ಬೆಂಗಳೂರು: ಸ್ಯಾಂಡಲ್ವುಡ್ನ (Sandalwood) ಖ್ಯಾತ ನಟ, ರೋರಿಂಗ್ ಸ್ಟಾರ್ ಶ್ರೀಮುರಳಿ (Roaring Star Srimurali) ಗಾಯಗೊಂಡಿದ್ದಾರೆ ಎನ್ನಲಾಗಿದೆ. ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ‘ಬಘೀರ’ ಸಿನಿಮಾ ಶೂಟಿಂಗ್ (Bagheera Cinema Shooting) ವೇಳೆ ಈ ಅವಘಡ ನಡೆದಿದೆ. ಬೆಂಗಳೂರಿನ (Bengaluru) ರಾಕ್ಲೈನ್ ಸ್ಟೂಡಿಯೋದಲ್ಲಿ (Rockline Studio) ಬಘೀರ ಸಿನಿಮಾದ ಫೈಟಿಂಗ್ ಸೀಕ್ವೆನ್ಸ್ (fighting sequence) ನಡೆಯುತ್ತಿತ್ತು. ಈ ವೇಳೆ ಶೂಟಿಂಗ್ನಲ್ಲಿ ಭಾಗಿಯಾಗಿದ್ದ ಶ್ರೀಮುರಳಿಗೆ ಗಾಯವಾಗಿದೆ ಎನ್ನಲಾಗಿದೆ. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ (Hospital) ಕರೆದುಕೊಂಡು ಹೋಗಿರೋ ಸಿನಿಮಾ ತಂಡ, ಸೂಕ್ತ ಚಿಕಿತ್ಸೆ (Treatment) ನೀಡಿದೆ ಅಂತ ಮೂಲಗಳು ತಿಳಿಸಿವೆ.
ನಟ ಶ್ರೀಮುರಳಿಗೆ ಗಾಯ
ಬಹು ನಿರೀಕ್ಷಿತ ಬಘೀರ ಸಿನಿಮಾದ ಶೂಟಿಂಗ್ ವೇಳೆ ನಟ, ರೋರಿಂಗ್ ಸ್ಟಾರ್ ಶ್ರೀಮುರಳಿ ಗಾಯಗೊಂಡಿದ್ದಾರೆ ಎಂಬ ವರದಿಯಾಗಿದೆ. ಚಿತ್ರದ ಫೈಟಿಂಗ್ ದೃಶ್ಯದಲ್ಲಿ ಭಾಗಿಯಾಗಿದ್ದ ಶ್ರೀಮುರಳಿ, ಫೈಟಿಂಗ್ ವೇಳೆ ಗಾಯಗೊಂಡಿದ್ದಾರೆ ಅಂತ ಮೂಲಗಳು ತಿಳಿಸಿವೆ.
ಬಘೀರ ಕೊನೆ ಹಂತದ ಚಿತ್ರೀಕರಣ
ಬೆಂಗಳೂರಿನ ರಾಕ್ಲೈನ್ ಸ್ಟೂಡಿಯೋದಲ್ಲಿ ಬಘೀರ ಸಿನಿಮಾದ ಕೊನೆ ಹಂತದ ಚಿತ್ರೀಕರಣ ನಡೆಯುತ್ತಿದೆ. ಈ ವೇಳೆ ನಟ ಶ್ರೀಮುರಳಿ ಫೈಟಿಂಗ್ ಸೀಕ್ವೆನ್ಸ್ನಲ್ಲಿ ಇಂದು ಭಾಗಿಯಾಗಿದ್ದರು. ಈ ವೇಳೆ ಈ ಅವಘಡ ನಡೆದಿದೆ.
ಇದನ್ನೂ ಓದಿ: Rocking Star Yash: ಹೋರಾಡುತ್ತಲೇ ಸತ್ತರೂ ಬೇಸರವಿಲ್ಲ! ಟೀಕೆಗಳಿಗೆ ರಾಕಿಂಗ್ ಸ್ಟಾರ್ ಖಡಕ್ ಉತ್ತರ
ಶೂಟಿಂಗ್ ವೇಳೆ ಶ್ರೀಮುರಳಿಗೆ ಗಂಭೀರ ಗಾಯ?
ಹೌದು, ಶೂಟಿಂಗ್ ವೇಳೆ ಶ್ರೀಮುರಳಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ. ರಾಕ್ ಲೈನ್ ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಶೂಟಿಂಗ್ನಲ್ಲಿ ಅವಘಡ ನಡೆದಿದೆ. ಶ್ರೀಮುರಳಿ ಮೊಣಕಾಲಿಗೆ ಗಂಭೀರ ಗಾಯವಾಗಿದೆ ಎನ್ನಲಾಗುತ್ತಿದೆ.
ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಅನಾಹುತ
ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಗಾಯವಾಗಿದೆ. ಫೈಟಿಂಗ್ ಸೀನ್ ಶೂಟಿಂಗ್ ವೇಳೆ ಶ್ರೀಮುರಳಿ ಸ್ಕಿಡ್ ಆಗಿ ಬಿದ್ದಿದ್ದು, ಅವರ ಎಡ ಕಾಲಿನ ಮಂಡಿಗೆ ಗಾಯವಾಗಿದೆ. ತಕ್ಷಣವೇ ಶೂಟಿಂಗ್ ಸೆಟ್ನಲ್ಲಿದ್ದವರು ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಂಡಿಗೆ ಸರ್ಜರಿ ಮಾಡಲು ಹೇಳಿರುವ ವೈದ್ಯರು
ಇನ್ನು ಶ್ರೀಮುರಳಿಗೆ ತಕ್ಷಣವೇ ತಜ್ಞ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ನಾಳೆ ಬಘೀರ ಶೂಟಿಂಗ್ ಕಂಪ್ಲೀ ಆಗಲಿದೆಯಂತೆ, ಹೀಗಾಗಿ ಮುಂದಿನ ವಾರವೇ ಶ್ರೀಮುರುಳಿಗೆ ಸರ್ಜರಿ ಮಾಡಲಾಗುತ್ತದೆ ಅಂತ ಶ್ರೀ ಮುರಳಿ ಮ್ಯಾನೇಜರ್ ನ್ಯೂಸ್ 18ಗೆ ತಿಳಿಸಿದ್ದಾರೆ. ಅವರ ಅಭಿಮಾನಿಗಳು ಯಾವುದೇ ಆತಂಕಪಡುವುದು ಬೇಡ ಅಂತ ಅವರು ಹೇಳಿದ್ದಾರೆ.
ಇದನ್ನೂ ಓದಿ: Shivarajkumar-Basavaraj Bommai: ಸಿಎಂ ಭೇಟಿಯಾದ ಶಿವಣ್ಣ! ಏನು ಈ ಭೇಟಿಯ ರಹಸ್ಯ?
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಬಘೀರ ಸಿನಿಮಾ
ಕೆಜಿಎಫ್ ಚಾಪ್ಟರ್ 1, ಕೆಜಿಎಫ್ ಚಾಪ್ಟರ್ 2 ಭಾರೀ ಯಶಸ್ಸಿನ ಬಳಿಕ ಕಾಂತಾರ ಸಿನಿಮಾ ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲ್ಮ್ಸ್ ಅದರಲ್ಲೂ ಯಶಸ್ವಿಯಾಗಿತ್ತು. ಇದಾದ ಬಳಿಕ ಈಗ ಬಘೀರ ಸಿನಿಮಾ ಬರಲಿದೆ. ನಟ ಶ್ರೀ ಮುರಳಿ ಬಘೀರನಾಗಿ ಘರ್ಜಿಸೋದಕ್ಕೆ ರೆಡಿಯಾಗುತ್ತಿದ್ದರು. ಕೆಜಿಎಫ್ ಸೂತ್ರಧಾರ ಪ್ರಶಾಂತ್ ನೀಲ್ ಈ ಸಿನಿಮಾಗೆ ಕಥೆ ಬರೆದಿದ್ದು, ಲಕ್ಕಿ ಸಿನಿಮಾ ಖ್ಯಾತಿಯ ಡಾ. ಸೂರಿ ನಿರ್ದೇಶನ ಮಾಡುತ್ತಿದ್ದಾರೆ. “ಸಮಾಜವು ಜಂಗಲ್ ಆಗಿ ಬದಲಾದಾಗ ಮತ್ತು ನ್ಯಾಯಕ್ಕಾಗಿ ಒಬ್ಬನೇ ಪರಭಕ್ಷಕ ಘರ್ಜಿಸುತ್ತಾನೆ! ಬಘೀರ ಆಗಿ ಶ್ರೀಮರಳಿ ಕಠೋರತೆ ಮತ್ತು ಶೌರ್ಯದ ಉತ್ಸಾಹದಲ್ಲಿ ಘರ್ಜಿಸುತ್ತಾ ಆಗಮಿಸುತ್ತಾರೆ ಅಂತ ಈ ಹಿಂದೆ ಹೊಂಬಾಳೆ ಫಿಲ್ಮ್ಸ್ ತನ್ನ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ