ಶಿವರಾಜ್ಕುಮಾರ್(Shiva Rajkumar) ಈ ಹೆಸರು ಕೇಳಿದರೆ ಸಾಕು ಅದೇನೋ ಒಂದು ಹುಮ್ಮಸ್ಸು ಬರುತ್ತೆ. ಹೌದು, ಅದಕ್ಕೆ ಕಾರಣ ಶಿವಣ್ಣ(Shivanna). ಅವರನ್ನು ನೋಡುವುದಕ್ಕೆ ಒಂದು ಖುಷಿ. ಅಭಿಮಾನಿ(Fans)ಗಳ ಜೊತೆ ಸ್ಟಾರ್ ಎಂದು ತೋರಿಸಿಕೊಳ್ಳದೇ ಜನಸಾಮನ್ಯರಂತೆ ನಡೆದುಕೊಳ್ಳುತ್ತಾರೆ. ಎಷ್ಟೆ ಆದರೂ ಅಣ್ಣಾವ್ರ ದೊಡ್ಡ ಮಗ. ಅಪ್ಪನಂತೆ ಮಕ್ಕಳು ಎಂಬುವುದಕ್ಕೆ ಡಾ.ರಾಜ್ಕುಮಾರ್(Dr.Rajkumar) ಕುಟುಂಬವೇ ನಿದರ್ಶನ. ಶಿವಣ್ಣ ಕೇವಲ ನಟನೆಯಲ್ಲಷ್ಟೇ ಎಲ್ಲರ ಗಮನ ಸೆಳೆದಿಲ್ಲ. ಅವರ ಗುಣಗಳಿಂದ ಎಲ್ಲರ ಮನ ಗೆದ್ದಿದ್ದಾರೆ. 59ನೇ ವಯಸ್ಸಿನಲ್ಲೂ ಚಿರ ಯುವಕನಂತೆ ಇದ್ದಾರೆ ಶಿವರಾಜ್ಕುಮಾರ್, ಅವರ ಎನರ್ಜಿ(Energy)ಗೆ ಅವರೇ ಸಾಟಿ. 59ನೇ ವಯಸ್ಸಿನಲ್ಲೂ ಹೀರೋ ಪಾತ್ರಗಳನ್ನೇ ಮಾಡುತ್ತಿದ್ದಾರೆ ಅಂದರೆ ಅವರ ತಾಕತ್ತಿನ ಬಗ್ಗೆ ಯೋಚನೆ ಮಾಡಿ. ಜೊತೆಗೆ ಅವರ ಸರಳತೆ ಇದೆಯಲ್ಲಾ ಎಲ್ಲ ನಟರಿಗೂ ಆ ಸರಳತೆ(Simplicity) ಬರುವುದಿಲ್ಲ. ಕನ್ನಡ ನಿಘಂಟಿನಲ್ಲಿ ಸರಳತೆಗೆ ಮತ್ತೊಂದು ಹೆಸರು ಶಿವಣ್ಣ ಅಂತ ಹೇಳುವುದು ತಪ್ಪಾಗಲ್ಲ. ಮಕ್ಕಳೊಂದಿಗೆ ಮಗುವಾಗುತ್ತಾರೆ ಶಿವಣ್ಣ, ಯಾರೇ ಇರಲಿ, ಯಾರೇ ಬರಲಿ ಶಿವಣ್ಣನ ರೇಂಜಿಗೆ ನಿಜಕ್ಕೂ ಯಾರು ಇಲ್ಲ. ಇವರ ಸರಳತೆ ಎಂಥದ್ದು ಅನ್ನುವುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ.
ಟ್ರಾಪಿಕ್ನಲ್ಲಿ ಅಭಿಮಾನಿಗಳ ಮಾತಿಗೆ ಸ್ಪಂದಿಸಿದ ಶಿವಣ್ಣ!
ಸೋದರ ಪುನೀತ್ ಇಲ್ಲ ಎನ್ನುವ ನೋವನ್ನು ಒಪ್ಪಿಕೊಂಡು ಶಿವಣ್ಣ ಮುಂದೆ ಸಾಗುತ್ತಿದ್ದಾರೆ. ಶಿವಣ್ಣ ನೋವು ತೋಡಿಕೊಂಡ ಅನೇಕ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಈಗ ಶಿವರಾಜ್ಕುಮಾರ್ ಅವರ ಹೊಸ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. ಶಿವಣ್ಣ ಹಾಗೂ ಗೀತಕ್ಕ ತಮ್ಮ ಕಾರಿನಲ್ಲಿ ಹೊರಗೆ ಬಂದಿದ್ದರು. ಸಿಗ್ನಲ್ ಇದ್ದ ಕಾರಣ ಟ್ರಾಪಿಕ್ನಲ್ಲಿ ನಿಂತಿದ್ದರು. ಶಿವಣ್ಣ ಅವರನ್ನು ಕಂಡ ಮಹಿಳಾ ಅಭಿಮಾನಿಯೊಬ್ಬರು ಮಾತನಾಡಿಸಿದ್ದಾರೆ. ಅಭಿಮಾನಿಯ ಮಾತಿಗೆ ಶಿವಣ್ಣ ಸ್ಪಂಧಸಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಸೆಂಚುರಿ ಸ್ಟಾರ್ ಮೇಲೆ ಕಣ್ಣಿಟ್ಟ ಹೊಂಬಾಳೆ ಫಿಲ್ಮ್ಸ್, ಸಂತೋಷ್ ಆನಂದ್ರಾಮ್ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ!
ಯಾರೇ ಬರಲಿ.. ಯಾರೇ ಇರಲಿ.. ನಿಮ್ಮ ರೇಂಜಿಗೆ ಯಾರಿಲ್ಲ!
ತಮ್ಮನ್ನು ಮಾತನಾಡಿಸಿದ ಮಹಿಳೆ ಜೊತೆ ಕುಟುಂಬದ ಸದಸ್ಯರಂತೆ ಅವರ ಉಭಯಕುಶಲೋಪರಿ ವಿಚಾರಿಸಿದ್ದಾರೆ ಶಿವರಾಜ್ಕುಮಾರ್. ಶಿವಣ್ಣ ಅವರನ್ನು ಕಂಡ ಮಹಿಳೆ ಸರ್ ಹೇಗಿದ್ದೀರಾ? ಎಂದು ಕೇಳಿದ್ದಾರೆ. ಇದಕ್ಕೆ ಶಿವಣ್ಣಚೆನ್ನಾಗಿದ್ದೀನಿ ಎಂದು ನಗುಮುಖದಲ್ಲೇ ಉತ್ತರಿಸುತ್ತಾರೆ. ಮೊದಲ ಬಾರಿಗೆ ನಿಮ್ಮನ್ನು ನೋಡ್ತಿರೋದು. ತುಂಬಾ ಖುಷಿಯಾಯ್ತು ಅಂತ ಮಹಿಳೆ ಹೇಳಿದ್ದಾರೆ ಥ್ಯಾಂಕ್ಸ್. ಊಟ ಆಯ್ತಾ ಎಂದು ಕೇಳಿದ್ದಾರೆ. ಇಲ್ಲ ಸಾರ್ ಇವಾಗ ಹೋಗ್ತಾ ಇದ್ದೀವಿ ಎಂದು ಮಹಿಳೆ ಉತ್ತರಿಸಿದ್ದಾರೆ. ಅದಕ್ಕೆ ಶಿವಣ್ಣ ಬಿರಿಯಾನಿನಾ? ಎಂದು ಕೇಳಿದ್ದಾರೆ. ಈ ವಿಡಿಯೋ ಕಂಡು ಅಭಿಮಾನಿಗಳು ಶಿವಣ್ಣ ಅವರನ್ನು ಸರಳತೆಯ ಸಾಮ್ರಾಟ್ ಎಂದು ಕರೆಯುತ್ತಿದ್ದಾರೆ.
ಇದನ್ನೂ ಓದಿ: `ಶಕ್ತಿಧಾಮ‘ದ ಮಕ್ಕಳಿಗಾಗಿ ಡ್ರೈವರ್ ಆದ ಶಿವಣ್ಣ, ಯಾರೇ ಬರಲಿ-ಯಾರೇ ಇರಲಿ ನಿಮ್ಮ ರೇಂಜಿಗೆ ಯಾರಿಲ್ಲ!
‘ಶಕ್ತಿಧಾಮ’ದ ಮಕ್ಕಳಿಗಾಗಿ ಡ್ರೈವರ್ ಆಗಿದ್ದ ಶಿವಣ್ಣ!
ಶಿವಣ್ಣ(Shivanna) ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ತಮ್ಮ ಸುತ್ತ ಇರುವವರನ್ನು ಯಾವಗಲೂ ನಗಿಸುತ್ತಾ, ಬೇರೆಯವರಿಗೆ ಮಾದರಿಯಾಗಿದ್ದಾರೆ ಶಿವಣ್ಣ. ಗಣರಾಜ್ಯೋತ್ಸವ ಆಚರಣೆಗೆ ಮುನ್ನ ಶಿವರಾಜ್ ಕುಮಾರ್ ಅವರು ಶಕ್ತಿಧಾಮದ ಮಕ್ಕಳನ್ನು ಜಾಲಿ ರೈಡ್ಗೆ ಕರೆದುಕೊಂಡು ಹೋಗಿದ್ದರು. ಶಿವಣ್ಣ ಅವರೇ ಶಕ್ತಿಧಾಮದ ವ್ಯಾನ್ ಅನ್ನು ಡ್ರೈವ್ ಮಾಡಿಕೊಂಡು ಮಕ್ಕಳನ್ನೆಲ್ಲ ಕರೆದುಕೊಂಡು ಊರು ಸುತ್ತಿಸಿದ್ದರು. ಶಿವಣ್ಣ ಅವರ ಜೊತೆ ರೌಂಡ್ ಹೋದ ಮಕ್ಕಳ ಸಂತೋಷಕ್ಕೆ ಪಾರವೇ ಇರಲಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ