SLV ಅಂದ್ರೆ ಶ್ರೀ ಲಕ್ಷ್ಮಿ ವೆಂಕಟೇಶ್ವರ ಅಲ್ಲ: ಸ್ಯಾಂಡಲ್​ವುಡ್​ನಲ್ಲಿ ಸಿರಿ ಲಂಬೋದರ ವಿವಾಹಕ್ಕೆ ಸಿದ್ಧತೆ..!

ಕೆಲ ದಿನಗಳ ಹಿಂದಷ್ಟೇ 'ಸಿರಿ ಲಂಬೋದರ ವಿವಾಹ' ಚಿತ್ರದ ಮುಹೂರ್ತ ಬನಶಂಕರಿಯ ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ಹಿರಿಯ ನಟ ಸಿಹಿಕಹಿ ಚಂದ್ರು ಆರಂಭ ಫಲಕ ತೋರಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್ ಕ್ಯಾಮರಾ ಚಾಲನೆ ಮಾಡಿದರು. ಮಂಡ್ಯ ರಮೇಶ್, ಮಾಸ್ಟರ್ ಆನಂದ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಎಸ್​ಎಲ್​ವಿ 'ಸಿರಿ ಲಂಬೋದರ ವಿವಾಹ' ಸಿನಿಮಾದಲ್ಲಿ ದಿಶಾ ರಮೇಶ್​, ಅವಿನಾಶ್​ ಭಾರದ್ವಾಜ್​, ಸೌರಭ್​ ಕುಲಕರ್ಣಿ, ಕಿಟ್ಟಿ ಕೌಶಿಕ್​ ಹಾಗೂ ಇತರರು ನಟಿಸಿದ್ದಾರೆ.

ಎಸ್​ಎಲ್​ವಿ 'ಸಿರಿ ಲಂಬೋದರ ವಿವಾಹ' ಸಿನಿಮಾದಲ್ಲಿ ದಿಶಾ ರಮೇಶ್​, ಅವಿನಾಶ್​ ಭಾರದ್ವಾಜ್​, ಸೌರಭ್​ ಕುಲಕರ್ಣಿ, ಕಿಟ್ಟಿ ಕೌಶಿಕ್​ ಹಾಗೂ ಇತರರು ನಟಿಸಿದ್ದಾರೆ.

  • Share this:
ಎಸ್‍ಎಲ್‍ವಿ ಹೆಸರಿನ ಹಲವು ಹೋಟೆಲ್‍ಗಳು, ಅಂಗಡಿಗಳು ಇರಲಿ ಬಾರ್​ಗಳೂ ಸಹ ಇವೆ. ಆದರೆ ಎಸ್‍ಎಲ್‍ವಿ ಹೋಟೆಲ್‍ಗಳು ಸ್ವಲ್ಪ ಹೆಚ್ಚು ಫೇಮಸ್ ಆಗಿವೆ. ಹಾಗೇ ಎಸ್‍ಎಲ್‍ವಿ ಅಂದರೆ ಶ್ರೀ ಲಕ್ಷ್ಮೀ ವೆಂಕಟೇಶ್ವರ ಅಂತ ಎಲ್ಲರೂ ಸಾಮಾನ್ಯವಾಗಿ ಗೆಸ್ ಮಾಡುತ್ತಾರೆ. ಆದರೆ ಇಲ್ಲೊಂದು ಹೊಚ್ಚ ಹೊಸ ಚಿತ್ರತಂಡ ಎಸ್‍ಎಲ್‍ವಿ ಟೈಟಲ್‍ನಲ್ಲೇ ಸಿನಿಮಾ ಮಾಡ ಹೊರಟಿದೆ. ಆದರೆ ಈ ಸಿನಿಮಾ ಹೆಸರು ಮಾತ್ರ ಶ್ರೀ ಲಕ್ಷ್ಮೀ ವೆಂಕಟೇಶ್ವರ ಅಲ್ಲ, ಬದಲಾಗಿ 'ಸಿರಿ ಲಂಬೋದರ ವಿವಾಹ' (slv siri lambodara vivaha movie). ಕನ್ನಡದ ಹೆಸರಾಂತ ನಿರೂಪಕ, ರಂಗಭೂಮಿ ಕಲಾವಿದ ಸಂಜೀವ್ ಕುಲಕರ್ಣಿ ಅವರ ಪುತ್ರ ಸೌರಭ್ ಕುಲಕರ್ಣಿ. ತಂದೆಯಂತೆಯೇ ಪುತ್ರ ಸೌರಭ್ ಕೂಡ ಬಹುಮುಖ ಪ್ರತಿಭೆ. ನಿರೂಪಕ, ರಂಗಭೂಮಿ, ಧಾರಾವಾಹಿ, ಕಿರುಚಿತ್ರ, ಆಲ್ಬಂ ಸಾಂಗ್ ಮಾಡಿದ್ದಾರೆ. ಈಗ ಸೌರಭ್ ಕುಲಕರ್ಣಿ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಅದೇ ಎಸ್‍ಎಲ್‍ವಿ, ಅರ್ಥಾತ್ ಸಿರಿ ಲಂಬೋದರ ವಿವಾಹ. ಸಂಭ್ರಮ ಸೌರಭದ ಮೂಲಕ ಮನೆ ಮಾತಾಗಿದ್ದ ಸೌರಭ್ ಈಗ ಡೈರೆಕ್ಟರ್ ಕ್ಯಾಪ್ ಧರಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಚಿತ್ರದ ಮುಹೂರ್ತ ಬನಶಂಕರಿಯ ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ಹಿರಿಯ ನಟ ಸಿಹಿಕಹಿ ಚಂದ್ರು ಆರಂಭ ಫಲಕ ತೋರಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್ ಕ್ಯಾಮರಾ ಚಾಲನೆ ಮಾಡಿದರು. ಮಂಡ್ಯ ರಮೇಶ್, ಮಾಸ್ಟರ್ ಆನಂದ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಸಿರಿ ಲಂಬೋದರ ವಿವಾಹಕ್ಕೆ ನಾಯಕಿ ನಟ ಮಂಡ್ಯ ರಮೇಶ್ ಮಗಳು ದಿಶಾ, actor mandya ramesh daughter disha plays female lead in slv siri lambodara vivaha movie, ನಟ ಮಂಡ್ಯ ರಮೇಶ್ ಅವರ ಪುತ್ರಿ ದಿಶಾ ರಮೇಶ್, ಮಂಡ್ಯ ರಮೇಶ್, ದಿಶಾ ರಮೇಶ್‌, ಎಸ್ಎಲ್‌ವಿ ಸಿರಿ ಲಂಬೋದರ ವಿವಾಹ ಸಿನಿಮಾ, slv siri lambodara vivaha movie, mandya ramesh daughter, disha ramesh, actor mandya ramesh daughter, actor mandya ramesh, Sandalwood actor Mandya Rameshs daughter Disha is the female lead in SLV Siri Lambodara Vivaha htv ae
'ಎಸ್​ಎಲ್​ವಿ ಸಿರಿ ಲಂಬೋದರ ವಿವಾಹ' ಸಿನಿಮಾದ ಮುಹೂರ್ತ ಕಾರ್ಯಕ್ರಮ


ಮುಹೂರ್ತದ ದಿನದಿಂದಲೇ 'ಎಸ್‍ಎಲ್‍ವಿ' ಚಿತ್ರದ ಮೊದಲ ಹಂತದ ಚಿತ್ರೀಕರಣ ಆರಂಭವಾಗಿದ್ದು, ಅಕ್ಟೋಬರ್ ತಿಂಗಳಲ್ಲಿ ಎರಡನೇ ಶೆಡ್ಯೂಲ್ ಶೂಟಿಂಗ್‍ಗೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ ನಿರ್ದೇಶಕ ಸೌರಭ್ ಕುಲಕರ್ಣಿ. ಇದೊಂದು ಕಮರ್ಷಿಯಲ್ ಎಂಟರ್‍ಟೈನರ್‍ನ ಕಥೆ ಹೊಂದಿರುವ ಸಿರಿ ಲಂಬೋದರ ವಿವಾಹ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಗಳನ್ನೂ ನಿರ್ದೇಶಕ ಸೌರಭ್ ಕುಲಕರ್ಣಿಯೇ ಬರೆದಿದ್ದಾರೆ. ಈಗಾಗಲೇ ಅನೇಕ ಚಿತ್ರಗಳಲ್ಲಿ ನಟಿಸಿರುವ ಅಂಜನ್ ಎ. ಭಾರದ್ವಾಜ್ ಎಸ್‍ಎಲ್‍ವಿ ಚಿತ್ರದ ಮೂಲಕ ನಾಯಕನಾಗಿ ಡೆಬ್ಯೂ ಮಾಡುತ್ತಿದ್ದಾರೆ.

ಇದನ್ನೂ ಓದಿ: Rashmika Mandanna: ವೈರಲ್ ಆಗುತ್ತಿದೆ ರಶ್ಮಿಕಾರ ಮತ್ತೊಂದು ಚುಂಬನದ ಚಿತ್ರ..!

ಸ್ಯಾಂಡಲ್​ವುಡ್​ನ ಹಿರಿಯ ನಟ ಮಂಡ್ಯ ರಮೇಶ್ ಪುತ್ರಿ ದಿಶಾ ರಮೇಶ್ ಈ ಸಿನಿಮಾದ ಮೂಲಕ ರೀಎಂಟ್ರಿ ಕೊಡುತ್ತಿದ್ದಾರೆ. ರಾಜೇಶ್ ನಟರಂಗ, ಸುಂದರ್ ವೀಣಾ, ಬಾಲ ರಾಜವಾಡಿ, ರೋಹಿತ್ ನಾಗೇಶ್, ಶಬರಿ ಮಂಜು, ಹರೀಶ್ ಪ್ರಭಾತ್, ಶಿವಕುಮಾರ್, ಪಿಡಿ ಸತೀಶ್ ಚಂದ್ರ, ಗಿರೀಶ್ ಜತ್ತಿ, ಸಂತೋಷ್ ಕರ್ಕಿ, ಅಶೋಕ್ ಸೇರಿದಂತೆ ಮುಂತಾದವರು ಸಿರಿ ಲಂಬೋದರ ವಿವಾಹದಲ್ಲಿ ಪ್ರಮುಖ ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ: Bigg Boss Kannada Season 8: ದಿವ್ಯಾ ಸುರೇಶ್​ ಮನೆಯಲ್ಲಿ ವಿಶೇಷ ಭೋಜನ ಸವಿದ ಮಂಜು ಪಾವಗಡ

ವಸ್ರ್ಯಾಟೋ ವೆಂಚುರ್ಸ್, ಪವಮಾನ ಕ್ರಿಯೇಷನ್ಸ್ ಹಾಗೂ ಧೂಪದ ದೃಶ್ಯ ಬ್ಯಾನರ್​ಗಳ ಅಡಿಯಲ್ಲಿ ಈ ಸಿನಿಮಾ ನಿರ್ಮಿಸಲಾಗುತ್ತಿದೆ. ಜೊತೆಗೆ ಹಲವು ಪರಿಚಿತರು, ಆಪ್ತರೂ ಕೂಡ ಸಿನಿಮಾ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು ಸಂಘರ್ಷ್ ಕುಮಾರ್ ಎಸ್‍ಎಲ್‍ವಿ ಚಿತ್ರದ ಮೂಲಕ ಸಂಗೀತ ನಿರ್ದೇಶಕನಾಗಿ ಸ್ಯಾಂಡಲ್‍ವುಡ್ ಡೆಬ್ಯೂ ಮಾಡುತ್ತಿದ್ದಾರೆ. ಮೂರು ಫೈಟ್‍ಗಳಿದ್ದು ಸ್ಟಂಟ್ ವಿನೋದ್ ಸಾಹಸ ನಿರ್ದೇಶನದಲ್ಲಿ ಮೂಡಿ ಬರಲಿವೆ. ಕಿಟ್ಟಿ ಕೌಶಿಕ್ ಛಾಯಾಗ್ರಹಣ, ದೇವಿಪ್ರಕಾಶ್ ಕಲಾ ನಿರ್ದೇಶನ ಹಾಗೂ ಕಂಬಿ ರಾಜು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
Published by:Anitha E
First published: