Mohan Juneja: KGF 2 ಖ್ಯಾತಿಯ ನಟ ಮೋಹನ್ ಜುನೇಜ ಇನ್ನಿಲ್ಲ

ಕಲಾವಿದ ಶ್ರೀಯುತ ಮೋಹನ್ ಜೂನೇಜ (Mohan Juneja) ಅವರು ಕೊನೆಯುಸಿರೆಳೆದಿದ್ದಾರೆ. ಮೇ.06ರಂದು ಶುಕ್ರವಾರ ರಾತ್ರಿ ಅನಾರೋಗ್ಯದ ತೊಂದರೆಯಿಂದ ಚಿಕ್ಕಬಾಣಾವರ ಸಪ್ತಗಿರಿ ಹಾಸ್ಪಿಟಲ್ ನಲ್ಲಿ (Sapthagiri Hopsital) ಅವರನ್ನು ದಾಖಲಿಸಲಾಗಿತ್ತು. 

ಮೋಹನ್ ಜುನೇಜ

ಮೋಹನ್ ಜುನೇಜ

  • Share this:
ಹೆಸರಾಂತ ಹಾಸ್ಯ ಕಲಾವಿದ ಶ್ರೀಯುತ ಮೋಹನ್ ಜುನೇಜ (Mohan Juneja) ಅವರು ಕೊನೆಯುಸಿರೆಳೆದಿದ್ದಾರೆ. ಮೇ.06ರಂದು ಶುಕ್ರವಾರ ರಾತ್ರಿ ಅನಾರೋಗ್ಯದ ತೊಂದರೆಯಿಂದ ಚಿಕ್ಕಬಾಣಾವರ ಸಪ್ತಗಿರಿ ಹಾಸ್ಪಿಟಲ್ ನಲ್ಲಿ (Sapthagiri Hopsital) ಅವರನ್ನು ದಾಖಲಿಸಲಾಗಿತ್ತು. ಚಿಕಿತ್ಸೆ (Treatment) ಫಲಕಾರಿ ಆಗದೆ ಮೇ.7ರಂದು ಅವರು ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ (Bengaluru) ಸಪ್ತಗಿರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಜೋಗಿ ಸಿನಿಮಾ ಸೇರಿದಂತೆ ಹಲವು‌ ಸಿನಿಮಾ (Cinema) ಹಾಗು ಧಾರವಾಹಿಗಳಲ್ಲಿ (Serial) ‌ನಟಿಸಿದ್ದ ಕಲಾವಿದ ಲಿವರ್ ಸಮಸ್ಯೆ ಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಮೋಹನ್ ಜುನೇಜಾ ಒಬ್ಬ ಭಾರತೀಯ ಚಲನಚಿತ್ರ ನಟ, ಇವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕೆಲಸ ಮಾಡಿದ್ದಾರೆ. ಮೋಹನ್ ಅವರು ಕೆಜಿಎಫ್ ಅಧ್ಯಾಯ 2 ನಂತಹ ಜನಪ್ರಿಯ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ನೂರಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಮೋಹನ್ ಜುನೇಜ ಚೆಲ್ಲಾಟ ಚಿತ್ರದ ಮಧುಮಗ ಪಾತ್ರ ಮೋಹನ್ ಅವದಿಗೆ ಹೆಚ್ಚು ಖ್ಯಾತಿ ಕೊಟ್ಟಿತ್ತು. ಇದಾದ ನಂತ್ರ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಮೋಹನ ಹಾಸ್ಯ ನಟನಾಗಿ ಮಿಂಚಿದ್ದರು.

ಕೆಜಿಎಫ್ 2 ನಲ್ಲೂ ಪಾತ್ರ

ಅಲ್ಲದೆ ಕೆಜಿಎಫ್ ಚಿತ್ರದಲ್ಲೂ ಮೋಹನ್ ಜುನೇಜ ಬಣ್ಣ ಹಚ್ಚಿದ್ದರು. ತುಂಭಾ ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದ ಅವರನ್ನು ಲಿವರ್ ಸಮಸ್ಯೆ ಹಾಸ್ಯನಟನನ್ನು ಇನ್ನಿಲ್ಲದಂತೆ ಕಾಡಿತ್ತು.

ಅನಾರೋಗ್ಯ ಸಮಸ್ಯೆ ಹೆಚ್ಚಾದ ಹಿನ್ನೆಲೆ ಕುಟುಂಬದವರು ಚಿಕ್ಕಬಾಣವರದ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದರು. ಅದರೆ ಚಿಕಿತ್ಸೆ ಫಲಿಸದೆ ನಿನ್ನೆ ರಾತ್ರಿ( ಮೇ.6) ನಿಧನರಾಗಿದ್ದಾರೆ. ಮೋಹನ್ ಅವರು ತಾಯಿ, ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಸಾವಿನಲ್ಲೂ ಸಾರ್ಥ ಕತೆ ಮೆರೆದ ನಟ ಮೋಹನ್‌ ಜುನೇಜ ನೇತ್ರದಾನ ಮಾಡಿ ಮಾದರಿಯಾಗಿದ್ದಾರೆ. ಸ್ಯಾಂಡಲ್​ವುಡ್​ನ ಹಿರಿಯ ಹಾಸ್ಯ ಕಲಾವಿದ ನೇತ್ರದಾನ ಮಾಡಿ ಮಾದರಿಯಾಗಿದ್ದಾರೆ.
Published by:Divya D
First published: