Rishab Shetty: ಹೊಸ ವರ್ಷಕ್ಕೆ ಗುಡ್​ ನ್ಯೂಸ್​ ಕೊಟ್ಟ ರಿಷಬ್​ ಶೆಟ್ಟಿ: ಮತ್ತೆ ಅಪ್ಪ ಆಗ್ತಿದ್ದಾರೆ ನಮ್ಮ `ಹೀರೋ’!

ಮೂರು ವಿಚಾರಕ್ಕೆ ರಿಷಬ್​ ಶೆಟ್ಟಿ ಖುಷಿಯಾಗಿದ್ದಾರೆ. ಒಂದು ಗರುಡ ಗಮನ ವೃಷಭ ವಾಹನ ಸಕ್ಸಸ್​ ತಂದು ಕೊಟ್ಟಿತ್ತು. ಎರಡನೆಯದಾಗಿ ರಿಷಬ್​ ಶೆಟ್ಟಿ ನಿರ್ದೇಶನ ಮಾಡಿದ್ದ ಕಿರಿಕ್​ ಪಾರ್ಟಿ(Kirik Party) ಸಿನಿಮಾ 5 ವರ್ಷ ಪೂರೈಸಿದೆ. ಇದೀಗ ಮತ್ತೆ ತಂದೆಯಾಗುತ್ತಿರುವ ಖುಷಿ ಹಂಚಿಕೊಂಡಿದ್ದಾರೆ.

ರಿಷಬ್​ ಶೆಟ್ಟಿ ಕುಟುಂಬ

ರಿಷಬ್​ ಶೆಟ್ಟಿ ಕುಟುಂಬ

  • Share this:
ಹೊಸ ವರ್ಷಕ್ಕೆ ರಿಷಬ್​ ಶೆಟ್ಟಿ(Rishab Shetty) ಗುಡ್​ ನ್ಯೂಸ್(Good News)​ ಕೊಟ್ಟಿದ್ದಾರೆ. ಎರಡನೇ ಮಗು(Second Child) ನಿರೀಕ್ಷೆಯಲ್ಲಿ ರಿಷಬ್-ಪ್ರಗತಿ ದಂಪತಿ ಇದ್ದಾರೆ. ಈಗಾಗಲೇ ರಿಷಬ್​ ಶೆಟ್ಟಿಗೆ ರಣ್ವಿತ್(Ranvith Shetty) ಹೆಸರಿನ ಓರ್ವ ಪುತ್ರನಿದ್ದಾನೆ. ಇದೀಗ ಪ್ರಗತಿ ಎರಡನೇ ಬಾರಿಗೆ ಗರ್ಭಿಣಿಯಾಗಿದ್ದು, ಈ ಸಂತೋಷದ ವಿಚಾರವನ್ನು ರಿಷಬ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ನಟ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತೊಮ್ಮೆ ತಂದೆಯಾಗಲಿದ್ದಾರಂತೆ. ಈ ವಿಷಯವನ್ನು ಅವರು ಸೋಶಿಯಲ್ ಮೀಡಿಯಾ(Social Media)ದಲ್ಲಿ ಹಂಚಿಕೊಂಡಿದ್ದಾರೆ. ಅಂತೆಯೇ ಅವರ ಪತ್ನಿ ಪ್ರಗತಿ ಶೆಟ್ಟಿ ಕೂಡ ಈ ಖುಷಿಯ ಬಗ್ಗೆ ಮಾತನಾಡಿದ್ದಾರೆ. ಸದ್ಯ ಗರುಡ ಗಮನ ವೃಷಭ ವಾಹನ(Garuda  Gamana Vrishabha Vahana)ಸಿನಿಮಾ ಸಕಸ್ಸ್​ ಅಲೆಯಲ್ಲಿ ರಿಷಭ್​ ಶೆಟ್ಟಿ ಇದ್ದರು. ಇದೀಗ ಅವರ ಸಂತಸ ದುಪಟ್ಟಾಗಿದೆ. ಎರಡನೇ ಬಾರಿ ತಂದೆಯಾಗುತ್ತಿರುವುದಕ್ಕೆ ರಿಷಬ್​ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ಮೂರು ವಿಚಾರಕ್ಕೆ ರಿಷಬ್​ ಶೆಟ್ಟಿ ಖುಷಿಯಾಗಿದ್ದಾರೆ. ಒಂದು ಗರುಡ ಗಮನ ವೃಷಭ ವಾಹನ ಸಕ್ಸಸ್​ ತಂದು ಕೊಟ್ಟಿತ್ತು. ಎರಡನೆಯದಾಗಿ ರಿಷಬ್​ ಶೆಟ್ಟಿ ನಿರ್ದೇಶನ ಮಾಡಿದ್ದ ಕಿರಿಕ್​ ಪಾರ್ಟಿ(Kirik Party) ಸಿನಿಮಾ 5 ವರ್ಷ ಪೂರೈಸಿದೆ. ಇದೀಗ ಮತ್ತೆ ತಂದೆಯಾಗುತ್ತಿರುವ ಖುಷಿ ಹಂಚಿಕೊಂಡಿದ್ದಾರೆ.

ಸಂತಸ ಹಂಚಿಕೊಂಡ ರಿಷಬ್​ ಶೆಟ್ಟಿ!

‘ಹೊಸ ವರ್ಷಕ್ಕೆ ಸಂತಸವೊಂದು ನಮ್ಮ ಕುಟುಂಬದ ಜೊತೆಯಾಗಲಿದೆ. ರಣ್ವಿತ್ ಶೆಟ್ಟಿ ಸದ್ಯದಲ್ಲೇ ಅಣ್ಣನಾಗಲಿದ್ದಾನೆ. ನಿಮ್ಮೆಲ್ಲರ ಆಶೀರ್ವಾದವಿರಲಿ’ ಎಂದು ರಿಷಬ್ ಬರೆದುಕೊಂಡಿದ್ದಾರೆ. ತುಂಬು ಗರ್ಭಿಣಿ ಪ್ರಗತಿ ಜೊತೆಗೆ ರಿಷಬ್ ಫೋಟೋ ಶೂಟ್ ಮಾಡಿಸಿಕೊಂಡಿದ್ದು ಈ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ. ಈ ಪೋಸ್ಟ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಅವರ ಅಭಿಮಾನಿಗಳು ಕೂಡ ಇದನ್ನು ಶೇರ್​ ಮಾಡಿ ಶುಭ ಹಾರೈಸುತ್ತಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ರಿಷಬ್​ ಶೆಟ್ಟಿ  ರಣ್ವಿತ್ ಸಖತ್​ ಫೇಮಸ್​ ಆಗಿದ್ದಾರೆ.



ಇದನ್ನು ಓದಿ: LGBTQ ಸಮುದಾಯದ ವಿರುದ್ದ ಬಿಜೆಪಿ ಶಾಸಕ ನೀಡಿದ ಹೇಳಿಕೆ ವಿರುದ್ಧ ನಟಿ ಸೋನಮ್ ಕಪೂರ್ ಆಕ್ರೋಶ

ರಿಷಬ್​ ಪತ್ನಿ ಪ್ರಗತಿ ಶೆಟ್ಟಿ ಹೇಳಿದ್ದೇನು?

‘ನಾವು ಪುಣ್ಯ ಮಾಡಿದ್ದೇವೆ, ಮತ್ತೊಮ್ಮೆ ಪಾಲಕರಾಗುತ್ತಿರುವುದಕ್ಕೆ ಖುಷಿಯಿದೆ. ಈ ಖುಷಿಯ ಜೊತೆಗೆ ಹೊಸ ವರ್ಷ ಬರಮಾಡಿಕೊಳ್ಳುತ್ತಿರುವುದು ಖುಷಿ ಕೊಟ್ಟಿದೆ. ಬೇಸಿಗೆ ಬರುತ್ತಿದ್ದಂತೆ ನಮ್ಮ ಕುಟುಂಬದಲ್ಲಿ ನಾಲ್ಕು ಮಂದಿ ಸದಸ್ಯರು ಇರುತ್ತಾರೆ ಎಂದು ಹೇಳಲು ಸಂತಸವಾಗುತ್ತದೆ" ಎಂದು ಪ್ರಗತಿ ಶೆಟ್ಟಿ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ದಂಪತಿಗೆ ಸಾಕಷ್ಟು ಮಂದಿ ಶುಭಾಶಯ ತಿಳಿಸುತ್ತಿದ್ದಾರೆ. ಸಿನಿಮಾರಂಗದ ಅನೇಕರು ವಿಶ್​ ಮಾಡುತ್ತಿದ್ದಾರೆ.

ಇದನ್ನು ಓದಿ : ಅಯ್ಯೋ.. ನಾನ್​ ವರ್ಜಿನ್​ ಅಲ್ಲ ಅಂದ್ಬಿಟ್ರು ಈ ನಟಿ: ಹೀಗ್​ ಹೇಳೋಕೂ ಒಂದು ಕಾರಣ ಇದ್ಯಂತೆ!

ಹ್ಯಾಂಡ್ಸಪ್ ಹಾಡಿಗೆ ಸ್ಟೆಪ್​ ಹಾಕಿದ್ದ ರಣವಿತ್ ಶೆಟ್ಟಿ ಸ್ಟೆಪ್​

9 ತಿಂಗಳ ಪ್ರಾಯವಿದ್ದಾಗ ರಣ್ವೀತ್​ ಶೆಟ್ಟಿ, ರಕ್ಷಿತ್ ಶೆಟ್ಟಿ ನಟನೆಯ 'ಅವನೇ ಶ್ರೀಮನ್ನಾರಾಯಣ' ಸಿನಿಮಾದ 'ಹ್ಯಾಂಡ್ಸಪ್‌' ಹಾಡಿಗೆ ಸ್ಟೆಪ್ ಹಾಕಿದ್ದನು. ಆ ವಿಡಿಯೋ ವೈರಲ್ ಆಗಿತ್ತು. ಮಗನ ಜೊತೆಗಿನ ಫೋಟೋಗಳನ್ನು ಆಗಾಗ ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ವಿಡಯೋಗಳು, ಫೋಟೋಗಳು ಸಖತ್​ ವೈರಲ್​ ಆಗಿತ್ತು.

ಕಿರಿಕ್​ ಪಾರ್ಟಿ - 2 ಸಿನಿಮಾ ಮಾಡ್ತಾರಂತೆ ರಿಷಭ್​ ಶೆಟ್ಟಿ

ಪ್ರಗತಿ ಶೆಟ್ಟಿ , ರಿಷಬ್ ಶೆಟ್ಟಿ ಸಿನಿಮಾ ಸೇರಿದಂತೆ ಕೆಲ ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದು, ಪತಿ ಕೆಲಸಕ್ಕೆ ಸಾಥ್ ನೀಡುತ್ತಿದ್ದಾರೆ. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಕಾಂಬಿನೇಶನ್‌ನಲ್ಲಿ ಯಾವಾಗ 'ಕಿರಿಕ್ ಪಾರ್ಟಿ 2' ಬರಲಿದೆ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ. ಈಗಾಗಲೇ 'ಕಿರಿಕ್ ಪಾರ್ಟಿ' ರಿಲೀಸ್ ಆಗಿ 5 ವರ್ಷಗಳು ಆಯ್ತು.
Published by:Vasudeva M
First published: