• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Shiva Rajkumar: ಶಿವಣ್ಣನ ಅಸಲಿ ಹೆಸರು ಶಿವರಾಜ್​ಕುಮಾರ್​ ಅಲ್ವಂತೆ! ನಿಜವಾದ ಹೆಸರು ರಿವೀಲ್ ಮಾಡಿದ ಹ್ಯಾಟ್ರಿಕ್ ಹೀರೋ

Shiva Rajkumar: ಶಿವಣ್ಣನ ಅಸಲಿ ಹೆಸರು ಶಿವರಾಜ್​ಕುಮಾರ್​ ಅಲ್ವಂತೆ! ನಿಜವಾದ ಹೆಸರು ರಿವೀಲ್ ಮಾಡಿದ ಹ್ಯಾಟ್ರಿಕ್ ಹೀರೋ

ಶಿವರಾಜ್​ಕುಮಾರ್

ಶಿವರಾಜ್​ಕುಮಾರ್

ಕರುನಾಡಲ್ಲಿ ಶಿವಣ್ಣ ಎಂದೇ ಪ್ರಸಿದ್ಧರಾಗಿರುವ ಶಿವರಾಜ್​ಕುಮಾರ್ ಅವರ ನಿಜವಾದ ಹೆಸರು ಬೇರೆಯಂತೆ. ಹೌದು, ಇದು ನಿಮಗೆ ಆಶ್ಚರ್ಯವಾದರೂ ಸತ್ಯ. ಈ ವಿಷಯವನ್ನು ಸ್ವತಃ ಅವರೇ ತಿಳಿಸಿದ್ದಾರೆ. 

  • Share this:

ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ (Shiva Rajkumar) ಸದ್ಯ ಬೈರಾಗಿ (Bhairagi) ಸಿನಿಮಾದ ಯಶಸ್ಸಿನಲ್ಲಿದ್ದಾರೆ. ಇದರ ನಡುವೆ ರಿಯಾಲಿಟಿ ಶೋ, ಸಿನಿಮಾ (Movie) ಎಂದೆಲ್ಲಾ ಬ್ಯುಸಿಯಾಗಿದ್ದಾರೆ. ಅಲ್ಲದೇ ಕರುನಾಡಲ್ಲಿ ಶಿವಣ್ಣ ಎಂದೇ ಪ್ರಸಿದ್ಧರಾಗಿರುವ ಶಿವರಾಜ್​ಕುಮಾರ್ ಅವರ ನಿಜವಾದ ಹೆಸರು ಬೇರೆಯಂತೆ. ಹೌದು, ಇದು ನಿಮಗೆ ಆಶ್ಚರ್ಯವಾದರೂ ಸತ್ಯ. ಈ ವಿಷಯವನ್ನು ಸ್ವತಃ ಅವರೇ ತಿಳಿಸಿದ್ದಾರೆ. ಎಲ್ಲರೂ ಪ್ರೀತಿಯಿಂದ ಅವರನ್ನು ಶಿವಣ್ಣ ಅಥವಾ ಶಿವರಾಜ್​ಕುಮಾರ್ ಎಂದು ಕರೆಯುತ್ತಾರೆ. ಆದರೆ ಶಿವರಾಜ್​ಕುಮಾರ್ ಅವರ ಪಾಸ್​ಪೋರ್ಟ್​ (Passport) ನಲ್ಲಿ ಸೇರಿದಂತೆ ಎಲ್ಲಾ ದಾಖಲೆಗಳಲ್ಲಿ ಅವರ ನಿಜವಾದ ಹೆಸರು ಬೇರೆಯದೇ ಇದೆಯಂತೆ. ಈ ಕುತೂಹಲಕಾರಿ ವಿಷಯವನ್ನು ಇದೀಗ ಶಿವಣ್ಣ ಅವರೇ ರಿವೀಲ್ ಮಾಡಿದ್ದಾರೆ.


ಶಿವಣ್ಣನ  ಅಸಲಿ ಹೆಸರು ಏನು ಗೊತ್ತಾ?:


ಇನ್ನು, ಮೈಸೂರಿನ ಆಂದೋಲನ ಪತ್ರಿಕೆಯು 50 ವರ್ಷ ಪೂರ್ಣಗೊಳಿಸಿದೆ. ಇದರ ಅಂಗವಾಗಿ ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಶಿವಣ್ಣ ಭಾಗಿಯಾಗಿ ಮಾತನಾಡಿದರು. ಈ ವೇಳೆ ತಮ್ಮ ನಿಜವಾದ ಹೆಸರನ್ನು ರಿವೀಲ್ ಮಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನನ್ನ ಮೂಲ ಹೆಸರು ಶಿವರಾಜ್​ಕುಮಾರ್ ಎಂದಲ್ಲ. ನನಗೆ ಮೂಲವಾಗಿ ಇಟ್ಟಿದ್ದ ಹೆಸರು ನಾಗರಾಜ ಶಿವಪುಟ್ಟ ಸ್ವಾಮಿ ಎಂದು. ಅಲ್ಲದೇ ನನ್ನ ಪಾಸ್​ಪೋರ್ಟ್ ಸೇರಿದಂತೆ ಎಲ್ಲಾ ದಾಖಲೆಗಳಲ್ಲಿ ಇದೇ ಹೆಸರು ಇದೆ. ಜೊತೆಗೆ ನಾನು ಹುಟ್ಟಿ ಬೆಳೆದಿರುವುದು ಎಲ್ಲವೂ ಚೆನ್ನೈ ಆಗಿರುವುದರಿಂದ ಅಲ್ಲಿನ ನನ್ನ ಸ್ನೇಹಿತರೆಲ್ಲರೂ ನನ್ನನ್ನು ಪುಟ್ಟು ಎಂದು ಕರೆಯುತ್ತಾರೆ‘ ಎಂದು ಹೇಳಿದರು.


ನಾಗರಾಜ ಶಿವಪುಟ್ಟ ಸ್ವಾಮಿ ಎಂಬುದು ಶಿವರಾಜ್​ಕುಮಾರ್​ ಎಂದು ಬದಲಾಗಿದ್ದೇ ಒಂದು ರೋಚಕ ಕಥೆಯಾಗಿದೆ. ಹೌದು, ಒಮ್ಮೆ ನಟ ರಾಜ್​ಕುಮಾರ್ ಅವರ ಸ್ನೇಹಿತರಾದ ರಾಮಸ್ವಾಮಿ ಅವರು ಭೇಟಿಯಾಗಿದ್ದರು. ಆ ವೇಳೆ ಅವರು ನೀವು ರಾಜ್​ಕುಮಾರ್ ಕುಟುಂಬದವರು. ಹೀಗಾಗಿ ನಾಗರಾಜ ಶಿವಪುಟ್ಟ ಸ್ವಾಮಿ ಬದಲಾಗಿ ಶಿವರಾಜ್​ಕುಮಾರ್ ಎಂದು ಹೆಸರು ಇಟ್ಟುಕೊಳ್ಳಿ ಎಂದರು. ಇದಾದ ಬಳಿಕ ನಾನು ಶಿವರಾಜ್​ಕುಮಾರ್ ಎಂದು ಬದಲಾದೆ ಎಂದು ಶಿವಣ್ಣ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Shivarajkumar: ಭಟ್ಟರ ಗರಡಿಯಲ್ಲಿ ಹೆಜ್ಜೆ ಹಾಕಲಿರುವ ಹ್ಯಾಟ್ರಿಕ್ ಹೀರೋ, ಸ್ಯಾಂಡಲ್​ವುಡ್​ಗೆ ಇಂಡಿಯನ್ ಡ್ಯಾನ್ಸ್ ಕಿಂಗ್ ಕಂಬ್ಯಾಕ್​


ಬೈರಾಗಿ ಯಶಸ್ಸಿನಲ್ಲಿ ಶಿವಣ್ಣ:


ಸದ್ಯ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಜುಲೈ 1ರಂದು ತೆರೆಕಂಡ ಅವರ ಬಹುನಿರೀಕ್ಷಿತ ‘ಬೈರಾಗಿ‘ ಚಿತ್ರದ ಯಶಸ್ಸಿನಲ್ಲಿದ್ದಾರೆ. ಚಿತ್ರವು ಎಲ್ಲಡೆ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಉತ್ತಮ ಪ್ರತಿಕ್ರಿಯೆಗಳು ಬರುತ್ತಿವೆ. ಇನ್ನು, ಬೈರಾಗಿ ಸಿನಿಮಾ ಬಿಡುಗಡೆಯಾಗುವ ಮೊದಲೇ ಬಹಳ ಸದ್ದು ಮಾಡಿತ್ತು. ಟಗರು ಚಿತ್ರದ ನಂತರ ಧನಂಜಯ್ ಮತ್ತು ಶಿವಣ್ಣ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಚಿತ್ರ ಇದಾಗಿದೆ. ಟಗರು ಇಬ್ಬರು ಎದುರು ಬದುರಾಗಿ ಜನರಿಗೆ ಮೋಡಿ ಮಾಡಿದ್ದರು, ಈ ಚಿತ್ರದಲ್ಲಿ ಸಹ ಈ ಜೋಡಿ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.


ಇದನ್ನೂ ಓದಿ: Bairagi Review: ಬೆಂಗಳೂರಲ್ಲಿ ಕ್ಷಣಕ್ಕೆ ಚೇಂಜ್​​ ಆಗುತ್ತೆ ವೆದರ್​, ಆದ್ರೆ ಯಾವತ್ತೂ ಬದಲಾಗಲ್ಲ ಶಿವಣ್ಣನ ಖದರ್​!


ಅಪ್ಪು ನಿಧನದ ನಂತರ ಶಿವಣ್ಣ ಮೊದಲ ಸಿನಿಮಾ:


ಪುನೀತ್ ನಿಧನದ ವೇಳೆ ಶಿವರಾಜ್​ ಕುಮಾರ್ ಅವರ ಭಜರಂಗಿ 2 ಚಿತ್ರ ಬಿಡುಗಡೆಗೊಂಡಿತ್ತು. ಆದರೆ ಅಪ್ಪು ನಿಧನದ ಹಿನ್ನಲೆ ಚಿತ್ರವನ್ನು ಕೆಲ ದಿನಗಳ ತನಕ ಸ್ಥಗಿತಗೊಳಿಸಿ ಬಳಿಕ ರಿಲೀಸ್ ಮಾಡಲಾಗಿತ್ತು. ಆದರೆ ಇದೀಗ ಪುನೀತ್ ರಾಜ್​ ಕುಮಾರ್, ಶಿವಣ್ಣನ ಮುದ್ದಿನ ತಮ್ಮನ್ನಿಲ್ಲದೇ ಅವರ ಮೊದಲ ಸಿನಿಮಾ ‘ಬೈರಾಗಿ‘ ಬಿಡುಗಡೆ ಆಗಿದೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು