Puneeth Rajkumar: ಶಿವಣ್ಣನಿಗಾಗಿ ದೊಡ್ಡ ಕನಸು ಕಂಡಿದ್ರಂತೆ ಅಪ್ಪು, ಕೊನೆಗೂ ಅದು ನನಸಾಗಲೇ ಇಲ್ಲ!

ಶಿವಣ್ಣನ 60ನೇ ವರ್ಷದ ಜನ್ಮದಿನವನ್ನು ಹಬ್ಬದ ರೀತಿ ಆಚರಿಸೋಕೆ ಅಪ್ಪು ಕನಸು ಕಂಡಿದ್ದರಂತೆ. ಆದರೆ ಇದೀಗ ಅಪ್ಪು ಅವರು ನಮ್ಮನ್ನು ಅಗಲಿದ್ದಾರೆ. ಹೀಗಾಗಿ ಈ ಕನಸು ನನಸಾಗಲಿದೆಯೇ ಎಂದು ನೋಡಬೇಕಿದೆ.

ಪುನೀತ್ ರಾಜ್​ಕುಮಾರ್

ಪುನೀತ್ ರಾಜ್​ಕುಮಾರ್

  • Share this:
    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ (Puneeth Rajkumar) ಬಾರದೂರಿಗೆ ಪಯಣಿಸಿ ಸರಿಸುಮಾರು 8 ತಿಂಗಳುಗಳು ಕಳೆಯುತ್ತಾ ಬಂದಿದೆ. ಅಪ್ಪು ಅವರು ಬಿಟ್ಟೋಗಿರುವ ಸಾವಿರಾರು ನೆನಪುಗಳು, ಅಪ್ಪು (Appu) ಕಂಡಿದ್ದ ನೂರಾರು ಕನಸುಗಳು ಇಂದಿಗೂ ದೊಡ್ಮನೆ ಮತ್ತು ದೊಡ್ಮನೆ ಅಭಿಮಾನಿಗಳ ಕಾಡುತ್ತಿವೆ. ಅದರಲ್ಲೂ ಶಿವಣ್ಣನ (Shivaraj Kuamar) 60ನೇ ವರ್ಷದ ಜನ್ಮದಿನವನ್ನು ಹಬ್ಬದ ರೀತಿ ಆಚರಿಸೋಕೆ ಅಪ್ಪು ಕನಸು ಕಂಡಿದ್ದರಂತೆ. ಅಪ್ಪು ಕಂಡಿದ್ದ ಆ ಕನಸಿನ ಬಗ್ಗೆ ಕೇಳಿದರೆ ಕಲ್ಲು ಹೃದಯವೂ ಒಮ್ಮೆ ಕರಗುವುದು ಸತ್ಯ. ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರು ಕಂಡ ಕನಸುಗಳು, ಅದೆಷ್ಟೋ ನೆರವಿನ ಕೆಲಸಗಳು ಈಗ ಅಪ್ಪು ಅಗಲಿಕ ನಂತರ ಹೊರ ಬಂದಿವೆ. ಆದರೆ ಶಿವಣ್ಣನ ಕುರಿತು ಅಪ್ಪು ಕಂಡಿದ್ದ ಕನಸು ನನಸಾಗುತ್ತದೆಯೋ ಇಲ್ಲವೋ ಎಂದು ಕಾದು ನೋಡಬೇಕಿದೆ. ಏಕೆಂದರೆ ಮುಂದಿನ ತಿಂಗಳು ಜುಲೈ 12ಕ್ಕೆ ಶಿವಣ್ಣ 60ನೇ ವಸಂತಕ್ಕೆ ಕಾಲಿಡಲಿದ್ದಾರೆ. ಈ ವೇಳೆ ಪುನೀತ್ ಕಂಡ ಕನಸು ನನಸಾಗಲಿದೆಯೇ ಎಂದು ನೋಡಬೇಕಿದೆ.

    ಅಪ್ಪು ಕಂಡ ಕನಸು ನನಸಾಗಲಿದೆಯಾ?:

    ಅದೇ ರೀತಿ ಈಗ ದೊಡ್ಮನೆ ರಾಜಕುಮಾರ ಪುನೀತ್ ರಾಜ್ ಕುಮಾರ್ ಪ್ರೀತಿಯ ಅಣ್ಣ ಶಿವಣ್ಣನ ಬಗ್ಗೆ ಕಂಡಿದ್ದ ಕನಸ್ಸೊಂದು ಈಗ ದೊಡ್ಮನೆ ಅಭಿಮಾನಿ ಗಳ ಅಂಗಳ ಸೇರಿದ್ದು, ಅಣ್ಣಾವ್ರ ಮಕ್ಕಳು ಕನ್ನಡ ಚಿತ್ರರಂಗದಲ್ಲಿ ಮಾದರಿಯಾಗಿದ್ದಾರೆ. ಅಣ್ಣ ತಮ್ಮಂದಿರು ಇದ್ದರೆ ಇವರಂತೆ ಇರಬೇಕು ಎಂದು ಸಾಕಷ್ಟು ಸಲ ಸ್ಯಾಂಡಲ್ ವುಡ್ ಮಂದಿ ಹೇಳಿದ್ದು ಉಂಟು. ಅದರೆ ಅದ್ಯಾವ ಮಾರಿ ಕಣ್ಣು ದೊಡ್ಮನೆ ಮಕ್ಕಳ ಮೇಲೆ ಬಿತ್ತೋ ಗೊತ್ತಿಲ್ಲ.

    ದೊಡ್ಮನೆ ಕಳಶದಂತಿದ್ದ ಅಪ್ಪು ಅಭಿಮಾನಿಗಳನ್ನು ಬಿಟ್ಟು ದೇವರ ಮಡಿಲು ಸೇರಿದ್ದಾರೆ. ಅದರೆ ಅಪ್ಪು ನಮ್ಮನ್ನು ಬಿಟ್ಟು ಹೋಗುವ ಮುನ್ನ ತಮ್ಮ ಪ್ರೀತಿಯ ಅಣ್ಣ ಶಿವಣ್ಣನ 60ನೇ ಜನ್ಮದಿನವನ್ನು ಹಬ್ಬದಂತೆ ಆಚರಣೆ ಮಾಡೊಕೆ ನಿರ್ಧಾರ ಮಾಡಿದ್ರಂತೆ. ಅದರೆ ಅಪ್ಪು ಕನಸು ನನಸಾಗೊಕು ಮುನ್ನ ಪುನೀತ್ ರಾಜ್​ಕುಮಾರ್ ನಮ್ಮನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ.

    ಇದನ್ನೂ ಓದಿ: Harikathe Alla Girikathe: ಹರಿ ಕಥೆ ಅಲ್ಲ, ಗಿರಿ ಕಥೆ ಸಿನಿಮಾದ ಟ್ರೈಲರ್ ರಿಲೀಸ್, ಈ ಬಾರಿ ಭಯಂಕರ ನಗಿಸ್ತಾರಂತೆ ಶೆಟ್ರು!

    ಮುಂದಿನ ತಿಂಗಳು ಶಿವಣ್ಣ ಅವರ ಜನ್ಮದಿನ:

    ಮುಂದಿನ ತಿಂಗಳು ಜುಲೈ12ಕ್ಕೆ ಶಿವಣ್ಣ 60ನೇ ವಸಂತಕ್ಕೆ ಕಾಲಿಡಲಿದ್ದಾರೆ. ಶಿವರಾಜ್​ಕುಮಾರ್​ ಅವರ 60ನೇ ವರ್ಷದ ಹುಟ್ಟು ಹಬ್ಬವನ್ನು ಇಂಡಸ್ಟ್ರಿಯ ಎಲ್ಲಾರನ್ನೂ ಒಂದೇ ಸೂರಿನಡಿ ಸೇರಿಸಿ ಶಿವಣ್ಙ 60ನೇ ವರ್ಷದ ಹುಟ್ಟುಹಬ್ಬ ನೆನಪಿನಲ್ಲಿ ಉಳಿಯುವಂತೆ ಸಂಭ್ರಮಿಸಲು ಪುನೀತ್ ರಾಜ್ ಕುಮಾರ್  ಪ್ಲಾನ್ ಮಾಡಿದ್ರಂತೆ. ಅಲ್ಲದೆ ಈ ಕನಸಿನ ಬಗ್ಗೆ ತಮ್ಮ ಆಪ್ತ ಬಳಗದ ಬಳಿ ಹೇಳಿಕೊಂಡಿದ್ದರಂತೆ.

    ಇನ್ನು ಈ ವಿಚಾರವನ್ನು ಈಗ ಅಪ್ಪು ಆಪ್ತ ಸ್ನೇಹಿತರು ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದು, ಅಪ್ಪು ಕನಸನ್ನು ನೆನೆದು ಭಾವುಕರಾಗಿದ್ದಾರೆ‌. ರೆಬೆಲ್ ಸ್ಟಾರ್ ಅಂಬರೀಶ್ 60ನೇ ವರ್ಷಕ್ಕೆ ಕಾಲಿಟ್ಟಾಗ ಚಿತ್ರರಂಗದ ಎಲ್ಲಾರು ಮಂಡ್ಯದಲ್ಲಿ ಸೇರಿ "ಅಂಬಿ ಸಂಭ್ರಮ" ಎಂಬ ಕಾರ್ಯಕ್ರಮ ಮಾಡಿ ಅಂಬಿ 60ನೇ ಹುಟ್ಟುಹಬ್ಬ ಇಂದಿಗೂ ನೆನಯುವಂತೆ ಮಾಡಿದ್ದರು. ಅದೇ ರೀತಿ ಶಿವಣ್ಣನ 60ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಲು ಅಪ್ಪು ಕನಸು ಕಂಡಿದ್ದು, ಇದೀಗ ಬೆಳಕಿಗೆ ಬಂದಿದೆ.

    ಇದನ್ನೂ ಓದಿ: Film Certificate: ಸಿನಿಮಾ ಶುರುವಾಗುವ ಮುನ್ನ ಸರ್ಟಿಫಿಕೇಟ್ ಬರುತ್ತಲ್ಲ, ಏನದು? ಇದರ ಬಗ್ಗೆ ನಿಮಗೆಷ್ಟು ಗೊತ್ತು?

    ಈ ಬಾರಿ ಶಿವಣ್ಣನ ಜನ್ಮದಿನ ಆಚರಿಸಿಕೊಳ್ಳಲ್ವಂತೆ:

    ಆ ಕನಸು ಇನ್ನೇನು  ನನಸಾಗಬೇಕು ಅನ್ನುವಷ್ಟರಲ್ಲಿ ಕ್ರೂರ ವಿಧಿಯ ವಕ್ರ ದೃಷ್ಟಿ ಅಪ್ಪು ಮೇಲೆ ಬಿದ್ದ ಕಾರಣ ಅರಸನ ಕನಸು ಈಗ ಕನಸ್ಸಾಗೆ ಉಳಿದಿರೋದು ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಅದೇನೆ ಇರಲಿ ಅಪ್ಪು ಇಲ್ಲ ಅಂತ ಈಗ ಶಿವಣ್ಣ ಕೂಡ ಹುಟ್ಟು ಹಬ್ಬವನ್ನು ಸೆಲೆಬ್ರೇಟ್ ಮಾಡದಿರಲು ನಿರ್ಧಾರ ಮಾಡಿದ್ದಾರೆ. ಅದರೆ ಅಪ್ಪು ಹೋದ ನಂತರ ಅವರು ಕಂಡ ಕನಸನ್ನು ಅಪ್ಪು ಅಭಿಮಾನಿಗಳು ನನಸು ಮಾಡ್ತಾರ ಕಾದು ನೋಡಬೇಕಿದೆ.

    ವರದಿ: ಸತೀಶ್ ಎಂ.ಬಿ
    Published by:shrikrishna bhat
    First published: