HOME » NEWS » Entertainment » SANDALWOOD ACTOR SUMANTH SHAILENDRA ACTOR GOVINDA GOVINDA MOVIE HG

ಗೋವಿಂದ ಗೋವಿಂದ ಎಂದು ವಾಪಾಸಾದ ಸುಮಂತ್ ಶೈಲೇಂದ್ರ!

ವಿಶೇಷ ಅಂದರೆ ಗೋವಿಂದ ಗೋವಿಂದ ಚಿತ್ರದ ಸ್ಯಾಟಲೈಟ್‌ ರೈಟ್ಸ್‌ ಈಗಾಗಲೇ ಒಂದೊಳ್ಳೆ ಮೊತ್ತಕ್ಕೆ ಮಾರಾಟವಾಗಿದೆಯಂತೆ. ಡಿಜಿಟಲ್ ಪ್ಲಾಟ್​​ಫಾರ್ಮ್​ ಹಾಗೂ ಓಟಿಟಿಗಳಿಂದ ಬೇಡಿಕೆ ಬಂದಿದ್ದರೂ, ಮೊದಲು ಚಿತ್ರವನ್ನು ದೊಡ್ಡ ಪರದೆ ಮೇಲೆ ರಿಲೀಸ್ ಮಾಡಿ ನಂತರ ಓಟಿಟಿಗೆ ಕೊಡುತ್ತೇವೆ ಎನ್ನುತ್ತಿದೆ ಚಿತ್ರತಂಡ.

news18-kannada
Updated:September 2, 2020, 9:16 PM IST
ಗೋವಿಂದ ಗೋವಿಂದ ಎಂದು ವಾಪಾಸಾದ ಸುಮಂತ್ ಶೈಲೇಂದ್ರ!
ಸುಮಂತ್ ಶೈಲೇಂದ್ರ
  • Share this:
ಎರಡು ವರ್ಷಗಳ ಗ್ಯಾಪ್​​​​ ಬಳಿಕ ನಟ ಸುಮಂತ್ ಶೈಲೇಂದ್ರ ಮತ್ತೆ ವಾಪಾಸಾಗಿದ್ದಾರೆ. ಗೋವಿಂದ ಗೋವಿಂದ ಎಂದು ನಗುತ್ತಾ ಸೆನ್ಸಾರ್ ಬೋರ್ಡ್ ಕದ ತಟ್ಟಿದ್ದಾರೆ. ಹೌದು, ಗೋವಿಂದ ಗೋವಿಂದ, ಸುಮಂತ್ ಶೈಲೇಂದ್ರ ನಟಿಸಿರುವ ಲೇಟೆಸ್ಟ್ ಸಿನಿಮಾ.

ಶೈಲೇಂದ್ರ ಪ್ರೊಡಕ್ಷನ್ಸ್ ಹಾಗೂ ಎಲ್.ಜಿ. ಕ್ರಿಯೇಶನ್ಸ್ ಮತ್ತು ರವಿ ಗರಣಿ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ನಿರ್ಮಿಸಿರುವ ಈ ಚಿತ್ರ ಸದ್ಯ ತೆರೆಗೆ ಬರಲು ಸಿದ್ಧವಾಗಿದೆ. ಮೊನ್ನೆಯಷ್ಟೆ ಸೆನ್ಸಾರ್ ನವರು ಸಿನಿಮಾ ನೋಡಿ, ಯಾವುದೇ ಕಟ್‌ ಅಥವಾ ಬೀಪ್‌ ಇಲ್ಲದೆ ಯು ಪ್ರಮಾಣ ಪತ್ರ ನೀಡಿದೆ.

ವಿಶೇಷ ಅಂದರೆ ಗೋವಿಂದ ಗೋವಿಂದ ಚಿತ್ರದ ಸ್ಯಾಟಲೈಟ್‌ ರೈಟ್ಸ್‌ ಈಗಾಗಲೇ ಒಂದೊಳ್ಳೆ ಮೊತ್ತಕ್ಕೆ ಮಾರಾಟವಾಗಿದೆಯಂತೆ. ಡಿಜಿಟಲ್ ಪ್ಲಾಟ್​​ಫಾರ್ಮ್​ ಹಾಗೂ ಓಟಿಟಿಗಳಿಂದ ಬೇಡಿಕೆ ಬಂದಿದ್ದರೂ, ಮೊದಲು ಚಿತ್ರವನ್ನು ದೊಡ್ಡ ಪರದೆ ಮೇಲೆ ರಿಲೀಸ್ ಮಾಡಿ ನಂತರ ಓಟಿಟಿಗೆ ಕೊಡುತ್ತೇವೆ ಎನ್ನುತ್ತಿದೆ ಚಿತ್ರತಂಡ.

ಗೋವಿಂದ ಗೋವಿಂದ  ಚಿತ್ರದಲ್ಲಿ ಸುಮಂತ್ ಶೈಲೇಂದ್ರ, ಭಾವನ, ಕವಿತಾ ಗೌಡ, ರೂಪೇಶ್ ಶೆಟ್ಟಿ, ಅಚ್ಯುತ್‌ ಕುಮಾರ್, ಶೋಭರಾಜ್, ವಿ. ಮನೋಹರ್, ಪವನ್, ವಿಜಯ್‌ ಚೆಂಡೂರ್ ಪ್ರಮುಖ ತಾರಾಗಣದಲ್ಲಿದ್ದಾರೆ. ನಿರ್ದೇಶಕ ತಿಲಕ್ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದು, ಕೆ.ಎಸ್. ಚಂದ್ರಶೇಖರ್‌ ಛಾಯಾಗ್ರಹಣ, ಸಿ. ರವಿಚಂದ್ರನ್ ಸಂಕಲನ, ಹಿತನ್ ಹಾಸನ್ ಸಂಗೀತ, ದೇವ್‌ರಂಗಭೂಮಿ ಸಂಭಾಷಣೆ, ಡಾ. ಥ್ರಿಲ್ಲರ್ ಮಂಜು ಸಾಹಸ ಚಿತ್ರಕ್ಕಿದೆ.

ಎರಡು ವರ್ಷಗಳ ನಂತರ ನಾನು ಕನ್ನಡ ಸಿನಿಮಾ ಮಾಡ್ತಾ ಇದ್ದೀನಿ. ವ್ಯವಹಾರದ ಕಡೆ ಗಮನ ಕೊಡಲು ಚಿತ್ರರಂಗದಿಂದ ಅಲ್ಪ ವಿರಾಮ ತೆಗೆದುಕೊಂಡಿದ್ದೆ. ಕಥೆ ಹಾಗೂ ತಂಡ ನನಗೆ ಇಷ್ಟ ಆಯಿತು ಹಾಗಾಗಿ ಒಪ್ಪಿಕೊಂಡೆ. ರವಿ ಗರಣಿ ಅವರು ನನಗೆ ಬಹಳ ವರ್ಷಗಳಿಂದ ಪರಿಚಯ. ಅವರೇ ಈ ಸಿನಿಮಾದ ಬೆನ್ನೆಲುಬು ಹಾಗಾಗಿ  ಹೆಚ್ಚು ಯೋಚಿಸದೆ ಒಪ್ಪಿಕೊಂಡೆ ಎನ್ನುತ್ತಾರೆ ನಾಯಕ ನಟ ಸುಮಂತ್ ಶೈಲೇಂದ್ರ.

ಸುಮಂತ್ ಶೈಲೇಂದ್ರ


ವಿಜಯಪುರ, ಮಧುಗಿರಿ, ಚಿಂತಾಮಣಿ, ಬೆಂಗಳೂರು ಹಾಗೂ ಇನ್ನಿತರ ರಮಣೀಯ ಪ್ರದೇಶಗಳಲ್ಲಿ 60ಕ್ಕೂ ಹೆಚ್ಚು ದಿನ ಚಿತ್ರೀಕರಣ ನಡೆಸಿದೆ ಗೋವಿಂದ ಗೋವಿಂದ ಚಿತ್ರತಂಡ. ಹಿತನ್ ಸಂಯೋಜನೆಯ ಒಟ್ಟು 6 ಹಾಡುಗಳು ಹಾಗೂ ರ್ಯಾಪರ್ ಅಲೋಕ್ ಸಂಯೋಜನೆಯ ಒಂದು ಹಾಡು ಸೇರಿದಂತೆ ಒಟ್ಟು 7 ಹಾಡುಗಳು ಚಿತ್ರದಲ್ಲಿವೆ.ಅತಿ ಶೀಘ್ರದಲ್ಲೆ ಟೀಸರ್‌ ಟ್ರೈಲರ್‌ ಅನ್ನು ಹೆಸರಾಂತ ಸ್ಟಾರ್‌ ಕಲಾವಿದರಿಂದ ಬಿಡುಗಡೆ ಮಾಡುವುದಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಚಿತ್ರತಂಡ. ಇದು ನನ್ನ ಮೊದಲ ಚಿತ್ರ. ಸೆನ್ಸಾರ್ ನವರೆ ಮೊದಲ ಪ್ರೇಕ್ಷಕರು. ಅವರು ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದಾಗ ಬಹಳ ಸಂತೋಷವಾಯಿತು ಎನ್ನುತ್ತಾರೆ ನಿರ್ದೇಶಕ ತಿಲಕ್.

ಮುಂದೆ ಓದಿ.....

ಸದ್ಯ ಲಾಕ್​​ಡೌನ್ ಸಂಪೂರ್ಣವಾಗಿ ಅನ್​​ಲಾಕ್​​ ಆಗಿ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್​​ಗಳು ಸಿನಿಮಾಗಳ ಮರುಪ್ರದರ್ಶನ ಪ್ರಾರಂಭಿಸುತ್ತಲೇ ತೆರೆಗೆ ಬರಲು ಗೋವಿಂದ ಗೋವಿಂದ ಚಿತ್ರತಂಡ ಕಾಯುತ್ತಿದೆ.
Published by: Harshith AS
First published: September 2, 2020, 9:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories