Actor Shivaram: ಹಿರಿಯ ನಟ ಶಿವರಾಮ್ ಅಂತಿಮ ದರ್ಶನ ಪಡೆದ ಚಿತ್ರರಂಗದ ಗಣ್ಯರು- 1 ಗಂಟೆಗೆ ಅಂತಿಮ ವಿಧಿ ವಿಧಾನ

Actor Shivaram Death: ನಿರ್ದೇಶಕ ಟಿ.ಎನ್ ಸೀತಾರಾಮ್ ಸಹ ಹಿರಿಯ ನಟರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಶಿವರಾಮಣ್ಣ ನಾಟಕದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದರು,ಎಲ್ಲಾರ ಜೊತೆ ತುಂಬಾ ಆತ್ಮೀಯತೆಯಿಂದ ಇದ್ರು. ಚಿತ್ರರಂಗದಲ್ಲಿ ಕಿರಿಯರಿಗೆ ಬೆಳೆಯಲು ಪ್ರೋತ್ಸಾಹ ನೀಡುತ್ತಿದ್ರು.ಶಿವರಾಮಣ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.

ನಿಧನರಾದ ನಟ ಶಿವರಾಮ್

ನಿಧನರಾದ ನಟ ಶಿವರಾಮ್

  • Share this:
ಚಂದನವನದ (Sandalwood) ಮತ್ತೊಂದು ಕೊಂಡಿ ಇಂದು ಕಳಚಿದೆ. ಇಂದು ಹಿರಿಯ ನಟ ಎಸ್. ಶಿವರಾಮ್ (Veteran Actor Shivaram ) ನಿಧನರಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಶಿವರಾಮ್ ಅವರ ಕಾರ್ ಅಪಘಾತಕ್ಕೆ (Car Accident) ಒಳಗಾಗಿತ್ತು, ನಂತರ ಬುಧವಾರ ಅಯ್ಯಪ್ಪನ ಪೂಜೆ ಮಾಡಲು ಹೋಗಿ ಕೋಣೆಯಲ್ಲಿ ಜಾರಿ ಬಿದ್ದರು. ಕೂಡಲೇ ಕುಟುಂಬಸ್ಥರು ಬೆಂಗಳೂರಿನ ವಿದ್ಯಾಪೀಠ ಸರ್ಕಲ್ ಬಳಿ ಇರುವ ಪ್ರಶಾಂತ್ ಆಸ್ಪತ್ರೆಗೆ (Prashanth Hospital) ದಾಖಲಿಸಲಾಗಿತ್ತು. ಸ್ಕ್ಯಾನಿಂಗ್ ರಿಪೋರ್ಟ್ (Scanning Report) ನಲ್ಲಿ ಮೆದುಳಿನಲ್ಲಿ ರಕ್ತಸ್ರಾವ ಆಗಿರೋದು ಗೊತ್ತಾಗಿತ್ತು. ಆದ್ರೆ ಶಿವರಾಮ್ ಅವರಿಗೆ 84 ವರ್ಷ ವಯಸ್ಸಾದ ಹಿನ್ನೆಲೆ ಸರ್ಜರಿ (Surgery) ಮಾಡಲು ಆಗಿರಲಿಲ್ಲ. ಐಸಿಯುನಲ್ಲೇ ವೆಂಟಿಲೇಟರ್ ಸಪೋರ್ಟ್ (Ventilator Support) ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಶಿವರಾಮ್ ನಿನ್ನೆ ನಿಧನರಾಗಿದ್ದಾರೆ.

ಸಿನಿ ಅಂಗಳದಲ್ಲಿ ಶಿವರಾಮ್ ಅಂಕಲ್, ಶಿವರಾಮ್ ಅಣ್ಣ ಅಂತಾನೇ ಗುರುತಿಸಿಕೊಂಡಿದ್ದರು. ಚಂದನವನದ ಎಲ್ಲ ಸೂಪರ್ ಸ್ಟಾರ್ ಗಳ ಜೊತೆಯಲ್ಲಿ ಶಿವರಾಮ್ ನಟಿಸಿದ್ದರು. ವಿಷ್ಣುವರ್ಧನ್, ಡಾ. ರಾಜ್ ಕುಮಾರ್, ಅಂಬರೀಶ್ ಸೇರಿದಂತೆ ಎಲ್ಲ ದಿಗ್ಗಜರ ಜೊತೆ ನಟಿಸಿದ್ದಾರೆ. ಆರಂಭದಲ್ಲಿ ಕಾಲೇಜು ಹುಡುಗ, ಹೀರೋ ಸೋದರ ಮತ್ತು ಕಾಮಿಡಿ ಪಾತ್ರಗಳಲ್ಲಿ ಶಿವರಾಮ್ ನಟಿಸುತ್ತಿದ್ರು.

ಇಂದು ಅವರ ಪಾರ್ಥಿವ ಶರೀರದ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, 7.30 ರಿಂದ 10ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ , ಸಾರ್ವಜನಿಕರಿಗೆ ಅಂತಿಮ ದರ್ಶಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ಚಿತ್ರರಂಗದ ಗಣ್ಯರು ಭೇಟಿ ನೀಡಿ ದರ್ಶನ ಪಡೆಯುತ್ತಿದ್ದು, ಹಿರಿಯ ನಟರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ದೊಡ್ಮನೆ ಕುಟುಂಬಕ್ಕೆ ಗುರುಸ್ವಾಮಿಗಳಾಗಿದ್ದ ಶಿವರಾಂ :ಅಯ್ಯಪ್ಪ ದೇವರ ಮೇಲಿತ್ತು ಅಪಾರ ಭಕ್ತಿ

ಒಬ್ಬೊಬ್ಬರಾಗಿಯೇ ಸಿನಿ ರಂಗದ ಕಲಾವಿದರು ಬಂದು ಅಂತಿಮ ದರ್ಶನ ಪಡೆಯುತ್ತಿದ್ದು, ನಟಿ ಸುಧಾರಾಣಿ, ಟಿ. ಎನ್. ಸೀತಾರಾಮ್ , ಪ್ರಮೋದ್ ಮುತಾಲಿಕ್, ಭಾರತಿ ವಿಷ್ಟುವರ್ಧನ್, ನಟ ರಾಮಕೃಷ್ಣ ಸೇರಿದಂತೆ ಗಣ್ಯಾತಿ ಗಣ್ಯರು ಆಗಮಿಸಿದ್ದಾರೆ.

ಶಿವರಾಮ್ ಅಂಕಲ್ ಕಳ್ಕೊಂಡು‌ ದೊಡ್ಡ ನಷ್ಟ ಆಗಿದೆ. ಬಹಳ ಒಳ್ಳೆ ವ್ಯಕ್ತಿ ಅವರು.  ಚಿತ್ರರಂಗದಲ್ಲಿಯೇ ಹಲವು ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ರು, ಆಧ್ಯಾತ್ಮಿಕ ಇರಬಹುದು ನಟನೆ ಇರಬಹುದು ಎಲ್ಲಾದರಲ್ಲೂ ತೊಡಗಿಸಿಕೊಂಡಿದ್ರು. ಈಗ ಅನಿಸ್ತಾ ಇದೆ ಅವರು ಹೇಳಿರೋದನ್ನೆಲ್ಲ ದಾಖಲೆ ತರ ಇಟ್ಕೋಬೇಕಿತ್ತು ಅಂತದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ನಟಿ ಸುಧಾರಾಣಿ ಸಂತಾಪ ಸೂಚಿಸಿದ್ದಾರೆ.

ಸಾಹಿತಿ ಬರಗೂರು ರಾಮಚಂದ್ರಪ್ಪ ಸಹ ಅಂತಿಮ ದರ್ಶನ ಪಡೆದಿದ್ದು, ಕನ್ನಡ ಚಿತ್ರರಂಗದಲ್ಲಿ  ಇತ್ತೀಚೆಗೆ ಪುನೀತ್ ಕಳ್ಕೊಂಡ್ ಇದ್ದೀವಿ‌‌, ಆದ್ರೆ ಇದೀಗ ಶೀವರಾಮ್ ಅವರನ್ನು ಕಳ್ಕೊಂಡ್ವಿ. ಇಬ್ಬರು ನಟರನ್ನ ಕಳೆದುಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ಬಹಳ ನಷ್ಟವಾಗಿದೆ. ಶಿವರಾಮ್ ಅವರ ಪುಸ್ತಕ ಪ್ರೀತಿ ಬಹಳ ವಿಶಿಷ್ಟವಾದದ್ದು ಎಂದು ಶಿವರಾಮ್ ಬಗ್ಗೆ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ.

ಶಿವರಾಮಣ್ಣ ಇಡೀ ಚಿಂತ್ರರಂಗಕ್ಕೆ  ಜ್ಞಾನ ಭಾಸ್ಕರನಂತೆ ಇದ್ರು.. ಶಿವರಾಮ್ ಸಾವಿನಿಂದ ಇಡೀ ಚಿತ್ರರಂಗಕ್ಕೆ ಗ್ರಹಣ ಬಡಿದಿದೆ ಅನ್ನಿಸುತ್ತೆ. ಚಿತ್ರರಂಗವನ್ನು ಶ್ರೀಮಂತಗೊಳಿಸುವಲ್ಲಿ ಅವರ ಪಾತ್ರ ದೊಡ್ಡದು ಎಂದು ಹಿರಿಯ ನಟ ರಾಮಕೃಷ್ಟ ಹೇಳಿದ್ದಾರೆ. ಅಲ್ಲದೇ ಶಿವರಾಮ್ ಅವರಿಂದಲೇ ಕಲಾವಿದರೂ ಒಂದು ಕಡೆ ಒಗ್ಗೂಡಲು ಶ್ರಮ ವಹಿಸಿದ್ದಾರೆ. ರಾಜಕೀಯ ಕಾನೂನು ಎಲ್ಲಾ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅಪಾರ.ಅವರ ಬಗ್ಗೆ ಎಷ್ಟು ಹೇಳಿದ್ರು ಮುಗಿಯುವುದಿಲ್ಲ ಎಂದು ನೋವನ್ನು ವ್ಯಕ್ತಪಡಿಸಿದ್ದಾರೆ.

ನಿರ್ದೇಶಕ ಟಿ.ಎನ್ ಸೀತಾರಾಮ್ ಸಹ ಹಿರಿಯ ನಟರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಶಿವರಾಮಣ್ಣ ನಾಟಕದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದರು,ಎಲ್ಲಾರ ಜೊತೆ ತುಂಬಾ ಆತ್ಮೀಯತೆಯಿಂದ ಇದ್ರು. ಚಿತ್ರರಂಗದಲ್ಲಿ ಕಿರಿಯರಿಗೆ ಬೆಳೆಯಲು ಪ್ರೋತ್ಸಾಹ ನೀಡುತ್ತಿದ್ರು.ಶಿವರಾಮಣ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.

ಇನ್ನು ಅಂತಿಮ ದರ್ಶನ ಪಡೆದು ಮಾತನಾಡಿದ ನಟಿ ತಾರಾ ಇವತ್ತು ಮತ್ತೊಮ್ಮೆ ಚಿತ್ರರಂಗದ ಕೊಂಡಿಯಾಗಿದ್ದ ಹಿರಿಯರನ್ನ ಕಳೆದುಕೊಂಡಿದ್ದೇವೆ. ಮಾಹಿತಿಯ ಭಂಡಾರವಾಗಿದ್ದ ಶಿವರಾಮ್ ಅವರನ್ನ ಕಳೆದುಕೊಂಡಿದ್ದೇವೆ. ಚಿತ್ರರಂಗದಲ್ಲಿ ನಿರಂತರ ಸಾವು ಬಹಳ ನೋವು ತರ್ತಾ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀರಾಮ ಸೇನೆಯ ಅಧ್ಯಕ್ಷ  ಪ್ರಮೋದ್ ಮುತಾಲಿಕ್ ಪ್ರಸಿದ್ದ ನಟರಾದ ಶಿವರಾಮ್ ನಿಧನ ನೋವು ತಂದಿದೆ. ಶ್ರೀ ರಾಮ ಸೇನೆ ಸಂಘಟನೆಯಿಂದ ಶ್ರದ್ದಾಂಜಲಿ ಅರ್ಪಣೆ ಮಾಡಲು ಬಂದಿದ್ದೇವೆ ಎಂದರು.

ಇದನ್ನೂ ಓದಿ: ಸ್ಯಾಂಡಲ್‌ವುಡ್‌ಗೆ ಮತ್ತೊಂದು ಆಘಾತ: ಹಿರಿಯ ನಟ ಶಿವರಾಮ್ ಇನ್ನಿಲ್ಲ

10.30 ರವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಆ ಬಳಿಕ ಮನೆಗೆ ತೆಗೆದುಕೊಂಡು ಬಂದು 10 ನಿಮಿಷ ಪೂಜೆ ಮಾಡಿ ಬನಶಂಕರಿ ಚಿತಾಗಾರದಲ್ಲಿ ಸುಮಾರು ಒಂದು ಗಂಟೆಗೆ ಅಂತ್ಯಕ್ರಿಯೆ ವಿಧಿವಿಧಾನ ಮಾಡಲಾಗುತ್ತದೆ ಎಂದು ಶಿವರಾಮ್ ಅವರ ಪುತ್ರ ಹೇಳಿದ್ದಾರೆ.
Published by:Sandhya M
First published: