ಕಿರುತೆರೆಯ ಅಶ್ವಿನಿ ನಕ್ಷತ್ರ (Iravan Cinema Trailer Release) ಸೀರಿಯಲ್‌ನ ಸೂಪರ್ ಸ್ಟಾರ್ ಜೆಕೆ ಅಭಿನಯದ ಐರಾವನ್ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಖಡಕ್ ಆಗಿಯೇ ಇರೋ ಈ ಒಂದು ಟ್ರೈಲರ್‌ನಲ್ಲಿ ಜೆಕೆ ನಿರ್ವಹಿಸಿರೋ ಪಾತ್ರದ (JK Acted Iravan Cinema) ಅಸಲಿ ಮ್ಯಾಟರ್ ರಿವೀಲ್ ಆಗಿದೆ. ಐರಾವನ್ ಅನ್ನೋ ವಿಶೇಷ ಟೈಟಲ್ ಇಟ್ಟುಕೊಂಡು ಬರ್ತಿರೋ ಈ ಚಿತ್ರದಲ್ಲಿ ಜಬರ್‌ದಸ್ತ್ ಡೈಲಾಗ್ ಕೂಡ ಇವೆ. ಜೆಕೆ ಎಂಟ್ರಿ ಕೂಡ (Sandalwood Actor JK) ತುಂಬಾ ಸ್ಪೆಷಲ್ ಆಗಿದೆ. ಐರಾವನ್ ಸಿನಿಮಾದಲ್ಲಿ ಜೆಕೆ ಸಿಂಗಲ್ ರೋಲ್ ಮಾಡಿದ್ದಾರೇಯೆ ? ಇಲ್ಲ ಡಬಲ್ ರೋಲ್ ನಿರ್ವಹಿಸಿದ್ದಾರೇಯೆ ? ಅನ್ನುವ ಕ್ಯೂರಿಯೆಸ್ ಕ್ವಶ್ಚನ್ (Iravan Movie Updates) ಕೂಡ ಈಗ ಹುಟ್ಟಿಕೊಂಡಿದೆ.
ಐರಾವನ್ ಅನ್ನೋದರಲ್ಲಿಯೇ ನಾನು ರಾವಣ ಅನ್ನೋ ಅರ್ಥ ಬರುತ್ತದೆ. ಆದರೆ ರಾವಣ ಯಾರೂ ಅನ್ನೋದು ಮಾತ್ರ ಇನ್ನೂ ರಿವೀಲ್ ಆಗಿಲ್ಲ. ಜೆಕೆ ನಿರ್ವಹಿಸಿರೋ ಪಾತ್ರದ ಖದರ್ ಮತ್ತು ಲುಕ್ ಕಂಡ್ರೆ ಸೂಪರ್ ಸ್ಟಾರ್ ಜೆಕೆ ಇಲ್ಲಿ ಒಬ್ಬ ವಿಲನ್ ಆಗಿಯೇ ಕಾಣಿಸಿಕೊಂಡಿದ್ದಾರೆ ಅನಿಸುತ್ತದೆ ನೋಡಿ.
ಜೆಕೆ ಸಿನಿ ಲೈಫ್‌ನ ಸ್ಪೆಷಲ್ ಸಿನಿಮಾ ಈ ಐರಾವನ್
ಐರಾವನ್ ಸಿನಿಮಾದ ಬಗ್ಗೆ ಜೆಕೆ ಹೇಳ್ತಾನೇ ಇರ್ತಾರೆ. ಸಿನಿಮಾ ಜರ್ನಿಯಲ್ಲಿ ಇದು ಕೂಡ ಸ್ಪೆಷಲ್ ಸಿನಿಮಾ ಅನ್ನುವ ಅರ್ಥದಲ್ಲಿಯೇ ಹೇಳ್ತಾರೆ. ಜೆಕೆ ಸಿನಿಮಾ ಜೀವನದಲ್ಲಿ ಈ ಚಿತ್ರ ವಿಶೇಷವಾಗಿಯೇ ನಿಲ್ಲೋ ಹಾಗೆ ಕಾಣಿಸುತ್ತದೆ.
ಖಡಕ್ ಡೈಲಾಗ್ ಹೊಡೆದ ಐರಾವನ್ ಸೂಪರ್ ಸ್ಟಾರ್ ಜೆಕೆ
ಐರಾವನ್ ಚಿತ್ರದಲ್ಲಿ ಬರೋ ಡೈಲಾಗ್ ಸ್ಪೆಷಲ್ ಆಗಿಯೇ ಇದೆ. ಅದು ಇಂತಿದೆ ನೋಡಿ. "ಸಮುದ್ರದ ಅಲೆಯನ್ನ ತಡೆಯೋ ಪ್ರಯತ್ನ ಮಾಡು, ಆದರೆ ಸುನಾಮಿನ ಅಲ್ಲ" ಅನ್ನೋ ಅರ್ಥದಲ್ಲಿಯೇ ಜೆಕೆ ನಿರ್ವಹಿಸಿರೋ ಪಾತ್ರ ಇಲ್ಲಿ ಖಡಕ್ ಡೈಲಾಗ್ ಹೊಡೆಯುತ್ತದೆ.
ಐರಾವನ್ ಸಿನಿಮಾದಲ್ಲಿ ಜೆಕೆ ಎಂಟ್ರಿ ಕೂಡ ಸೂಪರ್ ಆಗಿಯೇ ಇದೆ. ಟ್ರೈಲರ್ ನಲ್ಲಿ ಅದರ ಝಲಕ್ ನಿಮಗೆ ಸಿಗುತ್ತದೆ. ಕಾರ್‌ನಿಂದ ಇಳಿದು ಬರೋ ಸೀನ್‌ನಲ್ಲಿ ಜೆಕೆ ಸಖತ್ ಆಗಿಯೇ ಕಾಣಿಸುತ್ತಾರೆ. ಇದರೊಟ್ಟಿಗೆ ಸಿಗಾರ್ ಬೇರೆ ಇದೆ. ಅದು ಈ ಒಂದು ದೃಶ್ಯದಲ್ಲಿ ವಿಶೇಷವಾಗಿಯೇ ಕಂಡು ಬರುತ್ತದೆ.
ಐರಾವನ್ ಸಿನಿಮಾದಲ್ಲಿ ಜೆಕೆ ಸಖತ್ ಲುಕ್- ಮಸ್ತ್ ಆ್ಯಕ್ಷನ್
ಐರಾವನ್ ಚಿತ್ರದಲ್ಲಿ ಜೆಕೆ ಸಖತ್ ಆ್ಯಕ್ಷನ್ ಕೂಡ ಮಾಡಿದ್ದಾರೆ. ಅದರ ಝಲಕ್ ಕೂಡ ಇದೇ ಟ್ರೈಲರ್ ನಲ್ಲಿ ನಿಮಗೆ ದೊರೆಯುತ್ತದೆ. ಇದಕ್ಕೂ ಹೆಚ್ಚಾಗಿ ಕ್ಯಾಮೆರಾಮನ್ ದೇವೇಂದ್ರ ಅವರ ಕೆಲಸ ಇಲ್ಲಿ ಮೆಚ್ಚುವಂತಿದೆ.
ಚಿತ್ರದ ಪ್ರತಿ ದೃಶ್ಯದಲ್ಲೂ ಏನೋ ಹೊಸದನ್ನ ಕೊಡುವ ಕೆಲಸ ಮಾಡಿದ್ದಾರೆ. ಜೆಕೆಯನ್ನ ಅಷ್ಟೇ ಅದ್ಭುತವಾಗಿಯೇ ತೋರಿಸೋ ಕೆಲಸ ಮಾಡಿದ್ದಾರೆ. ಇನ್ನು ಐರಾವನ್ ಟ್ರೈಲರ್ ನೋಡ್ತಾ ಹೋದಂತೆ, ಅಸಲಿಗೆ ಐರಾವನ್ ಯಾರು ಅನ್ನೋ ಕುತೂಹಲ ಕೂಡ ಕೆರಳುತ್ತದೆ.
ಐರಾವನ್ ಚಿತ್ರದಲ್ಲಿ ಜೆಕೆ ಡಬಲ್ ರೋಲಾ?
ಯಾಕೆಂದ್ರೆ ಜೆಕೆ ಇಲ್ಲಿ ಡಬಲ್ ರೋಲ್ ರೀತಿಯ ಒಂದು ದೃಶ್ಯವೂ ಬರುತ್ತದೆ. ವಿಚಿತ್ರ ನಗು ಮತ್ತು ಲುಕ್ ನೊಂದಿಗೆ ಜೆಕೆ ಇಲ್ಲಿ ಗಮನ ಸೆಳೆಯುತ್ತಾರೆ. ಇದಾದ್ಮೆಲೆ ಐರಾವನ್ ಯಾರು ಅನ್ನೊ ಕ್ವಶ್ಚನ್ ಕೂಡ ಇಲ್ಲಿ ಕಾಣಿಸುತ್ತದೆ.
ಇದನ್ನೂ ಓದಿ: Kannada Movies: ಕನ್ನಡ ಸಿನಿಮಾ ಪ್ರೇಮಿಗಳಿಗೆ ಗುಡ್ ನ್ಯೂಸ್, ಮಲ್ಟಿಫೆಕ್ಸ್ನಲ್ಲಿ ಭರ್ಜರಿ ಆಫರ್
ಇದನ್ನೂ ಓದಿ:ಹೀಗೆ ವಿಶೇಷವಾಗಿಯೇ ಗಮನ ಸೆಳೆಯೋ ಐರಾವನ್ ಸಿನಿಮಾದಲ್ಲಿ ನಾಯಕ ಜೆಕೆಗೆ ಇಲ್ಲಿ ಅದ್ವಿತಿ ಶೆಟ್ಟಿ ಜೋಡಿ ಆಗಿದ್ದಾರೆ. ವಿವೇಕ್ ಕೂಡ ಅಭಿನಯಿಸಿದ್ದಾರೆ. ರಾಮ್ಸ್ ರಂಗಾ ನಿರ್ದೇಶನದ ಈ ಚಿತ್ರಕ್ಕೆ ಪ್ರದೀಪ್ ವರ್ಮಾ ಸಂಗೀತ ಕೊಟ್ಟಿದ್ದಾರೆ. ಸದ್ಯಕ್ಕೆ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಅಷ್ಟೇ ಕುತೂಹಲವನ್ನ ಕೂಡ ಕೆರಳಿಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ