ರೋರಿಂಗ್ ಸ್ಟಾರ್ ಶ್ರೀಮುರಳಿ ಮೂರು (Sriimurali Back in Action) ತಿಂಗಳ ಬಳಿಕ ಮತ್ತೆ ಶೂಟಿಂಗ್ ಅಲ್ಲಿ ಭಾಗಿ ಆಗಿದ್ದಾರೆ. ಸತತ ಮೂರು ತಿಂಗಳ ಮನೆಯಲ್ಲಿ ವಿಶ್ರಾಂತಿ ಪಡೆದ ಶ್ರೀಮುರಳಿ, ಸಂಪೂರ್ಣ ಗುಣಮುಖರಾಗಿದ್ದಾರೆ. ಚಿತ್ರೀಕರಣದ ಸಮಯದಲ್ಲಿ (Bagheera Movie Latest News) ಕಾಲಿಗೆ ಪೆಟ್ಟುಮಾಡಿಕೊಂಡಿದ್ದ ಶ್ರೀಮುರಳಿ, ಬಾಕಿ ಉಳಿದಿದ್ದ ಅದೇ ಆ್ಯಕ್ಷನ್ ಸೀನ್ ಅನ್ನ ಈಗ ಪೂರ್ತಿ ಮಾಡಿಕೊಟ್ಟಿದ್ದಾರೆ. ಈ ಮೂಲಕ ರೋರಿಂಗ್ ಸ್ಟಾರ್ ಘರ್ಜನೆ ಮತ್ತೆ ಶುರು ಆಗಿದೆ. ಈ ಸಿನಿಮಾದ (Sandalwood Actor Sriimurali) ಇನ್ನಷ್ಟು ಮಾಹಿತಿ ನ್ಯೂಸ್-18 ಕನ್ನಡ ಡಿಜಿಟಲ್‌ಗೆ ಸಿಕ್ಕಿದೆ. ಈ ಕುರಿತು (Bagheera Movie Updates) ಒಂದು ಸ್ಟೋರಿ ಇಲ್ಲಿದೆ ಓದಿ.
ಬಘೀರ ಶ್ರೀಮುರಳಿ ರೋರಿಂಗ್ ಶುರು
ಬಘೀರ ಸಿನಿಮಾದ ಹೀರೋ ಶ್ರೀಮುರಳಿ ಕಂಪ್ಲೀಟ್ ರೆಡಿ ಆಗಿದ್ದಾರೆ. ಮಂಡಿ ಚಿಪ್ಪಿಗೆ ಏಟು ಮಾಡಿಕೊಂಡು ೩ ತಿಂಗಳ ವಿಶ್ರಾಂತಿ ಪಡೆದಿದ್ದ ರೋರಿಂಗ್ ಸ್ಟಾರ್ ಶ್ರೀಮುರಳಿ, ತಮ್ಮ ಆ್ಯಕ್ಷನ್ ದೃಶ್ಯದ ಬಾಕಿ ಉಳಿದ ಕೆಲಸವನ್ನ ಪೂರ್ಣಗೊಳಿಸಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ಬಘೀರ ಸಿನಿಮಾ ಆ್ಯಕ್ಷನ್ ಸೀನ್ ಚಿತ್ರೀಕರಿಸಲಾಗುತ್ತಿತ್ತು. ಸಿನಿಮಾಗಾಗಿಯೇ ಬೆಂಗಳೂರಿನ ರಾಕ್ ಲೈನ್ ಸ್ಟುಡಿಯೋದಲ್ಲಿ ಸೆಟ್ ಹಾಕಲಾಗಿತ್ತು. ಇದೇ ಸೆಟ್ ನಲ್ಲಿಯೇ ಸಾಹಸ ನಿರ್ದೇಶಕ ಚೇತನ್ ಡಿಸೋಜ್ ಒಂದು ಸಾಹಸ ಕಂಪೋಜ್ ಮಾಡಿದ್ದರು.
ಮೂರು ತಿಂಗಳ ರೆಸ್ಟ್ ಪಡೆದು ಶೂಟಿಂಗ್‌ಗೆ ಬಂದ ಶ್ರೀಮುರಳಿ
ಇದನ್ನ ಮಾಡೋವಾಗಲೇ, ಶ್ರೀಮುರಳಿ ತಮ್ಮ ಕಾಲಿನ ಮಂಡಿ ಚಿಪ್ಪಿಗೆ ಪೆಟ್ಟು ಮಾಡಿಕೊಂಡಿದ್ದರು. ಹಾಗಾಗಿಯೇ ವೈದ್ಯರ ಸಲಹೆಯಂತೆ ಶ್ರೀಮುರಳಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಮೂರು ತಿಂಗಳು ರೆಸ್ ತೆಗೆದುಕೊಂಡರು.
ಇದೀಗ ಬಘೀರ ಸೆಟ್‌ಗೆ ವಾಪಸ್ ಆಗಿರೋ ಶ್ರೀಮುರಳಿ, ಬಾಕಿ ಉಳಿದ ಸಾಹಸ ದೃಶ್ಯದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಈ ಮೂಲಕ ತಮ್ಮ ಕೆಲಸ ಮುಗಿಸಿಕೊಟ್ಟಿದ್ದಾರೆ.
ಬಘೀರ ಸೆಟ್ ಅಲ್ಲಿ ಪ್ರಕಾಶ್ ರೈ ಅಬ್ಬರ ಜೋರು
ಆದರೆ ಸದ್ಯ ಬಘೀರ ಚಿತ್ರದ ನಿರ್ದೇಶಕ ಸೂರಿ, ಪ್ರಕಾಶ್ ರೈ ಅವರ ಪಾತ್ರದ ಚಿತ್ರೀಕರಣ ಮಾಡುತ್ತಿದ್ದಾರೆ. ಇದೇ ವಾರದಲ್ಲಿಯೇ ಇಡೀ ತಂಡ ಮೈಸೂರಿನಲ್ಲಿ ಚಿತ್ರೀಕರಣ ಮಾಡೋಕೆ ಪ್ಲಾನ್ ಮಾಡಿದೆ. ಇಲ್ಲಿಯ ರೇಸ್ ಕೋರ್ಸ್ ರೋಡ್ ಸೇರಿದಂತೆ ಇತರ ಜಾಗದಲ್ಲಿಯೇ ಬಘೀರ ಶೂಟಿಂಗ್ ಮಾಡುವ ಯೋಜನೆ ಹಾಕಿಕೊಂಡಿದೆ.
ಬಘೀರ ಸಿನಿಮಾ ಕನ್ನಡದ ಮತ್ತೊಂದು ಬಹು ನಿರೀಕ್ಷಿತ ಸಿನಿಮಾ ಆಗಿದೆ. ದೊಡ್ಡಮಟ್ಟದಲ್ಲಿಯೇ ಈ ಚಿತ್ರವನ್ನ ತೆರೆಗೆ ತರುವ ಪ್ಲಾನ್ ಹಾಕಿಕೊಳ್ಳಲಾಗಿದೆ. ವಿಜಯ್ ಕಿರಗಂದೂರು ನಿರ್ಮಾಣದ ಈ ಚಿತ್ರದ ಬಗ್ಗೆ ದೊಡ್ಡ ಹೋಪ್ ಇದೆ.
ರೋರಿಂಗ್ ಸ್ಟಾರ್ ಶ್ರೀಮುರಳಿಗೆ ರುಕ್ಮಿಣಿ ವಸಂತಾ ಜೋಡಿ
ಇನ್ನು ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಈ ಚಿತ್ರದಲ್ಲಿ ರುಕ್ಮಿಣಿ ವಸಂತಾ ಜೋಡಿ ಆಗಿದ್ದಾರೆ. ರಂಗಾಯಣ ರಘು, ಅಚ್ಯುತ್ ಕುಮಾರ್, ಪುನೀತ್ ರುದ್ರರಂಗ ಅಭಿನಯಿಸಿದ್ದಾರೆ.
ಎ.ಜೆ.ಶೆಟ್ಟಿ ಕ್ಯಾಮೆರಾ ಕಣ್ಣಲ್ಲಿಯೇ ಇಡೀ ಬಘೀರ ಸಿನಿಮಾ ಮೂಡಿ ಬರ್ತಿದೆ. ಅಜನೀಶ್ ಲೋನಾಥ್ ಸಂಗೀತ ಸಂಯೋಜನೆ ಕೆಲಸದಲ್ಲಿಯೇ ಬ್ಯುಸಿ ಇದ್ದಾರೆ. ಇನ್ನುಳಿದಂತೆ ಬಘೀರ ವಾಪಸ್ ಶೂಟಿಂಗ್ ಬಂದಿರೋದು ಇಡೀ ತಂಡಕ್ಕೆ ಹೊಸ ಹುಮ್ಮಸ್ಸು ಬಂದಿದೆ.
ಇದನ್ನೂ ಓದಿ: Ray Stevenson: RRR ನಟ ಇನ್ನಿಲ್ಲ! ನೋವಿನಲ್ಲಿ ಟ್ವೀಟ್ ಮಾಡಿದ ರಾಜಮೌಳಿ
ಇನ್ನುಳಿದಂತೆ ಬಘೀರ ಸಿನಿಮಾ ಮೂಲಕ ಶ್ರೀಮುರಳಿ ಮತ್ತೊಮ್ಮೆ ಪೊಲೀಸ್ ಆಫೀಸರ್ ಆಗಿದ್ದಾರೆ. ಮತ್ತೊಮ್ಮೆ ಈ ಚಿತ್ರದಲ್ಲೂ ಭರ್ಜರಿ ಭೇಟೆಯಾಡಲಿದ್ದಾರೆ. ಆದರೆ ಈ ಸಿನಿಮಾ ಬಗ್ಗೆ ತಂಡ ಎಲ್ಲೂ ಏನೂ ಇನ್ನೂ ಬಿಟ್ಟುಕೊಟ್ಟಿಲ್ಲ. ಆದರೂ ಒಂದಿಲ್ಲ ಒಂದು ಸುದ್ದಿ ಈ ಸಿನಿಮಾ ಬಗ್ಗೆ ಕ್ಯೂರಿಯೋಸಿಟಿ ಹುಟ್ಟಿಸುತ್ತಲೇ ಇರುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ