Veerendra Babu: ವಂಚನೆ ಪ್ರಕರಣ, ಸ್ಯಾಂಡಲ್​ವುಡ್​ ನಿರ್ಮಾಪಕನ ಬಂಧನ

ಸ್ಯಾಂಡಲ್​ವುಡ್​ನ ನಟ, ನಿರ್ಮಾಪಕ ವಿರೇಂದ್ರ ಬಾಬ ಅವರನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ. ವಂಚನೆ ಪ್ರಕರಣದ ಹಿನ್ನಲೆ ನಿರ್ಮಾಪಕ ವಿರೇಂದ್ರ ಬಾಬು ಅವರನ್ನು ಇಂದು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ.

ನಿರ್ಮಾಪಕ ವೀರೇಂದ್ರ ಬಾಬು

ನಿರ್ಮಾಪಕ ವೀರೇಂದ್ರ ಬಾಬು

  • Share this:
ಸ್ಯಾಂಡಲ್​ವುಡ್​ನ ನಟ, ನಿರ್ಮಾಪಕ ವೀರೇಂದ್ರ ಬಾಬು (Veerendra Babu) ಅವರನ್ನು ಬೆಂಗಳೂರಿನ (Bengaluru) ಪೊಲೀಸರು ಬಂಧಿಸಿದ್ದಾರೆ. ವಂಚನೆ ಪ್ರಕರಣದ ಹಿನ್ನಲೆ ನಿರ್ಮಾಪಕ ವೀರೇಂದ್ರ ಬಾಬು ಅವರನ್ನು ಇಂದು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ ರಾಷ್ಟ್ರ ಜನಹಿತ ಪಕ್ಷ ಸ್ಥಾಪಿಸಿದ್ದ ವೀರೇಂದ್ರ ಬಾಬು ಅವರು ಮುಂಬರುವ ಚುನಾವಣೆಯಲ್ಲಿ ಎಂಎಲ್​ಎ (MLA) ಹಾಗು ಎಂಪಿ (MP) ಟಿಕೆಟ್ ಕೊಡುವುದಾಗಿ ನಂಬಿಸಿ ವಂಚನೆ ಮಾಡಿದ್ದರು. ಇದರ ಜೊತೆ ಟಿಕೆಟ್​ ಕೊಡಿಸುವುದಾಗಿ ಬಸವರಾಜ್ ಘೋಷಾಲ್ ಎಂಬುವರಿಗೆ 1.88 ಕೋಟಿ ರೂ. ವಂಚಿಸಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ. ಈ ಹಿನ್ನಲೆ ಕೊಡಿಗೆಹಳ್ಳಿ ಪೊಲೀಸರು (Police) ವೀರೇಂದ್ರ ಬಾಬು ಅವರನ್ನು ಇಂದು ಬಂಧಿಸಿದ್ದಾರೆ.

ನಿರ್ಮಾಪಕ ವೀರೇಂದ್ರ ಬಾಬು ಬಂಧನ:

ಸ್ಯಾಂಡಲ್​ವುಡ್ ನಟ, ನಿರ್ಮಾಪಕ ವೀರೇಂದ್ರ ಬಾಬು ಅವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಈ ಸಂಬಂಧ ಅವರನ್ನು ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಾಬು ವಿರುದ್ಧ ಬಸವರಾಜ ಘೋಷಾಲ್ ಎಂಬುವರು ದೂರು ನೀಡಿದ್ದರು. ಚುನಾವಣೆಯಲ್ಲಿ ಟಿಕೆಟ್​ ಕೊಡಿಸುವುದಾಗಿ ಬಸವರಾಜ ಘೋಷಾಲ್ ಎಂಬುವವರಿಗೆ 1 ಕೋಟಿ 88 ಲಕ್ಷ ಹಣ ವಂಚನೆ ಮಾಡಿದ್ದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಇದಲ್ಲದೇ ವೀರೇಂದ್ರ ಬಾಬು ಅವರು ರಾಷ್ಟ್ರ ಜನಹಿತ ಪಕ್ಷದ ಜೊತೆ ಕರ್ನಾಟಕ ರಕ್ಷಣಾ ಪಡೆಯನ್ನೂ ಕಟ್ಟಿದ್ದರು. ಈ ಸಂಘಟನೆ ಗೆ ಸಹ ತಾಲೂಕು ಹಾಗೂ ಜಿಲ್ಲಾ ಅದ್ಯಕ್ಷ ಸ್ಥಾನ ನೀಡುವುದಾಗಿ ಹಲವಾರು ಜನರಿಗೆ ಹಣ ಪಡೆದು ವಂಚನೆ ಮಾಡಿದ್ದರು ಎಂದು ತಿಳಿದುಬಂದಿದೆ. ಜೊತೆಗೆ ಈ ಹಣವನ್ನು ಹಣವನ್ನು ಸರ್ಕಾರಿ ಶಾಲೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುವುದಾಗಿ ಹೇಳಿಕೊಂಡಿದ್ದರು. ಹೀಗಾಗಿ ಈ ಎಲ್ಲಾ ವಂಚನೆಗಳನ್ನು ಪರಿಗಣಿಸಿ ಪೊಲೀಸರು ವಿರೇಂದ್ರ ಬಾಬು ಅವರನ್ನು ಅರೆಸ್ಟ್ ಮಾಡಿ ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Sushmita Sen: ಅಕ್ಕನ ಪ್ರೇಮ್​ ಕಹಾನಿ ಬಗ್ಗೆ ತಮ್ಮನ ಶಾಕಿಂಗ್​ ಹೇಳಿಕೆ! ಹುಡುಗನ್ನ ಬಿಟ್ಟು ಅಂಕಲ್​ ಹಿಂದೆ ಯಾಕ್​ ಹೋದ್ರು ಅಂತ ಟ್ರೋಲ್​

ಸ್ವಯಂ ಕೃಷಿ ಚಿತ್ರ ನಿರ್ಮಿಸಿದ್ದ ವೀರೇಂದ್ರ ಬಾಬು:

ಇನ್ನು, ಕನ್ನಡದಲ್ಲಿ ಸ್ವಯಂ ಕೃಷಿ ಚಿತ್ರವನ್ನು ನಿರ್ಮಿಸಿ ನಟಿಸಿದ್ದರು. 2011ರಲ್ಲಿ ಈ ಚಿತ್ರ ತೆರೆಕಂಡಿತ್ತು. ಚಿತ್ರದಲ್ಲಿ ವೀರೇಂದ್ರ ಬಾಬು  ಜೊತೆ ತಮನ್ನಾ ಪಾಷಾ ನಟಿಸಿದ್ದಾರೆ.  ಇದಲ್ಲದೇ ಸಿನಿಮಾದಲ್ಲಿ ಅಂಬರೀಷ್​, ಸುಮನ್ ಜಿಕೆ, ಚರಣ್ ರಾಜ್, ರೇಖಾ ವಿ.ಕುಮಾರ್, ಸತ್ಯಜಿತ್, ಉಮಾಶ್ರೀ, ರಂಘಾಯಣ ರಘು ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. 

ಇದನ್ನೂ ಓದಿ: Sushmita Sen-Lalit Modi: 9 ವರ್ಷದ ಹಿಂದೆನೇ ಶುರುವಾಗಿತ್ತಂತೆ ಕುಚ್​ ಕುಚ್​! ಲಂಡನ್​ನಲ್ಲಿ ಜುಮ್​ ಅಂತ ಮಜಾ ಮಾಡ್ತಿದ್ದಾರೆ ಲವ್​ ಬರ್ಡ್ಸ್​

3 ವರ್ಷಗಳ ಹಿಂದೆ ಸ್ವಯಂ ಕೃಷಿ ಹೆಸರಿನಲ್ಲಿ ವಂಚನೆ:

ನಟ, ನಿರ್ಮಾಪಕ ವೀರೇಂದ್ರ ಬಾಬು ಅವರು ಸ್ವಯಂ ಕೃಷಿ ಹೆಸರಲ್ಲಿ ಹತ್ತಾರು ಕಂಪನಿಗಳನ್ನು ಹುಟ್ಟುಹಾಕಿ, ಅನೇಕ ಜನರಿಗೆ ವಂಚನೆಯನ್ನು ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನಲೆ 3 ವರ್ಷಗಳ ಹಿಂದೆ  ಹೈದರಾಬಾದ್ ನಲ್ಲಿ ಪೊಲೀಸರು ಅವರನ್ನು ಅರೆಸ್ಟ್ ಮಾಡಿದ್ದರು. ಈ ವೇಳೆ ವಿಷಯ ತಿಳಿದ 'ಸ್ವಯಂಕೃಷಿ' ಕಂಪನಿಗಳಿಂದ ಮೋಸ ಹೋದ ನೂರಾರು ಮಂದಿ ದೇವನಹಳ್ಳಿಯ ಪೊಲೀಸ್ ಠಾಣೆಯ ಎದುರು ಜಮಾಯಿಸಿದ್ದರು. ಇದೀಗ ಮತ್ತೆ ಅವರ ಮೇಲೆ ಕೋಟ್ಯಾಂತರ ರೂ. ಹಣ ವಂಚನೆ ಆರೋಪದಡಿ ಅವರನ್ನು ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
Published by:shrikrishna bhat
First published: