Rishab Shetty: ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರಗತಿ, ರಿಷಬ್​​ ಶೆಟ್ಟಿ ಮನೆಯಲ್ಲಿ ಸಂಭ್ರಮವೋ ಸಂಭ್ರಮ!

ಪತ್ನಿಯೊಂದಿಗಿನ ಫೋಟೊ ಹಂಚಿಕೊಂಡು "ಇಷ್ಟೇ ಚಂದದ ಮಗಳು ಹುಟ್ಟಿದ್ದಾಳೆ. ತಾಯಿ ಮಗು ಆರೋಗ್ಯವಾಗಿದ್ದಾರೆ." ಎಂದು ಟ್ವಿಟ್ಟರ್‌ನಲ್ಲಿ ರಿಷಬ್​ ಶೆಟ್ಟಿ ಬರೆದುಕೊಂಡಿದ್ದಾರೆ. ಸಿನಿಮಾ ರಂಗದ ಕಲಾವಿದರು, ಅಭಿಮಾನಿಗಳು ರಿಷಬ್​ ಶೆಟ್ಟಿಗೆ ವಿಶ್​ ಮಾಡುತ್ತಿದ್ದಾರೆ.

ರಿಷಬ್​ ಶೆಟ್ಟಿ, ಪ್ರಗತಿ ಶೆಟ್ಟಿ

ರಿಷಬ್​ ಶೆಟ್ಟಿ, ಪ್ರಗತಿ ಶೆಟ್ಟಿ

  • Share this:
ಸ್ಯಾಂಡಲ್​ವುಡ್(Sandalwood)​ನ ಪ್ರತಿಭಾವಂತ ನಟ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಹಾಗೂ ಪ್ರಗತಿ ದಂಪತಿ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತೋಷದ ವಿಚಾರವನ್ನು ರಿಷಭ್​ ಶೆಟ್ಟಿ ಟ್ವೀಟ್​ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಹೊಸ ವರ್ಷದಂದೇ ರಿಷಬ್ ಶೆಟ್ಟಿ ಪ್ರಗತಿ ಎರಡನೇ ಮಗುವಿಗೆ ತಾಯಿಯಾಗುತ್ತಿರುವ ಸಂತಸದ ವಿಷಯವನ್ನು ಹಂಚಿಕೊಂಡಿದ್ದರು. ಇಂದು ಮಾರ್ಚ್ 4 ರಂದು  ರಿಷಬ್ ಶೆಟ್ಟಿ ಎರಡನೇ ಮಗುವಿನ ಬಗ್ಗೆ ಖುಷಿ ವಿಷಯವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಕೂಡ ರಿಷಭ್​ ಶೆಟ್ಟಿ ದಂಪತಿಗೆ ಶುಭಾಶಯ ತಿಳಿಸುತ್ತಿದ್ದಾರೆ. ದಂಪತಿಗೆ ಈಗಾಗಲೇ ರಣ್ ವಿತ್ ಶೆಟ್ಟಿ ಎಂಬ ಗಂಡು ಮಗುವಿದ್ದು ಇದು ಅವರ ಸಂಸಾರದಲ್ಲಿ ಎರಡನೇ ಮಗುವಾಗಿದೆ. ತುಂಬು ಗರ್ಭಿಣಿಯ ಫೋಟೋಗಳು, ಪ್ರಗತಿಯವರ ಸೀಮಂತ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು.

ಟ್ವಿಟ್ಟರ್​​ನಲ್ಲಿ ಸಂತಸ ಹಂಚಿಕೊಂಡ ರಿಷಬ್​!

ರಿಷಬ್‌ ಹಾಗೂ ಪ್ರಗತಿ ದಂಪತಿಗೆ ಹೆಣ್ಣು ಜನಿಸಿರುವ ಖುಷಿ ವಿಷಯವನ್ನು ತಮ್ಮ ಅಭಿಮಾನಿಗಳಿಗೆ ಟ್ವಿಟ್ಟರ್‌ ಮೂಲಕ ಶೇರ್ ಮಾಡಿಕೊಂಡು ಆನಂದಿಸಿದ್ದಾರೆ. ಪತ್ನಿಯೊಂದಿಗಿನ ಫೋಟೊ ಹಂಚಿಕೊಂಡು "ಇಷ್ಟೇ ಚಂದದ ಮಗಳು ಹುಟ್ಟಿದ್ದಾಳೆ. ತಾಯಿ ಮಗು ಆರೋಗ್ಯವಾಗಿದ್ದಾರೆ." ಎಂದು ಟ್ವಿಟ್ಟರ್‌ನಲ್ಲಿ ರಿಷಬ್​ ಶೆಟ್ಟಿ ಬರೆದುಕೊಂಡಿದ್ದಾರೆ. ಸಿನಿಮಾ ರಂಗದ ಕಲಾವಿದರು, ಅಭಿಮಾನಿಗಳು ರಿಷಬ್​ ಶೆಟ್ಟಿಗೆ ವಿಶ್​ ಮಾಡುತ್ತಿದ್ದಾರೆ.


ಹೊಸ ವರ್ಷದಂದು ಗುಡ್​ನ್ಯೂಸ್​ ಕೊಟ್ಟಿದ್ದ ರಿಷಬ್​!

ರಿಷಬ್ ಶೆಟ್ಟಿ ಎರಡನೇ ಬಾರಿ ತಂದೆಯಾಗುತ್ತಿರುವ ಖುಷಿಯ ವಿಷಯವನ್ನು ಹೊಸ ವರ್ಷದಂದೇ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದರು. 'ಸಂತಸ'ವೊಂದು ನಮ್ಮ ಕುಟುಂಬದ ಜೊತೆಯಾಗಲಿದೆ, ರಣ್‌ವಿತ್ ಶೆಟ್ಟಿ ಸದ್ಯದಲ್ಲೇ ಅಣ್ಣನಾಗಲಿದ್ದಾನೆ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದವಿರಲಿ". ಎಂದು ಟ್ವೀಟ್ ಮಾಡಿದ್ದರು. ಪತ್ನಿ ಪ್ರಗತಿ ಶೆಟ್ಟಿ ಹಾಗೂ ಪುತ್ರ ರಣ್ವಿತ್ ಶೆಟ್ಟಿಯೊಂದಿಗೆ ಹೊಸ ಫೋಟೋಶೂಟ್ ಮಾಡಿಸಿದ್ದರು. ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಇದನ್ನೂ ಓದಿ: ಒಂದೇ ದಿನ 8 ಕನ್ನಡ ಸಿನಿಮಾ ರಿಲೀಸ್​.. ಜೊತೆಗೆ ಮತ್ತೆ ಥಿಯೇಟರ್​ಗೆ ಬಂದ ಬ್ಯಾಟ್​ಮ್ಯಾನ್​!

‘ಪೆದ್ರೋ’ ಸಿನಿಮಾ ನಿರ್ಮಾಣ ಮಾಡಿರೋ ರಿಷಬ್​!

ರಿಷಬ್ ಶೆಟ್ಟಿ ನಿರ್ಮಿಸಿದ 'ಪೆದ್ರೊ' ಸಿನಿಮಾ ಈಗ ಆರಂಭವಾಗಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಆಯ್ಕೆ ಆಗಿಲ್ಲ ಎಂದು ಬಹಿರಂಗವಾಗಿ ಬೇಸರ ಹೊರಹಾಕಿದ್ದರು. 'ಪೆದ್ರೊ' ಚಿತ್ರವನ್ನು ನಟೇಶ್ ಹೆಗ್ಡೆ ನಿರ್ದೇಶನ ಮಾಡಿದ್ದು, ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಈಗಾಗಲೇ ಭಾಗಿಯಾಗಿದೆ. ಆದರೆ, ನಮ್ಮ ನಾಡಿನಲ್ಲೇ ಬೆಲೆ ಕೊಟ್ಟಿಲ್ಲ ಎಂದು ಬೇಸರ ಹೊರಹಾಕಿದ್ದರು. ಇನ್ನೂ ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದ್ದು, ಸಿನಿಮಾ ಮೇಲಿರುವ ನಿರೀಕ್ಷೆ ಹೆಚ್ಚಾಗಿದೆ.

ಇದನ್ನೂ ಓದಿ: ಅಪ್ಪು ಅಂದ್ರೆ ಕಿರೀಟಿಗೆ ಅಚ್ಚುಮೆಚ್ಚು, ಇಂದು ಜನಾರ್ದನ ​ರೆಡ್ಡಿ ಮಗನ ಸಿನಿಮಾ ಟೀಸರ್​ ರಿಲೀಸ್​!

ರಿಷಬ್​ ಕೈಯಲ್ಲಿ ಸಾಲು ಸಾಲು ಸಿನಿಮಾಗಳು

ಇತ್ತ ರಿಷಬ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಅವರ ನಟನೆಯ ಗರುಡ ಗಮನ ವೃಷಭ ವಾಹನ ಹಿಟ್ ಆಗಿದೆ. 'ಹರಿಕಥೆ ಅಲ್ಲ ಗಿರಿಕಥೆ' , 'ಬೆಲ್ ಬಾಟಂ 2', 'ಮಹಾನೀಯರೆ ಮಹಿಳೆಯರೇ', 'ಆಂಟಗೋನಿ ಶೆಟ್ಟಿ', 'ಕಾಂತರ' ಸಿನಿಮಾಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ರಿಷಬ್​ ಶೆಟ್ಟಿಯವರು ಈ ವರ್ಷ ಫುಲ್​ ಬ್ಯುಸಿಯಾಗಿದ್ದಾರೆ. ಇನ್ನೂ ಇದೆಲ್ಲ ಮುಗಿದ ಬಳಿಕ ಕಿರಿಕ್​ ಪಾರ್ಟಿ 2 ಸಿನಿಮಾ ಮಾಡುತ್ತಾರೆ ಎಂಬ ಗುಸುಗುಸು ಕೂಡ ಹರಿದಾಡುತ್ತಿದೆ. ಜೊತೆಗೆ ರಕ್ಷಿತ್​ ಶೆಟ್ಟಿ ನಟಿಸಲಿರುವ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಲಿದ್ದಾರಂತೆ ರಿಷಬ್​ ಶೆಟ್ಟಿ.
Published by:Vasudeva M
First published: