Vikrant Rona: ಮೊದಲ ದಿನವೇ ಕೆಜಿಎಫ್ 2 ದಾಖಲೆ ಮುರಿದ ವಿಕ್ರಾಂತ್ ರೋಣ

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ಭರ್ಜರಿಯಾಗಿ ತೆರೆಕಂಡಿದೆ. ಇರದ ನಡುವೆ ವಿಕ್ರಾಂತ್ ರೋಣ ಸಿನಿಮಾವು ಕೆಜಿಎಫ್ 2 ಚಿತ್ರದ ದಾಖಲೆಯೊಂದನ್ನು ಬಿಡುಗಡೆ ಆದ ಮೊದಲ ದಿನವೇ ಮುರಿದು ಹಾಕಿದೆ.

ವಿಕ್ರಾಂತ್ ರೋಣ

ವಿಕ್ರಾಂತ್ ರೋಣ

  • Share this:
ಸ್ಯಾಂಡಲ್​ವುಡ್​ನಲ್ಲಿ (Sandalwood) ಸಿನಿಪ್ರಿಯರು ಕಾತುರದಿಂದ ಕಾಯುತ್ತಿದ್ದ ಕಿಚ್ಚ ಸುದೀಪ್​ (Kiccha Sudeep) ಅಭಿನಯದ ವಿಕ್ರಾಂತ್ ರೋಣ (Vikrant Rona) ಸಿನಿಮಾ ಇಂದು ಭರ್ಜರಿಯಾಗಿ ತೆರೆಕಂಡಿದೆ. ಸಿನಿಮಾ ನೋಡಿದ ಎಲ್ಲರೂ ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಕೆಜಿಎಫ್ 2 ನಂತರ ಮತ್ತೊಂದು ಬಿಗ್​ ಸಿನಿಮಾ ಸ್ಯಾಂಡಲ್​ವುಡ್​ನಿಂದ ಹೊರಬಂದಿದೆ. ಅದರಲ್ಲಿಯೂ ಸುದೀಪ್​ ಅವರ ಅಭಿಮಾನಿಗಳು (Fans) ಬಹಳ ಕಾತುರದಿಂದ ಕಾಯುತ್ತಿದ್ದವರಿಗೆ ಭರ್ಜರಿ ಗಿಫ್ಟ್ ಸಿಕ್ಕಂತಾಗಿದೆ. ವಿಶ್ವದಾದ್ಯಂತ ಕಿಚ್ಚನ ಅಭಿಮಾನಿಗಳು ಸಿನಿಮಾ ನೋಡಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ (Social Media) ಈ ಸಿನಿಮಾ ಬಗ್ಗೆ ಈಗಾಗಲೇ ರಿವ್ಯೂ ಓಡಾಡುತ್ತಿದೆ. ಕಿಚ್ಚನ ಅಭಿನಯಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಇದರ ನಡುವೆ ವಿಕ್ರಾಂತ್ ರೋಣ ಸಿನಿಮಾವು ಕೆಜಿಎಫ್ 2 ಚಿತ್ರದ ದಾಖಲೆಯೊಂದನ್ನು ಬಿಡುಗಡೆ ಆದ ಮೊದಲ ದಿನವೇ ಮುರಿದು ಹಾಕಿದೆ.

KGF 2 ದಾಖಲೆ ಮುರಿದ ವಿಕ್ರಾಂತ್ ರೋಣ:

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗಿದ್ದು, ಚಿತ್ರವು ಸರಿಸುಮಾರು 2500 ಸ್ಕ್ರೀನ್‌ಗಳಲ್ಲಿ 9500ಕ್ಕೂ ಅಧಿಕ ಶೋಗಳು ಕನ್ಫರ್ಮ್ ಆಗಿದೆ ಎಂದು ತಿಳಿದುಬಂದಿದೆ. ಜೊತೆಗೆ 3Dಯಲ್ಲೂ ಪ್ರಪಂಚದಾದ್ಯಂತ 1600ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಚಿತ್ರ ತೆರೆಕಂಡಿದೆ. ಇದರ ನಡುವೆ ಭಾರತದಲ್ಲಿ ಕನ್ನಡ ಮಲ್ಟಿಫ್ಲೆಕ್ಸ್ ಶೋಗಳ ಸಂಖ್ಯೆಯಲ್ಲಿ ವಿಕ್ರಾಂತ್ ರೋಣ ಸಿನಿಮಾವು ಕೆಜಿಎಫ್-2 ದಾಖಲೆಯನ್ನು ಮುರಿದಿದೆ. ಹೌದು, ವಿಕ್ರಾಂತ್ ರೋಣ ಚಿತ್ರವು ದೇಶಾದ್ಯಂತ 1047 ಕನ್ನಡ ಶೋಗಳು ದೊರಕಿವೆ. KGF 2 ಚಿತ್ರಕ್ಕೆ 913 ಶೋಗಳು ಸಿಕ್ಕಿದ್ದವು.

ಈ ಅಂಕಿ ಅಂಶದಲ್ಲಿ ವಿಕ್ರಾಂತ್ ರೋಣ (1600), ಕೆಜಿಎಫ್ 2 (913) ಸ್ಕ್ರೀನ್​ಗಳಲ್ಲಿ ಬಿಡುಗಡೆ ಆಗಿ ಮೊದಲ 2 ಸ್ಥಾನಗಳಲ್ಲಿವೆ. ಉಳಿದಂತೆ, ಜೇಮ್ಸ್ (845),  ಯುವರತ್ನ (718) ಮತ್ತು  ಪೊಗರು (651) ಸ್ಕ್ರೀನ್​ಗಳಲ್ಲಿ ರಿಲೀಸ್​ ಆಗಿ ಕ್ರಮವಾಗಿ ಟಾಪ್ 5 ಸ್ಥಾನದಲ್ಲಿವೆ.

ಇದನ್ನೂ ಓದಿ: Vikrant Rona: ಪತಿಯ ಸಿನಿಮಾಗೆ ಫುಲ್ ಮಾರ್ಕ್ಸ್ ಕೊಟ್ಟ ಪತ್ನಿ, ವಿಕ್ರಾಂತ್ ರೋಣ ಬಗ್ಗೆ ಪ್ರಿಯಾ ಸುದೀಪ್ ಮೆಚ್ಚುಗೆ

ಮೊದಲ ದಿನದ ಗಳಿಕೆ ಎಷ್ಟಾಗಬಹುದು?:

ಇನ್ನು, ವಿಕ್ರಾಂತ್ ರೋಣ ಚಿತ್ರವು ಭರ್ಜರಿ ಓಫನಿಂಗ್ ಪಡೆದುಕೊಂಡಿದೆ. ಹೀಗಾಗಿ ಚಿತ್ರದ ಗಳಿಕೆಯೂ ಭರ್ಜರಿ ಆಗಲಿದೆ ಎಂಬ ಮಾತುಗಳು ಕೇಳಿಬಂದಿವೆ. ಸಿನಿ ಪಂಡಿತರ ಲೆಕ್ಕಾಚಾರದ ಪ್ರಕಾರ, 5 ಭಾಷೆಗಳಿಂದ ಚಿತ್ರವು 50ಕೋಟಿಗೂ ಹೆಚ್ಚಿನ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Vikrant Rona Review: ರಕ್ಕಮ್ಮನ ಡ್ಯಾನ್ಸ್, ಕಿಚ್ಚನ ಫೈಟ್, ಬಾಕ್ಸ್ ಆಫೀಸ್ ಉಡೀಸ್! ಹೇಗಿದ್ದಾನೆ ಗೊತ್ತಾ ವಿಕ್ರಾಂತ್ ರೋಣ?

ಚಿತ್ರತಂಡಕ್ಕೆ ವಿಶ್​ ಮಾಡಿದ ಪ್ರಶಾಂತ್ ನೀಲ್:

ಹೌದು, ಕೆಜಿಎಫ್ ಚಿತ್ರದ ನಿರ್ದೇಶಕರಾದ ಪ್ರಶಾಂತ್​ ನೀಲ್​ ಸಹ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾಗೆ ವಿಶ್​ ಮಾಡಿದ್ದಾರೆ. ಅಲ್ಲದೆ ಈ ಕುರಿತು ಟ್ವೀಟ್​ ಮಾಡಿರುವ ಅವರು, ‘ದೃಶ್ಯ ವೈಭವದಂತಿರುವ ವಿಕ್ರಾಂತ್​ ರೋಣ ಚಿತ್ರದಿಂದ ಕಿಚ್ಚ ಸುದೀಪ್​ ಸರ್​ ಹಾಗೂ ನಿರ್ದೇಶಕ ಅನೂಪ್​ ಭಂಡಾರಿ ಅವರಿಗೆ ಎಲ್ಲ ಯಶಸ್ಸು ಸಿಗಲಿ. ಇಡೀ ತಂಡಕ್ಕೆ ಶುಭವಾಗಲಿ’ ಎಂದು ನೀಲ್​ ಬರೆದುಕೊಂಡಿದ್ದಾರೆ.





ಎಲ್ಲಡೆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ:

ಈಗಾಗಲೇ ವಿಮರ್ಶೆಗಳು ಟ್ವಿಟರ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ  ಮತ್ತು ಸಿನಿಪ್ರಿಯರು ಒಮ್ಮತದಿಂದ ಚಿತ್ರ ಮತ್ತು ಸುದೀಪ್ ಅಭಿನಯದ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ನೆಟಿಜನ್‌ಗಳು ಚಿತ್ರದ ಕಥಾವಸ್ತು ಮತ್ತು ನಿರ್ದೇಶಕರ ಕಥೆ ಹೇಳುವ ರೀತಿಯನ್ನು ಬಹಳ ಮೆಚ್ಚಿಕೊಂಡಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.
Published by:shrikrishna bhat
First published: