ಸತೀಶ್ ನೀನಾಸಂ(Satish Ninasam).. ಈ ಹೆಸರು ಕೇಳಿದರೆ ನಮಗೆ ತಿಳಿಯದ ಹಾಗೇ ನಮ್ಮ ಮುಖದಲ್ಲಿ ನಗು(Smile) ಬಂದಿರುತ್ತೆ. ಹೌದು, ಸತೀಶ್ ನೀನಾಸಂ ಅಭಿನಯ ಚತುರ.. ತಮ್ಮ ನಟನೆಯಿಂದಲೇ ಎಲ್ಲರನ್ನೂ ನಗಿಸುವ ಕಲೆಗಾರ.. ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡು ಬಂದ ಸತೀಶ್, ಇಂದು ಸ್ಯಾಂಡಲ್ವುಡ್(Sandalwood)ನ ಟಾಪ್ ಹೀರೋಗಳ ಪಟ್ಟಿಯಲ್ಲಿದ್ದಾರೆ. ತಮ್ಮ ನಟನೆಯ ಮೂಲಕವೇ ಕನ್ನಡಿಗರು ಮನಸ್ಸನ್ನು ಗೆದಿದ್ದಾರೆ. ಸಾಲು ಸಾಲು ಸಿನಿಮಾಗಳು ಸತೀಶ್ ನೀನಾಸಂ ಅವರ ಕೈಯಲ್ಲಿವೆ. 'ಪೆಟ್ರೋಮ್ಯಾಕ್ಸ್', 'ಗೋದ್ರಾ', 'ದಸರಾ' ಹಾಗೂ ತಮಿಳಿನ 'ಪಗೈವನುಕು ಅರುಳ್ವೈ' ಸಿನಿಮಾಗಳು ಶೂಟಿಂಗ್ ಮುಗಿಸಿ, ತೆರೆಗೆ ಸಿದ್ಧವಾಗಿವೆ. ಇನ್ನೂ 'ಅಯೋಗ್ಯ' ಯಶಸ್ಸಿನ ಬಳಿಕ ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ. ಈ ಚಿತ್ರಕ್ಕೆ 'ಮ್ಯಾಟ್ನಿ’(Matinee) ಎಂದು ಹೆಸರಡಿಲಾಗಿದೆ. ಅಯೋಗ್ಯ ಸಿನಿಮಾದಲ್ಲಿ ಈ ಜೋಡಿ ಸಖತ್ ಕಮಾಲ್ ಮಾಡಿತ್ತು. ಇದೀಗ ಇದೇ ಜೋಡಿ ಜೊತೆ ‘ಮ್ಯಾಟ್ನಿ' ಸೆಟ್ಟೇರಿದ್ದು ಮೂರು ಹಂತದ ಶೂಟಿಂಗ್(Shooting) ಮುಗಿದಿದೆ. ನಾಲ್ಕನೇ ಹಂತದ ಶೂಟಿಂಗ್ ಶುರುವಾಗಿದೆ. ಇದೆಲ್ಲದರ ನಡುವೆ ಸತೀಶ್ ನಿನ್ನೆ ಫೋಟೋ(Photo) ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಜೊತೆಗೆ ಎರಡು ಲೈನ್ ಪಂಚಿಂಗ್ ಪ್ರಾಸ ಪದದ ಡೈಲಾಗ್ ಬರೆದುಕೊಂಡಿದ್ದು. ಆ ವಿಚಾರ ಇದೀಗ ಸಖತ್ ವೈರಲ್ ಆಗುತ್ತಿದೆ.
ರಚ್ಚು ಜೊತೆಗೆ ಇದ್ರೆ ಕಳೆ ಬತ್ತದೆ ಎಂದ ಸತೀಶ್ ನೀನಾಸಂ!
'ಮ್ಯಾಟ್ನಿ' ಸಿನಿಮಾದ ನಾಲ್ಕನೇ ಶೂಟಿಂಗ್ ಆರಂಭ ಆಗಿದೆ. ಬೆಂಗಳೂರಿನ ಹೊರವಲಯದಲ್ಲಿರುವ ಉಪ್ಪಿ ರೆಸಾರ್ಟ್‌ನಲ್ಲಿ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಅವರ ರೊಮ್ಯಾಂಟಿಗ್ ಲವ್ ದೃಶ್ಯಗಳ ಶೂಟಿಂಗ್ ನಡೆಯುತ್ತಿದೆ. ಇದೆಲ್ಲದರ ನಡುವೆ ಸತೀಶ್ ನೀನಾಸಂ ರಚಿತಾರಾಮ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ‘ಆಕಾಶದಲ್ಲಿ ಮೋಡ ಇದ್ರೆ ಮಳೆ ಬತ್ತದೆ. ಚಿತ್ರಮಂದಿರದಲ್ಲಿ ಜನ ಇದ್ರೆ ಹಣ ಬತ್ತದೆ. ಮ್ಯಾಟ್ನಿ ಸಿನಿಮಾದಲ್ಲಿ ನಾವಿಬ್ರು ಇದ್ರೆ ಒಂದ್ ಕಳೆ ಬತ್ತದೆ’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಇದನ್ನು ಓದಿ: ಮೊದಲ ಬಾರಿಗೆ ಮಗಳ ಫೋಟೋ ಹಂಚಿಕೊಂಡ ನಟ ಸತೀಶ್.. ತುಂಬಾ ಮುದ್ದಾಗಿದ್ದಾಳೆ ಮನಸ್ವಿತಾ!
ಮತ್ತೆ ಮೋಡಿ ಮಾಡುತ್ತಾ ‘ಅಯೋಗ್ಯ ’ ಜೋಡಿ?
'ಮ್ಯಾಟ್ನಿ' ಸಿನಿಮಾ ಒಂದು ರೊಮ್ಯಾಂಟಿಕ್ ಕಮ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಮನೋಹರ್ ಕಂಪಲ್ಲಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಯೋಗ್ಯ ಬಳಿಕ ಅದೇ ಯಶಸ್ಸನ್ನು ರಚಿತಾ ರಾಮ್ ಹಾಗೂ ಸತೀಶ್ ನೀನಾಸಂ ಮುಂದುವರೆಸುವ ಪ್ರಯತ್ನದಲ್ಲಿದ್ದಾರೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಪೋಸ್ಟರ್ ನೋಡಿ ಇಬ್ಬರ ಅಭಿಮಾನಿಗಳೂ ಥ್ರಿಲ್ ಆಗಿದ್ದರು. ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡುತ್ತಿದ್ದು, ಕ್ರಾಂತಿ ವರ್ಲಾ ಛಾಯಾಗ್ರಹಣವಿದೆ.
ಮೊನ್ನೆ ಮಗಳ ಫೋಟೋ ಶೇರ್ ಮಾಡಿದ್ದ ಸತೀಶ್!
ಇದೇ ಮೊದಲ ಬಾರಿಗೆ ಮಗಳ ಫೋಟೋ ಹಂಚಿಕೊಂಡಿರುವ ಸತೀಶ್ ನೀನಾಸಂ, 'ನಿಮಗೆಲ್ಲ ಸಂಕ್ರಾಂತಿ ಶುಭಾಶಯ ಕೋರುತ್ತಿದ್ದಾಳೆ ನನ್ನ ಮಗಳು 'ಮನಸ್ವಿತಾ.. ಇದು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿರುವ ಅವಳ ಮೊದಲ ಚಿತ್ರ. ಅವಳ ಪ್ರೈವೆಸಿಯ ಕಾರಣದಿಂದ ಇದುವರೆಗೂ ನಮ್ಮ ಕುಟುಂಬ, ಯಾವ ಚಿತ್ರಗಳನ್ನು ಹಂಚಿಕೊಂಡಿಲ್ಲ. ಅಭಿಮಾನಿಗಳು ಮತ್ತು ಸ್ನೇಹಿತರು ನನ್ನ ಮಗಳ ಚಿತ್ರ ಹಂಚಿಕೊಳ್ಳುವಂತೆ ಕೇಳಿಕೊಂಡ ಕಾರಣ ಈ ಚಿತ್ರ ಹಾಕುತ್ತಿರುವೆ. ನಮ್ಮ ಕುಟುಂಬದ ಮೇಲೆ ನಿಮ್ಮ ಪ್ರೀತಿ ಹಾರೈಕೆ ಎಂದಿನಂತೆ ಸದಾ ಇರಲಿ. (ಇದು ಅವಳ ಮೊದಲ ವರ್ಷ ತೆಗೆದ ಚಿತ್ರ, ಈಗ ಅವಳು 5 ತುಂಬಿ 6ರ ಹೆಜ್ಜೆ ಇಡುತ್ತಿದ್ದಾಳೆ) ಧನ್ಯವಾದಗಳೊಂದಿಗೆ ಸುಪ್ರೀತಾ, ಮನಸ್ವಿತ, ಸತೀಶ್' ಎಂದು ಅವರು ಬರೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ