Kiran Raj: ಕಿರಣ್ ರಾಜ್ ‘ಬಡ್ಡೀಸ್‘ ಚಿತ್ರಕ್ಕೆ ವಿಘ್ನ, ದೃಷ್ಟಿ ಜಾಸ್ತಿ ಆಗಿರಬೇಕು ಅನ್ಸುತ್ತೆ ಎಂದ ನಟ

ಕಿರಣ್ ರಾಜ್ ಬಡ್ಡೀಸ್ ಚಿತ್ರದ ಪ್ರಮೋಷನ್​ ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇದರ ಸಲುವಾಗಿ ಉತ್ತರ ಕರ್ನಾಟಕದ ಭಾಗಗಳಲ್ಲಿ ಚಿತ್ರದ ಪ್ರಚಾರ ಕಾರ್ಯ ನಡೆಯುತ್ತಿದೆ. ಆದರೆ ಪ್ರಚಾರ ಕಾರ್ಯಕ್ಕೆ ತೆರಳುತ್ತಿದ್ದಾಗ ಅವಘಡವೊಂದು ಉಂಟಾಗಿದೆ.

ಕಿರಣ್ ರಾಜ್

ಕಿರಣ್ ರಾಜ್

  • Share this:
ಕಿರುತೆರೆ (Small Screen) ಲೋಕದಲ್ಲಿ ತಮ್ಮದೇ ಅದ ಛಾಪು ಮೂಡಿಸಿರುವ ‘ಕನ್ನಡತಿ’ ಧಾರಾವಾಹಿ (Kannadathi Serial) ಖ್ಯಾತಿಯ ಕಿರಣ್ ರಾಜ್ (Kiran Raj) ಅಭಿನಯದ ಮೊದಲ ಚಿತ್ರ ‘ಬಡ್ಡೀಸ್‘ (Buddies) ಚಿತ್ರವು ಇದೇ ಜೂನ್ 24ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಹೀಗಾಗಿ ಸದ್ಯ ಕಿರಣ್ ರಾಜ್ ಬಡ್ಡೀಸ್ ಚಿತ್ರದ ಪ್ರಮೋಷನ್​ ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇದರ ಸಲುವಾಗಿ ಉತ್ತರ ಕರ್ನಾಟಕದ ಭಾಗಗಳಲ್ಲಿ ಚಿತ್ರದ ಪ್ರಚಾರ ಕಾರ್ಯ ನಡೆಯುತ್ತಿದೆ. ಆದರೆ ಚಿತ್ರತಂಡಕ್ಕೆ ಇಂದು ವಿಘ್ನ ಒಂದು ಉಂಟಾಗಿದ್ದು, ಪ್ರಚಾರ ಕಾರ್ಯಕ್ಕೆ ತೆರಳುತ್ತಿದ್ದಾಗ ಅವಘಡವೊಂದು ಉಂಟಾಗಿರುವುದಾಗಿ ಮಾಹಿತಿ ನೀಡಿದ್ದಾರೆ.

ದೃಷ್ಟಿ ಜಾಸ್ತಿನೆ ಆಗಿರಬೇಕು ಅನ್ಸುತ್ತೆ ಎಂದ ಕಿರಣ್ ರಾಜ್:

ಇನ್ನು, ಅವಘಡದ ಕುರಿತು ಇನ್ಸ್ಟಾಗ್ರಾಂ ಮೂಲಕ ಮಾಹಿತಿ ನೀಡಿರುವ ನಟ ಕಿರಣ್ ರಾಜ್, ‘ಹಾಯ್ ಎಲ್ಲರಿಗೂ ನಮಸ್ಕಾರ, ಈ ದಿನ ಇಷ್ಟು ಕಾಲೇಜ್ ಗಳಿಗೆ ಹೋಗುವುದಿತ್ತು, ಬಹುಶಃ ದೃಷ್ಟಿ ಜಾಸ್ತಿನೆ ಆಗಿರಬೇಕು ಅನ್ಸುತ್ತೆ, ಹಾಗಾಗಿ ಈ ತರ ಅನಿರೀಕ್ಷಿತ ಘಟನೆ ಸಂಭವಿಸಿದ ಕಾರಣ, ಕೊನೆ ಕ್ಷಣದಲ್ಲಿ ನಮ್ಮ ಪ್ಲಾನ್ ಚೆಂಜ್ ಮಾಡಬೇಕಾಯಿತು. ದೇವರ ದಯೆಯಿಂದ ಟೀಮ್ ಅವರಿಗೆ ಯಾವುದೆ ಹಾನಿಯಾಗಿಲ್ಲ, ಎಲ್ಲರೂ ಆರಾಮಾಗಿ ಇದ್ದಾರೆ. ಸಿನಿಮಾ ಬಿಡುಗಡೆಯ ನಂತರ theater Visit ಗೆ ಬಂದಾಗ ತಮ್ಮೆಲ್ಲರನ್ನೂ ಖಂಡಿತ ಮಿಸ್ ಮಾಡ್ದೆ ಮೀಟ್ ಮಾಡ್ತೀವಿ ದಯಮಾಡಿ ಕ್ಷಮೆ ಇರಲಿ, ನಿಮ್ಮ ಪ್ರೀತಿ ವಿಶ್ವಾಸ ಸದಾ ನಮ್ಮ ಮೇಲಿರಲಿ, ಮಿಸ್ ಮಾಡದೆ ಸಿನಿಮಾ ನೋಡಿ ಹರಸಿ ಹಾರೈಸಿ ಲವ್ ಯೂ‘ ಎಂದು ಬರೆದುಕೊಂಡಿದ್ದಾರೆ.


View this post on Instagram


A post shared by Kiran Raj (@itskiranraj)


ಅವಘಡದಲ್ಲಿ ಚಿತ್ರತಂಡ ಬಚಾವ್​:

ಇನ್ನು, ಬಡ್ಡೀಸ್ ಚಿತ್ರದ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಅದರ ಭಾಗವಾಗಿ ಚಿತ್ರತಂಡ ಬೆಳಗಾವಿ ಕಾಲೇಗ್​ ಗಳಿಗೆ ಹೋಗಬೇಕಿತ್ತು. ಆದರೆ ಬಡ್ಡೀಸ್ ಚಿತ್ರತಂಡ ತೆರಳುತ್ತಿದ್ದ ವಾಹನದ ಮೇಲೆ ವಿದ್ಯುತ್ ಕಂಬ ಬಿದ್ದಿದ್ದೆ. ಆದರೆ ಈ ಅವಘಡದಲ್ಲಿ ಯಾವುದೇ ರೀತಿಯ ಅಪಾಯ ಆಗಲಿಲ್ಲ ಎಂದು ಚಿತ್ರತಂಡ ತಿಳಿಸಿದೆ. ಹೀಗಾಗಿ ಚಿತ್ರದ ಕಾರ್ಯಕ್ರಮ ರದ್ದಾಗಿದೆ. ಇದಕ್ಕೆ ನಟ ಕಿರಣ್ ರಾಜ್ ಅಭಿಮಾನಿಗಳ ಬಳಿ ಸಾಮಾಜಿಕ ಜಾಲತಾಣದ ಮೂಲಕ ಕ್ಷಮೆ ಕೇಳಿದ್ದಾರೆ.

ಇದನ್ನೂ ಓದಿ: Prabhas: ದೀಪಿಕಾ ಮೇಲೆ ಅಸಮಾಧಾನಗೊಂಡ ಪ್ರಭಾಸ್, ರೂಮರ್ಸ್​ಗಳ ಬಗ್ಗೆ ಸ್ಪಷ್ಟನೆ ನೀಡಿದ ಅಶ್ವಿನಿದತ್

ದೊಡ್ಡ ತಾರಾಬಳಗದ ಚಿತ್ರ ‘ಬಡ್ಡೀಸ್‘:

ನಟ ಕಿರಣ್ ರಾಜ್ ಅಬಿನಯದ ಮೊದಲ ಸಿನಿಮಾ ‘ಬಡ್ಡೀಸ್‘ ಚಿತ್ರವು ಇದೇ ಜೂನ್ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಮಂಗಳೂರು ಮೂಲದ ಭಾರತಿ ಶೆಟ್ಟಿ ಅವರು ತಮ್ಮ 'ಭಾರತಿ ಶೆಟ್ಟಿ ಫಿಲಂಸ್' ಬ್ಯಾನರ್ ಅಡಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಬಡ್ಡೀಸ್ ಸಿನಿಮಾವನ್ನು ಗುರುತೇಜ್ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಜುಡಾ ಸ್ಯಾಂಡಿ ಸಂಗೀತ ನೀಡುತ್ತಿದ್ದಾರೆ.

ಇದನ್ನೂ ಓದಿ: Salman Khan: 10 ನಟಿಯರ ಜೊತೆ ಹೆಜ್ಜೆ ಹಾಕಲಿದ್ದಾರೆ ಸಲ್ಮಾನ್ ಖಾನ್, ಏನಿದು ಸಲ್ಲು ಹೊಸ ಅವತಾರ

ಅಮೆರಿಕದಲ್ಲಿ ನೆಲೆಸಿರುವ ನಿಭಾ ಶೆಟ್ಟಿ‌ ಸಿನಿಮೆಟೊಗ್ರಫಿ ಹೊಣೆ ಹೊತ್ತುಕೊಂಡಿದ್ದು, ವಿಶೇಷವಾಗಿದೆ. ಕಿರಣ್ ರಾಜ್ ಅವರಿಗೆ ನಾಯಕಿಯಾಗಿ ಸಿರಿ ಪ್ರಹ್ಲಾದ್ ಅಭಿನಯಿಸುತ್ತಿದ್ದಾರೆ. ಗೋಪಾಲ್ ದೇಶಪಾಂಡೆ, ಅರವಿಂದ್ ಬೋಳಾರ್, ವಿನಯ್ ರೋಹನ್ ಸಾಯಿ, ಗಿರೀಶ್ ಮುಂತಾದವರು ಸಿನಿಮಾದ ತಾರಾಗಣದಲ್ಲಿದ್ದಾರೆ.
Published by:shrikrishna bhat
First published: