ಥೈಲ್ಯಾಂಡ್​ಗೆ ಹಾರಿದ 777 Charlie ಚಿತ್ರತಂಡ, ಚಾರ್ಲಿ ಎಲ್ಲಿ ಎಂದು ಕೇಳಿದ ನೆಟ್ಟಿಗರು

777 ಚಾರ್ಲಿ ಚಿತ್ರವು ಸೂಪರ್ ಹಿಟ್​ ಆಗಿದ್ದಲ್ಲದೇ, ಬಾಕ್ಸ್ ಆಫೀಸ್​ನಲ್ಲಿಯೂ ಉತ್ತಮ ಗಳಿಕೆ ಮಾಡಿದೆ. ಹೀಗಾಗಿ ಚಾರ್ಲಿ ಚಿತ್ರತಂಡ ಇದೀಗ ಚಿತ್ರದ ಸಕ್ಸಸ್​ ಅನ್ನು ಸಂಭ್ರಮಿಸಲು ವಿದೇಶಕ್ಕೆ ಹಾರಿದೆ.

777 ಚಾರ್ಲಿ

777 ಚಾರ್ಲಿ

  • Share this:
ಸ್ಯಾಂಡಲ್​ವುಡ್​ನ ನಟ ಸಿಂಪಲ್​ ಸ್ಟಾರ್​ ರಕ್ಷಿತ್ ಶೆಟ್ಟಿ  (Rakshit Shetty) ಅಭಿನಯದ 777 ಚಾರ್ಲಿ  (777 Charlie) ಬಿಡುಗಡೆ ಆಗಿ ಸೂಪರ್ ಹಿಟ್​ ಆಗಿದ್ದು ಇದೀಗ ಹಳೆಯ ವಿಷಯ. ಚಿತ್ರವು ಬಾಕ್ಸ್ ಆಫೀಸ್​ನಲ್ಲಿಯೂ ಸಖತ್ ಆಗಿ ಸದ್ದು ಮಾಡಿದ್ದು, ಸ್ಯಾಂಡಲ್​ವುಡ್​ನಲ್ಲಿ (Sandalwood) ಹೊಸದ ಸಂಚಲನವನ್ನು ಸೃಷ್ಟಿ ಮಾಡಿತ್ತು. ಅದರಲ್ಲಿ ಚಾರ್ಲಿ ಪಾತ್ರದಲ್ಲಿ ನಟಿಸಿದ್ದ ನಾಯಿಯಂತೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. 777 ಚಾರ್ಲಿ (777 Charlie) ಯಾವ ಮಟ್ಟಿಗೆ ಕ್ರೇಜ್ ಹುಟ್ಟು ಹಾಕಿತ್ತು ಎಂದರೆ ಎಲ್ಲರ ಸ್ಟೇಟಸ್​ಗಳಲ್ಲಿ ಕೂಡ ಚಾರ್ಲಿಯದೇ ಹವಾ ಎಂದರೂ ತಪ್ಪಾಗಲಾರದು. ಚಿತ್ರ ಬಿಡುಗಡೆ ಆಗಿ 50 ದಿನಗಳನ್ನೂ ಪೂರೈಸಿದೆ.  ಜೊತೆಗೆ ಓಟಿಟಿ ಅಲ್ಲಿಯೂ ಚಿತ್ರವು ಬಿಡುಗಡೆ ಆಗಿದ್ದು, ಒಟ್ಟಾರೆಯಾಗಿ ಚಿತ್ರವು ಬರೋಬ್ಬರಿ 150 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.  ಇದರ ಭಾಗವಾಗಿ ಚಿತ್ರತಂಡ ಇದೀಗ ವಿದೇಶಕ್ಕೆ ಹಾರಿದೆ.

​ಥೈಲ್ಯಾಂಡ್​ಗೆ ಹಾರಿದ 777 ಚಾರ್ಲಿ ಚಿತ್ರತಂಡ:

ಹೌದು, ಚಿತ್ರವು ಸೂಪರ್ ಹಿಟ್​ ಆಗಿದ್ದಲ್ಲದೇ, ಬಾಕ್ಸ್ ಆಫೀಸ್​ನಲ್ಲಿಯೂ ಉತ್ತಮ ಗಳಿಕೆ ಮಾಡಿತು. ಹೀಗಾಗಿ ಚಾರ್ಲಿ ಸಿನಿಮಾದ ಚಿತ್ರತಂಡ ಇದೀಗ ಚಿತ್ರದ ಸಕ್ಸಸ್​ ಅನ್ನು ಸಂಭ್ರಮಿಸಲು ಥೈಲ್ಯಾಂಡ್​ಗೆ ಹಾರಿದೆ. ಚಿತ್ರದ ನಿರ್ದೇಶಕ ಕಿರಣ್ ರಾಜ್​, ನಟ ರಕ್ಷಿತ್ ಶೆಟ್ಟಿ ಸೇರಿದಂತೆ ಚಿತ್ರತಂಡದ ಸರಿಸುಮಾರು ಎಲ್ಲರೂ ಥೈಲ್ಯಾಂಡ್​ ಪ್ರವಾಸದಲ್ಲಿದ್ದಾರೆ. ನಿರ್ದೇಶಕ ಕಿರಿಣ್ ರಾಜ್​ ಅವರು ತಮ್ಮ ಸಾಮಾಜಿಕ ಜಾಲತಾಣವಾದ ಫೇಸ್​ಬುಕ್​ ಮತ್ತು ಟ್ವಿಟರ್​ ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದು, ‘ಶಾಂತಿ ಮತ್ತು ನಗು, ಯಶಸ್ಸಿನ ನಂತರ‘ ಎಂದು ಬರೆದುಕೊಂಡಿದ್ದಾರೆ. ಆದರೆ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದ ಚಾರ್ಲಿ ಎಲ್ಲಿ ಎಂದು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ.ಡಿಲೀಟ್​ ಸೀನ್​ ಬಿಡುಗಡೆ ಮಾಡಿದ್ದ ಚಿತ್ರತಂಡ:

ಇನ್ನು, ಚಿತ್ರದ ಯಶಸ್ಸಿನ ನಂತರ ಚಿತ್ರದಲ್ಲಿ ಡಿಲೀಟ್​ ಮಾಡಿದ್ದ ಸೀನ್​ ಒಂದನ್ನು ಚಿತ್ರತಂಡ ಹಂಚಿಕೊಂಡಿತ್ತು. ಚಾರ್ಲಿ ಸಿನಿಮಾದಲ್ಲಿ ಆ ಪುಟ್ಟ ಹುಡುಗಿಯ ಬರ್ತ್​ ಡೇ ಸೀನ್​ಗಳನ್ನು ಡಿಲೀಟ್​ ಮಾಡಲಾಗಿತ್ತಂತೆ. ಆ ಫೋಟೋ ಮತ್ತು ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ರಿಲೀಸ್ ಆದ ದೃಶ್ಯವನ್ನು ನೋಡಿದ ನೆಟ್ಟಿಗರು ಈ ಸೀನ್ ಸಿನಿಮಾದಲ್ಲಿ ಇರಬೇಕಿತ್ತು ಎಂದು ಹೇಳಿಕೊಂಡಿದ್ದರು. ಈ ದೃಶ್ಯವನ್ನು ನಿರ್ದೇಶಕ ಕಿರಣ್ ರಾಜ್ ತಮ್ಮ ಟ್ವಿಟರ್​ ನಲ್ಲಿ ಹಂಚಿಕೊಂಡಿದ್ದು, ಅರ್ಧಿಕಾ 7ನೇ ವರ್ಷದ ಜನ್ಮದಿನದಲ್ಲಿ ಧರ್ಮ ಮತ್ತು ಚಾರ್ಲಿ ಎಂದು ಬರೆದುಕೊಂಡಿದ್ದಾರೆ.

ಓಟಿಟಿ ಬಿಡುಗಡೆ ಆದ ಚಿತ್ರ: 

ಸದ್ಯ ಚಿತ್ರವು ಓಟಿಟಿ ಅಲ್ಲಿ ಬಿಡುಗಡೆಯಾಗಿದೆ. 777 ಚಾರ್ಲಿ ಬಿಡುಗಡೆ ಆಗಿ ಎಲ್ಲಡೆ ಉತ್ತಮ ಪ್ರದರ್ಶನ ಕಾಣುತ್ತಿದ್ದ ವೇಳೆಯೇ ಚಿತ್ರವು ಜುಲೈ 29ರಂದು 50ದಿನ ಪೂರೈಸಿದ ಬೆನ್ನಲ್ಲೇ ಚಿತ್ರವನ್ನು ಓಟಿಟಿ ಅಲ್ಲಿ ಬಿಡುಗಡೆ ಮಾಡಲಾಗಿದೆ. 777 ಚಾರ್ಲಿಯು ವೂಟ್​ ಸೆಲೆಕ್ಟ್​ ನಲ್ಲಿ ಬಿಡುಗಡೆಆಗಿದ್ದು, ಇದೀಗ ನೀವು ಚಿತ್ರವನ್ನು ಮನೆಯಲ್ಲಿಯೇ ಕುಳಿತು ನೋಡಬಹುದಾಗಿದೆ.

ಇದನ್ನೂ ಓದಿ:  Weekend Planner: ಸಿನಿರಸಿಕರಿಗೆ ರಸದೌತಣ, OTTಯಲ್ಲಿ ಈ ವಾರ ಜಬರದಸ್ತ್ ಸಿನಿಮಾಗಳು ರಿಲೀಸ್​

ಕಿರಣ್ ರಾಜ್ ನಿರ್ದೇಶನದ ಈ ಸಿನಿಮಾ ಮನುಷ್ಯ ಹಾಗೂ ನಾಯಿಯ ನಡುವಿನ ಪ್ರೀತಿಯ ಸಂಬಂಧವನ್ನು ಸಾರಿ ಹೇಳುತ್ತದೆ. 166 ನಿಮಿಷಗಳ ಈ ಸಿನಿಮಾ ಜೀವನದಲ್ಲಿ ನೋವನ್ನು ಅನುಭವಿಸಿ, ಒಬ್ಬಂಟಿಯಾಗಿ ಬದುಕುವ ವ್ಯಕ್ತಿಯ ಕಥೆಯನ್ನು ಹೇಳುತ್ತದೆ. ಚಾರ್ಲಿ ಸಿನಿಮಾದ ಸಕ್ಸಸ್​ನಲ್ಲಿ ತೇಲುತ್ತಿರುವ ರಕ್ಷಿತ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರಂತೆ. ನಟನಾಗಿ ಮತ್ತು ನಿರ್ದೇಶಕನಾಗಿ ನಾನು ಮೂರು ವರ್ಷಗಳ ಕಾಲ ಬ್ಯುಸಿ ಇದ್ದೇನೆ. ನಾಲ್ಕು ವಿಭಿನ್ನ ಚಿತ್ರಗಳು ತಯಾರಿಕೆಯ ವಿವಿಧ ಹಂತಗಳಲ್ಲಿವೆ ಎಂದಿದ್ದಾರೆ.
Published by:shrikrishna bhat
First published: