Vikrant Rona: ವಿಕ್ರಾಂತ್​ ರೋಣ ಚಿತ್ರಕ್ಕೆ ಪೈರಸಿ ಕಾಟ, ಸಂಪೂರ್ಣ ಚಿತ್ರ ಆನ್​​ಲೈನ್​ನಲ್ಲಿ ಲೀಕ್​

ವಿಕ್ರಾಂತ್​ ರೋಣ ಚಿತ್ರಕ್ಕೆ ಪೈರಸಿ (Piracy) ಕಾಟ ಎದುರಾಗಿದೆ. ಹೌದು, ವಿಕ್ರಾಂತ್​ ರೋಣ ಸಂಪೂರ್ಣ ಸಿನಿಮಾ ಆನ್​ಲೈನ್​ನಲ್ಲಿ ಸೋರಿಕೆ ಆಗಿದ್ದು, ಕಿಚ್ಚನ ಅಭಿಮಾನಿಗಳಲ್ಲಿ ಬೇಸರತಂದಿದೆ.

ವಿಕ್ರಾಂತ್ ರೋಣ

ವಿಕ್ರಾಂತ್ ರೋಣ

  • Share this:
ಸ್ಯಾಂಡಲ್​ವುಡ್​ನಲ್ಲಿ (Sandalwood) ಸಿನಿಪ್ರಿಯರು ಕಾತುರದಿಂದ ಕಾಯುತ್ತಿದ್ದ ಕಿಚ್ಚ ಸುದೀಪ್​ (Kiccha Sudeep) ಅಭಿನಯದ ವಿಕ್ರಾಂತ್ ರೋಣ (Vikrant Rona) ಸಿನಿಮಾ ಇಂದು ಭರ್ಜರಿಯಾಗಿ ತೆರೆಕಂಡಿದೆ. ಸಿನಿಮಾ ನೋಡಿದ ಎಲ್ಲರೂ ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರ ನಡುವೆ ಚಿತ್ರಕ್ಕೆ ಇದೀಗ ಪೈರಸಿ (Piracy) ಕಾಟ ಎದುರಾಗಿದೆ. ಹೌದು, ವಿಕ್ರಾಂತ್​ ರೋಣ ಸಂಪೂರ್ಣ ಸಿನಿಮಾ ಆನ್​ಲೈನ್​ನಲ್ಲಿ ಸೋರಿಕೆ ಆಗಿದ್ದು, ಕಿಚ್ಚನ ಅಭಿಮಾನಿಗಳಲ್ಲಿ ಬೇಸರತಂದಿದೆ.  ಸಿನಿಮಾ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಚಿತ್ರ ಆನ್​ಲೈನ್​ನಲ್ಲಿ ಲೀಕ್ ಆಗಿದೆ. ಆದರೆ ಕೆಲ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸುದೀಪ್​ ಅವರ ಹಿಂದಿನ ಮಾತನ್ನು ನೆನಪಿಸಿಕೊಂಡಿದ್ದು, ಪೈರಸಿಗೆ ತಿರುಗೇಟು  ನೀಡಿದ್ದಾರೆ.

ವಿಕ್ರಾಂತ್ ರೋಣ ಚಿತ್ರ ಸಂಪೂರ್ಣ ಲೀಕ್​:

ಹೌದು, ಇಂದು ಬಿಡುಗಡೆ ಆಗಿದ್ದ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್​ ರೋಣ ಸಿನಿಮಾಗೆ ಪೈರಿಸಿ ಕಾಟ ಎದುರಾಗಿದೆ. ಆಧುನಿಕ ತಂತ್ರಜ್ಞಾನ ಚಿತ್ರರಂಗಕ್ಕೆ ಎಡಬಿಡದೇ ಕಾಡುತ್ತಿದೆ. ತಮಿಳ್​ ರಾಕರ್ಸ್​ ಸೈಟ್​ನಲ್ಲಿ ವಿಕ್ರಾಂತ್​ ರೋಣ ಸಿನಿಮಾವು ಸಂಪೂರ್ಣ ಲೀಕ್​ ಆಗಿದ್ದು, ಎಲ್ಲಾ ಭಾಷೆಗಳಲ್ಲಿಯೂ ಸೋರಿಕೆ ಆಗಿದೆ. ಇನ್ನು, ಪೈರಸಿ ವಿರುದ್ಧ ಹೋರಾಟಕ್ಕೆ ಪೈರಸಿ ನಿಗ್ರಹ ತಂಡ ನಿಯಮಿಸಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಪೈರಸಿ ಕಂಡುಬಂದಲ್ಲಿ ಹೀಗೆ ಮಾಡಿ:

ಇನ್ನು, ಈ ಪೈರಸಿ ಕಂಡುಬಂದಲ್ಲಿ ಈ ರೀತಿ ಮಾಡಿ ಎಂದು ಚಿತ್ರತಂಡ ಅಭಿಮಾನಿಗಳಲ್ಲಿ ಮನವಿ ಮಾಡಿದೆ. ಅದರ ಪ್ರಕಾರ ನಿಮಗೆ ವಿಕ್ರಾಂತ್ ರೋಣ ಸಿನಿಮಾದ ಪೈರಸಿ ಕಂಡುಬಂದಲ್ಲಿ , 8147824034 ವಾಟ್ಸಾಪ್ ಸಂಖ್ಯೆ ಅಥವಾ AntiPiracyAiPlex.com ಇಮೇಲ್ ವಿಳಾಸಕ್ಕೆ ವರದಿ ಮಾಡಿ ಎಂದು ಚಿತ್ರತಂಡ ತಿಳಿಸಿದೆ. ಈಗಾಗಲೇ ಸುದೀಪ್ ಅಭಿನಯದ ಫೈಲ್ವಾನ್​ ಚಿತ್ರವೂ ಸಹ ಪೈರಸಿ ಕಾಟದಿಂದ ದೊಡ್ಡ ಮಟ್ಟದಲ್ಲಿ ನಷ್ಟವನ್ನು ಅನುಭವಿಸಿತ್ತು. ಹೀಗಾಗಿ ಆದಷ್ಟು ಬೇಗ ಈ ಲಿಂಕ್​ ಗಳನ್ನು ತೆಗದುಹಾಕಬೇಕು ಎಂದು ಕಿಚ್ಚನ ಅಭಿಮಾನಿಗಳು ಹೇಳುತ್ತಿದ್ದಾರೆ.

ಇದನ್ನೂ ಓದಿ: Vikrant Rona: ಮೊದಲ ದಿನವೇ ಕೆಜಿಎಫ್ 2 ದಾಖಲೆ ಮುರಿದ ವಿಕ್ರಾಂತ್ ರೋಣ

ಇನ್ನು, ಪೈರಸಿ ಕುರಿತು ಮಾತನಾಡಿದ್ದ ಸುದೀಪ್​, ‘ಚಿತ್ರಮಂದಿರದಲ್ಲಿ ಸಿಗುವ ಎಫೆಕ್ಟ್​ ಮೊಬೈಲ್​ನಲ್ಲಿ ಸಿಗುತ್ತಿದೆ ಎಂದಾದರೆ ಮೊಬೈಲ್​ನಲ್ಲೇ ನೋಡಿ. ಮೊಬೈಲ್​​ನಲ್ಲಿ ನೋಡಿದ ಮೇಲೆ ಖುಷಿ ಸಿಗದಿದ್ದರೆ ಚಿತ್ರಮಂದಿರಕ್ಕೆ ಬನ್ನಿ’ ಎಂದು ಕಿಚ್ಚ ಒಮ್ಮೆ ಪೈರಸಿ ಕುರಿತು ಹೇಳಿದ್ದರು.

KGF 2 ದಾಖಲೆ ಮುರಿದ ವಿಕ್ರಾಂತ್ ರೋಣ:

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗಿದ್ದು, ಚಿತ್ರವು ಸರಿಸುಮಾರು 2500 ಸ್ಕ್ರೀನ್‌ಗಳಲ್ಲಿ 9500ಕ್ಕೂ ಅಧಿಕ ಶೋಗಳು ಕನ್ಫರ್ಮ್ ಆಗಿದೆ ಎಂದು ತಿಳಿದುಬಂದಿದೆ. ಜೊತೆಗೆ 3Dಯಲ್ಲೂ ಪ್ರಪಂಚದಾದ್ಯಂತ 1600ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಚಿತ್ರ ತೆರೆಕಂಡಿದೆ. ಇದರ ನಡುವೆ ಭಾರತದಲ್ಲಿ ಕನ್ನಡ ಮಲ್ಟಿಫ್ಲೆಕ್ಸ್ ಶೋಗಳ ಸಂಖ್ಯೆಯಲ್ಲಿ ವಿಕ್ರಾಂತ್ ರೋಣ ಸಿನಿಮಾವು ಕೆಜಿಎಫ್-2 ದಾಖಲೆಯನ್ನು ಮುರಿದಿದೆ. ಹೌದು, ವಿಕ್ರಾಂತ್ ರೋಣ ಚಿತ್ರವು ದೇಶಾದ್ಯಂತ 1047 ಕನ್ನಡ ಶೋಗಳು ದೊರಕಿವೆ. KGF 2 ಚಿತ್ರಕ್ಕೆ 913 ಶೋಗಳು ಸಿಕ್ಕಿದ್ದವು.

ಇದನ್ನೂ ಓದಿ: Priyanka Chopra: ಹೊಸ ಕ್ಯಾಪ್ಟನ್ ಮಾರ್ವೆಲ್ ಆಗಿ ಬಾಲಿವುಡ್​ ಬೆಡಗಿ, ಸೂಪರ್​ ವುಮೆನ್​ ಆಗ್ತಾರಾ ಪ್ರಿಯಾಂಕಾ?

ಈ ಅಂಕಿ ಅಂಶದಲ್ಲಿ ವಿಕ್ರಾಂತ್ ರೋಣ (1600), ಕೆಜಿಎಫ್ 2 (913) ಸ್ಕ್ರೀನ್​ಗಳಲ್ಲಿ ಬಿಡುಗಡೆ ಆಗಿ ಮೊದಲ 2 ಸ್ಥಾನಗಳಲ್ಲಿವೆ. ಉಳಿದಂತೆ, ಜೇಮ್ಸ್ (845),  ಯುವರತ್ನ (718) ಮತ್ತು  ಪೊಗರು (651) ಸ್ಕ್ರೀನ್​ಗಳಲ್ಲಿ ರಿಲೀಸ್​ ಆಗಿ ಕ್ರಮವಾಗಿ ಟಾಪ್ 5 ಸ್ಥಾನದಲ್ಲಿವೆ.
Published by:shrikrishna bhat
First published: