Karthik Jayaram: ಸಿಂಗಲ್​ ಲೈಫ್​​ಗೆ ಜೆಕೆ ಟಾ ಟಾ -ಬೈ ಬೈ! ಜಯರಾಮ್​ ಜೊತೆ ಮಿಂಗಲ್​ ಆಗ್ತಿರೋವ್ರು ಇವ್ರೇ

'ಅಶ್ವಿನಿ ನಕ್ಷತ್ರ' ಸೀರಿಯಲ್ ಮೂಲಕ ಸೂಪರ್​ ಸ್ಟಾರ್​ ಜೆಕೆ (Super Star JK) ಎಂದು ಕರೆಯಲು ಎಲ್ಲರು ಶುರುಮಾಡಿದರು. ಇದೀಗ ಜೆಕೆ ಮತ್ತೆ ಸುದ್ದಿಯಲ್ಲಿದ್ದಾರೆ. ಅರೇ ಇವಾಗ್ಯಾವ ಹೊಸ ಸೀರಿಯಲ್​ ಅಂದುಕೊಳ್ಳಬೇಡಿ. ವೈಯಕ್ತಿಕ ವಿಚಾರಕ್ಕೆ ಜಯರಾಮ್​ ಕಾರ್ತಿಕ್​ ಸುದ್ದಿಯಾಗುತ್ತಿದ್ದಾರೆ

ಜಯರಾಮ್ ಕಾರ್ತಿಕ್​

ಜಯರಾಮ್ ಕಾರ್ತಿಕ್​

  • Share this:
ಕನ್ನಡ (Kannada) ಕಿರುತೆರೆಯಲ್ಲಿ 'ಅಶ್ವಿನಿ ನಕ್ಷತ್ರ'  (Ashwini Nakshatra) ಸೀರಿಯಲ್​ ಹೊಸ ಅಧ್ಯಾಯ ಬರೆದಿತ್ತು. 'ಅಶ್ವಿನಿ ನಕ್ಷತ್ರ' ಸೀರಿಯಲ್​ಗೆ ಫಿದಾ ಆಗದವರೇ ಇಲ್ಲ. ಆ ಧಾರಾವಾಹಿ ಪ್ರಸಾರವಾದ ಅಷ್ಟು ದಿನ ಮಿಸ್​ ಮಾಡದೇ ಇಡೀ ಕರ್ನಾಟಕ ಹೆಚ್ಚು ಕುತೂಹಲದಿಂದ ನೋಡಿತ್ತು. ಈ ಧಾರಾವಾಹಿಯಲ್ಲಿ ನಟಿಸಿದ್ದ ಜಯರಾಮ್​ ಕಾರ್ತಿಕ್ (Jayaram Karthik)​ ಅಲಿಯಾಸ್​ ಜೆಕೆ ಸಿಕ್ಕಾಪಟ್ಟೆ ಫೇಮಸ್​ ಆದರು. ಜೊತೆಗೆ ಮಯೂರಿ ಕೂಡ ಸ್ಯಾಂಡಲ್​ವುಡ್ (Sandalwood) ​ನಲ್ಲಿ ನೆಲೆ ಕಂಡುಕೊಂಡ್ರು. 'ಅಶ್ವಿನಿ ನಕ್ಷತ್ರ' ಸೀರಿಯಲ್ ಮೂಲಕ ಸೂಪರ್​ ಸ್ಟಾರ್​ ಜೆಕೆ (Super Star JK) ಎಂದು ಕರೆಯಲು ಎಲ್ಲರು ಶುರುಮಾಡಿದರು. ಇದೀಗ ಜೆಕೆ ಮತ್ತೆ ಸುದ್ದಿಯಲ್ಲಿದ್ದಾರೆ. ಅರೇ ಇವಾಗ್ಯಾವ ಹೊಸ ಸೀರಿಯಲ್​ ಅಂದುಕೊಳ್ಳಬೇಡಿ. ವೈಯಕ್ತಿಕ ವಿಚಾರಕ್ಕೆ ಜಯರಾಮ್​ ಕಾರ್ತಿಕ್​ ಸುದ್ದಿಯಾಗುತ್ತಿದ್ದಾರೆ.

ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟ ಜೆಕೆ!

ಹೌದು, ಜೆಕೆ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಕೊಟ್ಟಿದ್ದಾರೆ. ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಜಯರಾಮ್​ ಕಾರ್ತಿಕ್​ ಕಾಲಿಡುತ್ತಿದ್ದಾರೆ. ಅಶ್ವಿನಿ ನಕ್ಷತ್ರ ಸೀರಿಯಲ್​ನಲ್ಲಿ ಏಯ್​ ಹೆಂಡ್ತಿ ಎನ್ನುವ ಡೈಲಾಗ್​ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ರಿಯಲ್​ ಲೈಫ್​ನಲ್ಲೂ ಜೆಕೆ ಜೀವನದಲ್ಲಿ ಹೆಂಡ್ತಿ ಎಂಟ್ರಿಯಾಗುತ್ತಿದ್ದಾರೆ. ಅದ್ಯಾರಪ್ಪ ಜಯರಾಮ್​ ಕಾರ್ತಿಕ್​ ಮನಸ್ಸು ಗೆದ್ದ ಚೆಲುವೆ ಅಂತ ನೋಡುವ ಆಸೆ ಆಗಿದೆಯಾ? ಹಾಗಿದ್ದರೆ ಇಲ್ಲಿದೆ ನೋಡಿ.

ಇನ್​ಸ್ಟಾಗ್ರಾಂನಲ್ಲಿ ಜೆಕೆ ಜೋಡಿ ಫೋಟೋ ಸಿಕ್ಕಾಪಟ್ಟೆ ವೈರಲ್​!

ಜೆಕೆ ಫ್ಯಾಷನ್ ಡಿಸೈನರ್ ಚೆಲುವೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಭಾವಿ ಪತ್ನಿ ಜೊತೆ ಇರುವ ಫೋಟೋ ಹಾಕಿಕೊಳ್ಳುವ ಮೂಲಕ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಜೆಕೆ ಅವರ ಭಾವಿ ಪತ್ನಿ ಕೂಡ ಇದೇ ಫೋಟೋವನ್ನು ಶೇರ್​  ಮಾಡಿಕೊಂಡಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಜೆಕೆ ಮದುವೆ ಆಗುತ್ತಿರುವ ಹುಡುಗಿಯ ಹೆಸರು ಅರ್ಪಣ. ವೃತ್ತಿಯಲ್ಲಿ ನುರಿತ ಫ್ಯಾಷನ್ ಡಿಸೈನರ್. ಫ್ಯಾಷನ್ ಲೋಕಕ್ಕೆ ಈಗಾಗಲೇ ಚಿರಪರಿಚಿತ ಆಗಿರುವ ಅಪರ್ಣ, ಸಾಕಷ್ಟು ಮಾಡೆಲ್ ಗಳಿಗೆ ಹೊಸ ರೀತಿಯ ಫ್ಯಾಷನ್ ಡಿಸೈನ್ ಮಾಡಿದ್ದಾರೆ.



ಇದನ್ನೂ ಓದಿ: ರಾ ರಾ ರಕ್ಕಮ್ಮ ಹಾಡಿಗೆ ಮೈಚಳಿ ಬಿಟ್ಟು ಕುಣಿದ ನಿವೇದಿತಾ ಗೌಡ! ವಿಡಿಯೋ ನೋಡಿ ಯಾಕಮ್ಮ ಎಂದ ನೆಟ್ಟಿಗರು

ಲೈಫ್​ ಲೈನ್​ ಎಂದು ಬರೆದುಕೊಂಡ ಅಪರ್ಣ!

ತಾವು ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅಪರ್ಣ ಸಮಂತ್, ತಮ್ಮಿಬ್ಬರ ಫೋಟೋ ಜೊತೆಗೆ ಲೈಫ್ ಲೈನ್ ಎಂದು ಬರೆದುಕೊಂಡು, ಮದುವೆ ಆಗುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಜೆಕೆ ಬಣ್ಣದ ಲೋಕದ ಪಯಣ ಪ್ರಾರಂಭಿಸಿದರು. ಈ ಧಾರಾವಾಹಿಯಲ್ಲಿ ಕಾರ್ತಿಕ್ ಜಯರಾಮ್ ಜೆಕೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜೆಕೆ ಪಾತ್ರ ದೊಡ್ಡ ಮಟ್ಟದ ಖ್ಯಾತಿ ಗಳಿಸಿತು.

ಇದನ್ನೂ ಓದಿ: ಚಾರ್ಲಿ ಈ ಇಂಗ್ಲಿಷ್ ಸಿನಿಮಾದಿಂದ ಕದ್ದ ಕತೆಯಾ? ಸಿನಿಮಾ ಬಗ್ಗೆ ಗೊತ್ತಿಲ್ಲ, ಟ್ರೇಲರ್ ಮಾತ್ರ ಸಖತ್ ಕಾಪಿ! ವಿಡಿಯೋ ನೋಡಿ

2015ರಲ್ಲಿ ಈ ಧಾರಾವಾಹಿ ಪ್ರಸಾರವಾಗಿತ್ತು. ಈ ಧಾರಾವಾಹಿಯಲ್ಲಿ ನಾಯಕಿಯಾಗಿ ಮಯೂರಿ ಕಾಣಿಸಿಕೊಂಡಿದ್ದರು. ಈ ಧಾರಾವಾಹಿ ಬಳಿಕ ಜೆಕೆ ಹಿಂದಿಗೆ ಹಾರಿದರು. ಹಿಂದಿಯ ಕಿರುತೆರೆಯಲ್ಲಿ ಜೆಕೆ ಪೌರಾಣಿಕ ಸಿಯಾ ಕೆ ರಾಮ್ ನಲ್ಲಿ ರಾವಣನ ಪಾತ್ರದಲ್ಲಿ ಮಿಂಚಿದ್ದರು. ಜೆಕೆ ಕನ್ನಡ ಬಿಗ್ ಬಾಸ್ ಸೀಸನ್ 5ರಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಹಲವು ಸಿನಿಮಾಗಳಲ್ಲಿ ಜಯರಾಮ್​ ಕಾರ್ತಿಕ್​ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅದರಲ್ಲಿ ಪ್ರಮುಖರಾಗಿ ಕೆಂಪೆಗೌಡ, ವಿಷ್ಣುವರ್ಧನ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಮಿಂಚಿದ್ದಾರೆ.
Published by:Vasudeva M
First published: