Vikrant Rona: ಕಿಚ್ಚನ ಅಭಿಮಾನಿಗಳಿಗೆ ಸಂತಸದ ಸುದ್ದಿ, NFT ಗೆ ಎಂಟ್ರಿ ಕೊಟ್ಟ ವಿಕ್ರಾಂತ್​ ರೋಣ

ವಿಶ್ವದಾದ್ಯಂತ ಸದ್ಯ ಹೆಚ್ಚು ಚಾಲ್ತಿಯಲ್ಲಿರುವ NFT ಅನ್ನು ವಿಕ್ರಾಂತ್ ರೋಣ ಚಿತ್ರದಲ್ಲಿಯೂ ಅಳವಡಿಸಿಕೊಳ್ಳಲು ಚಿತ್ರತಂಡ ಮುಂದಾಗಿದ್ದು, ವಿಶ್ವದಲ್ಲಿಯೇ ಯಾರೂ ಮಾಡದ ಆ ಒಂದು ಕೆಲಸವನ್ನು ಚಿತ್ರತಂಡ ಮಾಡಿದೆ.

ವಿಕ್ರಾಂತ್ ರೋಣ

ವಿಕ್ರಾಂತ್ ರೋಣ

  • Share this:
ಸ್ಯಾಂಡಲ್​ವುಡ್​ನ ಕಿಚ್ಚ ಸುದೀಪ್ (Kiccha Sudeep) ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್​ ರೋಣ (Vikrant Rona)​ ಸಿನಿಮಾದ ಟ್ರೈಲರ್ (Trailer)​ ಈಗಾಗಲೇ ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ನಡುವೆ ಚಿತ್ರತಂಡ ದೇಶದಾದ್ಯಂತ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದೆ. ಇದೀಗ ವಿಶ್ವದಾದ್ಯಂತ ಸದ್ಯ ಹೆಚ್ಚು ಚಾಲ್ತಿಯಲ್ಲಿರುವ NFT ಅನ್ನು ವಿಕ್ರಾಂತ್ ರೋಣ ಚಿತ್ರದಲ್ಲಿಯೂ ಅಳವಡಿಸಿಕೊಳ್ಳಲು ಚಿತ್ರತಂಡ ಮುಂದಾಗಿದೆ. ಹೌದು, ಈಗಾಗಲೇ ಕನ್ನಡದ KGF 2 ಚಿತ್ರದಲ್ಲಿ NFT ಅನ್ನು ಬಳಸಿಕೊಳ್ಳಲಾಗಿತ್ತು. ಇದೀಗ ವಿಕ್ರಾಂತ್ ರೊಣ ಚಿತ್ರದಲ್ಲಿಯೂ ಇದನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ಇಲ್ಲಿ ಸ್ವಲ್ಪ ವಿಭಿನ್ನವಾಗಿ NFT ಅನ್ನು ಬಳಸಲು ಚಿತ್ರತಂಡ ನಿರ್ಧರಿಸಿದ್ದು, ಪ್ರೀಮಿಯರ್ ಟಿಕೆಟ್‌ ಮತ್ತು ಸದಸ್ಯತ್ವವನ್ನು ನೀಡಲು ಮುಂದಾಗಿದೆ. NFT ಮೂಲಕ ಟಿಕೆಟ್‌ ನೀಡುವ ಈ ವಿನೂತನ ಪ್ರಯತ್ನ ವಿಶ್ವದಲ್ಲಿಯೇ ಮೊದಲು ಎನ್ನಲಾಗಿದೆ.

NFT ಮೂಲಕ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ ಕಿಚ್ಚ:

ಹೌದು, ಈಗಾಗಲೇ ವಿಕ್ರಾಂತ್ ರೋಣ ಚಿತ್ರದ ಮೇಲೆ ನಿರೀಕ್ಷಗಳು ಹೆಚ್ಚಿದ್ದು, ಇದೀಗ ಆ ನಿರೀಕ್ಷೆಯನ್ನು ಚಿತ್ರತಂಡ ದುಪ್ಪಟ್ಟು ಮಾಡಿದೆ. ವಿಕ್ರಾಂತ್ ರೋಣ ಸಿನಿಮಾದ NFT ಪ್ರೀಮಿಯರ್ ಟಿಕೆಟ್ ಮತ್ತು ಮೆಂಬರ್‌ಶಿಪ್ ಗೆ ಚಿತ್ರತಂಡ ಚಾಲನೆ ನೀಡಿದೆ. ಈ ಪ್ರಯತ್ನಕ್ಕೆ ಕೈ ಹಾಕಿದ ವಿಶ್ವ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ವಿಕ್ರಾಂತ್ ರೋಣ ಭಾಜನವಾಗಿದೆ. ಇನ್ನು, NFT ಮೆಂಬರ್‌ಶಿಪ್‌ಗಳಲ್ಲಿ ಸಿಲ್ವರ್, ಗೋಲ್ಡ್, ಪ್ಲಾಟಿನಂ ಹಾಗೂ ಡೈಮಂಡ್ NFT ಗಳಿವೆ. ಇವುಗಳು ಹೇಗಿರುತ್ತವೆ ಅಂದರೆ, ನೀವು NFT ಅನ್ನು ಪಡೆದಲ್ಲಿ ಪ್ರೀಮಿಯರ್ ವೇಳೆ ರೆಡ್-ಕಾರ್ಪೆಟ್‌ ಎಂಟ್ರಿ, ಸಿನಿಮಾದ NFT ಲೋಗೊ, ವಿಶೇಷವಾದ ಪಾರ್ಟಿ ಆಹ್ವಾನ ಮತ್ತು   ನಟರೊಂದಿಗೆ ಫೋಟೊ ಎಲ್ಲವೂ ದೊರಕಲಿದೆ.

ದೊಡ್ಡದಾಗಿಯೇ ಪ್ಯಾನ್ ಮಾಡಿದ್ದೇವೆ:

ಇನ್ನು, NFT ಗೆ ಚಾಲನೆ ನೀಡಿ ಮಾತನಾಡಿದ ಕಿಚ್ಚ ಸುದೀಪ್, ‘ವಿಕ್ರಾಂತ್ ರೋಣ ಒಂದು ಪ್ಯಾನ್ ಇಂಡಿಯಾ ಲೆವಲ್​ ನಲ್ಲಿ ಮೂಡಿಬರುತ್ತಿರುವ ದೊಡ್ಡ ಸಿನಿಮಾ. ಹೀಗಾಗಿ ಈ ಸಿನಿಮಾಗೆ ವಿಶ್ವದ ಮೊದಲ NFT ಪ್ರೀಮಿಯರ್ ಸದಸ್ಯತ್ವ ನೀಡಿದ್ದೇವೆ. ಇದು ಅಭಿಮಾನಿಗಳಿಗೆ ಸಂತಸ ತರುವುದಂತೂ ಖಂಡಿತ. ಇದರಿಂದಾಗಿ ಈ ಅನುಭವವನ್ನು ಅಭಿಮಾನಿಗಳು ಹೆಚ್ಚು ಸಮಯ ನೆನಪಿನಲ್ಲಿ ಇಟ್ಟಿಕೊಳ್ಳಬೇಕು ಎಂಬುವುದು ನನ್ನ ಬಯಕೆ‘ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Adah Sharma: ತರಕಾರಿ ಮಾರುತ್ತಾಳೆ, ಎಲೆಯಲ್ಲೇ ಮೈ ಮುಚ್ಚಿಕೊಂಡಿದ್ದಾಳೆ! ಪುನೀತ್ ಜೊತೆ ನಟಿಸಿದ್ದ ಈ ನಟಿಗೆ ಅದೇನಾಯ್ತಪ್ಪಾ?

13 ವರ್ಷಗಳ ನಂತರ ಸುದೀಪ್ ದೆಹಲಿಗೆ ಬೇಟಿ:

ಸುದೀಪ್ ವಿಕ್ರಾಂತ್ ರೋಣ ಸಿನಿಮಾದ ಪ್ರಚಾರಕ್ಕಾಗಿ ದೆಹಲಿಗೆ ತೆರಳಿದ್ದಾರೆ. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಿದ್ದಾರೆ. ಇದಲ್ಲದೇ ಸುದೀಪ್ ದೆಹಲಿಯ ಇಂಡಿಯಾ ಗೇಟ್ ಗೂ ಭೇಟಿ ಕೊಟ್ಟಿದ್ದು, ಉತ್ತರ ಭಾರತದಾದ್ಯಂತ ವಿಕ್ರಾಂತ್ ರೋಣ ಸಿನಿಮಾ ಪ್ರಚಾರ ಮಾಡಲಿದ್ದಾರಂತೆ. ಕೆಜಿಎಪ್ ಬಳಿಕ ಕನ್ನಡ‌ ಚಿತ್ರರಂಗದಿಂದ ಬರುತ್ತಿರೋ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಚಿತ್ರವಾಗಿದ್ದು, ಅನೂಪ್ ಭಂಡಾರಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ.ಚಿತ್ರವು ಜುಲೈ 28 ಕ್ಕೆ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.

ಇದನ್ನೂ ಓದಿ: Kiccha Sudeep: ವಿಕ್ರಾಂತ್​ ರೋಣ ಚಿತ್ರಕ್ಕಾಗಿ ದೆಹಲಿಗೆ ತೆರಳಿದ ಸುದೀಪ್, ಕುತೂಹಲ ಮೂಡಿಸಿದ ಕಿಚ್ಚನ ನಡೆ

ಜುಲೈ 28ಕ್ಕೆ ಸಿನಿಮಾ ರಿಲೀಸ್​:

ವಿಕ್ರಾಂತ್ ರೋಣ ಈ ಸಿನಿಮಾವನ್ನು ಅನೂಪ್ ಭಂಡಾರಿಯವರು ನಿರ್ದೇಶನ ಮಾಡುತ್ತಿದ್ದು ಈಗಾಗಲೇ ಈ ಚಿತ್ರದ ರಾ ರಾ ರಕ್ಕಮ್ಮ ಹಾಡು ಹಾಗೂ ಟ್ರೈಲರ್ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಜುಲೈ 28ಕ್ಕೆ ಈ ಸಿನಿಮಾ ಬಿಡುಗಡೆಯಾಗುತ್ತಿದ್ದು, ಕಿಚ್ಚನ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಇದಲ್ಲದೇ ಇಂದು ಬಿಡುಗಡೆ ಆದ ಸಾಂಗ್​ ನೋಡಿದ ಮೇಲೆ ಪ್ರೇಕ್ಷಕರಲ್ಲಿ ಮತ್ತಷ್ಟು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ.
Published by:shrikrishna bhat
First published: