• Home
  • »
  • News
  • »
  • entertainment
  • »
  • Yash: ಗನ್​ ಹಿಡಿದು ಫೀಲ್ಡ್​ಗೆ ಇಳಿದ ಯಶ್​, KGF 3 ಕುರಿತು ಸುಳಿವು ನೀಡಿದ ರಾಕಿಭಾಯ್ ಟ್ವೀಟ್

Yash: ಗನ್​ ಹಿಡಿದು ಫೀಲ್ಡ್​ಗೆ ಇಳಿದ ಯಶ್​, KGF 3 ಕುರಿತು ಸುಳಿವು ನೀಡಿದ ರಾಕಿಭಾಯ್ ಟ್ವೀಟ್

ಯಶ್​

ಯಶ್​

Yash: ಯಶ್​ ಮಾತ್ರ ಬಿಂದಾಸ್​ ಆಗಿ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಅಲ್ಲದೇ ಯಶ್​ ಮತ್ತು ರಾಧಿಕಾ ಇಬ್ಬರೂ ಸೈಮಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಇದೀಗ ಅವರು ಗನ್​ ಹಿಡಿದು ಶೂಟ್​​ ಮಾಡುತ್ತಿದ್ದು, ಅವರ ಟ್ವೀಟ್​ ಒಂದು ಇದೀಗ ಸಖತ್ ವೈರಲ್ ಆಗಿದೆ.

  • Share this:

ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಕೆಜಿಎಫ್ (KGF) ನಂತರ ಯಾವ ಸಿನಿಮಾ ಮಾಡ್ತಾರೆ ಎಂಬುದು ಎಲ್ಲರಿಗೂ ಕುತೂಹಲ ಮೂಡಿಸಿದೆ. ಸದ್ಯಕ್ಕೆ ಅವರ ಯಾವುದೇ ಚಿತ್ರದ ಅನೌನ್ಸ್​ ಆಗಿಲ್ಲ. ಅಭಿಮಾನಿಗಳಂತೂ (Fans) ಯಾವಾಗ ರಾಕಿಭಾಯ್ (Rocky Bhai) ಹೊಸ ಸಿನಿಮಾದ ಬಗ್ಗೆ ಮಾಹಿತಿ ಸಿಗುತ್ತದೆ ಎಂದು ಕಾಯುತ್ತಿದ್ದಾರೆ.  ಇದರ ನಡುವೆ ಯಶ್​ ಮಾತ್ರ ಬಿಂದಾಸ್​ ಆಗಿ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಅಲ್ಲದೇ ಯಶ್​ ಮತ್ತು ರಾಧಿಕಾ ಇಬ್ಬರೂ ಸೈಮಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಇದೀಗ ಅವರು ಗನ್​ ಹಿಡಿದು ಶೂಟ್​​ ಮಾಡುತ್ತಿದ್ದು, ಅವರ ಟ್ವೀಟ್​ ಒಂದು ಇದೀಗ ಸಖತ್ ವೈರಲ್ ಆಗಿದೆ.


ಗನ್​ ಹಿಡಿದು ಫೀಲ್ಡ್​ಗೆ ಇಳಿದ ಯಶ್:


ರಾಕಿಂಗ್​ ಸ್ಟಾರ್​ ಯಶ್​ ಸದ್ಯ ಕುಟುಂಬದ ಜೊತೆ ಭರ್ಜರಿ ಟ್ರಿಪ್​ ಮಾಡುತ್ತಿದ್ದಾರೆ. ಅಲ್ಲದೇ ಯಶ್​ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಆ್ಯಕ್ಟೀವ್​ ಆಗಿದ್ದಾರೆ. ಮಕ್ಕಳ ಜೊತೆಗಿನ ವಿಡಿಯೋ, ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಅವರ ಮುಂದಿನ ಸಿನಿಮಾದ ಕುರಿತು ಮಾತ್ರ ಯಾವುದೇ ಮಾಹಿತಿಯನ್ನು ಬಿಟ್ಟುಕೊಡುತ್ತಿಲ್ಲ. ಆದರೆ ಇದೀಗ ಅವರು ಮತ್ತೊಮ್ಮೆ ಗನ್​ ಹಿಡಿದು ಫೀಲ್ಡ್​ಗೆ ಇಳಿದಿದ್ದಾರೆ. ಆದರೆ ಇದು ಸಿನಿಮಾದ ಶೂಟಿಂಗ್​ಗಾಗಿ ಅಲ್ಲ ಕೇವಲು ಅವರ ಮನೋರಂಜನೆಗಾಗಿ ಶೂಟಿಂಗ್​ ಗೇಮ್​ ಆಟವನ್ನು ಆಡಿದ್ದಾರೆ. ಇದರ ವಿಡಿಯೋ ತುಣುಕನ್ನು ಅವರು ತಮ್ಮ ಟ್ವಿಟರ್​ ನಲ್ಲಿ ಹಂಚಿಕೊಂಡಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಅಲ್ಲದೇ ಈ ಟ್ವೀಟ್​ನಲ್ಲಿ ಅವರು, ‘ಗುರಿಯನ್ನು ತಲುಪಲು ಯಾವಾಗಲೂ ಒಂದು ಮಾರ್ಗವಿದೆ, ಅದನ್ನು ಗುರುತಿಸುವುದೇ ಸವಾಲು!! ಧನ್ಯವಾದಗಳು ನನ್ನ ಜೆಜೆ ಪೆರ್ರಿ, ಎಂತಹ ಅದ್ಭುತ ದಿನ!! ಮುಂದಿನ ಬಾರಿ ಅದು ಕಲಾಶ್ನಿಕೋವ್ ಆಗಿರಬೇಕು‘ ಎಂದು ಬರೆದುಕೊಂಡಿದ್ದಾರೆ.ಆದರೆ ಇದೀಗ ಅವರ ಅಭಿಮಾನಿಗಳು ಯಶ್​ ಟ್ವೀಟ್​ ಇಟ್ಟುಕೊಂಡು KGF 3 ಬಗ್ಗೆ ಮಾತನಾಡುತ್ತಿದ್ದು, ಕಲಾಶ್ನಿಕೋವ್ ಎಂದು ಯಶ್​ ಬರೆದುಕೊಂಡಿರುವುದು ಇದಕ್ಕೆ ಕಾರಣವಾಗಿದೆ. ಏಕೆಂದರೆ ಕೆಜಿಎಫ್ 2 ಸಿನಿಮಾದಲ್ಲಿ ಕಲಾಶ್ನಿಕೋವ್ ಎಂಬ ಗನ್​ ಸಖತ್​ ಫೇಮಸ್​ ಆಗಿತ್ತು. ಇದರಿಂದಾಗಿ ಯಶ್​ ಮತ್ತೆ ಇದೇ ಗನ್​ ಹೆಸರನ್ನು ಬಳಸಿದ್ದು, ಅದರಲ್ಲಿಯೂ ಮುಂದಿನ ಬಾರಿ ಕಲಾಶ್ನಿಕೋವ್ ಬಳಸುತ್ತೇನೆ ಎಂಬಂತೆ ಹೇಳಿರುವುದರಿಂದ ಯಶ್​ ಮುಂದಿನ ಸಿನಿಮಾ ಪಕ್ಕ KGF 3 ಆಗಿರಲಿದೆ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ.


ಇದನ್ನೂ ಓದಿ: Yash: ಇನ್ನೂ ನಿಂತಿಲ್ಲ ರಾಕಿ ಭಾಯ್​ ಹವಾ, ಜಪಾನ್​ ನಲ್ಲೂ KGF 2 ಗುಣಗಾನ


ದಾಖಲೆ ಬರೆದ ರಾಕಿಂಗ್ ಸ್ಟಾರ್ 


ಕನ್ನಡ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದು ತೀರಾ ಕಡಿಮೆ. ಯಶ್​ ಅಭಿನಯದ ಕೆಜಿಎಫ್​ ಹಾಗೂ ಕೆಜಿಎಫ್​​ 2 ಚಿತ್ರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಟಾಪ್ 10 ಪಟ್ಟಿಯಲ್ಲಿ ಕನ್ನಡ ಚಿತ್ರರಂಗದಿಂದ ಸ್ಥಾನ ಪಡೆದ ಏಕೈಕ ನಟ ಎಂಬ ಹೆಗ್ಗಳಿಕೆ ರಾಕಿಂಗ್ ಸ್ಟಾರ್​ಗೆ ಸಿಕ್ಕಿದೆ.

Published by:shrikrishna bhat
First published: