YouTube Channel​ ಶುರು ಮಾಡಿದ ಸ್ಯಾಂಡಲ್​ವುಡ್​ ಅಧ್ಯಕ್ಷ Sharaan

ನಟಿ ಶ್ರುತಿ ಅವರ ಸಹೋದರ ಹಾಗೂ ಸ್ಯಾಂಡಲ್​ವುಡ್​ನ ಹಾಸ್ಯ ನಟ ಶರಣ್​ ಅವರೂ ತಮ್ಮದೇ ಆದ ಯೂಟ್ಯೂಬ್ ಚಾನಲ್​ ಆರಂಭಿಸಿದ್ದಾರೆ. 𝑨𝒄𝒕𝒐𝒓 𝑺𝒉𝒂𝒓𝒂𝒂𝒏 𝑶𝒇𝒇𝒊𝒄𝒊𝒂𝒍 ಎಂಬ ಹೆಸರಿನಲ್ಲಿ ಯೂಟ್ಯೂಬ್​ ಚಾನಲ್​ (YouTube Channel) ಶುರು ಮಾಡಿದ್ದಾರೆ.

ನಟ ಶರಣ್​

ನಟ ಶರಣ್​

  • Share this:
ಸಿನಿಮಾ ತಾರೆಯರು (Film Stars) ಸಾಮಾಜಿಕ ಜಾಲತಾಣದಲ್ಲಿ (Social Media) ಸಕ್ರಿಯವಾಗಿರುವುದರ ಜತೆಗೆ ಯೂಟ್ಯೂಬ್​ನಲ್ಲೂ  (YouTube Channel) ತಮ್ಮ ಸ್ವಂತ ಚಾನಲ್​ಗಳನ್ನು ತೆರೆಯುತ್ತಿದದಾರೆ. ಹೌದು, ಕಿರುತೆರೆ ಕಲಾವಿದರು ಮಾತ್ರವಲ್ಲದೆ, ಸಿನಿಮಾ ನಟ-ನಟಿಯರು ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಹೌದು, ತಮ್ಮ ಚಾನಲ್​ಗಳ ಮೂಲಕ ಸಿನಿಮಾಗಳ ಪ್ರಮೋನ್​ ಜತೆಗೆ ತಮ್ಮ ವೈಯಕ್ತಿಕ ವಿಷಯಗಳ ಕುರಿತಾದ ವಿಡಿಯೋಗಳನ್ನೂ ಹಂಚಿಕೊಳ್ಳುತ್ತಿರುತ್ತಾರೆ. ಕನ್ನಡದ ನಟ-ನಟಿಯರಲ್ಲಿ ಸಾಕಷ್ಟು ಮಂದಿ ಈಗಾಗಲೇ ತಮ್ಮ ಯೂಟ್ಯೂಬ್​ ಚಾನಲ್​ ತೆರೆದಿದ್ದಾರೆ. ಅವರ ಚಾನಲ್​ಗಳಿಗೆ ಸಾಕಷ್ಟು ಮಂದಿ ವೀಕ್ಷಕರೂ ಇದ್ದಾರೆ. ಸೆಲೆಬ್ರಿಟಿ ಅನ್ನೋದು ಅವರ ಪ್ಲಸ್​ ಪಾಯಿಂಟ್​ ಹೀಗಾಗಿ ಅವರು ಸಾಮಾನ್ಯರಂತೆ ಸಬ್​ಸ್ಕ್ರೈಬ್​ ಮಾಡುವವರಿಗಾಗಿ ಕಷ್ಟಪಡುವ ಅಗತ್ಯವಿಲ್ಲ. ಇಂತಹವ ಸೆಲೆಬ್ರಿಟಿಗಳ ಪಟ್ಟಿಗೆ ಈಗ ನಟ ಶರಣ್  (Actor Sharan) ಸಹ ಸೇರಿಕೊಂಡಿದ್ದಾರೆ.

ನಟಿ ಶ್ರುತಿ ಅವರ ಸಹೋದರ ಹಾಗೂ ಸ್ಯಾಂಡಲ್​ವುಡ್​ನ ಹಾಸ್ಯ ನಟ ಶರಣ್​ ಅವರೂ ತಮ್ಮದೇ ಆದ ಯೂಟ್ಯೂಬ್ ಚಾನಲ್​ ಆರಂಭಿಸಿದ್ದಾರೆ. 𝑨𝒄𝒕𝒐𝒓 𝑺𝒉𝒂𝒓𝒂𝒂𝒏 𝑶𝒇𝒇𝒊𝒄𝒊𝒂𝒍 ಎಂಬ ಹೆಸರಿನಲ್ಲಿ ಯೂಟ್ಯೂಬ್​ ಚಾನಲ್​ (YouTube Channel) ಶುರು ಮಾಡಿದ್ದಾರೆ.


View this post on Instagram


A post shared by Sharaan (@realsharaan)


ನಿಮ್ಮೆಲ್ಲರಿಗೆ ಮತ್ತಷ್ಟು ಹತ್ತಿರವಾಗಲು ನನ್ನದೊಂದು ಪುಟ್ಟ ಪ್ರಯತ್ನ. ಆ್ಯಕ್ಟರ್​ ಶರಣ್​ ಎಂಬ ಹೆಸರಿನಲ್ಲಿ ನನ್ನದೇ ಆದ ಯೂ ಟ್ಯೂಬ್​ ಚಾನಲ್​ ಆರಂಭಿಸಿದ್ದೇನೆ. ನಾಳೆ ಬೆಳಗ್ಗೆ 11ಕ್ಕೆ ಭೇಟಿ ಆಗೋಣ ಅಂತ ಇನ್​ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ:  Happy Birthday Sharan: ಹುಟ್ಟುಹಬ್ಬದ ಸಂಭ್ರಮದಲ್ಲಿ ಶರಣ್​: ಸ್ಯಾಂಡಲ್​ವುಡ್ ಅಧ್ಯಕ್ಷನ ಅಪರೂಪದ ಫೋಟೋಗಳು..!

ತೆರೆಯ ಮೇಲಿನ ಹಾಗೂ ತೆರೆಯ ಹಿಂದಿನ ಶರಣ್​ ಅನ್ನು ಪರಿಚಯಿಸುವ ಸಲುವಾಗಿ ಯೂಟ್ಯೂಬ್ ಚಾನಲ್​ ತೆರೆಯುವ ಆಲೋಚನೆ ಮೂಡಿದೆ. ಈ ಮೂಲಕ ನಿಮ್ಮಗೆ ಇನ್ನಷ್ಟು ಹತ್ತಿರವಾಗುವ ನನ್ನ ಪ್ರಯತ್ನವಿದು. ನನ್ನ ಬಗ್ಗೆ ನಿಮಗೆ ಮತ್ತಷ್ಟು ತಿಳಿಸುವ ಪ್ರಯತ್ನ ಇದಾಗಿದೆ. ಸೋಮವಾರ 11 ಗಂಟೆಗೆ ಈ ಚಾನಲ್​ ಆರಂಭವಾಗಿದೆ.ಯೂಟ್ಯೂಬ್​ ಆರಂಭಿಸಿರುವ ಶರಣ್ ಅವರು ಈಗಾಗಲೇ ಒಂದು ವಿಡಿಯೋ ಹಾಡನ್ನು ಹಂಚಿಕೊಂಡಿದ್ದಾರೆ. ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಂಸ್ಕೃತದ ವೇದಾಂತ ದೇಸಿಕ ಚಿತ್ರದ ರಘುವೀರ ಗದ್ಯಂ ಹಾಡನ್ನು ಶರಣ್ ಅವರೇ ಹಾಡಿದ್ದಾರೆ. ಅವರ ಹಾಡಿಗೆ ಸಂಗೀತ ಪ್ರಿಯರು ಫಿದಾ ಆಗಿದ್ದಾರೆ. ಅಲ್ಲದೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: Sharaan: ನಕ್ಕರೆ ಅಪ್ಪನಂತೆಯೇ ಕಾಣುತ್ತಾಳೆ ಸ್ಯಾಂಡಲ್​ವುಡ್​ ಅಧ್ಯಕ್ಷನ ಮಗಳು​ Punya

ರಾಜ್​ಕುಮಾರ್ ಭಾರತಿ ಮೂಲ ಹಾಡಿನ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದರ ಕವರ್ ಸಾಂಗ್​ ಮಾಡಿ ತಮ್ಮ ಯೂಟ್ಯೂಬ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ ನಟ ಶರಣ್​. ಈಗಾಗಲೇ ಸಾಕಷ್ಟು ಹಾಡುಗಳಿಗೆ ದನಿಯಾಗಿರುವ ನಟ ಶರಣ್​ ಅವರು ಇದೇ ಮೊದಲ ಬಾರಿಗೆ ತಮ್ಮ ಯೂಟ್ಯೂಬ್​ಗಾಗಿ ಹಾಡಿದ್ದಾರೆ. ಮೊದಲ ಹಾಡಿಗೆ ಸಖತ್ ರಿಯಾಕ್ಷನ್​ ಸಿಗುತ್ತಿದ್ದು, ಹತ್ತಿರ ಹತ್ತಿರ 2 ಸಾವಿರ ಮಂದಿ ಈ ಹಾಡನ್ನು ವೀಕ್ಷಿಸಿದ್ದಾರೆ. 290ಕ್ಕೂ ಹೆಚ್ಚು ಜನ ಲೈಕ್​ ಮಾಡಿದ್ದಾರೆ. ಇವರ ಚಾನಲ್​ಗೆ ಒಂದು ದಿನದಲ್ಲಿ 344 ಮಂದಿ ಸಬ್​ಸ್ಕ್ರೈಬ್​ ಆಗಿದ್ದಾರೆ.

ಒಂದು ಕಾಲದಲ್ಲಿ ಅರ್ಕೆಸ್ಟ್ರಾದಲ್ಲಿದ್ದ ಹಾಡುತ್ತಿದ್ದ ಶರಣ್​, ಈಗ ತಮ್ಮ ಯೂಟ್ಯೂಬ್​ ಚಾನಲ್​ಗಾಗಿ ಹಾಡುತ್ತಿದ್ದಾರೆ. ಸಿನಿಮಾದಲ್ಲಿ ಪೋಷಕ ಹಾಗೂ ಹಾಸ್ಯ ಪಾತ್ರಗಳಲ್ಲಿ ನಟಿಸುತ್ತಲೇ ನಾಯಕನಾಗಿ ಬಡ್ತಿ ಪಡೆದ ನಟ ಶರಣ್​ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಅವತಾರ ಪುರುಷ ಹಾಗೂ ಗುರು ಶಿಷ್ಯರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಈ ಪ್ರತಿಭಾನ್ವಿತ ಕಲಾವಿದ.
Published by:Anitha E
First published: