಅಷ್ಟು ವರ್ಷಗಳ ನಂತರ ಇಂತಹ ಒಳ್ಳೆಯ ಚಿತ್ರದಲ್ಲಿ ಮಾಡಿರುವುದು ನನಗೆ ಖುಷಿ ನೀಡಿದೆ‘ ಎಂದು ಹೇಳಿದ್ದಾರೆ.
ಟ್ರೈಲರ್ಗೆ ಉತ್ತಮ ಪ್ರತಿಕ್ರಿಯೆ:
ಈಗಾಗಲೇ ಚಿತ್ರ ಟ್ರೈಲರ್ ಬಿಡುಗಡೆಯಾಗಿದ್ದು, ಎಲ್ಲಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿಭಿನ್ನ ಕಥೆ ಇರುವ ಈ ಚಿತ್ರದ ಟ್ರೈಲರ್ ಕನ್ನಡಿಗರಿಗೆ ಇಷ್ಟವಾಗಿದ್ದು, ಚಿತ್ರದ ಮೇಲಿನ ನಿರೀ್ಕಷೆಯನ್ನು ಹೆಚ್ಚಿಸಿದೆ. ಇನ್ನು, ಚಿತ್ರದ ಕುಇರತು ಮಾತನಾಡಿರುವ ನಿರ್ದೇಶಕ ಹೇಮಂತ್ ಕುಮಾರ್, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರಕ್ಕೆ ನಾನು ಕೆಲಸ ಮಾಡಿದ್ದೆ. ಆದರೆ ಇದು ನನ್ನ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೊದಲ ಚಿತ್ರವಾಗಿದೆ.
ಅಲ್ಲದೇ ಈ ರೀತಿಯ ಕಥೆ ಆಧರಿಸಿದ ಚಿತ್ರವೊಂದನ್ನು ಮಾಡಬೇಕೆಂದು ಆಸೆ ಇತ್ತು. ಅದು ಇದೀಗ ಸಂಪೂರ್ಣವಾಗಿದೆ. ನಿಮ್ಮ ದುಡ್ಡಿಗೆ ಮೋಸವಾಗದ ಸಿನಿಮಾ ಮಾಡಿದ್ದೇನೆ ಎಂಬ ಭರವಸೆಯೊಂದಿಗೆ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಆಹ್ವಾನಿಸುತ್ತೇನೆ. ಜೊತೆಗೆ ನನ್ನ ಚಿತ್ರಕ್ಕಾಗಿ ದುಡಿದ ಚಿತ್ರತಂಡದ ಎಲ್ಲರಿಗೂ ಧನ್ಯವಾದವನ್ನು ಹೇಳುತ್ತೇನೆ‘ ಎಂದು ಹೇಳಿದ್ದಾರೆ.
ಇದನ್ನೂ ಓದಿ: Real Star Upendra: ಅಭಿಮಾನಿಗಳ ತಲೆಗೆ ಮತ್ತೆ ಹುಳ ಬಿಟ್ಟ ಉಪ್ಪಿ, 'UI' ಚಿತ್ರದ ಪೋಸ್ಟರ್ ಬಿಡುಗಡೆ
ಕೋಚ್ ಪಾತ್ರದಲ್ಲಿ ಸಂಯುಕ್ತ ಹೆಗಡೆ:
ಇನ್ನು, ಚಿತ್ರದಲ್ಲಿ ಸಂಯುಕ್ತ ಹೆಗಡೆ ಸೇರಿದಂತೆ ದೊಡ್ಡ ತಾರಾಬಳಗವೇ ಇದ್ದು, ಸಂಯುಕ್ತ ಹೆಗಡೆಯವರು ಚಿತ್ರದಲ್ಲಿ ಕ್ರಿಕೆಟ್ ಕೋಚ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಅಮೃತ, ನಟಿ ಸುಧಾರಾಣಿ ಅಭಿನಿಯಿಸಿದ್ದಾರೆ. ರಾಜ್ ಬಿ ಶೆಟ್ಟಿ ಸಹ ಚಿತ್ರದಲ್ಲಿ ನಟಿಸಿದ್ದು, ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು, ಚಿತ್ರವು ಜೂನ್ 24ರಂದು ಬಿಡುಗಡೆಯಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ