• Home
  • »
  • News
  • »
  • entertainment
  • »
  • Vikrant Rona: ದೇಶಾದ್ಯಂತ ಅಬ್ಬರಿಸಲು ಸಜ್ಜಾಗಿದ್ದಾನೆ 'ವಿಕ್ರಾಂತ್ ರೋಣ, ಎಷ್ಟು ಸ್ಕ್ರೀನ್‌ಗಳಲ್ಲಿ ಗುಮ್ಮನ ಆಗಮನ?

Vikrant Rona: ದೇಶಾದ್ಯಂತ ಅಬ್ಬರಿಸಲು ಸಜ್ಜಾಗಿದ್ದಾನೆ 'ವಿಕ್ರಾಂತ್ ರೋಣ, ಎಷ್ಟು ಸ್ಕ್ರೀನ್‌ಗಳಲ್ಲಿ ಗುಮ್ಮನ ಆಗಮನ?

ವಿಕ್ರಾಂತ್ ರೋಣ

ವಿಕ್ರಾಂತ್ ರೋಣ

 'ವಿಕ್ರಾಂತ್ ರೋಣ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ತೆರೆಕಾಣುತ್ತಿರುವ ಕನ್ನಡದ ಸಿನಿಮಾ. ಹೀಗಾಗಿ ಈ ಸಿನಿಮಾ ದೇಶದಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

  • Share this:

ಸ್ಯಾಂಡಲ್​ವುಡ್​ನ ಕಿಚ್ಚ ಸುದೀಪ್ (Kiccha Sudeep) ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್​ ರೋಣ (Vikrant Rona)​ ಸಿನಿಮಾದ ಟ್ರೈಲರ್ (Trailer)​ ಈಗಾಗಲೇ ಬಿಡುಗಡೆ ಆಗಿದ್ದು, ಎಲ್ಲಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ನಡುವೆ ಚಿತ್ರತಂಡ ದೇಶದಾದ್ಯಂತ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದು,  ಚಿತ್ರದಲ್ಲಿ NFT ಅನ್ನು ಅಳವಡಿಸಿಕೊಳ್ಳಲು ಚಿತ್ರತಂಡ ಮುಂದಾಗಿದೆ. ಇದರ ನಡುವೆ ಇದೀಗ ಚಿತ್ರ ದೇಶದಾದ್ಯಂತೆ ಜುಲೈ 28ಕ್ಕೆ ರಿಲೀಸ್ ಆಗಲಿದೆ. ಆದರೆ ಎಷ್ಟು ಸ್ಕ್ರೀನ್​ ಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎಂಬ ಪ್ರಶ್ನೆ ಕಿಚ್ಚನ ಅಭಿಮಾನಿಗಳಲ್ಲಿ (Fans) ಮನೆ ಮಾಡಿದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.


3500 ಸ್ಕ್ರೀನ್​ ಗಳಲ್ಲಿ ಗುಮ್ಮನ ಅಬ್ಬರ:


ಹೌದು, 'ವಿಕ್ರಾಂತ್ ರೋಣ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ತೆರೆಕಾಣುತ್ತಿರುವ ಕನ್ನಡದ ಸಿನಿಮಾ. ಹೀಗಾಗಿ ಈ ಸಿನಿಮಾ ದೇಶದಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಒಂದು ಮಾಹಿತಿ ಪ್ರಕಾರ ಚಿತ್ರವು ಈವರೆಗಿನ ಲೆಕ್ಕಾಚಾರದ ಪ್ರಕಾರ ಬರೋಬ್ಬರಿ 3500 ಸ್ಕ್ರೀನ್‌ ಗಳಲ್ಲಿ ತೆರೆಕಾಣಲಿದೆ. ಇದು ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆಯೂ ಇದೆ. ಏಕೆಂದರೆ ಚಿತ್ರ ಬಿಡುಗಡೆಗೆ ಇನ್ನೂ 5 ದಿನಗಳು ಬಾಕಿ ಇರುವ ಕಾರಣ ಸ್ಕ್ರೀನ್‌ ಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಚಿತ್ರತಂಡ ತಿಳಿಸಿದೆ. ಅಲ್ಲದೇ ವಿಕ್ರಾಂತ್ ರೋಣ ಚಿತ್ರ ಕರ್ನಾಟಕದಲ್ಲಿ 450 ಸ್ಕ್ರೀನ್‌ ಗಳಲ್ಲಿ ತೆರೆಕಾಣಲಿದೆ ಎಂದು ಹೇಳಲಾಗಿದೆ.


ಎಷ್ಟು ಸ್ಕ್ರೀನ್‌ ಗಳಲ್ಲಿ ವಿಕ್ರಾಂತ್ ರೋಣನ ಬಿಡುಗಡೆ:


ಇನ್ನು, ಕೆಲ ಅಂಕಿಅಂಶದ ಪ್ರಕಾರ ಒಟ್ಟು 3500 ಸ್ಕ್ರೀನ್‌ ಗಳಲ್ಲಿ ಚಿತ್ರ ತೆರೆಕಾಣುತ್ತಿದ್ದು, ಕನ್ನಡದಲ್ಲಿ ಅಂದರೆ ಕರ್ನಾಟಕದಲ್ಲಿ 450 ಸ್ಕ್ರೀನ್‌ ಗಳಲ್ಲಿ ಸಿನಿಮಾ ರಿಲೀಸ್ ಆದರೆ ಉಳಿದಂತೆ ಆಂದ್ರ ಪ್ರದೇಶ, ತಮಿಳುನಾಡು ಮತ್ತು ಕೇರಳ ಹಾಗೂ ಉತ್ತರ ಭಾರತದಲ್ಲಿ ಎಷ್ಟು ಚಿತ್ರಮಂದಿರಗಳಲ್ಲಿ ಚಿತ್ರ ರಿಲೀಸ್ ಆಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಲಭ್ಯ ಮಾಹಿತಿ ಪ್ರಕಾರ ಸದ್ಯ, ವಿಕ್ರಾಂತ್ ರೋಣ ಚಿತ್ರ, ಆಂದ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯದಲ್ಲಿ 450 ಸ್ಕ್ರೀನ್‌, ತಮಿಳುನಾಡಿನಲ್ಲಿ 200 ಸ್ಕ್ರೀನ್‌ ಮತ್ತು ಕೇರಳದಲ್ಲಿ 150 ಸ್ಕ್ರೀನ್‌ ಗಳಲ್ಲಿ ಗುಮ್ಮನ ಅಬ್ಬರ ಪ್ರಾರಂಭವಾಗಲಿದೆ. ಆದರೆ ಹಿಂದಿಯಲ್ಲಿ ಅಂದರೆ ಉತ್ತರ ಭಾರತ ಭಾಗದಲ್ಲಿ ಬರೋಬ್ಬರಿ 1000 ಸ್ಕ್ರೀನ್‌ ಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: Kiccha Sudeep: ಕಿಚ್ಚ ಸುದೀಪ್​ಗೆ ಕೊರೋನಾ ಪಾಸಿಟಿವ್​? ಪೋಸ್ಟ್​ಪೋನ್​ ಆಗುತ್ತಾ ‘ವಿಕ್ರಾಂತ್ ರೋಣ‘ ರಿಲೀಸ್ ಡೇಟ್​?


ದುಬೈನಲ್ಲಿ ಪ್ರೀಮಿಯರ್ ಶೋ:


ಜುಲೈ 28 ರಂದು 3D ನಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿರುವ ವಿಕ್ರಾಂತ್ ರೋಣ, ಜುಲೈ 27 ರಂದು ದುಬೈನಲ್ಲಿ ಅದರ ಅಂತರರಾಷ್ಟ್ರೀಯ ಪ್ರೀಮಿಯರ್ ಅನ್ನು ಆಯೋಜಿಸಿದೆ. ಜುಲೈ 24 ಅಥವಾ 25 ರಂದು ಬೆಂಗಳೂರಿನಲ್ಲಿ ಪ್ರಿ-ರಿಲೀಸ್ ಕಾರ್ಯಕ್ರಮವನ್ನು ನಡೆಸಲು ತಂಡ ನಿರ್ಧರಿಸಿದೆ.  ಕೆಜಿಎಫ್​ ಬಳಿಕ ಕನ್ನಡ‌ ಚಿತ್ರರಂಗದಿಂದ ಬರುತ್ತಿರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಚಿತ್ರವಾಗಿದ್ದು, ಅನೂಪ್ ಭಂಡಾರಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ.


ಇದನ್ನೂ ಓದಿ: Vikrant Rona: ಕಿಚ್ಚನ ಅಭಿಮಾನಿಗಳಿಗೆ ಸಂತಸದ ಸುದ್ದಿ, NFT ಗೆ ಎಂಟ್ರಿ ಕೊಟ್ಟ ವಿಕ್ರಾಂತ್​ ರೋಣ


ಜುಲೈ 28ಕ್ಕೆ ಸಿನಿಮಾ ರಿಲೀಸ್​:


ವಿಕ್ರಾಂತ್ ರೋಣ ಈ ಸಿನಿಮಾವನ್ನು ಅನೂಪ್ ಭಂಡಾರಿಯವರು ನಿರ್ದೇಶನ ಮಾಡುತ್ತಿದ್ದು ಈಗಾಗಲೇ ಈ ಚಿತ್ರದ ರಾ ರಾ ರಕ್ಕಮ್ಮ ಹಾಡು ಹಾಗೂ ಟ್ರೈಲರ್ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಜುಲೈ 28ಕ್ಕೆ ಈ ಸಿನಿಮಾ ಬಿಡುಗಡೆಯಾಗುತ್ತಿದ್ದು, ಕಿಚ್ಚನ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು