• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Satish Ninasam: ಮೊದಲ ಬಾರಿಗೆ ಮಗಳ ಫೋಟೋ ಹಂಚಿಕೊಂಡ ನಟ ಸತೀಶ್.. ತುಂಬಾ ಮುದ್ದಾಗಿದ್ದಾಳೆ ಮನಸ್ವಿತಾ!

Satish Ninasam: ಮೊದಲ ಬಾರಿಗೆ ಮಗಳ ಫೋಟೋ ಹಂಚಿಕೊಂಡ ನಟ ಸತೀಶ್.. ತುಂಬಾ ಮುದ್ದಾಗಿದ್ದಾಳೆ ಮನಸ್ವಿತಾ!

ಮನಸ್ವಿತಾ, ಸತೀಶ್​ ನೀನಾಸಂ

ಮನಸ್ವಿತಾ, ಸತೀಶ್​ ನೀನಾಸಂ

ಸತೀಶ್​ ನೀನಾಸಂ ಅವರು ಸುಪ್ರಿತಾ ಅವರನ್ನು ಮದುವೆಯಾಗಿದ್ದಾರೆ. ಈ ದಂಪತಿಗೆ ಮನಸ್ವಿತಾ(Manasvitha) ಎಂಬ ಮುದ್ದಾದ ಹೆಣ್ಣು ಮಗಳಿದ್ದಾಳೆ. ಬಹುಶಃ ಈ ವಿಚಾರ ಯಾರಿಗೂ ತಿಳಿದಿಲ್ಲ. ಇದೇ ಮೊದಲ ಬಾರಿಗೆ ಸತೀಶ್​ ನೀನಾಸಂ ತಮ್ಮ ಮಗಳ ಫೋಟೋ(Daughter Photo)ವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮುಂದೆ ಓದಿ ...
  • Share this:

ಸತೀಶ್​ ನೀನಾಸಂ(Satish Ninasam).. ಈ ಹೆಸರು ಕೇಳಿದರೆ ನಮಗೆ ತಿಳಿಯದ ಹಾಗೇ ನಮ್ಮ ಮುಖದಲ್ಲಿ ನಗು(Smile) ಬಂದಿರುತ್ತೆ. ಹೌದು, ಸತೀಶ್​ ನೀನಾಸಂ ಅಭಿನಯ ಚತುರ.. ತಮ್ಮ ನಟನೆಯಿಂದಲೇ ಎಲ್ಲರನ್ನೂ ನಗಿಸುವ ಕಲೆಗಾರ.. ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡು ಬಂದ ಸತೀಶ್​, ಇಂದು ಸ್ಯಾಂಡಲ್​ವುಡ್​(Sandalwood)ನ ಟಾಪ್​ ಹೀರೋಗಳ ಪಟ್ಟಿಯಲ್ಲಿದ್ದಾರೆ. ನಟ ಸತೀಶ್ ನೀನಾಸಂ ಅವರು ಸಾಮಾನ್ಯವಾಗಿ ಖಾಸಗಿ ವಿಚಾರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದು ತೀರಾ ಕಮ್ಮಿ. ಕುಟುಂಬದ ಖಾಸಗಿತನಕ್ಕೆ ನೀಡಬೇಕಾದ ಗೌರವವನ್ನು ಅವರು ಮೊದಲಿನಿಂದಲೂ ಪಾಲಿಸಿಕೊಂಡು ಬಂದಿದ್ದಾರೆ. ಅವರ ಖಾಸಗಿ ವಿಚಾರಗಳು ಇಂದಿಗೂ ಯಾರಿಗೂ ಗೊತ್ತಿಲ್ಲ. ಕೆಲಸದ ಮೂಲಕವಷ್ಟೇ ಸತೀಶ್​ ನಿನಾಸಂ ಎಲ್ಲರಿಗೂ ಪರಿಚಯ. ಅವರಿಗೆ ಮದುವೆ(Marriage) ಆಗಿರುವ ವಿಚಾರವೆ ಹಲವರಿಗೆ ತಿಳಿದಿಲ್ಲ. ಹೌದು, ಸತೀಶ್​ ನೀನಾಸಂ ಅವರು ಸುಪ್ರಿತಾ ಅವರನ್ನು ಮದುವೆಯಾಗಿದ್ದಾರೆ. ಈ ದಂಪತಿಗೆ ಮನಸ್ವಿತಾ(Manasvitha) ಎಂಬ ಮುದ್ದಾದ ಹೆಣ್ಣು ಮಗಳಿದ್ದಾಳೆ. ಬಹುಶಃ ಈ ವಿಚಾರ ಯಾರಿಗೂ ತಿಳಿದಿಲ್ಲ. ಇದೇ ಮೊದಲ ಬಾರಿಗೆ ಸತೀಶ್​ ನೀನಾಸಂ ತಮ್ಮ ಮಗಳ ಫೋಟೋ(Daughter Photo)ವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮನಸ್ವಿತಾಳಿಗೆ ಈಗ ಆರು ವರ್ಷ. ಈಗ ಅವರು ಹಂಚಿಕೊಂಡಿರುವುದು ಮಗಳಿಗೆ 1 ವರ್ಷವಿದ್ದಾಗ ತೆಗೆದಂತಹ ಫೋಟೋವನ್ನು ಸತೀಶ್​ ಶೇರ್​ ಮಾಡಿದ್ದಾರೆ. 


ಸಂಕ್ರಾಂತಿ ಹಬ್ಬದ ಶುಭ ಕೋರಿದ ಮನಸ್ವಿತಾ!


ಹೌದು, ಇದೇ ಮೊದಲ ಬಾರಿಗೆ ಮಗಳ ಫೋಟೋ ಹಂಚಿಕೊಂಡಿರುವ ಸತೀಶ್​ ನೀನಾಸಂ, 'ನಿಮಗೆಲ್ಲ ಸಂಕ್ರಾಂತಿ ಶುಭಾಶಯ ಕೋರುತ್ತಿದ್ದಾಳೆ ನನ್ನ ಮಗಳು 'ಮನಸ್ವಿತಾ.. ಇದು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿರುವ ಅವಳ ಮೊದಲ ಚಿತ್ರ. ಅವಳ ಪ್ರೈವೆಸಿಯ ಕಾರಣದಿಂದ ಇದುವರೆಗೂ ನಮ್ಮ ಕುಟುಂಬ, ಯಾವ ಚಿತ್ರಗಳನ್ನು ಹಂಚಿಕೊಂಡಿಲ್ಲ. ಅಭಿಮಾನಿಗಳು ಮತ್ತು ಸ್ನೇಹಿತರು ನನ್ನ ಮಗಳ ಚಿತ್ರ ಹಂಚಿಕೊಳ್ಳುವಂತೆ ಕೇಳಿಕೊಂಡ ಕಾರಣ ಈ ಚಿತ್ರ ಹಾಕುತ್ತಿರುವೆ. ನಮ್ಮ ಕುಟುಂಬದ ಮೇಲೆ ನಿಮ್ಮ ಪ್ರೀತಿ ಹಾರೈಕೆ ಎಂದಿನಂತೆ ಸದಾ ಇರಲಿ. (ಇದು ಅವಳ ಮೊದಲ ವರ್ಷ ತೆಗೆದ ಚಿತ್ರ, ಈಗ ಅವಳು 5 ತುಂಬಿ 6ರ ಹೆಜ್ಜೆ ಇಡುತ್ತಿದ್ದಾಳೆ) ಧನ್ಯವಾದಗಳೊಂದಿಗೆ ಸುಪ್ರೀತಾ, ಮನಸ್ವಿತ, ಸತೀಶ್' ಎಂದು ಅವರು ಬರೆದುಕೊಂಡಿದ್ದಾರೆ.


ಇದನ್ನು ಓದಿ: ಮಗುವಿನ ಹೃದಯ ಶಸ್ತ್ರಚಿಕಿತ್ಸೆಗೆ ನೆರವಾದ ಮಹೇಶ್ ಬಾಬು... ನೀವು ನಿಜವಾಗಲೂ ಹೀರೋ ಸರ್​..!


ಮೊದಲ ಬಾರಿಗೆ ಫೋಟೋ ಕಂಡು ಅಭಿಮಾನಿಗಳು ಖುಷ್​!


ಅದೆಷ್ಟೊ ಮಂದಿಗೆ ನಟ ಸತೀಶ್​ ಮದುವೆಯಾಗಿದ್ದಾರೆ ಎಂಬ ವಿಚಾರವೇ ಗೊತ್ತಿರಲಿಲ್ಲ. ಇದೀಗ  ಮೊದಲ ಬಾರಿಗೆ ಸತೀಶ್ ಅವರ ಮುದ್ದಿನ ಮಗಳ ಮುದ್ದಾದ ಫೋಟೋ ನೋಡಿ ಖುಷಿಯಾಗಿರುವ ಅವರ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಪುಟಾಣಿ ಮನಸ್ವಿತಾಗೆ ಶುಭವಾಗಲಿ ಎಂದು ಹಾರೈಸುತ್ತಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳನ್ನು ಶೇರ್​ ಮಾಡುತ್ತಿದ್ದಾರೆ. ‘ಮನಸ್ವಿತ ನೋಡುವುದಕ್ಕೆ ತುಂಬಾ ಮುದ್ದಾಗಿದೆ. ದಯವಿಟ್ಟು ಮೊದಲು ದೃಷ್ಠಿ ತೆಗೆಸಿ ಸಾರ್​​..’ ಎಂದು ಅಭಿಮಾನಿಯೊಬ್ಬ ಕಮೆಂಟ್ ಮಾಡಿದ್ದಾರೆ.


ಇದನ್ನು ಓದಿ: Yogaraj Bhat-Ganesh ಕಾಂಬಿನೇಶನ್ ಮೊದಲ ಸಿನಿಮಾ 'ಚುಮ್ಮ'? ದೊಡ್ಡದೊಂದು ರಹಸ್ಯ ಬಯಲು ಮಾಡಿದ ಚಿತ್ರತಂಡ!


ಸತೀಶ್​ ಕೈಯಲ್ಲಿವೆ ಸಾಲು ಸಾಲು ಸಿನಿಮಾಗಳು!


ಸ್ಯಾಂಡಲ್‌ವುಡ್‌ನ ಬ್ಯುಸಿ ನಟರಲ್ಲಿ ಸತೀಶ್ ಕೂಡ ಒಬ್ಬರು. ಅವರು ನಟಿಸಿರುವ 'ಪೆಟ್ರೋಮ್ಯಾಕ್ಸ್', 'ಗೋದ್ರಾ', 'ದಸರಾ' ಹಾಗೂ ತಮಿಳಿನ 'ಪಗೈವನುಕು ಅರುಳ್ವೈ' ಸಿನಿಮಾಗಳು ಶೂಟಿಂಗ್ ಮುಗಿಸಿ, ತೆರೆಗೆ ಸಿದ್ಧವಾಗಿವೆ. ರಚಿತಾ ರಾಮ್‌ ಜೊತೆಗಿನ 'ಮ್ಯಾಟ್ನೀ' ಸೇರಿದಂತೆ ಒಂದಷ್ಟು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ.

First published: