• Home
  • »
  • News
  • »
  • entertainment
  • »
  • Kiccha Sudeep: ಸುದೀಪ್​ಗೆ ನಡೆಯೋಕು ಕಷ್ಟ ಆಗ್ತಿದ್ಯಂತೆ! ಸ್ವತಃ ಸಮಸ್ಯೆ ಬಗ್ಗೆ ಹೇಳಿಕೊಂಡ ಕಿಚ್ಚ

Kiccha Sudeep: ಸುದೀಪ್​ಗೆ ನಡೆಯೋಕು ಕಷ್ಟ ಆಗ್ತಿದ್ಯಂತೆ! ಸ್ವತಃ ಸಮಸ್ಯೆ ಬಗ್ಗೆ ಹೇಳಿಕೊಂಡ ಕಿಚ್ಚ

ಕಿಚ್ಚ ಸುದೀಪ್​

ಕಿಚ್ಚ ಸುದೀಪ್​

ನಟ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ​ ವಿಕ್ರಾಂತ್​ ರೋಣ ಚಿತ್ರದ ಪ್ರಚಾರದ ಕಾರ್ಯದಲ್ಲಿ ಅವರು ಸಖತ್ ಬ್ಯುಸಿಯಾಗಿದ್ದಾರೆ. ಇದರ ನಡುವೆ ಸುದೀಪ್ ಅವರಿಗೆ ಆರೋಗ್ಯ ಸಮಸ್ಯೆ ಆಗಿರುವುದಾಗಿ ಸ್ವತಃ ಕಿಚ್ಚ ಅವರೇ ಹೇಳಿಕೊಂಡಿದ್ದಾರೆ.

  • Share this:

ಸ್ಯಾಂಡಲ್​ವುಡ್​ನ ಕಿಚ್ಚ ಸುದೀಪ್ (Kiccha Sudeep) ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್​ ರೋಣ (Vikrant Rona)​ ಸಿನಿಮಾದ ಟ್ರೈಲರ್ (Trailer)​ ಈಗಾಗಲೇ ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ನಡುವೆ ಸುದೀಪ್​ ವಿಕ್ರಾಂತ್​ ರೋಣ ಚಿತ್ರದ ಪ್ರಚಾರದ ಕಾರ್ಯದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇದೇ ತಿಂಗಳು ಚಿತ್ರವು ರಿಲೀಸ್ ಆಗುತ್ತಿರುವ ಹಿನ್ನಲೆ ಚಿತ್ರದ ಪ್ರಮೋಷನ್​ ಗಾಗಿ ಸುದೀಪ್ ಮುಂಬೈ, ಬೆಂಗಳೂರು ಸೇರಿದಂತೆ ಅನೇಕ ಕಡೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಆದರೆ ಈ ಬಿಡುವಿಲ್ಲದ ಪ್ರಚಾರದ ಕೆಲಸದ ಜೊತೆಗೆ ಸುದೀಪ್ ಗೆ ಆರೋಗ್ಯ ಸಮಸ್ಯೆ ಆಗಿರುವುದಾಗಿ ಸ್ವತಃ ಕಿಚ್ಚ ಅವರೇ ಹೇಳಿಕೊಂಡಿದ್ದಾರೆ. ಹೌದು, ನಟ ಉಪೇಂದ್ರ (Upendra) ಅವರ ಅಣ್ಣನ ಮಗ ನಿರಂಜನ್ ಅವರ ಚೊಚ್ಚಲ ಸಿನಿಮಾ 'ನಮ್ಮ ಹುಡುಗರು' ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಕಿಚ್ಚನನ್ನು ಆಹ್ವಾನಿಸಲಾಗಿತ್ತು. ಆದರೆ ಕಾರ್ಯಕ್ರಮದಲ್ಲಿ ಭಾಗಿ ಆಗಲು ಕಿಚ್ಚನಿಗೆ ಸಾಧ್ಯವಾಗಿಲ್ಲ. ಇದಕ್ಕೆ ಕಾರಣವನ್ನೂ ಸಹ ಸುದೀಪ್ ಅವರು ಸ್ವತಃ ವಿಡಿಯೋ ಮೂಲಕ ತಿಳಿಸಿದ್ದಾರೆ.


ಕಿಚ್ಚ ಸುದೀಪ್​ಗೆ ಮಂಡಿ ನೋವು:


ಹೌದು, ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಅವರ ಚೊಚ್ಚಲ ಸಿನಿಮಾ ‘ನಮ್ಮ ಹುಡುಗರು‘ ಚಿತ್ರದ ಟ್ರೈಲರ್ ಲಾಂಚ್​ ಇವೆಂಟ್​ಗೆ ವಿಶೇಷ ಅತಿಥಿಯಾಗಿ ಸ್ಯಾಂಡಲ್​ವುಡ್​ನ ನಟ ಕಿಚ್ಚ ಸುದೀಪ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಸುದೀಪ್ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಲು ಆಗಲಲ್ಲ. ಆದರೆ ಕಾರ್ಯಕ್ರಮಕ್ಕೆ ಶುಭಕೋರಲು ಸುದೀಪ್ ಅವರು ಸ್ವತಃ ವಿಡಿಯೋ ಒಂದನ್ನು ಕಳುಹಿಸಿಕೊಟ್ಟಿದ್ದರು.


ಅಲ್ಲದೇ ಚಿತ್ರತಂಡಕ್ಕೆ ಶುಭಕೋರಿ ಮಾತನಾಡಿದ್ದಾರೆ. ಈ ವೇಳೆ ಕಾರ್ಯಕ್ರಮಕ್ಕೆ ಏಕೆ ಆಗಮಿಸಲು ಆಗಲಿಲ್ಲ ಎನ್ನುವುದಕ್ಕೆ ಕಾರಣವನ್ನೂ ಸಹ ತಿಳಿಸಿದ್ದಾರೆ. ನಟ ಸುದೀಪ್‌ ಅವರಿಗೆ ಮಂಡಿ ನೋವಿನ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ನಿರಂಜನ್ ಅಭಿನಯದ 'ನಮ್ಮ ಹುಡುಗರು' ಚಿತ್ರದ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ. ಈ ವಿಚಾರವನ್ನು ಸುದೀಪ್ ವಿಡಿಯೋ ಮೂಲಕ ತಿಳಿಸಿದ್ದು, ವಿಡಿಯೋ ಮೂಲಕವೇ ಟ್ರೈಲರ್ ಲಾಂಚ್ ಕೂಡ ಮಾಡಿದ್ದಾರೆ.


ಇದನ್ನೂ ಓದಿ: Pavitra Lokesh: ಪವಿತ್ರಾ ಲೋಕೇಶ್ ಕುಟುಂಬದ ಹಿನ್ನೆಲೆ ಗೊತ್ತಾ? ಯಾರಿಗೂ ಗೊತ್ತಿಲ್ಲದ ಕಹಿ ಸತ್ಯಗಳು ಇಲ್ಲಿವೆ


ವಿಡಿಯೋ ಮೂಲಕ ಟ್ರೈಲರ್ ಲಾಂಚ್ ಮಾಡಿದ ಕಿಚ್ಚ:


ಇನ್ನು, ಕಾರ್ಯಕ್ರಮಕ್ಕೆ ಆಗಮಿಸಲು ಆಗದ ಕಾರಣ ಸುದೀಪ್ ಅವರು ಚಿತ್ರದ ಟ್ರೈಲರ್​ ನ್ನು ವಿಡಿಯೋ ಮೂಲಕ ಲಾಂಚ್​ ಮಾಡಿದರು. ಈ ವೇಳೆ ಮಾತನಾಡಿದ ಅವರು, ‘ನಿರಂಜನ್ ಮೊದಲಿಗೆ ನನ್ನನ್ನು ಕ್ಷಮಿಸಿ, ನಾನು ಬರಲು ಸಾಧ್ಯವಾಗಲಿಲ್ಲ. ನನ್ನ ಮಂಡಿಗೆ ಪೆಟ್ಟು ಬಿದ್ದ ಕಾರಣ ಆಗಮಿಸಲು ಆಗಲಿಲ್ಲ. ಈ ಸಮಾರಂಭದಲ್ಲಿ ನಾನು ಭಾಗಿಯಾಗಿಲ್ಲ ಎನ್ನುವುದನ್ನು ನೋವಿನಿಂದ ಹೇಳಬೇಕಾಗಿದೆ. ಇದಕ್ಕಾಗಿ ನನ್ನನ್ನು ಕ್ಷಮಿಸಿ‘ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ನಿರಂಜನ್​ ಹಾಗೂ ಚಿತ್ರತಂಡಕ್ಕೆ ಶುಭಕೋರಿದ್ದಾರೆ.


ಅಲ್ಲದೇ ವಿಡಿಯೋದಲ್ಲಿ ಮುಂದುವರೆದು, ‘ಉಪ್ಪಿ ಸರ್ ನೀವೇ ವೈಯಕ್ತಿಕವಾಗಿ ನನಗೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಿರಿ. ಆದರೆ ಬರಲು ಸಾಧ್ಯವಾಗಲಿಲ್ಲ. ನಿಮಗೆ ಗೊತ್ತು , ನಾನು ಯಾವುದನ್ನೂ ಅಷ್ಟು ಸುಲಭವಾಗಿ ಮಿಸ್ ಮಾಡಿಕೊಳ್ಳುವುದಿಲ್ಲ. ಆದರೆ ಇದೊಂದು ಬಾರಿ ನನ್ನನ್ನು ಕ್ಷಮಿಸಿಬಿಡಿ‘ ಎಂದು ಕೇಳಿಕೊಂಡಿದ್ದಾರೆ. ಅಲ್ಲದೇ ಈ ವಿಡಿಯೋವನ್ನು ಕಾರ್ಯಕ್ರಮದ ವೇಳೆ ಪ್ರಸಾರ ಮಾಡಲಾಗಿತ್ತು. ನಂತರದಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅಲ್ಲದೇ ಕಿಚ್ಚನ ಅಭಿಮಾನಿಗಳು ಆದಷ್ಟು ಬೇಗ ಗುಣಮುಖರಾಗಿ ಬನ್ನಿ ಎಂದು ಹಾರೈಸಿದ್ದಾರೆ.


ಇದನ್ನೂ ಓದಿ: Kichcha Sudeep: ಕಿಚ್ಚನ ಬಗ್ಗೆ ಅವಹೇಳನಕಾರಿ ಹೇಳಿಕೆ, ನಿರ್ದೇಶಕ ನಂದ ಕಿಶೋರ್​ ಗರಂ!


ವಿಕ್ರಾಂತ್ ರೋಣನ ಅಬ್ಬರ ಆರಂಭ:


ಕಿಚ್ಚನ ಸಿನಿಮಾ ಇದೇ ಮೊದಲ ಬಾರಿಗೆ ಇಡೀ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಅಲ್ಲದೆ, 3ಡಿ ಅಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಎಲ್ಲೆಡೆ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಓವರ್‌ಸೀನ್ ಸಿನಿಮಾ ರೈಟ್ಸ್ ಅನ್ನು 'ಒನ್ ಟ್ವೆಂಟಿ 8 ಮೀಡಿಯಾ' ಭಾರಿ ಮೊತ್ತಕ್ಕೆ ಪಡೆದುಕೊಂಡಿದೆ. ಇವರೇ ವಿಶ್ವದಾದ್ಯಂತ 'ವಿಕ್ರಾಂತ್ ರೋಣ' ಸಿನಿಮಾವನ್ನು ರಿಲೀಸ್ ಮಾಡಲಿದ್ದಾರೆ. 'ಒನ್ ಟ್ವೆಂಟಿ 8 ಮೀಡಿಯಾ' ಸುಮಾರು 1.3 ಮಿಲಿಯನ್‌ಗೆ ಓವರ್‌ಸೀಸ್ ಹಕ್ಕುಗಳನ್ನು ಪಡೆದುಕೊಂಡಿದೆ. ಅಂದರೆ, ಭಾರತದ 10 ಕೋಟಿ ರೂಪಾಯಿಗೆ ಸೇಲ್ ಆಗಿದೆ ಎನ್ನಲಾಗಿದೆ.

Published by:shrikrishna bhat
First published: