sಸ್ಯಾಂಡಲ್‌ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ (Bagheera Movie Latest Updates) ಆರೋಗ್ಯ ಸೂಪರ್ ಆಗಿದೆ. ಕಳೆದ (Srii murali Movie Latest News) ಮೂರು ತಿಂಗಳ ಹಿಂದೆ ಬಘೀರ ಸಿನಿಮಾ ಶೂಟಿಂಗ್ ಟೈಮ್ ಅಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಇದರಿಂದ ಮೊಣಕಾಲಿಗೆ ಶಸ್ತ್ರ ಚಿಕಿತ್ಸೆ ಕೂಡ (Bagheera New Cinema Updates) ಆಯಿತು. ಆದರೆ ಇದರಿಂದ ಶ್ರೀಮುರಳಿ ಮೂರು ತಿಂಗಳು ರೆಸ್ಟ್ ತೆಗೆದುಕೊಳ್ಳಲೇಬೇಕಿತ್ತು. ಆ ಒಂದು ವಿಶ್ರಾಂತಿ ಟೈಮ್ ಇದೀಗ ಎಂಡ್ ಆಗಿದೆ. ಶ್ರೀಮುರಳಿ ಶೂಟಿಂಗ್ (Bagheera Movie Updates) ಹೋಗೋಕೆ ರೆಡಿ ಆಗಿದ್ದು, ಚಿತ್ರೀಕರಣದ ಕೆಲಸ ಯಾವಾಗ ಶುರು ಆಗುತ್ತದೆ? ಈಗ ಏನೆಲ್ಲ ಆಗಿದೆ? ಈ ಎಲ್ಲ ಮಾಹಿತಿಯ ಒಂದಷ್ಟು ಸ್ಟೋರಿ ಇಲ್ಲಿದೆ ಓದಿ.
ಬಘೀರ ಸಿನಿಮಾ ಶೂಟಿಂಗ್ ಯಾವಾಗ?
ಬಘೀರ ಸಿನಿಮಾದ ಶೂಟಿಂಗ್ ವೇಳೆ ಒಂದು ಘಟನೆ ನಡೆಯಿತು. ಆ ಘಟನೆಯಲ್ಲಿ ಶ್ರೀಮುರಳಿ ಕಾಲಿಗೆ ಪೆಟ್ಟು ಮಾಡಿಕೊಂಡರು. ಮೂರು ತಿಂಗಳು ರೆಸ್ಟ್ ಕೂಡ ಪಡೆಯುವಂತೆ ಆಯಿತು. ಆದರೆ ಶ್ರೀಮುರಳಿ ಇಲ್ಲದೇ ಸಿನಿಮಾ ಶೂಟಿಂಗ್ ಸ್ಟಾಪ್ ಆಯಿತೇ? ಇಲ್ಲ ಬಿಡಿ ಡೈರೆಕ್ಟರ್ ಸೂರಿ ತಮ್ಮ ಚಿತ್ರದ ಕೆಲಸವನ್ನ ಮುಂದುವರೆಸಿಕೊಂಡು ಹೋಗಿದ್ದಾರೆ.
ಇಲ್ಲಿವರೆಗೂ ಬಘೀರ ಶೂಟಿಂಗ್ ಎಷ್ಟಾಗಿದೆ ಗೊತ್ತೇ?
ಸಿನಿಮಾದ ಇತರ ಭಾಗದ ಕೆಲಸ ಕೂಡ ನಡೆಯುತ್ತಿದೆ. ಈ ಮೊದಲೇ ಪ್ಲಾನ್ ಮಾಡಿದಂತೆ ಬಘೀರ ಚಿತ್ರವನ್ನ 120 ದಿನಗಳಲ್ಲಿ ಶೂಟ್ ಮಾಡಲಾಗುತ್ತಿದೆ. ಆದರೆ ಈಗ ಇನ್ನೂ ಸಾಕಷ್ಟು ಕೆಲಸ ಇದೆ. ಅಂದ್ರೆ, ಇನ್ನೂ 60 ದಿನಗಳ ಕೆಲಸ ಮಾಡಬೇಕಿದೆ. ಹಾಗಾಗಿಯೇ ಬಘೀರ ಸಿನಿಮಾ ಟೀಮ್, ಎಲ್ಲ ತಯಾರಿ ಮಾಡಿಕೊಳ್ಳುತ್ತಿದೆ.
ಬಘೀರ ಚಿತ್ರಕ್ಕೆ ಬೆಂಗಳೂರು-ಮೈಸೂರಲ್ಲಿ ಸೆಟ್
ಬೆಂಗಳೂರು ಮತ್ತು ಮೈಸೂರಿನಲ್ಲಿ ಬಘೀರ ಸಿನಿಮಾ ಶೂಟ್ ಮಾಡೋ ಪ್ಲಾನ್ ಮಾಡಲಾಗಿದೆ. ಇಲ್ಲಿ ಸೆಟ್ ನಿರ್ಮಿಸಿ ಚಿತ್ರೀಕರಣ ಮಾಡುವ ಪ್ಲಾನ್ ಇದೆ. ಈ ಹಿನ್ನೆಲೆಯಲ್ಲಿ ಕೆಲಸವೂ ನಡೆಯುತ್ತಿದ್ದು, ಶ್ರೀಮುರಳಿ ಈಗ ಶೂಟಿಂಗ್ ಹೋಗೋಕೆ ರೆಡಿ ಆಗಿದ್ದಾರೆ.
ಬಘೀರ ಮತ್ತೆ ಶುರು ಆಗೋದು ಯಾವಾಗ?
ಶ್ರೀಮುರಳಿ ಅವರ ಭಾಗದ ಚಿತ್ರೀಕರಣಕ್ಕೆ ಪಕ್ಕಾ ಪ್ಲಾನ್ ಆಗುತ್ತಿದೆ. ಆದರೆ ಇವರ ಚಿತ್ರೀಕರಣದ ಕೆಲಸ ಈಗಲೇ ಏನೂ ಶುರು ಆಗುತ್ತಿಲ್ಲ. ಹೆಚ್ಚು ಕಡಿಮೆ ಒಂದು ವಾರ ಆಗಬಹುದೇನೋ, ಯಾಕೆಂದ್ರೆ ಸಿನಿಮಾ ತಂಡ ಎಲೆಕ್ಷನ್ ಮುಗಿಯೋದನ್ನ ಕಾಯುತ್ತಿದೆ. ಎಲೆಕ್ಷನ್ ಮುಗಿದ ಮೇಲೆ ಬಘೀರ ಶೂಟಿಂಗ್ ಶುರು ಆಗಲಿದೆ ನೋಡಿ.
ಬಘೀರ ಸಿನಿಮಾ ಶ್ರೀಮುರಳಿ ಇದೀಗ ಏನಂತಾರೆ?
ಅಂದ್ಹಾಗೆ ಬಘೀರ ಸಿನಿಮಾ ನಾಯಕ ನಟ ಶ್ರೀಮುರಳಿ ಈಗಾಗಲೇ ಹೇಳಿಕೊಂಡಂತೆ, ದೊಡ್ಡ ದೊಡ್ಡ ಸ್ಟಂಟ್ಸ್ ಗಳನ್ನ ಸಿನಿಮಾದಲ್ಲಿ ಮಾಡಿದ್ದೇನೆ. ಆದರೆ ಚಿಕ್ಕ ಸ್ಟಂಟ್ಸ್ ಮಾಡೋ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದೇನೆ. ಅದರಿಂದ ಮೂರು ತಿಂಗಳು ರೆಸ್ಟ್ ತೆಗೆದುಕೊಳ್ಳುವ ಹಾಗೆ ಆಯಿತು.
ಬಘೀರ ಚಿತ್ರಕ್ಕೆ ಕೆಜಿಎಫ್ ಪ್ರಶಾಂತ್ ನೀಲ್ ಕಥೆ
ಆದರೆ ನಾನು ಈಗ ಫುಲ್ ಫಿಟ್ ಆಗಿದ್ದೇನೆ. ಎಂತಹ ಸ್ಟಂಟ್ಸ್ ಅನ್ನಾದರೂ ಮಾಡಬಹುದು. ನೋ ಪ್ರಾಬ್ಲಂ ಅನ್ನೋ ಅರ್ಥದಲ್ಲಿ ಹೇಳಿಕೊಂಡಿದ್ದಾರೆ. ಇನ್ನುಳಿದಂತೆ ಬಘೀರ ಚಿತ್ರಕ್ಕೆ ಪ್ರಶಾಂತ್ ನೀಲ್ ಕಥೆ ಬರೆದಿದ್ದಾರೆ. ಅದೇ ಕಥೆಯನ್ನ ಡೈರೆಕ್ಟರ್ ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ಶ್ರೀಮುರಳಿ ಮತ್ತೊಂದು ಗೆಲುವಿನ ಸೂಚನೆ ಕೊಟ್ಟಿದ್ದಾರೆ.
ಇದನ್ನೂ ಓದಿ: UI Kannada Movie: ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ UI ಸಿನಿಮಾ ಮೇಕಿಂಗ್ ರಿವೀಲ್, ಸಖತ್ ವಿಡಿಯೋ
ಇನ್ನು ಬಘೀರ ಸಿನಿಮಾದಲ್ಲೂ ರೋರಿಂಗ್ ಸ್ಟಾರ್ ಶ್ರೀಮುರಳಿ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದಾರೆ. ಇಲ್ಲೂ ಕೂಡ ಭರ್ಜರಿ ಆ್ಯಕ್ಷನ್ ಇರುತ್ತವೆ ಅನ್ನುವ ಭರವಸೆಯನ್ನ ಕೂಡ ಮೂಡಿಸಿದ್ದಾರೆ. ಇದರೊಟ್ಟಿಗೆ ಬಘೀರ ಸಿನಿಮಾದ ಇನ್ನಷ್ಟು ಹೊಸ ಮಾಹಿತಿ ಹೊರಬೀಳಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ