• Home
 • »
 • News
 • »
 • entertainment
 • »
 • ತಪ್ಪು ಮಾಡಿದವರನ್ನು ಬೆತ್ತಲೆ ಮಾಡಿ, ಆಗಲಾದರು ಜನರಿಗೆ ಅರಿವಾಗಲಿ; ನವರಸ ನಾಯಕ ಜಗ್ಗೇಶ್ ಟ್ವೀಟ್

ತಪ್ಪು ಮಾಡಿದವರನ್ನು ಬೆತ್ತಲೆ ಮಾಡಿ, ಆಗಲಾದರು ಜನರಿಗೆ ಅರಿವಾಗಲಿ; ನವರಸ ನಾಯಕ ಜಗ್ಗೇಶ್ ಟ್ವೀಟ್

ಜಗ್ಗೇಶ್​​

ಜಗ್ಗೇಶ್​​

ಅನಿಕಾ ಹಾಗೂ ಆಕೆಯ ಜೊತೆಗೆ ಭಾಗಿಯಾದ ಇಬ್ಬರು ಡ್ರಗ್ಸ್​ ಪೆಡ್ಲರ್​ಗಳು ಸ್ಯಾಂಡಲ್​ವುಡ್​ಗೆ ಡ್ರಗ್ಸ್​​ ಸಪ್ಲೈ ಮಾಡುತ್ತಿದ್ದರು ಎಂಬ ಮಾಹಿತಿಯನ್ನು ತನಿಖಾಧಿಕಾರಿಗಳು ತಿಳಿಸಿದ್ದಾರೆ.

 • Share this:

  ಸ್ಯಾಂಡಲ್​ವುಡ್​ನಲ್ಲಿ ಮಾದಕ ದ್ರವ್ಯ ಜಾಲದಲ್ಲಿ ನಟ-ನಟಿಯರು, ಸಂಗೀತ ನಿರ್ದೇಶಕರು ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನವರಸ ನಾಯಕ ಜಗ್ಗೇಶ್​  ಟ್ವೀಟ್​ ಮಾಡಿದ್ದಾರೆ.


  ಟ್ವೀಟ್​ನಲ್ಲಿ ಜಗ್ಗೇಶ್,​ ‘ಸರಿಯಾಗಿ ಬಾಳಿ ಬದುಕುವ ನಿರ್ಧಾರ ಮಾಡಿ ಶ್ರಮಿಸುವರು ಎಲ್ಲೆ ಇದ್ದರು ಶ್ರೇಷ್ಠವಾಗಿ ಉಳಿಯುತ್ತಾರೆ. ನಾನು ನನ್ನಿಷ್ಟ. ನನ್ನ ಬದುಕು ಎನ್ನುವರ ಮಠಕ್ಕೆ ಸೇರಿಸಿದರು ನಶೆ ಹಾದರದ ಬಿಸಿ ಹೆಂಚಿನಮೇಲೆ ಸ್ವಲ್ಪ ಕಾಲ ಬದುಕಿ ವಿಕೃತ ಆನಂದ ಅನುಭವಿಸಿ ಸೀದುಹೋಗುತ್ತಾರೆ. ಏಕ್ ಮಾರ್ ದೋ ತಕುಡ ತಪ್ಪುಮಾಡಿದವರ ಬೆತ್ತಲೆ ಮಾಡಿ. ಆಗಲಾದರು ಜನಕ್ಕೆ ಅರಿವಾಗಲಿ’ ಎಂದು ಬರೆದುಕೊಂಡಿದ್ದಾರೆ.
  ಅನಿಕಾ ಹಾಗೂ ಆಕೆಯ ಜೊತೆಗೆ ಭಾಗಿಯಾದ ಇಬ್ಬರು ಡ್ರಗ್ಸ್​ ಪೆಡ್ಲರ್​ಗಳು ಸ್ಯಾಂಡಲ್​ವುಡ್​ಗೆ ಡ್ರಗ್ಸ್​​ ಸಪ್ಲೈ ಮಾಡುತ್ತಿದ್ದರು ಎಂಬ ಮಾಹಿತಿಯನ್ನು ತನಿಖಾಧಿಕಾರಿಗಳು ತಿಳಿಸಿದ್ದಾರೆ.


  ಮಾದಕ ದ್ರವ್ಯದ ತನಿಖೆಯ ಹೊಣೆಯನ್ನು ಎಸ್​ಸಿಬಿ ಹೆಚ್ಚುವರಿ ಅಧಿಕಾರಿ ಮಲ್ಹೋತ್ರ ವಹಿಸಿಕೊಂಡಿದ್ದಾರೆ. ಯಾವ ನಟ-ನಟಿಯರು  ಡ್ರಗ್ಸ್​ ಅಡಿಕ್ಟ್​ ಆಗಿದ್ದಾರೆ ಎಂಬ ಮಾಹಿತಿಯ ಮೇರೆಗೆ ತನಿಖೆ ನಡೆಸುತ್ತಿದ್ದಾರೆ.

  Published by:Harshith AS
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು