Totapuri: ತೋತಾಪುರಿ ರಿಲೀಸ್​ ಡೇಟ್​ ಅನೌನ್ಸ್, ನಗುವಿನ ಹಬ್ಬಕ್ಕೆ ಸಿದ್ಧರಾಗಿ ಎಂದ ಜಗ್ಗಣ್ಣ

ನವರಸ ನಾಯಕ ಜಗ್ಗೇಶ್ (Jaggesh)​ ಮತ್ತು ನಿರ್ದೇಶಕ ವಿಜಯ್​ ಪ್ರಸಾದ್​ (Vjay Prasad) ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ ತೋತಾಪುರಿ (Totapuri) ರಿಲೀಸ್​ ಡೇಟ್​ ಅನೌನ್ಸ್ ಆಗಿದೆ.

ತೋತಾಪುರಿ ಸಿನಿಮಾದ ಪೋಸ್ಟರ್​

ತೋತಾಪುರಿ ಸಿನಿಮಾದ ಪೋಸ್ಟರ್​

  • Share this:
 ನವರಸ ನಾಯಕ ಜಗ್ಗೇಶ್ (Jaggesh)​ ಮತ್ತು ನಿರ್ದೇಶಕ ವಿಜಯ್​ ಪ್ರಸಾದ್​ (Vjay Prasad) ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ ತೋತಾಪುರಿ (Totapuri) ರಿಲೀಸ್​ ಡೇಟ್​ ಅನೌನ್ಸ್ ಆಗಿದೆ. ಈ ಮೊದಲು ಬಿಡುಗಡೆಗೆ ಸಿದ್ಧವಾಗಿದ್ದರೂ ದಿನಾಂಕವನ್ನು ಮುಂದೂಡಲಾಗಿತ್ತು. ಇದೀಗ ಹೊಸ ಡೇಟ್​ ಲಾಕ್​ ಮಾಡಿರುವ ಚಿತ್ರತಂಡ ಅಭಿಮಾನಿಗಳಿಗೆ ನಗೆಯ ಹಬ್ಬ ಉಣಬಡಿಸಲು ಸಿದ್ಧವಾಗಿದೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಚಾಪು ಮೂಡಿಸಿದ್ದಾರೆ ವಿಜಯ್ ಪ್ರಕಾಶ್​. 'ಸಿದ್ಲಿಂಗು' (Sidlingu), 'ನೀರ್​ ದೋಸೆ'  (Neer Dose) ಯಂತಹ ಡಿಫ್ರೆಂಟ್​ ಜಾನರ್​ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದಾದ ಬಳಿಕ ತೋತಾಪುರಿ ಸಿನಿಮಾ ಮಾಡುತ್ತಿದ್ದು, ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಟ್ರೈಲರ್ ಸಖತ್ ಸದ್ದು ಮಾಡುತ್ತಿದೆ.

ಸಪ್ಟೆಂಬರ್​ ಅಂತ್ಯಕ್ಕೆ ತೋತಾಪುರಿ ಸವಿಯಲು ಸಿದ್ಧ:

ಹೌದು, ತೋತಾಪುರಿ ಚಿತ್ರವು ಇದೇ ವರ್ಷ ಸಪ್ಟೆಂಬರ್​ 30ಕ್ಕೆ ಬಿಡುಗಡೆ ಆಗುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ. ಅಲ್ಲದೇ ಈ ಕುರಿತು ನವರಸ ನಾಯಕ ಜಗ್ಗೇಶ್ ಸಹ ಟ್ವೀಟ್​ ಮಾಡಿದ್ದು, ನಗುವಿನ ಹಬ್ಬ ಎಂದು ಬರೆದುಕೊಂಡು ಪೋಸ್ಟರ್​ ಒಂದನ್ನು ಹಂಚಿಕೊಂಡಿದ್ದಾರೆ. ಜಗ್ಗಣ್ಣನ ಅಭಿಮಾನಿಗಳು ಅನೇಕ ದಿನಗಳ ಬಳಿಕ ಮತ್ತೊಮ್ಮೆ ಅವರನ್ನು ತೆರೆಯ ಮೇಲೆ ನೋಡಲು ಕಾತುರರಾಗಿದ್ದಾರೆ.

ಟ್ರೈಲರ್​ ಮೂಲಕ ನಿರೀಕ್ಷೆ ಹೆಚ್ಚಿಸಿದ ತೋತಾಪುರಿ:

ನವರಸ ನಾಯಕ ಜಗ್ಗೇಶ್​ ಸಿನಿಮಾಗಳಲ್ಲಿ ತುಸು ಹೆಚ್ಚು ಡಬಲ್​ ಮಿನಿಂಗ್​ ಡೈಲಾಗ್​ಗಳು ಇರುವುದು ಸಹಜ. ಇವರ ಜೊತೆ ವಿಜಯ್​ ಪ್ರಸಾದ್​ ಜೊತೆಯಾಗುತ್ತಿದ್ದಾರೆ ಅಂದರೆ ಕೇಳಬೇಕಾ? ತೋತಾಪುರಿ ಸಿನಿಮಾದಲ್ಲಿ ಸೀರಿಯಸ್​ ವಿಚಾರ ಇರುವುದು ಪಕ್ಕಾ. ಆದರೆ, ಈ ಟ್ರೈಲರ್​ನಲ್ಲೇ ಕೆಲ ಡೈಲಾಗ್​ಗಳು ಫ್ಯಾಮಿಲಿ ಆಡಿಯನ್ಸ್​​ಗೆ ಮುಜುಗರ ಉಂಟು ಮಾಡುವಂತಿದೆ. ತುಂಬಾ ಡಬಲ್ ಮಿನಿಂಗ್ ಡೈಲಾಗ್​ಗಳು ಈ ಟ್ರೈಲರ್​ನಲ್ಲಿದೆ. ನೋಡುಗರಲ್ಲಿ ಒಂದು ರೀತಿಯ ಬೇರೆ ಭಾವನೆ ಬರಲಿದೆ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಸುತ್ತಿದ್ದಾರೆ.

ಆದರೂ ಟ್ರೈಲರ್​ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಈಗಾಗಲೇ ಬಿಡುಗಡೆ ಆಗಿರುವ ವಿಜಯ್ ಪ್ರಸಾದ್ ನಿರ್ದೇಶನದ ಪೆಟ್ರೋಮ್ಯಾಕ್ಸ್ ಚಿತ್ರವು ಅಷ್ಟಾಗಿ ಸದ್ದು ಮಾಡಲಿಲ್ಲ. ಹೀಗಾಗಿ ಇದೀಗ ತೋತಾಪುರಿ ಸಿಹಿಯಾಗಿರಲಿದೆಯೇ? ಅಥವಾ ಹುಳಿಯೇ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: Jaggesh: ಐ ತೇರಿ ಲಕಡಿ ಪಕಡಿ ಜುಮ್ಮ! ಜಗ್ಗೇಶಣ್ಣನ​ ಯೋಗ ಸೂಪರೋ ಸೂಪರ್

ಮನಸ್ಸಿಗೆ ಮುಟ್ಟುವ ಡೈಲಾಗ್​ ಸಹ ಮೆಚ್ಚುಗೆ:

ವಿಜಯ್ ಪ್ರಸಾದ್ ಟ್ರೇಡ್ ಮಾರ್ಕ್ ಆಗಿರುವ ದ್ವಂದ್ವಾರ್ಥದ ಸಂಭಾಷಣೆ ಈ ಸಿನಿಮಾದಲ್ಲೂ ಇದೆ. ಟ್ರೇಲರ್‌ನಲ್ಲಿಯೇ ಅವುಗಳ ಝಲಕ್ ಅನ್ನು ನಿರ್ದೇಶಕರು ನೀಡಿದ್ದಾರೆ. ಜೊತೆಗೆ ಕೆಲವು ಮನಸ್ಸಿಗೆ ತಾಗುವ ಸಾಲುಗಳು ಸಹ ಇವೆ. ಜಗ್ಗೇಶ್, ಡಾಲಿ ಧನಂಜಯ್, ಸುಮನಾ ರಂಗನಾಥ್, ಹೇಮಾ ದತ್, ಅದಿತಿ ಪ್ರಭುದೇವಾ, ದತ್ತಣ್ಣ ಪ್ರತಿಭಾವಂತ ಹಿರಿ-ಕಿರಿ ನಟ-ನಟಿಯರು ಪೈಪೋಟಿಗೆ ಬಿದ್ದಂತೆ ನಟಿಸಿರುವುದು ಸಹ ಟ್ರೇಲರ್‌ನಲ್ಲಿಯೇ ಗೊತ್ತಾಗುತ್ತಿದೆ.

ತೋತಾಪುರಿ


ಇದನ್ನೂ ಓದಿ: Jaggesh: 777 ಚಾರ್ಲಿ ಸಿನಿಮಾ ನೋಡಿ ರಕ್ಷಿತ್ ಬಗ್ಗೆ ಏನಂದ್ರು ಗೊತ್ತಾ ಜಗ್ಗೇಶ್? ಸಿಂಪಲ್​ ಸ್ಟಾರ್​ಗೆ ನವರಸ ನಾಯಕನಿಂದ ಬಿರುದು

ರಾಘವೇಂದ್ರ ಸ್ಟೋರ್ಸ್ ಸಿನಿಮಾ ರಿಲೀಸ್​ ಸಹ ಮುಂದಕ್ಕೆ:

ಇನ್ನು, ಜಗ್ಗೇಶ್ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಸಿನಿಮಾವಾದ ರಾಘವೇಂದ್ರ ಸ್ಟೋರ್ಸ್ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್​ ಆಗಸ್ಟ್​ 5ರಂದು ಅಂದರೆ ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆ ಮಾಡುವ ಬಗ್ಗೆ ಘೋಷಣೆ ಮಾಡಿತ್ತು. ಆದರೆ ಇದೀಗ ಕಾರಣಾಂತರಗಳಿಂದ ನಿಮ್ಮಿಷ್ಟದ ರಸದೌತಣ ಸ್ವಲ್ಪ ವಿಳಂಬವಾಗುತ್ತಿದೆ ಎನ್ನುವ ಮೂಲಕ ಸಿನಿಮಾ ದಿನಾಂಕ ಮುಂದೂಡಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ.
Published by:shrikrishna bhat
First published: