Raghavendra rajkumar: ರಾಘಣ್ಣನ ಅಪರೂಪದ ಸಂಗ್ರಹ-ಪ್ರತಿ ದಿನ ಒಂದೊಂದು ನೆನಪಿನ ಚಿತ್ರಣ

ರಾಘಣ್ಣನ ಅಪರೂಪದ ಫೋಟೋ-ವಿಡಿಯೋ ಸಂಗ್ರಹ

ರಾಘಣ್ಣನ ಅಪರೂಪದ ಫೋಟೋ-ವಿಡಿಯೋ ಸಂಗ್ರಹ

ದೊಡ್ಮನೆ ರಾಘವೇಂದ್ರ ರಾಜ್‌ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಫೇಸ್ ಬುಕ್ ಓಪನ್ ಮಾಡಿದ್ರೆ ಸಾಕು, ಅಲ್ಲಿ ರಾಘಣ್ಣನ ಒಂದು ಪುಟ್ಟ ಪೋಸ್ಟ್ ಇರುತ್ತದೆ. ಅದರಲ್ಲಿ ಒಂದು ಅಪರೂಪದ ಫೋಟೋ ಕೂಡ ಕಾಣಬಹುದು.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ದೊಡ್ಮನೆ ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಫೇಸ್ ಬುಕ್ ಓಪನ್ ಮಾಡಿದ್ರೆ ಸಾಕು, ಅಲ್ಲಿ ರಾಘಣ್ಣನ ಒಂದು ಪುಟ್ಟ ಪೋಸ್ಟ್ (Rare Photos Gallery Story) ಇರುತ್ತದೆ. ಅದರಲ್ಲಿ ಒಂದು ಅಪರೂಪದ ಫೋಟೋ ಕೂಡ ಕಾಣಬಹುದು. ಅಲ್ಲಿಂದ ನೀವು ಇನ್‌ಸ್ಟಾಗ್ರಾಮ್‌ಗೆ ಬಂದ್ರೆ, ಅಲ್ಲೂ ರಾಘವೇಂದ್ರ ರಾಜ್‌ಕುಮಾರ್ (Actor Raghavendra Rajkumar) ಸಿಗ್ತಾರೆ. ಅಲ್ಲೂ ಕೂಡ ಅಪರೂಪದಲ್ಲಿಯೇ ಅಪರೂಪ ಅನಿಸೋ ಫೋಟೋಗಳ ಸಂಗ್ರಹವೇ ಇದೆ. ಇದನ್ನ ನೋಡಿದಾಗ ಆ ದಿನಗಳಿಗೆ ಯಾರ ಬೇಕಾದ್ರೂ ಸಾಗಬಹುದು. ಅಷ್ಟು (Kannada Actor Updates) ವಿಶೇಷ ಫೋಟೋಗಳಿವೆ. ಪ್ರತಿ ದಿನ ಇವುಗಳನ್ನ ನೋಡ್ತಾನೇ ಈ ಬಗ್ಗೆ ಬರೆಯಬೇಕು ಅಂತ ಪ್ಲಾನ್ ಇತ್ತು. ಅದು ಈಗ ಸಾಧ್ಯವಾಗಿದೆ. ಬನ್ನಿ, ಹೇಳ್ತಿನಿ.


ರಾಘವೇಂದ್ರ ರಾಜ್‌ಕುಮಾರ್ ಅಪರೂಪದ ಸಂಗ್ರಹದಲ್ಲಿ ಏನಿದೆ?


ರಾಘವೇಂದ್ರ ರಾಜ್‌ ಕುಮಾರ್ ಅಂದ್ಕೂಡ್ಲೇ ನಮಗೆ ನಂಜುಂಡಿ ಕಲ್ಯಾಣಿ ಚಿತ್ರ ನೆನಪಿಗೆ ಬರುತ್ತದೆ. ಗಜಪತಿ ಗರ್ವಭಂಗ ಕಣ್ಮುಂದೆ ಬರುತ್ತದೆ. ಸ್ವಸ್ತಿಕ್ ಸಿನಿಮಾ ಕೂಡ ವಿಶೇಷ ಅನಿಸುತ್ತದೆ. ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರೋ ರಾಘವೇಂದ್ರ ರಾಜ್‌ಕುಮಾರ್ ಇದೀಗ ಮತ್ತೆ ಅಭಿನಯಿಸೋಕೆ ಆರಂಭಿಸಿದ್ದಾರೆ.


Sandalwood Actor Raghavendra Rajkumar Rare Photos Gallery Story
ರಾಜ್ ಆ ದಿನಗಳ ಒಂದು ವಿಡಿಯೋ ಈಗಲೂ ವೈರಲ್


ಅಮ್ಮನ ಮನೆ ಚಿತ್ರದ ಮೂಲಕ ರಾಘಣ್ಣ ಬೆಳ್ಳಿ ತೆರೆಗೆ ವಾಪಾಸ್ ಆಗಿದ್ದಾರೆ. ತ್ರಯಂಬಕಂ, ರಾಜರತ್ನ, ಪೊಗರು, ರಾಜಿ, ಜೇಮ್ಸ್, ಅಡಿಸಿದಾತ ಹೀಗೆ ಒಂದಷ್ಟು ಸಿನಿಮಾಗಳಲ್ಲಿ ರಾಘವೇಂದ್ರ ರಾಜ್‌ಕುಮಾರ್ ಅಭಿನಯಿಸಿದ್ದಾರೆ.




ಒಂದು ಫೋಟೋ ಒಂದು ಸಂದೇಶ-ರಾಘಣ್ಣನ ದೈನಂದಿನ ಚಟುವಟಿಕೆ


ಈ ಎಲ್ಲ ಸಿನಿಮಾಗಳ ಮಧ್ಯೆ ರಾಘವೇಂದ್ರ ರಾಜ್‌ ಕುಮಾರ್ ತಮ್ಮ ಎಂದಿನ ದೈನಂದಿನ ಅಭ್ಯಾಸವನ್ನ ಬಿಟ್ಟಿಲ್ಲ. ಸೋಷಿಯಲ್ ಮೀಡಿಯಾ ಮೂಲಕ ಪ್ರತಿ ದಿನ ಒಂದಲ್ಲ ಒಂದು ಪೋಸ್ಟ್ ಹಾಕ್ತಾನೇ ಇರ್ತಾರೆ. ಆ ಪೊಸ್ಟ್‌ಗಳು ಸುಮ್ನೆ ಗುಡ್‌ಮಾರ್ನಿಂಗ್ ಮೆಸೇಜ್ ಆಗಿರೋದಿಲ್ಲ. ಅದರಲ್ಲಿ ಹೊಸದೊಂದು ಫೋಟೊ ಇರುತ್ತದೆ.


Sandalwood Actor Raghavendra Rajkumar Rare Photos Gallery Story
ರಾಘಣ್ಣನ ಅಪರೂಪದ ಸಂಗ್ರಹ-ಪ್ರತಿ ದಿನ ಒಂದೊಂದು ನೆನಪಿನ ಚಿತ್ರಣ


ರಾಜ್ ಆ ದಿನಗಳ ಒಂದು ವಿಡಿಯೋ ಈಗಲೂ ವೈರಲ್


ಆದರೆ ಇದು ಹಳೆಯ ಅಪರೂಪದ ಫೋಟೋ ಆಗಿರುತ್ತದೆ. ಹೌದು, ರಾಘಣ್ಣನ ಸಂಗ್ರಹದಲ್ಲಿ ಸಾಕಷ್ಟು ಅಪರೂಪದ ಫೋಟೋಗಳಿವೆ. ಸಾಕಷ್ಟು ಅಪರೂಪದ ವಿಡಿಯೋಗಳೂ ಇವೆ. ಅವುಗಳಲ್ಲಿ ಕೆಲವನ್ನ ರಾಘಣ್ಣ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಾನೇ ಇರ್ತಾರೆ.


Sandalwood Actor Raghavendra Rajkumar Rare Photos Gallery Story
ರಾಘವೇಂದ್ರ ರಾಜ್‌ಕುಮಾರ್ ಅಪರೂಪದ ಸಂಗ್ರಹ


ರಾಜ್‌ಕುಮಾರ್ ಅವರನ್ನ ಬೇಟಿಯಾಗಲು ಬರುವ ಅಭಿಮಾನಿಗಳ ಒಂದು ವಿಡಿಯೋ ತುಂಬಾನೇ ವಿಶೇಷವಾಗಿದೆ. ಇದು ಬ್ಲಾಕ್ ಆ್ಯಂಡ್ ವೈಟ್ ಅಲ್ಲಿ ಇದೆ. ಇದನ್ನ ಒಮ್ಮೆ ನೋಡಿದ್ರೆ ಸಾಕು, ರಾಜ್‌ಕುಮಾರ್ ಅವರ ವ್ಯಕ್ತಿತ್ವದ ಚಿತ್ರಣ ನಮಗೆ ಸಿಗುತ್ತದೆ.




ಅಪ್ಪು ಬಾಲ್ಯದ ಅಪರೂಪದ ಫೋಟೋ ತುಂಬಾ ವಿಶೇಷ


ಇದರ ಹೊರತಾಗಿ ಅಪ್ಪು ಬಾಲ್ಯದ ಫೋಟೋಗಳೂ ರಾಘಣ್ಣ ಸಂಗ್ರಹದಲ್ಲಿವೆ. ರಾಜ್‌ಕುಮಾರ್ ಅವರ ಅದೆಷ್ಟೋ ಅಪರೂಪದ ಫೋಟೋಗಳನ್ನ ರಾಘಣ್ಣ ಸಂಗ್ರಹಿಸಿಟ್ಟಿದ್ದಾರೆ. ಇವರ ಒಂದೊಂದು ಫೋಟೋಗಳು ನಿಮಗೆ ಎಲ್ಲೂ ಸಿಗೋದಿಲ್ಲ.


ಅಷ್ಟು ವಿಶೇಷವಾಗಿರೋ ಈ ಫೋಟೋಗಳು ರಾಜ್, ಅಪ್ಪು, ಹೀಗೆ ಎಲ್ಲರ ಚಿತ್ರ ಬದುಕಿನ ಯಶಸ್ವಿ ಪಯಣಕ್ಕೆ ಸಾಕ್ಷಿಯಂತೇನೆ ಕಾಣಿಸುತ್ತವೆ.


Sandalwood Actor Raghavendra Rajkumar Rare Photos Gallery Story
ಅಪ್ಪು ಬಾಲ್ಯದ ಅಪರೂಪದ ಫೋಟೋ ತುಂಬಾ ವಿಶೇಷ


ರಾಘಣ್ಣನ ಅಪರೂಪದ ಫೋಟೋ-ವಿಡಿಯೋ ಸಂಗ್ರಹ


ರಾಘವೇಂದ್ರ ರಾಜ್‌ಕುಮಾರ್‌ ತಮ್ಮ ಅಪ್ಪ ಮತ್ತು ಅಪ್ಪು ಫೋಟೋಗಳನ್ನ ಮಾತ್ರ ಸಂಗ್ರಹಿಸಿಲ್ಲ. ಬದಲಾಗಿ ಅಮ್ಮ, ಅಣ್ಣ ಹೀಗೆ ಇವರ ವಿಶೇಷ ಫೋಟೋಗಳನ್ನ ಸಹ ಅಷ್ಟೇ ಜತನದಿಂದಲೇ ರಕ್ಷಿಸಿ ಇಟ್ಟಿದ್ದಾರೆ. ಅವುಗಳನ್ನ ಈಗೀನ ಡಿಜಿಟಲ್‌ ಫಾರ್‌ಮ್ಯಾಟ್‌ಗೂ ಕನ್ವರ್ಟ್ ಮಾಡಿ ರಕ್ಷಿಸಿಕೊಂಡಿದ್ದಾರೆ.


ಇದನ್ನೂ ಓದಿ: Rosy Movie: ತಮಿಳಿನ ಹೆಸರಾಂತ ನಟ-ನಿರ್ದೇಶಕ ಕನ್ನಡಕ್ಕೆ ಬರೋದು ಪಕ್ಕಾ?


ಇನ್ನುಳಿದಂತೆ, ರಾಘಣ್ಣ ತಮ್ಮ ಈ ವಿಶೇಷ ಸಂಗ್ರಹದ ಫೊಟೋಗಳನ್ನ ಎಲ್ಲರೊಟ್ಟಿಗೆ ಹಂಚಿಕೊಂಡಿದ್ದು, ಆಗಾಗ ಇನ್ನೂ ವಿರಳ ಅನಿಸೋ ಫೋಟೋಗಳನ್ನ ಶೇರ್ ಮಾಡ್ತಾನೇ ಇದ್ದಾರೆ. ಇವರ ಈ ಒಂದು ಕೆಲಸದಿಂದ ಸಾಕಷ್ಟು ಅಪರೂಪದ ನೆನಪುಗಳು ಜನಕ್ಕೂ ಈಗ ಗೊತ್ತಾಗ್ತಿವೆ.

top videos
    First published: