Raghuveer: ಇವ್ನ ಮುಸುಡಿ ನೋಡಿ ಹೀರೋ ಆಗ್ತಾನಾ! ಅವಮಾನ ಮಾಡಿದವ್ರ ಮುಂದೆಯೇ ಗೆದ್ದು ಬೀಗಿದ್ದ ನಟ ರಘುವೀರ್​

ಚಿಕ್ಕ ವಯಸ್ಸಿಗೆ ರಘುವೀರ್​ ಪ್ರಾಣಬಿಟ್ಟರೂ, ಈಗಲೂ ಅವರಿಗೆ ಅಭಿಮಾನಿಗಳಿದ್ದಾರೆ. ಅವರ ಸಿನಿಮಾಗಳು, ಅವರ ಸಿನಿಮಾ ಹಾಡುಗಳಿಗೆ ಫ್ಯಾನ್ಸ್ ಇದ್ದಾರೆ. ಇದು ರಘುವೀರ್​ ಮೂಡಿಸಿರುವ ಛಾಪು. ರಘುವೀರ್​ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದರೂ, ನಮಗೆ ಈಗಲೂ ಥಟ್​ ಅಂತ ನೆನಪಾಗೋದು ಅಂದರೆ ಶೃಂಗಾರ ಕಾವ್ಯ, ಚೈತ್ರದ ಪೇಮಾಂಜಲಿ

ನಟ ರಘುವೀರ್​

ನಟ ರಘುವೀರ್​

  • Share this:
ಯಾರೂ ಚಿತ್ರರಂಗದಲ್ಲಿ ಹೀರೋ (Hero) ಆಗಬೇಕು ಅಂತಾನೇ ಹುಟ್ಟಿ ಬರಲ್ಲ. ಹುಟ್ಟಿದವರೆಲ್ಲ ಹೀರೋಗಳಾಗಲೂ ಸಾಧ್ಯನಾ? ಮೊದಲೆಲ್ಲಾ ಹೀರೋ ಅಂದರೆ ಕಟ್ಟು ಮಸ್ತಾದ ದೇಹ (Fit Body) ಹೊಂದಿರಬೇಕಿತ್ತು. ನೋಡೋಕೆ ಲಕ್ಷಣ ಇರಬೇಕು, ಎತ್ತರ (Hight) , ತೂಕ (Weight) ಎಲ್ಲವೂ ಪರ್ಫೆಕ್ಟ್ (Perfect)​ ಇರಬೇಕಿತ್ತು. ಆದರೆ, ಅದೆಲ್ಲ ಇಲ್ಲದಿದ್ದರೂ ಸೂಪರ್​ ಸ್ಟಾರ್ (Super Star) ಆಗಬಹುದು ಎಂದು ತೋರಿಸಿಕೊಟ್ಟವರು ರಜನಿಕಾಂತ್ (Rajinikanth)​. ನೋಡುವುದಕ್ಕೆ ಕಪ್ಪು ಬಣ್ಣ (Black Color) . ಎತ್ತರ ಸುಮಾರು, ತೂಕ ಅಷ್ಟಕಷ್ಟೇ ಇದೆಲ್ಲ ಇದ್ದರು. ರಜನಿಕಾಂತ್​ ಸೂಪರ್​ ಸ್ಟಾರ್​ ಆಗಿ ಮಿಂಚುತ್ತಿದ್ದಾರೆ. ನಮ್ಮ ಕನ್ನಡದಲ್ಲೂ ನವರಸನಾಯಕ ಜಗ್ಗೇಶ್ (Jaggesh​) ಕೂಡ ಕಲರ್​ ಕಡಿಮೆ ಇದ್ದರು ಹೀರೋ ಆಗಿ ಇಂದಿಗೂ ನಮ್ಮನ್ನು ನಗಿಸಿಕೊಂಡು ಬರುತ್ತಿದ್ದಾರೆ. ಇಂಥಹ ಸಾಲಿನಲ್ಲಿ ನಿಲ್ಲುವ ಮತ್ತೊಬ್ಬ ಕನ್ನಡ ನಟ ಎಂದರೆ ರಘುವೀರ್ (Raghuveer)​. ಅವರ ಬದುಕಿನ ಪ್ರತಿ ಹಂತದ ಬಗ್ಗೆಯೂ ನಿಮಗೆ ಇಂದು ತಿಳಿಸುತ್ತೇವೆ.

ಕನ್ನಡ ಚಿತ್ರರಂಗದ ದುರಂತ ನಾಯಕ ರಘುವೀರ್!

ನಟ ರಘುವೀರ್​ಗೆ ಎಲ್ಲ ಇತ್ತು. ಆದರೂ ದುರಂತ ಬದುಕು ನಡೆಸಿದ್ದರು. ನಾವು ಇಲ್ಲಿ ಏನೇ ಮಾಡಿದರೂ ನಿಮಿತ್ತ ಮಾತ್ರ. ಎಲ್ಲವನ್ನೂ ಆಡಿಸುವವನು ಮೇಲೆ ಕೂತಿರುವ ಭಗವಂತ. ಈ ಮಾತು ಈಗ ಯಾಕೆ ಅಂತೀರಾ? ಮುಂದೆ ನೋಡಿ. ರಘುವೀರ್​ ಅವರ ತಂದೆ ಆಗರ್ಭ ಶ್ರೀಮಂತ, ಬೆಂಗಳೂರಿನಲ್ಲಿರು ಅನೇಕ ಕಟ್ಟಡಗಳನ್ನು ಕಾಂಟ್ರ್ಯಾಕ್ಟ್​ ತೆಗೆದುಕೊಂಡು ಕಟ್ಟಿಸಿದವರು ಇವರೆ. ಇಷ್ಟೆಲ್ಲಾ ಇದ್ದರೂ ರಘುವೀರ್​ ಅವರನ್ನು ಕನ್ನಡ ಚಿತ್ರರಂಗದ ದುರಂತ ನಾಯಕ ಎಂದು ಕರೆಯಲಾಗುತ್ತೆ.

ಈಗಲೂ ಇವರ ಸಿನಿಮಾದ ಹಾಡಿಗಿದೆ ಡಿಮ್ಯಾಂಡ್!

ಚಿಕ್ಕ ವಯಸ್ಸಿಗೆ ರಘುವೀರ್​ ಪ್ರಾಣಬಿಟ್ಟರೂ, ಈಗಲೂ ಅವರಿಗೆ ಅಭಿಮಾನಿಗಳಿದ್ದಾರೆ. ಅವರ ಸಿನಿಮಾಗಳು, ಅವರ ಸಿನಿಮಾ ಹಾಡಿಗಳಿಗೆ ಫ್ಯಾನ್ಸ್ ಇದ್ದಾರೆ. ಇದು ರಘುವೀರ್​ ಮೂಡಿಸಿರುವ ಛಾಪು. ರಘುವೀರ್​ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದರೂ, ನಮಗೆ ಈಗಲೂ ಥಟ್​ ಅಂತ ನೆನಪಾಗೋದು ಅಂದರೆ ಶೃಂಗಾರ ಕಾವ್ಯ, ಚೈತ್ರದ ಪೇಮಾಂಜಲಿ. ಎರಡು ಸಿನಿಮಾ ಕೂಡ ಸೂಪರ್​ ಡೂಪರ್​ ಹಿಟ್​ ಆಗಿತ್ತು. ಈ ಸಿನಿಮಾದಲ್ಲಿರುವ ಹಾಡುಗಳು ಕೇಳಿದರೆ ಇನ್ನೂ ಕೂಡ ಇಷ್ಟವಾಗುತ್ತೆ. ರಘುವೀರ್​ ಅವರು ಆಕಸ್ಮಿಕವಾಗಿ ಸಿನಿಮಾರಂಗಕ್ಕೆ ಬಂದರು.

ಅಂಬರೀಶ್​ ನೋಡಿ ನಟನಾಗಿದ್ದ ರಘುವೀರ್​!

ಅಂಬರೀಶ್​ ಅವರನ್ನು ನೋಡಿ ಸಿನಿಮಾ ನಟ ಆಗಬೇಕು ಎಂದುಕೊಂಡವರು. ಹಾಗಯೇ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದರು. ತಂದೆಯ ವಿರೋಧದ ನಡುವೆಯೂ ರಘುವೀರ್​ ನಾಯಕನಟರಾದರು. ಎಪಿ ವಿಜಯ್​ ಅವರ ನಿರ್ದೇಶನದಲ್ಲಿ ಮೂಡಿಬಂದ ಅಜಯ್​-ವಿಜಯ್​ ಸಿನಿಮಾದ ಮೂಲಕ ರಘುವೀರ್​ ಮೊದಲ ಬಾರಿಗೆ ನಾಯಕನಟನಾಗಿ ಎಂಟ್ರಿಯಾಗಿದ್ದರು. ಅವರ ತಂದಯೇ ಬಂಡವಾಳ ಹಾಕಿದ್ದರು. ಈ ಸಿನಿಮಾ ಮಕಾಡೆ ಮಲಗಿತ್ತು. ಈ ಸಿನಿಮಾಗೆ ಹಾಕಿದ್ದ ದುಡ್ಡೆಲ್ಲ ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು. ರಘುವೀರ್​ ಬಗ್ಗೆ ಯಾರೊಬ್ಬರು ಮಾತನಾಡಲಿಲ್ಲ.

ಚೈತ್ರದ ಪ್ರೇಮಾಂಜಲಿ ಸೂಪರ್​ ಡೂಪರ್​  ಹಿಟ್​!

ಈ ಸಿನಿಮಾದ ನಂತರ ಬಂದಿದ್ದೆ ಚೈತ್ರದ ಪೇಮಾಂಜಲಿ. ಈ ಚಿತ್ರದ ನಿರ್ದೇಶಕರು ಎಸ್​​,ನಾರಾಯಣ್​. ಹಂಸಲೇಖ ಸಹಾಯದಿಂದ ಎಸ್​.ನಾರಾಯಣ್​ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದ ಈ ಸಿನಿಮಾ ಸೂಪರ್​ ಹಿಟ್​ ಎನಿಸಿಕೊಂಡಿತ್ತು. ಈ ಸಿನಿಮಾದಲ್ಲಿ ನಟಿ ಶ್ವೇತ ಕಾಣಿಸಿಕೊಂಡಿದ್ದರು. ಸಿನಿಮಾ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಈ ಕಾರ್ಯಕ್ರಮಕ್ಕೆ ಆಗಿನ ಕಾಲದಲ್ಲೇ ಒಂದೂವರೆ ಲಕ್ಷ ಖರ್ಚು ಮಾಡಲಾಗಿತ್ತು. ನಟ ಅಂಬರೀಶ್​ ಹಾಗೂ ಮಾಲಾಶ್ರೀ ಆಡಿಯೋನ ರಿಲೀಸ್​ ಮಾಡಿಕೊಟ್ಟಿದ್ದರು.

ರಘುವೀರ್​, ಸಿಂಧು


ಇವ್ನ ಮುಖ ನೋಡೋಕೆ ಆಗಲ್ಲ ಅಂತ ಅವಮಾನ!

ಹಾಡು ಅದ್ಭುತವಾಗಿ ಮೂಡಿಬಂದಿದ್ದರು, ಹಿಟ್​ ಎನಿಸಿಕೊಳ್ಳಲಿಲ್ಲ. ಆಗಿನ ಕಾಲದಲ್ಲಿ ಈ ರೀತಿಯ ಸೋಷಿಯಲ್​ ಮೀಡಿಯಾ ಇರಲಿಲ್ಲ. ಸಿನಿಮಾ ರಿಲೀಸ್​ ಮಾಡುವ ಮುನ್ನ 40 ವಿತರಕರಿಗೆ ಈ ಸಿನಿಮಾವನ್ನು ತೋರಿಸಲಾಗಿತ್ತು. ಯಾರೊಬ್ಬರು ಈ ಸಿನಿಮಾವನ್ನು ಖರೀದಿಸಲು ಮುಂದೆ ಬರಲಿಲ್ಲ. ರಘುವೀರ್​ ನೋಡಲು ಕಪ್ಪು ಇದ್ದಾರೆ. ಇವ್ನ ಮುಸುಡಿ ನೋಡುವುದಕ್ಕೆ ಸಾಧ್ಯನಾ.ಇವ್ನೊಬ್ಬ ಹೀರೋನಾ ಎಂದೆಲ್ಲ ಅವಮಾನ ಮಾಡಿದ್ದರು. ಈ ಸಿನಿಮಾವನ್ನು ಖರೀದಿಸಿದರೇ ನಮ್ಮ ದುಡ್ಡು ಲಾಸ್​ ಆಗುತ್ತೆ ಎಂದು ಹೊರಟುಹೋಗಿದ್ದರಂತೆ.

ಚೈತ್ರದ ಪ್ರೇಮಾಂಜಲಿಗೆ ಸಾಥ್​ ನೀಡಿದ್ದ ರಾಮು!

ಸಿನಿಮಾಗೆ ನಟನೇ ಮೈನ್​ ಹೀರೋಯಿನ್​ ಚೆನ್ನಾಗಿದ್ದಾರೆ. ಎಲ್ಲವೂ ಚೆನ್ನಾಗಿದೆ. ಆದರೆ ಹೀರೋ ಮುಖ ನೋಡುವುದಕ್ಕೆ ಆಗಲ್ಲ ಎಂದು ಹೇಳಿದ್ದರಂತೆ. ಇದನ್ನೆಲ್ಲಾ ಕೇಳಿ ರಘುವೀರ್ ತುಂಬಾ ಬೇಜಾರು ಮಾಡಿಕೊಂಡಿದ್ದರು. ಈ ಮಾತುಗಳಿಂದ ಕುಗ್ಗಿ ಹೋಗಿದ್ದರು. ತಾವೇ ಸಿನಿಮಾ ರಿಲೀಸ್ ಮಾಡಲು ದುಡ್ಡಿರಲಿಲ್ಲ. ಈ ಸಮಯದಲ್ಲಿ ಇವರಿಗೆ ಸಾಥ್​ ಕೊಟ್ಟಿದ್ದೆ ನಿರ್ಮಾಪಕ ರಾಮು. ಈ ಸಿನಿಮಾವನ್ನು ಮೆಚ್ಚಿ ಖರೀದಿ ಮಾಡಿದ್ದು ಕೋಟಿ ರಾಮು. ಕೆಲವೊಂದು ಏರಿಯಾಗಳಲ್ಲಿ ರಾಮು ರಿಲೀಸ್ ಮಾಡಿದ್ದರು. ಇನ್ನೂ ಕೆಲ ಚಿತ್ರಮಂದಿರಗಳಲ್ಲಿ ಸ್ವತಃ ರಘುವೀರ್​ ಅವರೇ ರಿಲೀಸ್ ಮಾಡಿದ್ದರು.

ಚೈತ್ರದ ಪ್ರೇಮಾಂಜಲಿ


ಇದನ್ನೂ ಓದಿ: ಆರತಿ ಪುಟ್ಟಣ್ಣ ಕಣಗಾಲ್​ಗೆ ಕೈಕೊಟ್ಟಿದ್ದು ಮಂತ್ರಿಯೊಬ್ಬರನ್ನು ಮದುವೆಯಾಗೋಕಾ? ಪುಟ್ಟಣ್ಣ ಸಾವಿಗೆ ಇದೇ ಕಾರಣವಾ?

ಅಮಿತಾಭ್ ಎದುರು ಗೆದ್ದು ಬೀಗಿದ್ದ ರಘುವೀರ್​!

ಆಗ ಅಮಿತಾಭ್​ ಬಚ್ಚನ್​ ಖುದಾ ಗವಾ ಎಂಬ ಸಿನಿಮಾ ರಿಲೀಸ್​ಗೆ ರೆಡಿಯಾಗಿತ್ತು. ಆ ಸಿನಿಮಾ ರಿಲೀಸ್​ ಆಗುವವರೆಗೂ ಈ ಸಿನಿಮಾ ಪ್ರದರ್ಶನ ಮಾಡುವುದಾಗಿ ಎಲ್ಲ ಚಿತ್ರಮಂದಿರದ ಮಾಲೀಕರು ಹೇಳಿದ್ದರಂತೆ.ಇದಕ್ಕೆ ಬೇರೆ ದಾರಿಯಿಲ್ಲದೇ ರಘುವೀರ್​ ಕೂಡ ಒಪ್ಪಿಕೊಂಡಿದ್ದರು. ಅಂತಿಮವಾಗಿ ಸಿನಿಮಾ ರಿಲೀಸ್ ಆಗಿತ್ತು. ದಿನ ಕಳೆದಂತೆ ಸೂಪರ್​ ಡೂಪರ್​ ಎನಿಸಿಕೊಂಡಿತ್ತು. 25 ದಿನ ಅಲ್ಲ, 25 ವಾರಗಳ ಕಾಲ ಸಿನಿಮಾ ಓಡಿತ್ತು. ಯಾರು ಈ ಸಿನಿಮಾ ಖರೀದಿ ಮಾಡಲು ನಿರಾಕರಿಸಿದ್ದವರು, ಸಿನಿಮಾ ಖರೀದಿಸುವುದಾಗಿ ಕೇಳಿದ್ದರು. ಆದರೆ, ರಘುವೀರ್​ ನೀಡಿರಲಿಲ್ಲ.

ಕುಟುಂಬದ ಜೊತೆ ರಘುವೀರ್​


ಎರಡೇ ಸಿನಿಮಾಗೆ ಸ್ಟಾರ್​ ಪಟ್ಟ ಪಡೆದುಕೊಂಡರು!

ಅಮಿತಾಭ್​ ಬಚ್ಚನ್ ಸಿನಿಮಾ ಚೈತ್ರದ ಪ್ರೇಮಾಂಜಲಿ ಎದುರು ಬರಲು ಹಿಂದೇಟು ಹಾಕಿತ್ತು. ಒಂದು ತಿಂಗಳ ಬಳಿಕ ಆ ಸಿನಿಮಾ ರಿಲೀಸ್ ಆಯ್ತು. ಇದಾದ ಬಳಿಕ ಬಂದಿದ್ದೇ ಶೃಂಗಾರ ಕಾವ್ಯ. ಈ ಸಮಯದಲ್ಲಿ ಎಲ್ಲ ವಿತರಕರು ನಾವು ಮಾಡ್ತೇವೆ ಎಂದು ಮುಂದೆ ಬಂದಿದ್ದರು. ಆದರೆ, ಮೊದಲೇ ನೋವು ಅನುಭವಿಸಿದ್ದ ರಘುವೀರ್​ ಯಾರು ಅವಮಾನಿಸಿದ್ದರೋ ಅವರ್ಯಾರಿಗೂ ಅವಕಾಶ ನೀಡಲಿಲ್ಲ.

ಶೃಂಗಾರ ಕಾವ್ಯ


ರಘುವೀರ್​ ಒರಿಜಿನಲ್​ ಹೆಸರು ದಿನೇಶ್​!

ರಘುವೀರ್ ಜನ್ಮನಾಮ ದಿನೇಶ್. ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಾಸ್ಯ ನಟ ದಿನೇಶ್ ಇದ್ದಿದ್ದರಿಂದ ಆ ಹೆಸರು ಬೇಡ ಅಂತ ಎ.ಟಿ.ರಘು ಹೇಳಿದ್ದರು. ಬಳಿಕ ಮಗನಿಗೆ ರಾಮನ ಹೆಸರು ಇರಲಿ ಅಂತ 'ರಘುವೀರ್' ಹೆಸರನ್ನು ಸೂಚಿಸಿದವರು ಅವರ ತಂದೆ ಮುನಿಯಲ್ಲಪ್ಪ. 'ಶೃಂಗಾರ ಕಾವ್ಯ' ಚಿತ್ರೀಕರಣ ಸಂದರ್ಭದಲ್ಲೇ ನಟಿ ಸಿಂಧು ಮತ್ತು ರಘುವೀರ್ ಮಧ್ಯೆ ಪ್ರೇಮಾಂಕುರವಾಯಿತು. ನಟಿ ಸಿಂಧು ಜೊತೆಗೆ ರಘುವೀರ್ ಮದುವೆ ನಡೆಯುವುದು ತಂದೆ ಮುನಿಯಲ್ಲಪ್ಪಗೆ ಇಷ್ಟ ಇರಲಿಲ್ಲ. ತಂದೆಯ ಮಾತನ್ನು ಧಿಕ್ಕರಿಸಿ ರಘುವೀರ್.. ಸಿಂಧು ಕೈಹಿಡಿದಿದ್ದರು.

ನಟಿ ಸಿಂಧು ಜೊತೆ ಮದುವೆಯಾಗಿದ್ದ ರಘುವೀರ್! 

ತಂದೆ-ಮಗನ ಮಧ್ಯೆ ಮನಸ್ತಾಪ ಉಂಟಾಯಿತು. ಮನೆ ಬಿಟ್ಟು ರಘುವೀರ್ ಹೊರ ನಡೆದರು. ಕುಟುಂಬದವರೊಂದಿಗೆ ಮಾತುಕತೆಯನ್ನೂ ನಿಲ್ಲಿಸಿಬಿಟ್ಟರು ರಘುವೀರ್. ಆಗಲೇ, ರಘುವೀರ್ ಬಗ್ಗೆ ಗಾಂಧಿನಗರದಲ್ಲಿ ಗಾಳಿಮಾತುಗಳು ಶುರುವಾಗಿದ್ದು.ಕೆಲಸ ಇಲ್ಲದ ರಘುವೀರ್ ಪ್ರತಿದಿನ ಪಟ್ಟ ಕಷ್ಟ, ಅನುಭವಿಸಿದ ನೋವು, ಅವಮಾನ, ಯಾತನೆ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ.ನವೆಂಬರ್ 15, 1992 ರಂದು ರಘುವೀರ್-ಸಿಂಧು ದಾಂಪತ್ಯ ಜೀವನ ಆರಂಭಿಸಿದರು. ಇಬ್ಬರ ದಾಂಪತ್ಯಕ್ಕೆ ಸಾಕ್ಷಿಯಾಗಿ ಜುಲೈ1, 1994 ರಲ್ಲಿ ಹೆಣ್ಣು ಮಗು ಜನಿಸಿತ್ತು.

ಎರಡನೇ ಮದುವೆಯಾಗಿದ್ದ ರಘುವೀರ್​!

ಟಿ ಸಿಂಧುಗೆ ಚಿಕ್ಕವಯಸ್ಸಿನಿಂದಲೂ ವೀಝಿಂಗ್ ಸಮಸ್ಯೆ ಇತ್ತು. ಸುನಾಮಿ ಸಂತ್ರಸ್ತರಿಗೆ ಚಾರಿಟಿ ಫಂಡ್ ರೈಸ್ ಮಾಡಲು ಹೋದಾಗ ಸುಂಟರಗಾಳಿ ಬೀಸಿದ ಪರಿಣಾಮ ಮೂಗಿನೊಳಗೆ ಧೂಳು ಹೋಗಿದ್ದರಿಂದ ಮೂರು ದಿನ ನಟಿ ಸಿಂಧು ಕೋಮಾಗೆ ಜಾರಿದ್ದರು. ಚಿಕಿತ್ಸೆ ಫಲಕಾರಿ ಆಗದೆ 2003 ರಲ್ಲಿ ನಟಿ ಸಿಂಧು ವಿಧಿವಶರಾದರು.ಸಿಂಧು ತೀರಿಕೊಂಡ ಬಳಿಕ ಮಾನಸಿಕವಾಗಿ ಘಾಸಿಗೊಂಡಿದ್ದ ರಘುವೀರ್ ಸೀದಾ ಮುಂಬೈಗೆ ಹಾರಿಬಿಟ್ಟರು.

46ನೇ ವಯಸ್ಸಿಗೆ ಕೊನೆಯುಸಿರೆಳೆದ ರಘುವೀರ್​!

2004 ರಲ್ಲಿ ತಂದೆ ಮಾತಿಗೆ ಬೆಲೆ ಕೊಟ್ಟು ಮತ್ತೆ ಅತ್ತೆ ಮಗಳನ್ನೇ ರಘುವೀರ್ ವರಿಸಿದರು. ಈ ದಂಪತಿಗೆ ಹೆಣ್ಣು ಮಗುವಾಯ್ತು.ಎರಡನೇ ಮದುವೆ ಆದ ಮೇಲೆ ರಘುವೀರ್ 'ಮುಗಿಲ ಚುಂಬನ' ಎಂಬ ಸಿನಿಮಾ ಮಾಡಿ ಮತ್ತೆ ಸೋತರು.ಜೀವನದಲ್ಲಿ ತೀವ್ರ ಜಿಗುಪ್ಸೆ ಅನುಭವಿಸಿದ್ದ ರಘುವೀರ್ 46 ವರ್ಷ ವಯಸ್ಸಿಗೆ ಕೊನೆಯುಸಿರೆಳೆದರು
Published by:Vasudeva M
First published: