ಹರೆಯದಲ್ಲೇ 90ರ ಮುದುಕನಾಗಿ12 ಕೆಜಿ ತೂಕ ಇಳಿಸಿಕೊಂಡ ಚಂದನವನದ ಆ ನಟ ಯಾರು?

news18
Updated:July 26, 2018, 4:59 PM IST
ಹರೆಯದಲ್ಲೇ 90ರ ಮುದುಕನಾಗಿ12 ಕೆಜಿ ತೂಕ ಇಳಿಸಿಕೊಂಡ ಚಂದನವನದ ಆ ನಟ ಯಾರು?
Madhu Guruswamy
news18
Updated: July 26, 2018, 4:59 PM IST
ಆನಂದ್ ಸಾಲುಂಡಿ, ನ್ಯೂಸ್ 18 ಕನ್ನಡ

ಕನ್ನಡದ ಒಬ್ಬ ನಟ ಈಗಾಗಲೇ 8 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಆ ನಟ ನಿಮ್ಮ ಮುಂದೆ ಬಂದು ನಿಂತರೂ ನೀವು ಆ ನಟನನ್ನ ಗುರುತು ಹಿಡಿಯೋದು ಕಷ್ಟ. ಹಾಗಂತ ಯಾರು ಗುರುತೇ ಹಿಡಿಯದಂತಹ ಸಣ್ಣಪುಟ್ಟ ಪಾತ್ರದಲ್ಲಿ ಆ ನಟ ಕಾಣಿಸಿಕೊಂಡಿದ್ದಾರೆ ಅಂತ ನೀವು ಅಂದುಕೊಳ್ಳಬೇಡಿ. ಆ ನಟ ಕಾಣಿಸಿಕೊಂಡಿರೋ ಅಷ್ಟು ಪಾತ್ರಗಳಿಗೂ ಒಂದು ತೂಕವಿದೆ. ಹಾಗಿದ್ದರೂ ಯಾರಿಗೂ ಗೊತ್ತೇ ಆಗದ ಆ ವಿಶೇಷ ಪ್ರತಿಭೆ ಯಾರು ಅಂತೀರಾ?ಈ ವರದಿ ಓದಿ ನಿಮಗೆ ತಿಳಿಯುತ್ತೆ...

ಇದು 'ಭಜರಂಗಿ' ಸಿನಿಮಾದ ವಿಲನ್‍ನನ್ನು ನೀವು ಇಷ್ಟಪಟ್ಟಿರುತ್ತೀರಿ. ಅಂದಹಾಗೆ ಆ ಪಾತ್ರ ಮಾಡಿರೋದು ಮಧು ಗುರುಸ್ವಾಮಿ ಎಂಬ ನಟ. ಈ ಪಾತ್ರ ಮಾಡುವಾಗ ಅವರಿ ಗೆ ಕೇವಲ 26ರ ವಯಸ್ಸು. ಆದ್ರೂ 90ರ ಇಳಿವಯಸ್ಸಿನ ಪಾತ್ರವನ್ನ ಅವರು ನಿರ್ವಹಿಸಿದ್ದರು. ಅದಕ್ಕಾಗಿ 104 ಕೆಜಿ ತೂಕ ಇದ್ದ ಮಧು, 12 ಕೆಜಿ ತೂಕ ಇಳಿಸಿಕೊಂಡಿದ್ದರು.

ನಂತರ 'ವಜ್ರಕಾಯ'ನಿಗಾಗಿ 22 ಕೆಜಿ ತೂಕ ಹೆಚ್ಚಿಸಿಕೊಂಡು ದಪ್ಪ ಆಗಿದ್ದರು. ಇನ್ನು ಅವರ ಲುಕ್ಕು-ಗೆಟಪ್ ಸಹ ಬದಲಾಗಿತ್ತು. ಇಲ್ಲಿ ನಾಯಕ ತಾತ ಹುಜೂರ್ ಪಾತ್ರದಲ್ಲಿ ಮಧು ಕಾಣಿಸಿಕೊಂಡಿದ್ದರು. ಚಿತ್ರ ನೋಡಿದವರು ಇದು ಯಾರೋ ಪರಭಾಷೆಯ ನಟ ಇರಬೇಕು ಎಂದುಕೊಳ್ಳುವಷ್ಟರ ಮಟ್ಟಿಗೆ 'ಭಜರಂಗಿ' ಪಾತ್ರಕ್ಕೂ, ಹುಜೂರ್ ಪಾತ್ರಕ್ಕೂ ವ್ಯತ್ಯಾಸ ಇತ್ತು.

'ಜೈ ಮಾರುತಿ' ಸಿನಿಮಾ ಮೂಲಕ 4ನೇ ಬಾರಿಗೆ ಭಜರಂಗಿ ಹರ್ಷನ ಚಿತ್ರದಲ್ಲಿ ನಟಿಸೋ ಅವಕಾಶ ಪಡೆದ ಮಧು, ಮತ್ತೆ ತಮ್ಮನ್ನ ತಾವು ಪ್ರಯೋಗಕ್ಕೆ ಒಡ್ಡಿಕೊಂಡರು. 114 ಕೆಜಿ ಇದ್ದ ತೂಕಕ್ಕೆ ಮತ್ತೆ 24 ಕೆಜಿ ಸೇರಿಸಿಕೊಂಡು 138 ಕೆಜಿಯ ದಢೂತಿ ದೇಹದವನ್ನಾಗಿ ಮಾರ್ಪಾಡಾದರು. ಅಲ್ಲಿಯವರೆಗೂ ಖಡಕ್ ವಿಲನ್ ಆಗಿದ್ದ ಮಧು ಮಾರುತಿಯಲ್ಲಿ ಸಖತ್ ನಗು ತರಿಸಿದ್ದರು.

ಹೀಗೆ ಚಿತ್ರದಿಂದ ಚಿತ್ರಕ್ಕೆ, ಪಾತ್ರದಿಂದ ಪಾತ್ರಕ್ಕೆ ಬೇರೆ ಬೇರೆ ರೀತಿ ತನ್ನನ್ನು ತಾನು ಮಾರ್ಪಾಡುಗೊಳಿಸಿಕೊಳ್ಳುವ ಮಧು ಗುರುಸ್ವಾಮಿ ಈಗ ಟಾಲಿವುಡ್‍ಗೆ ಕಾಲಿಟ್ಟಿದ್ದಾರೆ. 'ಸಾಕ್ಷ್ಯಂ' ಎಂಬ ಚಿತ್ರದಲ್ಲಿ ಪ್ರಾಮಿನೆಂಟ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನಷ್ಟೇ ಈ ಚಿತ್ರ ಬಿಡುಗಡೆಯಾಗಬೇಕಿದ್ದು, ಈಗಲೇ ಮಧು ಗುರುಸ್ವಾಮಿ ಬಗ್ಗೆ ಟಾಲಿವುಡ್‍ನಲ್ಲೊಂದು ಟಾಕ್ ಕ್ರಿಯೇಟ್ ಆಗಿದೆ. ಇದಕ್ಕೆ ಸಾಕ್ಷಿ ಘಟಾನುಘಟಿಗಳ ಎದುರು 'ಸಾಕ್ಷ್ಯಂ' ನಿರ್ದೇಶಕ ಶ್ರೀವಾಸ್, ಮಧು ಪಾತ್ರವನ್ನ ಹೊಗಳಿರೋದು.

ಒಟ್ಟಾರೆ ಕನ್ನಡದಲ್ಲಿ ವಿಲನ್‍ಗಳ ಕೊರತೆ ಇದೆ ಅಂತ ಪರಭಾಷೆಯಿಂದ ನಟರನ್ನ ಕರೆಸಿಕೊಳ್ಳುತ್ತಿರುವ ಹೊತ್ತಲ್ಲೇ ಕನ್ನಡದ ಪ್ರತಿಭೆಯೊಂದು, ರಾಜ್ಯದ ಗಡಿ ದಾಟಿ ಟಾಲಿವುಡ್​ಗೆ ಹೋಗಿರೋದು ಹೆಮ್ಮೆಯ ವಿಷಯವೇ ಸರಿ.
Loading...

 

 

 
First published:July 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ