ಸ್ಯಾಂಡಲ್​ವುಡ್​ನಿಂದ ಕೋಸ್ಟಲ್​ವುಡ್​ಗೆ; ತುಳು ಚಿತ್ರರಂಗಕ್ಕೆ ಹೊಸ ಖಳನಾಯಕನ ಎಂಟ್ರಿ

ಇದೇ ಮೊದಲ ಬಾರಿಗೆ ವಿಲನ್ ಆಗಿ ಕೋಸ್ಟಲ್‌ವುಡ್ ಪ್ರವೇಶಿಸಿರುವ ರೋಶನ್, ಕನ್ನಡದ ಅನುಯ ಪ್ರಭಾಕರ್​ ನಟನೆಯ ‘ಅನುಕ್ತ’ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರೋಶನ್ ಸದ್ಯ ತುಳು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

Rajesh Duggumane | news18
Updated:August 7, 2019, 12:43 PM IST
ಸ್ಯಾಂಡಲ್​ವುಡ್​ನಿಂದ ಕೋಸ್ಟಲ್​ವುಡ್​ಗೆ; ತುಳು ಚಿತ್ರರಂಗಕ್ಕೆ ಹೊಸ ಖಳನಾಯಕನ ಎಂಟ್ರಿ
ರೋಷನ್​ ಶೆಟ್ಟಿ
  • News18
  • Last Updated: August 7, 2019, 12:43 PM IST
  • Share this:
ಸ್ಯಾಂಡಲ್​ವುಡ್​ನ ವ್ಯಾಪ್ತಿ ಹೆಚ್ಚುತ್ತ ಬಂದಂತೆ ಅತ್ತ ಕೋಸ್ಟಲ್​ವುಡ್​ಕೂಡ ಬೆಳವಣಿಗೆ ಕಾಣುತ್ತಿದೆ. ಇತ್ತೀಚಿಗೆ ಹಲವು ತುಳು ಸಿನಿಮಾಗಳು ಹೊರದೇಶಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡ ಉದಾಹರಣೆಗಳಿವೆ. ಸ್ಯಾಂಡಲ್​ವುಡ್​ನಲ್ಲಿ ನಟಿಸಿ ನಂತರ ತುಳು ಚಿತ್ರರಂಗದಲ್ಲೂ ಬಣ್ಣ ಹಚ್ಚಿದವರು ಸಾಕಷ್ಟಿದ್ದಾರೆ. ಇತ್ತೀಚೆಗೆ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಕೂಡಾ ತುಳು ಹಾಡಿಗೆ ಧ್ವನಿ ನೀಡಿದ್ದರು. ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ ಕಲಾವಿದ ರೋಶನ್​ ಶೆಟ್ಟಿ ಕೂಡ ಈಗ ತುಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಎತ್ತರ ಕಾಯ, ಉತ್ತಮ ಮೈಕಟ್ಟು, ಹೊಸ ಖದರ್ ಹಾಗೂ ರಗಡ್ ಲುಕ್‌ನೊಂದಿಗೆ ಖಡಕ್ ವಿಲನ್ ಆಗಿ ಕೋಸ್ಟಲ್ ವುಡ್‌ನ ಅಂಗಳಕ್ಕೆ ರೋಶನ್ ಶೆಟ್ಟಿ ಕಾಲಿಟ್ಟಿದ್ದಾರೆ. ಈಗಾಗಲೇ ಟೀಸರ್‌ ಹಾಗೂ ಹಾಡುಗಳಿಂದ ಕರಾವಳಿಯಲ್ಲಿ ಸದ್ದು ಮಾಡುತ್ತಿರುವ ‘ಗಿರಿಗಿಟ್​​’ ಸಿನಿಮಾದ ಖಳನಾಯಕನಾಗಿ ವಿಭಿನ್ನ ಅವತಾರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರಂತೆ.

ಇದೇ ಮೊದಲ ಬಾರಿಗೆ ವಿಲನ್ ಆಗಿ ಕೋಸ್ಟಲ್‌ವುಡ್ ಪ್ರವೇಶಿಸಿರುವ ರೋಶನ್, ಕನ್ನಡದ ಅನುಯ ಪ್ರಭಾಕರ್​ ನಟನೆಯ ‘ಅನುಕ್ತ’ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಹರೈನ್‌ನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ರೋಶನ್ ಸದ್ಯ ತುಳು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಈ ತಿಂಗಳಾಂತ್ಯಕ್ಕೆ ‘ಗಿರಿಗಿಟ್’ ಸಿನಿಮಾ ತೆರೆಗೆ ಬರಲಿದೆ. ಸ್ಯಾಂಡಲ್​ವುಡ್​ನಲ್ಲಿ ಖಡಕ್​ ವಿಲನ್​ಗಳ ಕೊರತೆ ಇದೆ ಎನ್ನುವ ಮಾತು ಆಗಾಗ ಕೇಳಿ ಬರುತ್ತಿರುತ್ತದೆ. ಹಾಗಾಗಿ ಈ ಚಿತ್ರದಲ್ಲಿ ರೋಶನ್​ ಖಳನಾಯಕನಾಗಿ ಮಿಂಚಿದರೆ ಅವರಿಗೆ ಸ್ಯಾಂಡಲ್​ವುಡ್​ನಲ್ಲೂ ವಿಲನ್​ ಪಾತ್ರ ನಿರ್ವಹಿಸಲು ಅವಕಾಶ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

First published:August 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading