Vikrant Rona: ಬಾಕ್ಸಾಫೀಸ್​ನಲ್ಲಿ ವಿಕ್ರಾಂತ್​ ರೋಣನ ದರ್ಬಾರ್​! ಮೊದಲ ದಿನವೇ ಕಲೆಕ್ಷನ್​ನಲ್ಲಿ ದಾಖಲೆ ಬರೆದ ಗುಮ್ಮ

ಸ್ಯಾಂಡಲ್​ವುಡ್​ನ ಕಿಚ್ಚ ಸುದೀಪ್​ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ಅದ್ಧೂರಿಯಾಗಿ ತೆರೆಕಂಡಿದ್ದು, ಎಲ್ಲಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಲ್ಲದೇ ಬಾಕ್ಸ್ ಆಫೀಸ್​ನಲ್ಲಿ ಕಿಚ್ಚನ ಅಬ್ಬರ ಪ್ರಾರಂಭವಾಗಿದೆ.

ವಿಕ್ರಾಂತ್ ರೋಣ

ವಿಕ್ರಾಂತ್ ರೋಣ

  • Share this:
ಸ್ಯಾಂಡಲ್​ವುಡ್​ನ (Sandalwood) ಕಿಚ್ಚ ಸುದೀಪ್​ (Kiccha Sudeep) ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ (Vikrant Rona) ಸಿನಿಮಾ ಅದ್ಧೂರಿಯಾಗಿ   ತೆರೆಕಂಡಿದ್ದು, ಎಲ್ಲಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಲ್ಲದೇ ಬಾಕ್ಸ್ ಆಫೀಸ್​ನಲ್ಲಿ ಕಿಚ್ಚನ ಅಬ್ಬರ ಪ್ರಾರಂಭವಾಗಿದೆ. ವಿಕ್ರಾಂತ್​ ರೋಣ ಸಂಪೂರ್ಣ ಸಿನಿಮಾ ಆನ್​ಲೈನ್​ನಲ್ಲಿ ಸೋರಿಕೆ ಆಗಿದ್ದು, ಕಿಚ್ಚನ ಅಭಿಮಾನಿಗಳಲ್ಲಿ ಬೇಸರತಂದಿದೆ. ಆದರೂ ಕಿಚ್ಚನ ಅಬ್ಬರಕ್ಕೆ ಯಾವುದೇ ಕೊರತೆ ಆಗಲಿಲ್ಲ. ಈ ಬಾರಿ ಕಿಚ್ಚ ಗಲ್ಲಾಪೆಟ್ಟಿಗೆ ಲೂಟಿ ಮಾಡಿದ್ದಾರೆ. ವಿಕ್ರಾಂತ್ ರೋಣ ಮೊದಲ ದಿನದ ಕಲೆಕ್ಷನ್ ರಿಪೋರ್ಟ್​ ಹೊರಬಿದಿದ್ದು, ಸುದೀಪ್ ವೈತ್ತಿ ಜೀವನದಲ್ಲಿ ಇದೊಂದು ಬ್ಲಾಕ್​ಬಸ್ಟರ್​ ಸಿನಿಮಾ ಆಗಿ ಹೊರಹೊಮ್ಮಿದೆ. ಮೂಲಗಳ ಪ್ರಕಾರ ಚಿತ್ರವು ಮೊದಲ ದಿನವೇ 50 ಕೋಟಿ ಕಲೆಕ್ಷನ್ ಮಾಡಿದೆ ಎಂದು ತಿಳಿದುಬಂದಿದೆ.

ಬಾಕ್ಸ್​ ಆಫೀಸ್​ ಲೂಟಿ ಮಾಡಿದ ವಿಕ್ರಾಂತ್​ ರೋಣ:

ಹೌದು, ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ಕರ್ನಾಟಕದಲ್ಲಿ ಸುಮಾರು 325 ಸಿಂಗಲ್ ಸ್ಕ್ರೀನ್ ನಲ್ಲಿ ಬಿಡುಗಡೆ ಆಗಿದೆ. ಉಳಿದಂತೆ 325 ಥಿಯೇಟರ್, 65 ಮಲ್ಟಿಫೆಕ್ಸ್ ಸ್ಕ್ರೀನ್ಸ್ ಗಳಲ್ಲಿ‌ 2500ಕ್ಕೂ ಹೆಚ್ಚು ಶೋ ಪ್ರದರ್ಶನ ಕಂಡಿದೆ. ಅದರಲ್ಲಿಯೂ ಬೆಂಗಳೂರಿನಲ್ಲೆ 1200 ಶೋಗಳಲ್ಲಿ ಆಲ್ ಮೋಸ್ಟ್ ಎಲ್ಲಾ ಶೋ ಹೌಸ್ ಫುಲ್ ಆಗಿದ್ದು, ಕರ್ನಾಟಕದಲ್ಲಿ ಮೊದಲ ದಿನವೇ 18 ರಿಂದ 21 ಕೋಟಿ ಗಳಿಸಿದೆ ಎಂದು ತಿಳಿದುಬಂದಿದೆ. ಹೊರರಾಜ್ಯಗಳಲ್ಲಿಯೂ ಉತ್ತಮ ಗಳಿಕೆಯನ್ನ ವಿಕ್ರಾಂತ್ ರೋಣ ಮಾಡಿದೆ.

ಉತ್ತರ ಭಾರತದಲ್ಲಿ ಒಟ್ಟು 690 ಸ್ಕ್ರೀನ್‌ ಗಳಲ್ಲಿ ವಿಕ್ರಾಂತ್ ರೋಣ ಬಿಡುಗಡೆ ಆಗಿದ್ದು, ಬಾಲಿವುಡ್​ನಲ್ಲಿ 8 ರಿಂದ 10 ಕೋಟಿ, ಆಂಧ್ರ ಮತ್ತು ತೆಲಂಗಾಣದಲ್ಲಿ 7 ರಿಂದ 8 ಕೋಟಿ, ತಮಿಳುನಾಡಿನಲ್ಲಿ 180 ಸ್ಕ್ರೀನ್ಸ್ ಗಳಲ್ಲಿ ತೆರೆಕಂಡ ವಿಆರ್ 2 ಕೋಟಿ ಗಳಿಕೆ ಮಾಡಿದ್ದು, ಕೇರಳದಲ್ಲೂ 110 ಸ್ಕ್ರೀನ್ ಗಳಲ್ಲಿ‌ ಪ್ರದರ್ಶನ ಕಾಣುತ್ತಿದೆ. ಈ ಮೂಲಕ ವಿಕ್ರಾಂತ್​ ರೋಣ ಚಿತ್ರವು ಭಾರತದಲ್ಲಿ ಒಟ್ಟು 40 ಕೋಟಿಗೂ ಅಧಿಕ ಹಣ ಗಳಿಸಿರುವ ಸಾಧ್ಯತೆ ಇದ್ದು, ವಿದೇಶಗಳಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ. ಒಟ್ಟಾರೆ ಸಿನಿ ಪಂಡಿತರ ಹಾಗೂ ಮೂಲಗಳ ಪ್ರಕಾರ ಪ್ರಪಂಚದಾದ್ಯಂತ ಫಸ್ಟ್​ ಡೇ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ. ಇನ್ನು ಶನಿವಾರ ಮತ್ತು ರವಿವಾರ ಬಂದಿರುವುದರಿಂದ ವೀಕೆಂಡ್​ನಲ್ಲಿ ಇನ್ನಷ್ಟು ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ.

ಇದನ್ನೂ ಓದಿ: Vikrant Rona: ವಿಕ್ರಾಂತ್ ರೋಣ ಮೊದಲ ದಿನದ ಕಲೆಕ್ಷನ್ ಎಷ್ಟು? ಕಿಚ್ಚನ ಅಬ್ಬರಕ್ಕೆ ಬಾಕ್ಸ್ ಆಫೀಸ್ ಶೇಕ್!

ಪೈರಸಿ ಮಾಡಿದವರಿಗೆ ಕಲೆಕ್ಷನ ಮೂಲಕ ಉತ್ತರ ಕೊಟ್ಟ ಕಿಚ್ಚ:

ಹೌದು, ಚಿತ್ರವು ಬಿಡುಗಡೆ ಆದ ಮೊದಲ ದಿನವೇ ಸಂಪೂರ್ಣ ಲೀಕ್​ ಆಗಿತ್ತು. ಆದರೆ ದಿರಿಮದ ಚಿತ್ರಕ್ಕೆ ಆಯವುದೇ ತೊಂದರೆ ಆದಂತೆ ಕಾಣುತ್ತಿಲ್ಲ. ಚಿತ್ರದ ಮೊದಲ ದಿನ ಕಲೆಕ್ಷನ್ ಸಹ ಭರ್ಜರಿಯಾಗಿದೆ. ತಮಿಳ್​ ರಾಕರ್ಸ್​ ಸೈಟ್​ನಲ್ಲಿ ವಿಕ್ರಾಂತ್​ ರೋಣ ಸಿನಿಮಾವು ಸಂಪೂರ್ಣ ಲೀಕ್​ ಆಗಿದ್ದು, ಎಲ್ಲಾ ಭಾಷೆಗಳಲ್ಲಿಯೂ ಸೋರಿಕೆ ಆಗಿದೆ.

ಇದನ್ನೂ ಓದಿ: Vikrant Rona: ಮೊದಲ ದಿನವೇ ಕೆಜಿಎಫ್ 2 ದಾಖಲೆ ಮುರಿದ ವಿಕ್ರಾಂತ್ ರೋಣ

ಇನ್ನು, ಈ ಪೈರಸಿ ಕಂಡುಬಂದಲ್ಲಿ ಈ ರೀತಿ ಮಾಡಿ ಎಂದು ಚಿತ್ರತಂಡ ಅಭಿಮಾನಿಗಳಲ್ಲಿ ಮನವಿ ಮಾಡಿದೆ. ಅದರ ಪ್ರಕಾರ ನಿಮಗೆ ವಿಕ್ರಾಂತ್ ರೋಣ ಸಿನಿಮಾದ ಪೈರಸಿ ಕಂಡುಬಂದಲ್ಲಿ , 8147824034 ವಾಟ್ಸಾಪ್ ಸಂಖ್ಯೆ ಅಥವಾ AntiPiracyAiPlex.com ಇಮೇಲ್ ವಿಳಾಸಕ್ಕೆ ವರದಿ ಮಾಡಿ ಎಂದು ಚಿತ್ರತಂಡ ತಿಳಿಸಿದೆ.
Published by:shrikrishna bhat
First published: