ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅವರು ಸಿನಿಮಾದಲ್ಲಿ (Cinema) ಎಷ್ಟೇ ಬ್ಯುಸಿಯಾಗಿದ್ದರೂ ಫ್ಯಾಮಿಲಿ ಜೊತೆಗೂ ಕ್ವಾಲಿಟಿ ಸಮಯವನ್ನು ಕಳೆಯುತ್ತಾರೆ. ನಟ ಸೋಷಿಯಲ್ ಮೀಡಿಯಾದಲ್ಲಿಯೂ (Social Media) ಆ್ಯಕ್ಟಿವ್ ಆಗಿದ್ದು ಫೋಟೋ, ವಿಡಿಯೋಗಳನ್ನು (Video) ಶೇರ್ ಮಾಡುತ್ತಾರೆ. ಈಗ ನಟ ಸಂಡೇ ಸ್ಪೆಷಲ್ ಬ್ರಂಚ್ ವಿಡಿಯೋ ಶೇರ್ ಮಾಡಿದ್ದಾರೆ. ಇದರಲ್ಲಿ ಗಣೇಶ್ ಅವರು ಅತ್ಯಂತ ಉತ್ಸಾಹದಲ್ಲಿ ಅಡುಗೆ ಮನೆಯಲ್ಲಿ (Kitchen) ಏನೋ ಹೊಸ ಅಡುಗೆ (Cooking) ಮಾಡುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಗಣೇಶ್ ಕುಕ್ಕಿಂಗ್ ವಿಡಿಯೋ
ಗಣೇಶ್ ಅವರು ಶೆಫ್ ಲುಕ್ನಲ್ಲಿ ಕಂಡುಬಂದಿದ್ದು ಏನನ್ನೋ ಜೋಡಿಸಿಕೊಂಡು ಓವನ್ ಓಪನ್ ಮಾಡಿ ಅದರಲ್ಲಿ ಜೋಡಿಸುವುದನ್ನು ಕಾಣಬಹುದು. ಗಣೇಶ್ ಅವರು ಎಲ್ಲವನ್ನೂ ಒಟ್ಟಿಗೆ ಜೋಡಿಸಿ ವೆಜ್ಜೀಸ್ ಎಂದು ಥಂಬ್ಸ್ ಅಪ್ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.
ಅಯ್ಯೋ ಶ್ರದ್ಧಾ ಏನಂದ್ರು?
ನಟಿ ಅಯ್ಯೋ ಶ್ರದ್ಧಾ ಅವರು ಗಣೇಶ್ ಅವರ ವಿಡಿಯೋಗೆ ಕಮೆಂಟ್ ಮಾಡಿ ಅರೆ ಮನೆ ಊಟ, ನನ್ನನ್ನು ಕೂಡಾ ಊಟಕ್ಕೆ ಕರಿಯಬಹುದು ಎಂದು ಕಮೆಂಟ್ ಮಾಡಿದ್ದಾರೆ. ಬಹಳಷ್ಟು ಅಭಿಮಾನಿಗಳು ಏನು ಅಡುಗೆ ಮಾಡ್ತಿದ್ದೀರಿ ಎಂದು ಕುತೂಹಲ ವ್ಯಕ್ತಪಡಿಸಿದ್ದಾರೆ.
View this post on Instagram
ಗಣೇಶ್ ಅವರ ಅಡುಗೆ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ 36 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು 128ಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Nikhil Gowda: ನಿಖಿಲ್ ಗೌಡ ಬರ್ತ್ಡೇ! ಅವರ ಕ್ಯೂಟ್ ಫ್ಯಾಮಿಲಿ ಫೋಟೋಸ್ ನೋಡಿ
ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಅಭಿನಯದ ಲವ್ ಬರ್ಡ್ಸ್ ಸಿನಿಮಾ ಸಖತ್ ಕುತೂಹಲ ಸೃಷ್ಟಿಸಿದ್ದು,ಚಿತ್ರದ ಟೈಟಲ್ ಕೇಳಿದ್ರೇನೆ ಇದು ಕೂಡ ಲವ್ ಸ್ಟೋರಿ ಸಿನಿಮಾ ಅಂತ ಗೊತ್ತಾಗಿ ಬಿಡುತ್ತದೆ. ಇಂತಹ ಚಿತ್ರದ ಫಸ್ಟ್ ಲುಕ್ ಅನ್ನು ಗೋಲ್ಡನ್ ಸ್ಟಾರ್ ಗಣೇಶ್ ಇತ್ತೀಚೆಗೆ ರಿಲೀಸ್ ಮಾಡಿದ್ದಾರೆ. ಇಡೀ ಟೀಮ್ಗೂ ವಿಶ್ ತಿಳಿಸಿದ್ದಾರೆ.
View this post on Instagram
ಗಣೇಶ್ ಅವರ ಬಹುನಿರೀಕ್ಷಿತ ಸಿನಿಮಾ ಮಾರ್ಚ್ನಲ್ಲಿ ರಿಲೀಸ್ ಆಗಲಿದೆ. ಬಾನದಾರಿಯಲ್ಲಿ ಸಿನಿಮಾದ ಪೋಸ್ಟರ್ ಪ್ರೇಕ್ಷಕರ ಕುತೂಹಲವನ್ನು ಕೆರಳಿಸಿದೆ. ಅಭಿಲಾಷ್ ಕಲತಿಯವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು ದೀಪು ಎಸ್ ಕುಮಾರ್ ಅವರ ಸಂಕಲನವಿದೆ. ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ, ಮತ್ತು 99 ಚಿತ್ರಗಳ ನಂತರ ಗಣೇಶ್ ಮತ್ತು ನಿರ್ದೇಶಕ ಪ್ರೀತಂ ಗುಬ್ಬಿ ಮತ್ತೆ ಒಂದಾಗಿದ್ದು ಈ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಬಾನದಾರಿಯಲ್ಲಿ ಬಿಡುಗಡೆ ದಿನಾಂಕ ಅಂತಿಮಗೊಂಡಿದೆ.
View this post on Instagram
ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ ನಿರ್ದೇಶಕ ಪ್ರೀತಂ, ಚಿತ್ರವು ಪ್ರೇಮಕಥೆಯಲ್ಲ, ಪ್ರೀತಿಯ ಕುರಿತಾದ ಕಥೆ ಎಂದು ಬಣ್ಣಿಸಿದರು. ಬಾನದಾರಿಯಲ್ಲಿ ಗಣೇಶ್ ಅವರು ಕ್ರಿಕೆಟಿಗನಾಗಿ, ರುಕ್ಮಿಣಿ ಸರ್ಫರ್ ಆಗಿ ಮತ್ತು ರೀಷ್ಮಾ ವನ್ಯಜೀವಿ ಛಾಯಾಗ್ರಾಹಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ