ಕಾಲಿವುಡ್‌ನ ನಾಯಕ ನಟ ಕಾರ್ತಿ ಅಭಿನಯದ (Pan India Japan Movie Teaser) ಒಂದು ಸಿನಿಮಾ ಬರ್ತಿದೆ. ಈ ಚಿತ್ರಕ್ಕೆ ಜಪಾನ್ ಅನ್ನುವ ವಿಶೇಷ ಹೆಸರು ಇಡಲಾಗಿದೆ. ಈ ಬಗ್ಗೆ ಕಾಲಿವುಡ್‌ನಲ್ಲಿ ಸದ್ದು ಇದ್ದೇ ಇದೆ. ಪ್ಯಾನ್ ಇಂಡಿಯಾ ಸಿನಿಮಾ ಅಲ್ವೆ ? ಅದಕ್ಕೆ ಈಗ ಈ ಸಿನಿಮಾ (Rishab Shetty Latest News) ಟೀಸರ್ ಎಲ್ಲೆಡೆ ಎಲ್ಲ ಭಾಷೆಯಲ್ಲೂ ಸದ್ದು ಮಾಡಿದೆ. ವಿಶೇಷವೆಂದ್ರೆ ಇಂಡಿಯಾದ ಈ ಜಪಾನ್ ವ್ಯಕ್ತಿಯನ್ನ ನಟ-ನಿರ್ದೇಶಕ ರಿಷಬ್ ಶೆಟ್ಟಿ ಪರಿಚಯಿಸಿದ್ದಾರೆ. ಚಿತ್ರದ ಫಸ್ಟ್ ಇಂಟ್ರೋ (Pan India Japan Movie) ಟೀಸರ್ ಅನ್ನ ಸೋಷಿಯಲ್ ಮೀಡಿಯಾದಲ್ಲಿ (Rishab Shetty Latest Updates) ರಿಲೀಸ್ ಮಾಡಿದ್ದಾರೆ. ಈ ಮೂಲಕ ಗೆಳೆಯನಿಗೆ ವಿಶ್ ಕೂಡ ಮಾಡಿದ್ದಾರೆ.
ಜಪಾನ್ ಸಿನಿಮಾದಲ್ಲಿ ಒಂದು ಡೈಲಾಗ್ ಇದೆ. ಈ ಡೈಲಾಗ್ ಸೂಪರ್ ಆಗಿದೆ. ಯಾರೋ ನೀನು ಅಂತ ವಿಲನ್, ನಟ ಕಾರ್ತಿಕೆಗೆ ಕೇಳ್ತಾನೆ. ಆಗ ನನ್ನ ಹೆಸರು ಜಪಾನ್. ಮೇಡ್ ಇನ್ ಇಂಡಿಯಾ ಅಂತಲೇ ಹೇಳ್ತಾನೆ.
ಪ್ಯಾನ್ ಇಂಡಿಯಾ ಜಪಾನ್ ಟೀಸರ್‌ನಲ್ಲಿ ಏನಿದೆ ?
ಟೀಸರ್ ಕೊನೆಯಲ್ಲಿ ಬರುವ ಈ ಡೈಲಾಗ್ ಇಡೀ ಸಿನಿಮಾದ ಒಟ್ಟು ತಿರುಳನ್ನ ಬಿಟ್ಟುಕೊಡುವ ರೀತಿಯಲ್ಲಿಯೆ ಇದೆ. ಇದೇ ಟೀಸರ್‌ನಲ್ಲಿ ಇರೋ ಇನ್ನೂ ಒಂದಷ್ಟು ಡೈಲಾಗ್ ತುಂಬಾ ಇಂಟ್ರಸ್ಟಿಂಗ್ ಆಗಿಯೇ ಇವೆ.
ಸಿನಿಮಾದ ನಾಯಕ ಜಪಾನ್ ಹೇಗೆ ಅನ್ನೋದನ್ನೇ ಈ ಡೈಲಾಗ್‌ಗಳು ಇಲ್ಲಿ ಹೇಳುತ್ತವೆ. ಒಂದು ಡೈಲಾಗ್ ಅಲ್ಲಿ ಜಪಾನ್ ಒಬ್ಬ ಜೋಕರ್ ಅನ್ನೋ ಮಾತು ಬರುತ್ತದೆ.
ಜಪಾನ್ ಸಿನಿಮಾದಲ್ಲಿ ಕಾರ್ತಿ ಜೋಕರಾ ?
ಇನ್ನೂ ಒಂದು ಡೈಲಾಗ್ ಅಲ್ಲಿ ಜಪಾನ್ ಒಬ್ಬ ವಿಲನ್, ನಿಧಾನಕ್ಕೆ ಕೊಂದು ಬಿಡ್ತಾನೆ ಅನ್ನುವ ವಿಷಯವೂ ಬರುತ್ತದೆ. ಅಸಲಿಗೆ ಜಪಾನ್ ಹೇಗೆ ಅನ್ನೋದು ತಿಳಿಯೋದಿಲ್ಲ.
ಜಪಾನ್ ಟೀಸರ್ ನೋಡಿ ರಿಷಬ್ ಶೆಟ್ಟಿ ಹೇಳಿದ್ದೇನು?
ನೋಡೋಕೆ ಜಪಾನ್ ಇಲ್ಲಿ ಜೋಕರ್ ರೀತಿ ಕಂಡ್ರೂ ಏನೋ ವಿಷಯ ಇದೆ ಅಂತಲೇ ನಾವು ಗೆಸ್ ಮಾಡಬಹುದು. ಇಷ್ಟು ಸ್ಪೆಷಲ್ ಅನಿಸೋ ಜಪಾನ್ ಇಂಟ್ರೋ ಇರೋ ಕನ್ನಡ ಟೀಸರ್ ಅನ್ನ ರಿಷಬ್ ಶೆಟ್ಟಿ ಈಗ ರಿಲೀಸ್ ಮಾಡಿದ್ದಾರೆ. ಗೆಳೆಯನಿಗೆ ಮನದುಂಬಿ ಹೀಗೆ ಹರೆಸಿದ್ದಾರೆ.
ತಮಿಳು ನಟ ಕಾರ್ತಿಗೆ ವಿಶ್ ಮಾಡಿದ ರಿಷಬ್ ಶೆಟ್ರು
" ಜಪಾನ್" ಪ್ರೀತಿಯ ಸ್ನೇಹಿತ ಕಾರ್ತಿ 25 ನೇ ಚಿತ್ರದ ಟೀಸರ್. ಒಂದು ಅದ್ಭುತ ಜಗತ್ತಿನ ಸಣ್ಣ ತುಣುಕು. ಹುಟ್ಟು ಹಬ್ಬದ ಶುಭಾಶಯಗಳು ಕಾರ್ತಿ " ಅಂತಲೂ ರಿಷಬ್ ಶೆಟ್ಟಿ ಶುಭ ಹಾರೈಸಿದ್ದಾರೆ.
ಜಪಾನ್ ಕಾಲಿವುಡ್ ಕಾರ್ತಿ 25 ನೇ ಸಿನಿಮಾ
ಕಾರ್ತಿ ಚಿತ್ರ ಬದುಕಿನ ಈ 25 ನೇ ಚಿತ್ರದಲ್ಲಿ ಕಾರ್ತಿ ನಿಜಕ್ಕೂ ಸ್ಪೆಷಲ್ ರೋಲ್ ಮಾಡಿದ್ದಾರೆ. ಚಿತ್ರ-ವಿಚಿತ್ರ ಗೆಟಪ್ ಕೂಡ ಇದೆ. ಮ್ಯಾನರಿಸಂ ಕೂಡ ಸ್ಪೆಷಲ್ ಅನಿಸುತ್ತಿದೆ. ರಾಜುಮುರುಗನ್ ನಿರ್ದೇಶನದ ಈ ಚಿತ್ರದಲ್ಲಿ ಅನು ಎಮ್ಯಾನುಯೆಲ್ ಜೋಡಿ ಆಗಿದ್ದಾರೆ.
ತಮಿಳಿನ ಜಪಾನ್ ಚಿತ್ರದಲ್ಲಿ ಹಾಸ್ಯ ನಟ ಸುನಿಲ್
ಹಾಸ್ಯ ನಟ ಸುನಿಲ್ ಕೂಡ ಈ ಚಿತ್ರದಲ್ಲಿ ಡಿಫರಂಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ವಿಜಯ್ ಮಿಲ್ಟನ್ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: Rishab Shetty: ರಿಷಬ್ ದಂಪತಿಯ ಕೆರಾಡಿ ಸ್ಟುಡಿಯೋಸ್! ಶೆಟ್ಟರ ಹೊಸ ಹೆಜ್ಜೆ
ಸದ್ಯಕ್ಕೆ ಈ ಚಿತ್ರದ ಟೀಸರ್ ಬಹು ಭಾಷೆಯಲ್ಲಿ ರಿಲೀಸ್ ಆಗಿದೆ. ಅತಿ ಹೆಚ್ಚು ಗಮನ ಸೆಳೆಯೋ ಸಾಧ್ಯತೆನೂ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ