Shivarajkumar: ಪ್ಯಾನ್​ ಇಂಡಿಯಾ ಸಿನಿಮಾ ಅಖಾಡಕ್ಕೆ ಶಿವಣ್ಣ ಎಂಟ್ರಿ.. ರೆಟ್ರೋ ಗೆಟಪ್​ನಲ್ಲಿ ಮಿಂಚಲಿದ್ದಾರೆ ಸೆಂಚೂರಿ ಸ್ಟಾರ್​!

‘ಓಂ’ ಸಿನಿಮಾದ ಸತ್ಯನ ರೀತಿ ಇನ್ನೊಂದು ವಿಭಿನ್ನ ಅವತಾರದಲ್ಲಿ ಕಮಾಲ್ ಮಾಡಲು ರೆಡಿಯಾಗಿದ್ದಾರೆ ಶಿವಣ್ಣ. ತುಂಬಾ ದಿನಗಳ ನಂತರ ಮತ್ತೊಮ್ಮೆ ಭೂಗತ ಲೋಕ(Under World)ದ ಕಥೆಯಲ್ಲಿ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ಶಿವಣ್ಣ

ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ಶಿವಣ್ಣ

  • Share this:
    ಫಸ್ಟ್ ಟೈಂ ರೆಟ್ರೋ ಲುಕ್(Retro Look)ನಲ್ಲಿ  ಪ್ಯಾನ್ ಇಂಡಿಯಾ(Pan India) ಸಿನಿಮಾದಲ್ಲಿ ಮಿಂಚಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್(Hattrick Hero Shivarajkumar) ಸಜ್ಜಾಗಿದ್ದಾರೆ. ‘ಓಂ’ ಸಿನಿಮಾದ ಸತ್ಯನ ರೀತಿ ಇನ್ನೊಂದು ವಿಭಿನ್ನ ಅವತಾರದಲ್ಲಿ ಕಮಾಲ್ ಮಾಡಲು ರೆಡಿಯಾಗಿದ್ದಾರೆ ಶಿವಣ್ಣ. ತುಂಬಾ ದಿನಗಳ ನಂತರ ಮತ್ತೊಮ್ಮೆ ಭೂಗತ ಲೋಕ(Under World)ದ ಕಥೆಯಲ್ಲಿ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕರುನಾಡ ಚಕ್ರವರ್ತಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ರಕ್ತ ಸಿಕ್ತ ಕಥೆಯೊಂದನ್ನ ಶಿವಣ್ಣ(Shivanna)ನಿಗೆ ಸಿನಿಮಾ ಮಾಡಲಿದ್ದಾರೆ ನಿರ್ದೇಶಕ ಜಯರಾಮ. ಉಪೇಂದ್ರ(Upendra) ಅಭಿನಯದ ಬುದ್ದಿವಂತ -2 ಚಿತ್ರವನ್ನು ನಿರ್ದೇಶನ ಮಾಡಿದ್ದ ಜಯರಾಮ್ ಈಗ ಜೈ ಎಂದು ಹೆಸರು ಬದಲಾವಣೆ ಮಾಡಿಕೊಂಡು  ಶಿವಣ್ಣನ‌ ಚಿತ್ರಕ್ಕೆ ಸಾರಥ್ಯ ವಹಿಸಿದ್ದಾರೆ. ಅಲ್ಲದೆ ಜೈ ಈ ಹಿಂದೆ ಅರ್ ಚಂದ್ರು ಜೊತೆ ಸಹ ನಿರ್ದೇಶಕರಾಗಿ ಶಿವಣ್ಣ ಮೈಲಾರಿ ಹಾಗೂ ಲಕ್ಷ್ಮಿ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.ಈಗ ಶಿವಣ್ಣನ ಚಿತ್ರಕ್ಕೆ ನಿರ್ದೇಶನ ಮಾಡಲು ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ. ಇನ್ನು ಹೆಸರಿಡದ ಶಿವಣ್ಣ ಅವರ ಹೊಸ ಚಿತ್ರ ಮುಂದಿನ ತಿಂಗಳು ಸೆಟ್ಟೇರಲಿದ್ದು,  ಚಿತ್ರಕ್ಕೆ ಬಿಂದ್ಯಾ ಮೂವೀಸ್(Bindhya Movies) ಬ್ಯಾನರ್ ಅಡಿ  ಕೇಶವ್ ರೈತ ಬಂಡವಾಳ ಹೂಡಲಿದ್ದಾರೆ. ನಿರ್ಮಾಪಕ ಕೇಶವ್ ರೈತ ಅವರಿಗೆ ಇದು ಮೊದಲ ಸಿನಿಮಾವಾಗಿದ್ದು, ಈ ಹಿಂದೆ ಕೇಶವ್  ಚಂದನ್ ಶೆಟ್ಟಿ ಅವರ ‘ಲಕ ಲಕ ಲ್ಯಾಂಬೋರ್ಗಿನಿ’ ಆಲ್ಬಂ ಸಾಂಗ್ ಅನ್ನು ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಾರೆ.

    ರೆಟ್ರೋ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಿವಣ್ಣ!

    ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿರುವ ಕೇಶವ್ ಮೊದಲ ಚಿತ್ರವನ್ನೆ ಅದ್ದೂರಿ ಬಜೆಟ್​​ನಲ್ಲಿ ಕಲರ್ ಪುಲ್ ಆಗಿ ಸಿನಿಮಾ ನಿರ್ಮಾಣ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ. ಇನ್ನು ಈ ಚಿತ್ರವು 1970 ರ ಕಾಲಘಟ್ಟದಲ್ಲಿ ನಡೆಯುವ ರೆಟ್ರೊ ಶೈಲಿಯ ಕಥೆಯಾಗಿದ್ದು  ಐದು ಭಾಷೆಗಳಲ್ಲಿ ಸಿನಿಮಾ ರೆಡಿ ಮಾಡಲು ಚಿತ್ರತಂಡ ಭರ್ಜರಿಯಾಗಿ ತಯಾರಿ ಮಾಡಿಕೊಂಡಿದೆ. ಸದ್ಯ ಚಿತ್ರದ ನಾಯಕ ನಿರ್ದೇಶಕ ಫೈನಲ್ ಆಗಿದ್ದು, ಶೀಘ್ರದಲ್ಲೇ ಚಿತ್ರದ ತಾಂತ್ರಿಕವರ್ಗ ಹಾಗೂ ತಾರಾಬಳಗವನ್ನು ಫೈನಲ್ ಮಾಡಲಿದೆ. ನಂತರ  ಮುಂದಿನ ತಿಂಗಳು ಮೋಷನ್ ಪೋಸ್ಟರ್ ಬಿಡುಗಡೆ  ಮಾಡಿ ಚಿತ್ರದ ಮುಹೂರ್ತ ಮುಗಿಸಿ ಶೂಟಿಂಗ್ ಅಖಾಡಕ್ಕೆ ಇಳಿಯುವುದಾಗಿ  ನಿರ್ದೇಶಕ ಆರ್ ಜೈ  ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.

    ಇದನ್ನು ಓದಿ: ರಸ್ತೆಗೆ ಪುನೀತ್​ ಹೆಸರಿಡುವುದಕ್ಕೆ ಅಂಬರೀಷ್​ ಅಭಿಮಾನಿಗಳ ಮನಸ್ತಾಪ, ಅಸಲಿಗೆ ನಡೆದಿದ್ದೇನು?

    ರಕ್ತಸಿಕ್ತ ಕಥೆಯನ್ನಾಧರಿಸಿ ಬರುತ್ತಿದೆ ಸಿನಿಮಾ!

    ಭೂಗತ ಲೋಕದ ಕಥೆ(Underworld Story)ಯಲ್ಲಿ ಶಿವರಾಜ್​​ಕುಮಾರ್ ನಟಿಸುತ್ತಿರುವ ವಿಚಾರ ಕೇಳಿ ಅವರ ಲಕ್ಷಾಂತರ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ನಿಜವಾಗಿ ನಡೆದ ರಕ್ತಸಿಕ್ತ ಕಥೆಯನ್ನಾಧರಿಸಿ ಹೊಸ ಸಿನಿಮಾದ ಸ್ಟೋರಿ ಸಿದ್ಧಗೊಂಡಿದೆ ಎಂದು ತಿಳಿದುಬಂದಿದೆ.ಇನ್ನು ಟಗರು ಶಿವನ ಬತ್ತಳಿಕೆಯಲ್ಲಿ ಸಾಲು ಸಾಲು  ಸಿನಿಮಾಗಳಿದ್ರೂ ಕಥೆ ಮೆಚ್ಚಿ  ಹೊಸ ಚಿತ್ರಕ್ಕೆ ಶಿವರಾಜ್  ಕುಮಾರ್ ಈ ಚಿತ್ರಕ್ಕೆ ಗ್ರೀನ್ ಸಿಗ್ನಲ್‌  ಕೊಟ್ಟಿದ್ದಾರೆ..ಸದ್ಯ ಶಿವಣ್ಣ ವೇದ ಚಿತ್ರದಲ್ಲಿ ಬ್ಯುಸಿಯಾಗಿದ್ದು ಇಂದಿನಿಂದ ಮೈಸೂರಿನಲ್ಲಿ ವೇದ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.

    ಇದನ್ನು ಓದಿ: ಒಂದೇ ಸಿನಿಮಾದಲ್ಲಿ ಅಣ್ಣಾವ್ರ ಮೂರು ಮುತ್ತುಗಳು: ಅಮ್ಮನ ಆಸೆ ನೆರವೇರಿತು, ಆದ್ರೆ ಅಪ್ಪುನೇ ಜೊತೆ ಇಲ್ಲ!

    ವೇದ ಚಿತ್ರ ಶಿವಣ್ಣ ನಿರ್ಮಾಣದ ಮೊದಲ ಚಿತ್ರವಾಗಿದೆ.  ತಮ್ಮನ ಅಗಲಿಕೆ ನೋವಿಂದ ಹೊರ ಬಂದಿರುವ ಶಿವಣ್ಣ ಮತ್ತೆ ಹಿಂದಿನ ಲಯಕ್ಕೆ ಬಂದಿದ್ದು ಬ್ಯಾಕ್ ಟು ಬ್ಯಾಕ್ ಚಿತ್ರಗಳಿಗೆ ಕಮಿಟ್ ಆಗುಮವ ಮೂಲಕ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

    (ವರದಿ - ಸತೀಶ್​)
    Published by:Vasudeva M
    First published: