ರಿಯಲ್ ಸ್ಟಾರ್ ಉಪೇಂದ್ರ ಚಿತ್ರ ಜೀವನದಲ್ಲಿ (Actor-Director Upendra) ನಟ-ನಿರ್ದೇಶಕ ಕಾಶಿನಾಥ್ ಅವರಿಗೆ ವಿಶೇಷ ಗೌರವ ಇದೆ. ಕಾಶಿನಾಥ್ ಅವರು ಇಲ್ಲದೇ ಇದ್ದರೆ ಬಹುಶಃ ಉಪ್ಪಿ ಅನ್ನುವ ಮಹಾನ್ ಪ್ರತಿಭಾವಂತ ಕನ್ನಡ (Actor-director Kashinath) ಇಂಡಸ್ಟ್ರೀಯಲ್ಲಿ ಇರ್ತಿದ್ರೋ ಇಲ್ವೋ ಗೊತ್ತಿಲ್ಲ. ಆದರೆ ಕಾಶಿನಾಥ್ ಅವರ ಗರಡಿಯಲ್ಲಿ ಬೆಳೆಯೋಕೆ ಉಪ್ಪಿಗೆ ಚಾನ್ಸ್ ಸಿಕ್ಕಿತ್ತು. ವಿ.ಮನೋಹರ್ ಸೇರಿದಂತೆ ಇನ್ನೂ ಅನೇಕರು (Sandalwood Actor Upendra) ಕನ್ನಡದ ಮಹಾನ್ ನಟ-ನಿರ್ದೇಶಕ ಕಾಶಿನಾಥ್ ಅವರ ಬಳಿ ಕೆಲಸ ಕಲಿತಿದ್ದಾರೆ. ಉಪ್ಪಿ ಆ ಸಾಲಿನ ಒಬ್ಬ ವಿದ್ಯಾರ್ಥಿ ಅನ್ನೊದು ಕೂಡ ಅಷ್ಟೇ ಸತ್ಯ. ಉಪ್ಪಿ ತಮ್ಮ ಗುರುಗಳಾದ ಕಾಶಿನಾಥ್ ಅವರನ್ನ ಎಂದೂ ಮರೆತಿಲ್ಲ. ಈಗಲೂ ಗುರುಗಳಿಗೆ ವಿಶೇಷ ಗೌರವ ಕೊಡ್ತಾನೇ ಬಂದಿದ್ದಾರೆ.
ಆದರೆ ಈಗೊಂದು (Kannada Movie Director Updates) ವಿಷಯವನ್ನ ಸ್ವತಃ ಉಪ್ಪಿ ರಿವೀಲ್ ಮಾಡಿದ್ದಾರೆ. ಅದು ತುಂಬಾನೇ ಇಂಟ್ರಸ್ಟಿಂಗ್ ಆಗಿದೆ. ಅದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಡೈರೆಕ್ಟರ್ ಕಾಶಿನಾಥ್ ಅವರನ್ನ ನೆನಪಿಸಿಕೊಂಡ ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಾಶಿನಾಥ್ ಅವರ ಗುರು-ಶಿಷ್ಯರ ಸಂಬಂಧ ಗಟ್ಟಿಯಾಗಿದೆ. ಕಾಶಿನಾಥ್ ಅವರು ಇರೋವರೆಗೂ ಉಪ್ಪಿ ತಮ್ಮ ಗುರುಗಳ ಕುರಿತು ಒಳ್ಳೆಯದನ್ನೆ ಮಾತಾಡುತ್ತಲೇ ಬಂದಿದ್ದಾರೆ. ತಮ್ಮ ಗುರುಗಗಳಿಗೆ ಕೊಡಬೇಕಾದ ಗೌರವ ಕೊಡ್ತಾನೇ ಬಂದಿದ್ದಾರೆ.
ಗುರು-ಶಿಷ್ಯರ ಬಾಂಧವ್ಯ ಹೇಗಿತ್ತು ಗೊತ್ತೇ?
ಉಪೇಂದ್ರ ಅವರು ತಮ್ಮ ಗುರುಗಳ ಜೊತೆಗೆ ಆಗಾಗ ತಮ್ಮ ಹೊಸ ಹೊಸ ಯೋಚನೆಗಳನ್ನ ಕೂಡ ಹಂಚಿಕೊಳ್ಳುತ್ತಿದ್ದರು. ಹಾಗೇನೆ ತಮ್ಮ ಪ್ರಜಾಕೀಯದ ವಿಷಯವನ್ನ ಶೇರ್ ಮಾಡಿಕೊಂಡಿದ್ದರು. ಉಪ್ಪಿಯ ಈ ಒಂದು ಆಲೋಚನೆಯನ್ನ ಅಂದೇ ಕಾಶಿನಾಥ್ ಅವರು ಮೆಚ್ಚಿದ್ದರು.
ಹೌದು, ಈ ಒಂದು ಸತ್ಯವನ್ನ ಸ್ವತಃ ಉಪೇಂದ್ರ ಈಗ ನೆನಪಿಸಿಕೊಂಡಿದ್ದಾರೆ. ತಮ್ಮ ಗುರುಗಳಾದ ಕಾಶಿನಾಥ್ ಅವರ 72ನೇ ಜನ್ಮ ದಿನದಂದು ಈ ಒಂದು ವಿಚಾರವನ್ನ ಉಪ್ಪಿ ಹೇಳಿಕೊಂಡಿದ್ದಾರೆ.
ಗುರುಗಳ ಆ ಮಾತು ನೆನಪಿಸಿಕೊಂಡ ರಿಯಲ್ ಸ್ಟಾರ್ ಉಪೇಂದ್ರ
ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರೋ ಉಪ್ಪಿ, ತಮ್ಮ ಟ್ವಿಟರ್ ಪೇಜ್‌ನಲ್ಲಿ ಗುರುಗಳ ಜನ್ಮ ದಿನಕ್ಕೆ ಶುಭಾಷಯ ತಿಳಿಸೋದರ ಜೊತೆಗೆ ತಮ್ಮ ಪ್ರಜಾಕೀಯ ಯೋಚನೆಯನ್ನ ಗುರುಗಳು ಒಪ್ಪಿದ್ದರು ಅಂತಲೂ ಹೀಗೆ ಬರೆದುಕೊಂಡಿದ್ದಾರೆ.
"ಲೋ ನಿನ್ತರಾ ಯೋಚನೇ ಮಾಡೋ ಲಕ್ಷಾಂತರ ಜನ ಇದಾರೆ. ಇಟ್ಟ ಹೆಜ್ಜೆ ಹಿಂದೆ ಇಡ್ಬೇಡಾ. ನೀನ್ ಹೇಳ್ತಿರೋದು ಸರಿ ಇದೆ. ಪ್ರಜಾಕೀಯ ಆಗುತ್ತೆ ಮಾಡು" ಎಂದು ನನ್ನ ಗುರುಗಳು ಭುಜ ತಟ್ಟಿದರು ಎಂದು ಉಪ್ಪಿ ಹೇಳಿಕೊಂಡಿದ್ದಾರೆ.
ಉಪ್ಪಿ ಪ್ರಜಾಕೀಯ ಪರಿಕಲ್ಪನೆ ಮೆಚ್ಚಿದ್ದರು ಡೈರೆಕ್ಟರ್ ಕಾಶಿನಾಥ್
ಉಪ್ಪಿ ತಮ್ಮ ಪ್ರಜಾಕೀಯ ಪಕ್ಷದ ಮೂಲಕ ಕಂಡ ಕನಸು ನನಸು ಮಾಡೋಕೆ ಮುಂದಾಗಿದ್ದಾರೆ. ಎಲೆಕ್ಷನ್ ಅಬ್ಬರದಲ್ಲಿಯೇ ಇದೀಗ ಮೇ-8 ರಂದು ಕಾಶಿನಾಥ್ ಅವರ ಜನ್ಮ ದಿನ ಕೂಡ ಬಂದೆ. ಈ ಹಿನ್ನೆಲೆಯಲ್ಲಿ ತಮ್ಮ ಗುರುಗಳು ಪ್ರಜಾಕೀಯದ ಪರಿಕ್ಪಲ್ಪನೆಯನ್ನ ಒಪ್ಪಿದ್ದರು ಅನ್ನುವ ಮಾತನ್ನ ಇದೀಗ ಉಪ್ಪಿ ನೆನಪಿಸಿಕೊಡಿದ್ದಾರೆ.
ತಮ್ಮ ಗುರುಗಳ ಈ ಮಾತನ್ನ ಮತ್ತೆ ನೆನಪಿಸಿಕೊಳ್ಳುವ ಮೂಲಕ ಅವರಿಗೆ ಹುಟ್ಟುಹಬ್ಬದ ಶುಭಾಷಯಗಳನ್ನ ಹೀಗೆ ಈಗ ತಿಳಿಸಿದ್ದಾರೆ.
ಇದನ್ನೂ ಓದಿ: Rajinikanth: ಮೊಯಿದ್ದೀನ್ ಭಾಯ್ ಆದ ರಜನೀಕಾಂತ್! ಫಸ್ಟ್ ಲುಕ್ ಪೋಸ್ಟರ್ ರಿಲೀಸ್
ಇನ್ನುಳಿದಂತೆ ಕಾಶಿನಾಥ್ ಅವರು ಮತ್ತು ಉಪ್ಪಿ ಕನ್ನಡ ಚಿತ್ರರಂಗದ ಗ್ರೇಟ್ ಡೈರೆಕ್ಟರ್ ಸಾಲಿನಲ್ಲಿಯೇ ಇದ್ದಾರೆ. ಇವರ ಗುರು-ಶಿಷ್ಯ ಬಾಂಧವ್ಯ ಕೂಡ ಕನ್ನಡ ಸಿನಿಮಾರಂಗದಲ್ಲಿ ಹೆಸರುವಾಸಿ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ