ಸ್ಯಾಂಡಲ್ವುಡ್ನ (Sandalwood) ಖ್ಯಾತ ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ (Rishab Shetty) ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಒಂದರ ಹಿಂದೆ ಒಂದರಂತೆ ತಮ್ಮ ಪ್ರಾಜೆಕ್ಟ್ಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಹೊಂಬಾಳೆ ಫಿಲ್ಮ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಂತಾರ (Kantara) ಚಿತ್ರದ ಶೂಟಿಂಗ್ ನಲ್ಲಿ ಬ್ಯೂಸಿ ಆಗಿರುವ ರಿಷಭ್, ಚಿತ್ರದ ಟೀಸರ್ ಅನ್ನೂ ಬಿಡುಗಡೆ ಮಾಡಿದರು. ಇದೀಗ ರಿಷಭ್ ಶೆಟ್ಟಿ ಬಹುನಿರೀಕ್ಷಿತ ಸಿನಿಮಾ ಸಂದೇಶ್ ನಾಗರಾಜ್ ಅವರ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ ಹರಿಕಥೆ ಅಲ್ಲ ಗಿರಿಕಥೆ (Harikathe Alla Girikathe) ಚಿತ್ರದ ಮೊದಲ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಕರಣ್ ಅನಂತ್ ಮತ್ತು ಅನಿರುದ್ಧ ಇಬ್ಬರು ನಿರ್ದೇಶನ ಮಾಡಿದ್ದಾರೆ. ವಿಭಿನ್ನ ಶೈಲಿಯಲ್ಲಿ ಮೂಡಿಬಂದಿರುವ ಚಿತ್ರದ ವಿಡಿಯೋ ಸಾಂಗ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಜೂ. ಮೊನಾಲಿಸಾ ವಿಡಿಯೋ ಸಾಂಗ್ ರಿಲೀಸ್:
ಇನ್ನು, ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ಮೊದಲ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಜೂ. ಮೊನಾಲಿಸಾ ಎಂಬ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಹಾಡಿನಲ್ಲಿ, ರಿಷಭ್ ಶೆಟ್ಟಿ ನಾಯಕಿಗಾಗಿ ವಿಭಿನ್ನವಾಗಿ ಪ್ರೀತಿಯ ನಿವೇದನೆ ಮಾಡಿಕೊಳ್ಳುವ ರೀತಿಯಲ್ಲಿ ಚಿತ್ರಿಸಲಾಗಿದೆ. ಇದೊಂದು ಪಕ್ಕಾ ಕಾಮಿಡಿ ಓರಿಎಂಟೆಡ್ ಸಿನಿಮಾವಾಗಿದ್ದು, ವಿಡಿಯೋ ಸಾಂಗ್ ಸಹ ಅದೇ ರೀತಿಯಲ್ಲಿ ಮಜವಾಗಿ ಮೂಡಿಬಂದಿದೆ.ಆನಂದ್ ಆಡಿಯೋ ಯೂಟ್ಯೂಟ್ ಚಾನಲ್ ನಲ್ಲಿ ಸಾಂಗ್ ರಿಲೀಸ್ ಆಗಿದೆ.
ಅಜನಿಶ್ ಲೋಕನಾಥ್ ಸಂಗೀತ ಸಂಯೋಜನೆ:
ಹರಿಕಥೆ ಅಲ್ಲ ಗಿರಿಕಥೆ ಚಿತ್ರಕ್ಕೆ ಅಜನಿಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಆದರೆ ಜೂ. ಮೊನಾಲಿಸಾ ಹಾಡಿಗೆ ವಾಸುಕಿ ಸಂಗೀತ ನೀಡಿದ್ದು, ಕಂಠದಾನವನ್ನೂ ಮಾಡಿದ್ದಾರೆ. ತ್ರಿಲೋಕ್ ತ್ರಿವಿಕ್ರಮ್ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಪ್ರತಿಯೊಂದು ಸಾಲುಗಳು ಸಖತ್ ಕ್ಯಾಚಿಯಾಗಿದ್ದು, ಸೂಪರ್ ಟೂನಿಂಗ್ ಸಹ ಕೇಳುಗರಿಗೆ ಮುದ ನೀಡುತ್ತದೆ.
ಇದನ್ನೂ ಓದಿ: Sanjjanaa Galrani: ಗುಡ್ನ್ಯೂಸ್, ಗಂಡು ಮಗುವಿಗೆ ಜನ್ಮ ನೀಡಿದ ಸಂಜನಾ ಗಲ್ರಾನಿ
ನಾಯಕಿಯಾಗಿ ತಪಸ್ವಿನಿ ಪೂಣಚ್ಚ:
ಸಿನಿಮಾದ ನಾಯಕಿಯಾಗಿ ಹೊಸ ಪ್ರತಿಭೆ ತಪಸ್ವಿನಿ ಪೂಣಚ್ಚ ಅವರನ್ನು ಆಯ್ಕೆ ಮಾಡಲಾಗಿದೆ. ತಪಸ್ವಿನಿ ಪೂಣಚ್ಚ ಈ ಸಿನಿಮಾದಲ್ಲಿ ರಿಷಭ್ ಶೆಟ್ಟಿ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಸಿನಿಮಾದಲ್ಲಿ ಮತ್ತೋರ್ವ ನಾಯಕಿಯೂ ಇದ್ದಾರೆ. ಅವರೇ ಲವ್ ಮಾಕ್ಟೇಲ್ ಸಿನಿಮಾದಲ್ಲಿ ಆದಿತಿ ಪಾತ್ರದಲ್ಲಿ ನಟಿಸಿರುವ ರಚನಾ ಇಂದರ್. ಒಟ್ಟಿನಲ್ಲಿ ರಿಷಭ್ ಈ ಚಿತ್ರದಲ್ಲಿ ಇಬ್ಬರು ನಾಯಕಿಯರೊಂದಿಗೆ ಕಾಣಿಸಿಕೊಳ್ಳಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
ಹರಿಕಥೆ ಅಲ್ಲ ಗಿರಿಕಥೆ ಪಾತ್ರವರ್ಗ:
ರಿಷಭ್ ಶೆಟ್ಟಿ ಅಭಿನಯದ ಹರಿಕಥೆ ಅಲ್ಲ ಗಿರಿಕಥೆ ಚಿತ್ರಕ್ಕೆ ಕರಣ್ ಅನಂತ್ ಮತ್ತು ಅನಿರುದ್ಧ ಇಬ್ಬರು ನಿರ್ದೇಶನ ಮಾಡಿದ್ದಾರೆ. ಇನ್ನು, ರಿಷಭ್ ಗೆ ಜೋಡಿಯಾಗಿ ತಪಸ್ವಿನಿ ಪೂಣಚ್ಚ ಮತ್ತು ರಚನಾ ಇಂದರ್ ಕಾಣಿಸಿಕೊಳ್ಳಲಿದ್ದಾರೆ. ಇವರಲ್ಲದೇ ಪ್ರಮೋದ್ ಶೆಟ್ಟಿ ಅಭಿನಯಿಸಿದ್ದು, ಸಂದೇಶ್ ನಾಗರಾಜ್ ಬಂಡವಾಳ ಹೂಡಿದ್ದಾರೆ.
ಇದನ್ನೂ ಓದಿ: Dhananjay: ಕನ್ನಡ್ಕಕೆ ಕೆಜಿಎಫ್ ಹೆಮ್ಮೆಯಾದರೆ ತೆಲುಗಿಗೆ ಪುಷ್ಪ ಹೆಮ್ಮೆ, ಕಿಚ್ಚನ ಕೈರುಚಿ ಸವಿದ ಡಾಲಿ
ಕಾಂತಾರದಲ್ಲಿ ಮಿಂಚಿದ ರಿಷಭ್:
ಕಾಂತಾರ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದದ್ಉ, ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ. ರಿಷಬ್ ಶೆಟ್ಟಿ ಕರಾವಳಿ ಭಾಗದ ಗ್ರಾಮೀಣ ಯುವಕನಾಗಿ ಕಾಣಿಸಿಕೊಂಡಿದ್ದಾರೆ. ಕರಾವಳಿಯ ಧಾರ್ಮಿಕ ಆಚಾರ ವಿಚಾರ, ಸಂಪ್ರದಾಯ, ಆಚರಣೆಗಳನ್ನು ನಂಬಿಕೊಂಡು ಬರುತ್ತಿರುವ ಸಮುದಾಯಕ್ಕೆ ಪೊಲೀಸ್ ಆಫೀಸರ್ ಆಗಿರುವ ಕಿಶೋರ್ ಸೆಡ್ಡು ಹೊಡೆಯುತ್ತಾರೆ. ಪೊಲೀಸ್ ಅಧಿಕಾರಿ ಮತ್ತು ಕರಾವಳಿ ಯುವಕನ ನಡುವಿನ ತಿಕ್ಕಾಟಗಳು ಚಿತ್ರವನ್ನು ತುದಿಗಾಲಲ್ಲಿ ಕುಳಿತು ನೋಡುವಂತೆ ಮಾಡುತ್ತವೆ ಎಂದು ಟೀಸರ್ ನೋಡಿ ಅನಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ