Vikrant Rona: ವಿಕ್ರಾಂತ್​ ರೋಣ ಚಿತ್ರದ ಹೊಸ ಸಾಂಗ್​ ರಿಲೀಸ್​ ಡೇಟ್​ ಫಿಕ್ಸ್, ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

ಈಗಾಗಲೇ ವಿಕ್ರಾಂತ್ ರೋಣ ಚಿತ್ರದ 2 ಹಾಡುಗಳು ಬಿಡುಗಡೆ ಆಗಿದ್ದು, ಸಖತ್ ಹಿಟ್ ಆಗಿವೆ. ಇದೀಗ ಚಿತ್ರದ ಮೂರನೇ ಹಾಡು ಬಿಡುಗಡೆ ಆಗಲಿದೆ. ಈ ಹಾಡು ನಿರೂಪ್ ಭಂಡಾರಿ ಅವರ ಜರ್ನಿಯ ಸಾಂಗ್​ ಇದಾಗಿರಲಿದೆ.

ವಿಕ್ರಾಂತ್​ ರೋಣ

ವಿಕ್ರಾಂತ್​ ರೋಣ

  • Share this:
ಸ್ಯಾಂಡಲ್​ವುಡ್​ನ  ಕಿಚ್ಚ ಸುದೀಪ್ (Kiccha Sudeep) ಅಭಿನಯದ ಬಹುನಿರೀಕ್ಷಿತ  ವಿಕ್ರಾಂತ್ ರೋಣ (Vikrant Rona) ಸಿನಿಮಾಗಾಗಿ ಇಡೀ ಕನ್ನಡ ಚಿತ್ರರಂಗ ತುದಿಗಾಲಿನಲ್ಲಿ ನಿಂತಿದೆ. ಅದರಲ್ಲೂ ಕಿಚ್ಚ (Kiccha) ನ ಅಭಿಮಾನಿಗಳು (Fans) ಮೊದಲು ಸಿನಿಮಾ ರಿಲೀಸ್ ಗಾಗಿ (Release) ಕಾತುರದಿಂದ ಕಾಯಿತ್ತಿದ್ದಾರೆ. ರಂಗಿತರಂಗ ಮೂಲಕ ಕಮಾಲ್ ಮಾಡಿದ್ದ ಅನೂಪ್ ಭಂಡಾರಿ (Anup Bhandari) ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅದರ ಜೊತೆಗ ಈ ಸಿನಿಮಾ 3ಡಿ(3D)ಯಲ್ಲಿ ತೆರೆಕಾಣುತ್ತಿರುವುದು ಮತ್ತೊಂದು ವಿಶೇಷ. ಪೋಸ್ಟರ್ (Poster), ಟೀಸರ್(Teaser) ಗಳಿಂದಲೇ ಸಾಕಷ್ಟು ಸದ್ದು ಮಾಡಿರುವ ಈ ಸಿನಿಮಾದ ರಾ ರಾ ರಕ್ಕಮ್ಮ ಮತ್ತು ಕೆಲ ದಿನಗಳ ಹಿಂದೆ ಬಿಡುಗಡೆ ಆಗಿದ್ದ ರಾಜಕುಮಾರಿ ಹಾಡು ಎಲ್ಲರ ಬಾಯಲ್ಲಿ ಕೇಳಿಬರುತ್ತಿದೆ. ಇದೀಗ ಅಭಿಮಾನಿಗಳಿಗೆ ಮತ್ತೊಂದು ಗುಡ್​ ನ್ಯೂಸ್​ ಸಿಕ್ಕಿದ್ದು, ನಾಳೆ ಈ ಸಿನಿಮಾದ ಮತ್ತೊಂದು ಹಾಡು ರಿಲೀಸ್​ ಆಗಲಿದೆ. 

‘ಹೇ ಫಕೀರಾ‘ ಹಾಡು ಬಿಡುಗಡೆ:

ಹೌದು, ಈಗಾಗಲೇ ವಿಕ್ರಾಂತ್ ರೋಣ ಚಿತ್ರದ 2 ಹಾಡುಗಳು ಬಿಡುಗಡೆ ಆಗಿದ್ದು, ಸಖತ್ ಹಿಟ್ ಆಗಿವೆ. ಇದೀಗ ಚಿತ್ರದ ಮೂರನೇ ಹಾಡು ಬಿಡುಗಡೆ ಆಗಲಿದೆ. ಈ ಹಾಡು ನಿರೂಪ್ ಭಂಡಾರಿ ಅವರ ಜರ್ನಿಯ ಸಾಂಗ್​ ಆಗಿರಲಿದೆ ಎಂದು ಅನಿಸುತ್ತಿದೆ. ‘ಹೇ ಫಕೀರಾ‘ ಎಂಬ ಹಾಡು ನಾಳೆ ಸಂಜೆ 5 ಗಂಟೆ 2 ನಿಮಿಷಕ್ಕೆ ರಿಲೀಸ್ ಆಗುತ್ತಿರುವುದಾಗಿ ಚಿತ್ರತಂಡ ತಿಳಿಸಿದೆ. ಈ ಹಾಡಿನ ಪೋಸ್ಟರ್​ ಒಂದನ್ನು ಕಿಚ್ಚ ಸುದೀಪ್ ಅವರು ಹಂಚಿಕೊಂಡಿದ್ದಾರೆ.





ಈ ಹಾಡಿಗೆ ಬಿ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡಿನ ಪೋಸ್ಟರ್​ ನೋಡುತ್ತಿದ್ದರೆ ಈ ಲಿರಿಕಲ್ ಹಾಡಿನಲ್ಲಿ ನಿರೂಫ್ ಭಂಡಾರಿ ಅವರ ಕುರಿತು ಅವರ ಪಾತ್ರದ ಪರಿಚಯ ಇರಲಿದೆ ಎಂದು ಅನಿಸುತ್ತಿದೆ. ಇನ್ನು, ಈ ಹಾಡು ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ.

ಇದನ್ನೂ ಓದಿ: Vikrant Rona: ‘ವಿಕ್ರಾಂತ್​ ರೋಣ‘ ಚಿತ್ರದ ‘ರಾಜಕುಮಾರಿ‘ ಸಾಂಗ್ ರಿಲೀಸ್, ಲಾಲಿ ಹಾಡಿಗೆ ತಲೆದೂಗಿದ ಕಿಚ್ಚ

ವಿಕ್ರಾಂತ್ ರೋಣನ ಅಬ್ಬರ ಆರಂಭ:

ಕಿಚ್ಚನ ಸಿನಿಮಾ ಇದೇ ಮೊದಲ ಬಾರಿಗೆ ಇಡೀ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಅಲ್ಲದೆ, 3ಡಿ ಅಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಎಲ್ಲೆಡೆ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಓವರ್‌ಸೀನ್ ಸಿನಿಮಾ ರೈಟ್ಸ್ ಅನ್ನು 'ಒನ್ ಟ್ವೆಂಟಿ 8 ಮೀಡಿಯಾ' ಭಾರಿ ಮೊತ್ತಕ್ಕೆ ಪಡೆದುಕೊಂಡಿದೆ. ಇವರೇ ವಿಶ್ವದಾದ್ಯಂತ 'ವಿಕ್ರಾಂತ್ ರೋಣ' ಸಿನಿಮಾವನ್ನು ರಿಲೀಸ್ ಮಾಡಲಿದ್ದಾರೆ. 'ಒನ್ ಟ್ವೆಂಟಿ 8 ಮೀಡಿಯಾ' ಸುಮಾರು 1.3 ಮಿಲಿಯನ್‌ಗೆ ಓವರ್‌ಸೀಸ್ ಹಕ್ಕುಗಳನ್ನು ಪಡೆದುಕೊಂಡಿದೆ. ಅಂದರೆ, ಭಾರತದ 10 ಕೋಟಿ ರೂಪಾಯಿಗೆ ಸೇಲ್ ಆಗಿದೆ ಎನ್ನಲಾಗಿದೆ.

ಇದನ್ನೂ ಓದಿ: Bigg Boss: ಬಿಗ್ ಬಾಸ್​ ಹುಟ್ಟಿನ ಹಿಂದಿದೆ ಇಂಟ್ರೆಸ್ಟಿಂಗ್​ ಕಹಾನಿ! ಅಂದು ವಿಜ್ಞಾನಿಗಳ ಮಾಡಿದ ಆ ಒಂದು ಪ್ರಯೋಗ ವರದಾನವಾಯ್ತು

ಜುಲೈ 28ಕ್ಕೆ ಸಿನಿಮಾ ರಿಲೀಸ್​:5

ಈ ಸಿನಿಮಾವನ್ನು ಅನೂಪ್ ಭಂಡಾರಿಯವರು ನಿರ್ದೇಶನ ಮಾಡುತ್ತಿದ್ದು ಈಗಾಗಲೇ ಈ ಚಿತ್ರದ ರಾ ರಾ ರಕ್ಕಮ್ಮ ಹಾಡು ಹಾಗೂ ಟ್ರೈಲರ್ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಜುಲೈ 28ಕ್ಕೆ ಈ ಸಿನಿಮಾ ಬಿಡುಗಡೆಯಾಗುತ್ತಿದ್ದು, ಕಿಚ್ಚನ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.
Published by:shrikrishna bhat
First published: