Video: ಪ್ರಧಾನಿ ಮೋದಿ ಕರೆಗೆ ಧ್ವನಿಗೂಡಿಸಿದ ಪುನೀತ್​ ರಾಜ್​​ ಕುಮಾರ್​!

ಪ್ರಧಾನಮಂತ್ರಿ ಮೋದಿ ಅವರು ಹೇಳಿದಂತೆ ರಾತ್ರಿ 9 ಗಂಟೆಯಿಂದ 9 ನಿಮಿಷಕ್ಕೆ ಮನೆಯ ಬಾಲ್ಕನಿ ಅಥವಾ ಎಲ್ಲಿ ಸ್ಥಳವಿದೆಯೋ ಅಲ್ಲಿ ನಿಂತುಕೊಂಡು ದೀಪ ಬೆಳಗಿಸೋಣ. ದೀಪ, ಮೊಬೈಲ್​ ಟಾರ್ಚ್​ಗಳನ್ನು ಆಕಾಶಕ್ಕೆ ತೋರಿಸೋಣ ಎಂದು ವಿಡಿಯೋದಲ್ಲಿ ಹೇಳಿದ್ದಾರೆ

ಪುನೀತ್​ ರಾಜ್​​ ಕುಮಾರ್​

ಪುನೀತ್​ ರಾಜ್​​ ಕುಮಾರ್​

  • Share this:
    ಇತ್ತೀಚೆಗೆ ಸ್ಯಾಂಡಲ್​ವುಡ್​ ನಟ ಪವರ್​ ಸ್ಟಾರ್​ ಪುನೀತ್​ ರಾಜ್​​​ ಕುಮಾರ್​ ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿ ಸುದ್ದಿಯಾಗಿದ್ದರು. ಮಾತ್ರವಲ್ಲದೆ, ಭಾರತದಿಂದ ಕೊರೋನಾ ವಿರುದ್ಧದ ಹೋರಾಟಕ್ಕೆ ಎಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದ್ದರು. ಇದೀಗ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ದೀಪ ಬೆಳಗಿಸಿ ಎಂಬ ಕರೆಗೆ ಪುನೀತ್​  ರಾಜ್​ ಕುಮಾರ್​ ಧ್ವನಿಗೂಡಿಸಿದ್ದಾರೆ.

    ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿರುವ ಪವರ್​ ಸ್ಟಾರ್, ಈ ವಿಡಿಯೋದಲ್ಲಿ ‘ಪ್ರಧಾನಮಂತ್ರಿ ಮೋದಿ ಅವರು ಹೇಳಿದಂತೆ ರಾತ್ರಿ 9 ಗಂಟೆಯ 9 ನಿಮಿಷಕ್ಕೆ ಮನೆಯ ಬಾಲ್ಕನಿ ಅಥವಾ ಮನೆಯ ಒಳಗೆ ದೀಪ ಬೆಳಗಿಸೋಣ. ದೀಪ, ಮೊಬೈಲ್​ ಟಾರ್ಚ್​ಗಳನ್ನು ಆಕಾಶಕ್ಕೆ ತೋರಿಸೋಣ. ನಮ್ಮ ಪ್ರಧಾನ ಮಂತ್ರಿಗಳು ಮತ್ತು ರಾಜ್ಯದಲ್ಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತದೆ. ಅವುಗಳನ್ನು ​ ಪಾಲಿಸೋಣ. ಇದೆಲ್ಲಾ ನಮ್ಮ ಒಳ್ಳೆಯದಕ್ಕೆ‘ ಎಂದು ಹೇಳಿದ್ದಾರೆ.



    ಇನ್ನೂ ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಕೂಡ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆಗೆ ದನಿಗೂಡಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ನಮ್ಮ ಪ್ರಧಾನಿಗಳ ಕರೆಯಂತೆ ಕೊರೋನ ವೈರಸ್ ಇಂದ ತುಂಬಿರುವ ಅಂಧಕಾರವನ್ನು ಏಪ್ರಿಲ್ 5 , ರಾತ್ರಿ 9 ಗಂಟೆಗೆ ನಿಮ್ಮ ಮನೆಯಂಗಳದಿಂದಲೇ ಮೋಂಬತ್ತಿ/ದೀಪಗಳನ್ನು ಹಚ್ಚುವ ಮೂಲಕ ಆದಷ್ಟು ಬೇಗ ಈ ಪಿಡುಗಿನಿಂದ ಪಾರಾಗುವ ಭರವಸೆಯನ್ನು ಎಲ್ಲರಲ್ಲೂ ಮೂಡಿಸೋಣ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.



    ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್​ 9 ರಂದು 9 ನಿಮಿಷಕ್ಕೆ ದೇಶದ ಜನರು ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತುಕೊಂಡು ದೀಪ ಬೆಳಗಿಸುವ ಮೂಲಕ ಕೊರೋನಾ ವಿರುದ್ಧ ಹೋರಾಟಕ್ಕೆ ಜೊತೆಯಾಗೋಣ ಎಂದಿದ್ದರು. ಅದರಂತೆ ಸ್ಯಾಂಡಲ್​ವುಡ್​ನ ಅನೇಕ ನಟ ನಟಿಯರು ಮೋದಿ ಮನವಿಗೆ ಬೆಂಬಲ ಸೂಚಿಸಿದ್ದಾರೆ.
    First published: