ಸ್ಯಾಂಡಲ್ವುಡ್ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಮೊಟ್ಟ ಮೊದಲ ಬಾರಿಗೆ ತಮ್ಮ ನೆಚ್ಚಿನ ಬಾಲಿವುಡ್ ಶೋದಲ್ಲಿ (Bollywood Show) ಭಾಗಿ ಆಗಿದ್ದಾರೆ. ಇನ್ನೇನು ಮುಂಬರುವ ಕೆಲವೇ ವಾರದಲ್ಲಿ ಈ ಶೋ ಕೂಡ ಟೆಲಿಕಾಸ್ಟ್ ಆಗುತ್ತದೆ. ನಿಜ, ಕನ್ನಡದ ನಾಯಕ ನಟ ಗೋಲ್ಡನ್ ಸ್ಟಾರ್ ಗಣೇಶ್ ಬಾಲಿವುಡ್ನ ಹಾಸ್ಯಮಯ ಕಾರ್ಯಕ್ರಮ (The Kapil Sharma Show) ದಿ ಕಪಿಲ್ ಶರ್ಮ ಶೋದಲ್ಲಿ ಗೆಸ್ಟ್ ಆಗಿ ಬರ್ತಿದ್ದಾರೆ. ಈ ಶೋದ ಚಿತ್ರೀಕರಣ ಕೂಡ ಆಗಿದೆ. ಆ ಒಂದು ಖುಷಿಯನ್ನ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಸೋಷಿಯಲ್ (social media) ಮೀಡಿಯಾದಲ್ಲಿ ವೀಡಿಯೋ ಸಮೇತ ಹಂಚಿಕೊಂಡಿದ್ದಾರೆ. ಈ ಬಗ್ಗೆ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಒಂದಷ್ಟು ಖುಷಿಯನ್ನು ಹಂಚಿಕೊಂಡಿದ್ದಾರೆ. ಅದರ ಸುತ್ತ ಇಲ್ಲಿದೆ ಸ್ಟೋರಿ.
ಬಾಲಿವುಡ್ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹಂಗಾಮ
ಕನ್ನಡದ ನಾಯಕ ನಟರು ಬಾಲಿವುಡ್ ನಲ್ಲಿ ಹಂಗಾಮ ಮಾಡುತ್ತಿದ್ದಾರೆ. ಅದೇ ರೀತಿ ಕನ್ನಡದ ಗೋಲ್ಡನ್ ಸ್ಟಾರ್ ಗಣೇಶ್ ಅವರು ಹೊಸದೊಂದು ಹೆಜ್ಜೆ ಇಟ್ಟಿದ್ದಾರೆ. ಇವರ ಅಭಿನಯದ ಬಾನದಾರಿಯಲ್ಲಿ ಸಿನಿಮಾ ಕೂಡ ರಿಲೀಸ್ಗೆ ರೆಡಿ ಆಗುತ್ತಿದೆ.
ಇದರ ಬೆನ್ನಲ್ಲಿಯೇ ಗೋಲ್ಡನ್ ಸ್ಟಾರ್ ಗಣೇಶ್ ಬಾಲಿವುಡ್ನಲ್ಲೂ ಕಾಣಿಸಿಕೊಂಡಿದ್ದಾರೆ. ಇಲ್ಲಿಯ ಹೆಸರಾಂತ ಹಾಸ್ಯಮಯ ದಿ ಕಪಿಲ್ ಶರ್ಮಾ ಶೋದಲ್ಲಿ ಗಣೇಶ್ ಗೆಸ್ಟ್ ಆಗಿ ಹೋಗಿದ್ದಾರೆ. ಸಾಮಾನ್ಯವಾಗಿ ಇಲ್ಲಿ ಸಿನಿಮಾ ಪ್ರಚಾರಕ್ಕೇನೆ ಚಿತ್ರ ತಂಡಗಳು ಬರುತ್ತವೆ. ಅದೇ ರೀತಿ ಗಣೇಶ್ ತಮ್ಮ ಚಿತ್ರ ಪ್ರಚಾರಕ್ಕೆ ಇಲ್ಲಿಗೆ ಬಂದ್ರೇ?
ಬಾಲಿವುಡ್ನಲ್ಲಿ ಬಾನದಾರಿಯಲ್ಲಿ ಪ್ರಚಾರವೇ?
ಬಾಲಿವುಡ್ನ ಕಪಿಲ್ ಶರ್ಮಾ ಶೋದಲ್ಲಿ ಕನ್ನಡದ ಗೋಲ್ಡನ್ ಸ್ಟಾರ್ ಗಣೇಶ್ ಗೆಸ್ಟ್ ಆಗಿ ಹೋಗಿದ್ದಾರೆ. ಹಾಗೆ ಈ ಶೋಗೆ ಬಂದ ನಟ ಗಣೇಶ್ ಅವರನ್ನ ಕಪಿಲ್ ಶರ್ಮಾ ತುಂಬಾ ಪ್ರೀತಿಯಿಂದಲೇ ಸ್ವಾಗತಿಸಿದ್ದಾರೆ.
ಕಪಿಲ್ ಶರ್ಮಾ ತೋರಿದ ಪ್ರೀತಿಗೆ ಸ್ವಾಗತಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ತುಂಬಾ ಖುಷಿಪಟ್ಟಿದ್ದಾರೆ. ಆ ಖುಷಿಯನ್ನ ವಿಶೇಷವಾಗಿಯೇ ಹೇಳಿಕೊಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಪೇಜ್ಲ್ಲಿ ವಿಡಿಯೋ ಸಮೇತ ಆ ಖುಷಿಯನ್ನ ಶೇರ್ ಮಾಡಿದ್ದಾರೆ.
Happy to be part of my favourite show,Thank you @KapilSharmaK9 sir for your love n warmth🤗,Looking forward 😊 pic.twitter.com/rqli1U1eBH
— Ganesh (@Official_Ganesh) February 8, 2023
ದಿ ಕಪಿಲ್ ಶರ್ಮಾ ಶೋದಲ್ಲಿ ಭಾಗಿಯಾಗಿ ನನಗೆ ತುಂಬಾ ಖುಷಿ ಆಗಿದೆ. ಆ ಅನುಭವ ನಿಜಕ್ಕೂ ಸೂಪರ್ ಆಗಿತ್ತು. ಇನ್ನೇನು ಕೆಲವೇ ವಾರದೊಳಗೆ ಈ ಶೋ ಪ್ರಸಾರ ಆಗುತ್ತದೆ ಎಂದು ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದರು.
CCLಗಾಗಿ ಕಪಿಲ್ ಶರ್ಮಾ ಶೋದಲ್ಲಿ ಗೋಲ್ಡನ್ ಸ್ಟಾರ್ ಭಾಗಿ
ದಿ ಕಪಿಲ್ ಶರ್ಮಾ ಶೋದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಂದಾಗ ಎಲ್ಲರೂ ಒಂದ್ ಅರೆಕ್ಷಣ ಹೌದಾ? ಅಂತಲೇ ಕೇಳಿಕೊಂಡಿದ್ದರು ಅನಿಸುತ್ತದೆ. ಎಲ್ಲಿಂದ ಎಲ್ಲಿ ಲಿಂಕ್ ಅನ್ನೋದು ಅದಕ್ಕೆ ಕಾರಣ ಇರಬಹುದೇನೋ. ಆದರೆ ಕನ್ನಡದ ಪ್ರತಿಭಾವಂತ ನಾಯಕ ನಟನನ್ನ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಈಗ ಬಾಲಿವುಡ್ ನ ಬಿಗ್ ಶೋಗೆ ಕರೆದುಕೊಂಡು ಹೋಗಿದೆ.
ಇದನ್ನೂ ಓದಿ: Raveena Tandon: ಕೆಜಿಎಫ್ ನಟಿಯ ಬ್ರೇಕಪ್ ಸ್ಟೋರಿ; ಅಕ್ಷಯ್ ಕುಮಾರ್ ಜೊತೆಗಿನ ಎಂಗೇಜ್ಮೆಂಟ್ ಬಗ್ಗೆ ಮಾತಾಡಿದ ರವೀನಾ
ಕರ್ನಾಟಕ ಬುಲ್ಡೋಜರ್ ತಂಡದಲ್ಲಿ ಕನ್ನಡದ ಬಹುತೇಕ ಪ್ರತಿಭಾನ್ವಿತ ನಟರೇ ಆಡುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್, ಜೆ. ಕೆ, ನಿರೂಪ್ ಭಂಡಾರಿ ಹೀಗೆ ಹೆಸರಾಂತ ಕಲಾವಿದರು ಈ ತಂಡದಲ್ಲಿ ಆಡುತ್ತಿದ್ದಾರೆ. ಮೊನ್ನೆ ಈ ಪಂದ್ಯದ ಪತ್ರಿಕಾಗೋಷ್ಠಿ ಮುಂಬೈಯಲ್ಲೂ ನಡೆದಿದೆ.
ಪ್ರತಿ ಕನಸುಗಳು ಮೌಲ್ಯಯುತ-ಗೋಲ್ಡನ್ ಸ್ಟಾರ್ ಗಣೇಶ್!
ಇದೇ ತಿಂಗಳು 18 ರಿಂದ ಬೆಂಗಳೂರು, ಹೈದ್ರಾಬಾದ್, ಚೆನ್ನೈ, ತಿರುವನಂತಪುರ, ಜೈಪೂರ್, ಚಂಡಿಗಢ್ನಲ್ಲಿ ಸಿಸಿಎಲ್ ಪಂದ್ಯ ನಡೆಯಲಿವೆ. ಇನ್ನುಳಿದಂತೆ ಗೋಲ್ಡನ್ ಸ್ಟಾರ್ ಗಣೇಶ್ ಈ ಮೂಲಕ ತಮ್ಮ ಫೇವರಿಟ್ ಶೋದಲ್ಲೂ ಭಾಗಿ ಆಗಿದ್ದಾರೆ. ಪ್ರತಿ ಕನಸುಗಳು ಮೌಲ್ಯಯುತವಾಗಿರುತ್ತವೆ ಅನ್ನೋದನ್ನೂ ತಮ್ಮ ವಿಡಿಯೋದ ಕೊನೆಯಲ್ಲಿ ಗಣೇಶ್ ಹೇಳಿಕೊಂಡಿದ್ದಾರೆ. ಇದು ನಿಜಕ್ಕೂ ವಿಶೇಷ ಅನಿಸುತ್ತದೆ ಅಲ್ವೇ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ