• Home
  • »
  • News
  • »
  • entertainment
  • »
  • Puneetha Parva: ಫ್ಲೇವರ್ಸ್ ಆಫ್ ಗಂಧದ ಗುಡಿ! ಅಪ್ಪು ಫೇವರೇಟ್ ಬಿರಿಯಾನಿ ಸವಿದ ರಾಜ್ ಬಿ. ಶೆಟ್ಟಿ

Puneetha Parva: ಫ್ಲೇವರ್ಸ್ ಆಫ್ ಗಂಧದ ಗುಡಿ! ಅಪ್ಪು ಫೇವರೇಟ್ ಬಿರಿಯಾನಿ ಸವಿದ ರಾಜ್ ಬಿ. ಶೆಟ್ಟಿ

ರಾಜ್ ಬಿ ಶೆಟ್ಟಿ-ಪುನೀತ್ ರಾಜ್​ಕುಮಾರ್

ರಾಜ್ ಬಿ ಶೆಟ್ಟಿ-ಪುನೀತ್ ರಾಜ್​ಕುಮಾರ್

Raj B Shetty-Puneeth Rajkumar: ಪುನೀತ ಪರ್ವ ಕಾರ್ಯಕ್ರಮದ ವೇಳೆ ಫ್ಲೇವರ್ಸ್ ಆಫ್ ಗಂಧದ ಗುಡಿ ಅಭಿಯಾನ ನಡೆಯುತ್ತಿದ್ದು ಇದರ ಭಾಗವಾಗಿ ರಾಜ್ ಬಿ. ಶೆಟ್ಟಿ ಅವರೂ ಅಪ್ಪು ಅವರ ಫೇವರೇಟ್ ಬಿರಿಯಾನಿ ಸವಿದಿದ್ದಾರೆ.

  • News18 Kannada
  • Last Updated :
  • Bangalore, India
  • Share this:

ಪುನೀತ ಪರ್ವ ಕಾರ್ಯಕ್ರಮ ನಡೆಯುತ್ತಿದ್ದು ಇದರ ಜೊತೆಗೇ ಫ್ಲೇವರ್ಸ್ ಆಫ್ ಗಂಧದ ಗುಡಿ (Gandhada Gudi) ಎಂಬ ಕಾರ್ಯಕ್ರಮ ನಡೆಯುತ್ತಿದೆ. ಇದು ಈಗ ಎಲ್ಲೆಡೆ ವೈರಲ್ (Viral) ಆಗಿದ್ದು ಇದರಲ್ಲಿ ಸೆಲೆಬ್ರಿಟಿಗಳಿಂದ ಹಿಡಿದು ಜನಸಾಮಾನ್ಯರ ತನಕ ಬಹಳಷ್ಟು ಜನರು ಭಾಗವಹಿಸಿದ್ದಾರೆ. ಸ್ಯಾಂಡಲ್​​ವುಡ್  (Sandalwood) ನಟ ಅಜಯ್ ರಾವ್ ಅವರು ಈ ಅಭಿಯಾನದಲ್ಲಿ (Camapaign) ಭಾಗಿಯಾಗಿ ಅಪ್ಪು ಅವರ ಫೇವರೇಟ್ ಬೆಣ್ಣೆ ಮಸಾಲೆ ದೋಸೆ (Masale Dosa) ಸವಿದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಬಹಳಷ್ಟು ಜನರು ಅಪ್ಪು ಅವರ ಫೇವರೇಟ್ ಖಾದ್ಯಗಳನ್ನು ಸವಿಯುವ ಫೊಟೋಗಳನ್ನು (Photos) ಶೇರ್ ಮಾಡುತ್ತಿದ್ದು ಈಗ ಖ್ಯಾತ ನಿರ್ದೇಶಕ ಹಾಗೂ ನಟ ರಾಜ್ ಬಿ. ಶೆಟ್ಟಿ (Raj B Shetty) ಅವರೂ ಕೂಡಾ ಈ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರಿನ ರಾಜಾಜಿ ನಗರದಲ್ಲಿರುವ ರಾಜ್ ದೊನ್ನೆ ಬಿರಿಯಾನಿ (Raj B Donne Biriyani) ಹೋಟೆಲ್​​ನಲ್ಲಿ ರಾಜ್ ಬಿ. ಶೆಟ್ಟಿ ಅವರು ಅಪ್ಪು (Appu) ಅವರ ಫೇವರೇಟ್ ಖಾದ್ಯಗಳ ರುಚಿ ನೋಡಿದ್ದಾರೆ.


ರಾಜಾಜಿನಗರದಲ್ಲಿರೋ ರಾಜ್ ದೊನ್ನೆ ಬಿರಿಯಾನಿ ಹೋಟೆಲ್ನಲ್ಲಿ ಅಪ್ಪು ಸರ್ ಹಬ್ಬದ ಅಬ್ಬರ. ಫ್ಲೇವರ್ಸ್ ಆಫ್ ಗಂಧದ ಗುಡಿ ಹೀಗೆ ಸಂಭ್ರಮಿಸಿದ್ದಾರೆ. ಅಪ್ಪು ಸರ್ ನೆಚ್ಚಿನ ಊಟ ಸವಿದ ರಾಜ್ ಬಿ ಶೆಟ್ಟಿ. ರಾಜ್ಯಾದ್ಯಂತ ಈ ಹಬ್ಬ ಸಂಭ್ರಮ ಜೋರಿದೆ ಎಂದು ಅನುಶ್ರೀ ಅವರು ವಿಡಿಯೋ ಶೇರ್ ಮಾಡಿದ್ದಾರೆ.


ಅಪ್ಪು ಸರ್ ಫೇವರೇಟ್ ಮೆನು


ಫ್ಲೇವರ್ಸ್ ಆಫ್ ಗಂಧದ ಗುಡಿ ಎಂದು ಕೆಲವು ಆಯ್ದ ಹೋಟೆಲ್​​ಗಳಲ್ಲಿ ಅಪ್ಪು ನೆಚ್ಚಿನ ಖಾದ್ಯಗಳ ಮೆನು ಕೂಡಾ ರೆಡಿಯಾಗಿದೆ. ಕರ್ನಾಟಕದ ಬೇರೆ ಬೇರೆ ಹೋಟೆಲ್​​ಗಳಲ್ಲಿ ಅಪ್ಪು ಅವರು ಇಷ್ಟಪಡುತ್ತಿರುವ ಮೆನುಗಳನ್ನು ಸಿದ್ಧಪಡಿಸಲಾಗುತ್ತಿದೆ. ಅವುಗಳನ್ನು ಆಸ್ವಾದಿಸಿ ಬಹಳಷ್ಟು ಜನರು ಈ ಅಭಿಯಾನದಲ್ಲಿ ಭಾಗಿಯಾಗುತ್ತಿದ್ದಾರೆ.


ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೋಜನ ಪ್ರಿಯರು. ಅಣ್ಣಾವ್ರ ಮನೆಯವರು ಅತಿಥಿ ಸತ್ಕಾರದಲ್ಲಿ ಎತ್ತಿದ ಕೈ. ಈಗ ಅಕ್ಟೋಬರ್ ತಿಂಗಳಲ್ಲಿ ಫ್ಲೇವರ್ಸ್ ಆಫ್ ಗಂಧದ ಗುಡಿ ಎನ್ನುವ ಕಾರ್ಯಕ್ರಮ ಮಾಡಲಾಗುತ್ತಿದೆ. ಅಪ್ಪು ಅವರ ಫೇವರೇಟ್ ಆಹಾರಗಳನ್ನು ಸೆಲೆಬ್ರೇಟ್ ಮಾಡಲಾಗುತ್ತಿದೆ. ನಟ ಅಜಯ್ ರಾವ್ ಅವರು ಕೂಡಾ ಈ ಕಾರ್ಯಕ್ರಮದ ಭಾಗವಾಗಿದ್ದಾರೆ. ಅಪ್ಪು ಅವರ ಫೇವರೇಟ್ ಸಿಟಿಆರ್ ಬೆಣ್ಣೆ ಮಸಾಲೆ ದೋಸೆಯನ್ನು ಅಜಯ್ ಅವರು ಕೂಡಾ ಸವಿದು ಎಂಜಾಯ್ ಮಾಡಿದ್ದಾರೆ.


ಇದನ್ನೂ ಓದಿ: Puneetha Parva: ಅಜಯ್ ಖರೀದಿಸಿದ ಸೆಕೆಂಡ್ ಹ್ಯಾಂಡ್ ಕಾರ್ ಕೀ ಪಡೆದು ತಾವೇ ಓಡ್ಸಿದ್ರು ಅಪ್ಪು




ಬಿಸಿ ಬಿಸಿ ಬಿರಿಯಾನಿ ಸವಿದ ರಾಜ್ ಬಿ ಶೆಟ್ಟಿ


ರಾಜ್ ಬಿ ಶೆಟ್ಟಿ ಅವರು ಅಪ್ಪು ದೊನ್ನೆ ಬಿರಿಯಾನಿ ಮನೆಗೆ ಭೇಟಿ ಕೊಟ್ಟು ಅಪ್ಪು ಅವರ ಫೇವರೇಟ್ ಬಿರಿಯಾನಿ ಸವಿದಿದ್ದಾರೆ. ಬಾಳೆ ಎಲೆಯಲ್ಲಿ ಬಿಸಿ ಬಿಸಿಯಾದ ಬಿರಿಯಾನಿ ಸವಿದ ರಾಜ್ ಬಿ ಶೆಟ್ಟಿ ವಿಡಿಯೋವನ್ನು ಆ್ಯಂಕರ್ ಅನುಶ್ರೀ ಅವರು ಶೇರ್ ಮಾಡಿದ್ದಾರೆ.


ಇದನ್ನೂ ಓದಿ: Bengaluru Traffic: ಪುನೀತ ಪರ್ವ ಕಾರ್ಯಕ್ರಮಕ್ಕೆ ಹೋಗ್ತಿದ್ದೀರಾ? ಈ ಮಾರ್ಗದಲ್ಲಿ ಬಂದ್ರೆ ಬೇಗ ತಲುಪುತ್ತೀರಿ


ಬಹಳಷ್ಟು ಸೆಲೆಬ್ರಿಟಿಗಳು ಈ ಅಭಿಯಾನದಲ್ಲಿ ಭಾಗವಹಿಸಿದ್ದು ಅವುಗಳ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ಜನ ಸಾಮಾನ್ಯರೂ ಕೂಡಾ ಈ ಅಭಿಯಾನದಲ್ಲಿ ಭಾಗವಹಿಸಿ ವಿಡಿಯೋಗಳನ್ನು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಅಪ್ಪು ಅವರ ಫೇವರೇಟ್ ಖಾದ್ಯಗಳನ್ನು ಮತ್ತೊಮ್ಮೆ ಸಂಭ್ರಮಿಸಲಾಗುತ್ತಿದೆ.

Published by:Divya D
First published: