Diganth: ವಿಡಿಯೋ ಮೂಲಕ ಧನ್ಯವಾದ ತಿಳಿಸಿದ ದೂದ್​ಪೇಡಾ, ಈಗ ಹೇಗಿದ್ದಾರೆ ನಟ ದಿಗಂತ್?

ಅಪರೇಷನ್ ನಂತರ ಇದೇ ಮೊದಲ ಬಾರಿಗೆ ವಿಡಿಯೋ ಒಂದನ್ನು ಹಂಚಿಕೊಂಡಿರುವ ದಿಗಂತ್ ತಮ್ಮ ಅಪಘಾತದ ವೇಳೆಯಲ್ಲಿ ತಮಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ದಿಗಂತ್​

ದಿಗಂತ್​

  • Share this:
ಗೋವಾದಲ್ಲಿ (Goa) ಕುತ್ತಿಗೆಗೆ ಗಂಭೀರ ಗಾಯ ಮಾಡಿಕೊಂಡಿದ್ದ ಸ್ಯಾಂಡಲ್​ವುಡ್​ (Sandalwood) ನಟ ದಿಗಂತ್​ಗೆ (Diganth) ಅಪರೇಷನ್ ಮಾಡಲಾಗಿತ್ತು. ಸದ್ಯ ಆರೋಗ್ಯ ಪರಿಸ್ಥಿತಿ ಸುಧಾರಿಸಿದೆ. ಈ ಮಧ್ಯೆ ದಿಗಂತ್ ಪತ್ನಿ ಹಾಗೂ ನಟಿ ಐಂದ್ರಿತಾ ರೇ (Aindrita Ray) ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಇದರ ನಡುವೆ ಅಪರೇಷನ್ ನಂತರ ಇದೇ ಮೊದಲ ಬಾರಿಗೆ ವಿಡಿಯೋ ಒಂದನ್ನು ಹಂಚಿಕೊಂಡಿರುವ ದಿಗಂತ್ ತಮ್ಮ ಅಪಘಾತದ ವೇಳೆಯಲ್ಲಿ ತಮಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸುವ ಮೂಲಕ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಇನ್ನು, ವಿಡಿಯೋದಲ್ಲಿ ದಿಗಂತ್ ಫಿಟ್ ಆದಂತೆ ಕಾಣುತ್ತಿದ್ದು, ಚೇತರಿಸಿಕೊಂಡಿದ್ದಾರೆ.

ವಿಡಿಯೋ ಮೂಲಕ ಧನ್ಯವಾದ ತಿಳಿಸಿದ ದೂದ್​ಪೇಡಾ:

ಇನ್ನು, ಕಳೆದ ಕೆಲ ದಿನಗಳ ಹಿಂದೆ ದಿಗಂತ್ ಮತ್ತು ಐಂದ್ರಿತಾ ರೇ ಗೋವಾಗೆ ಪ್ರವಾಸಕ್ಕೆ ತೆರಳಿದ ವೇಳೆ ದಿಗಂತ್ ಜಂಪ್ ಮಾಡುವ ವೇಳೆ ಬಿದ್ದು, ಕುತ್ತಿಗೆಯ ಭಾಗಕ್ಕೆ ಪೆಟ್ಟು ಮಾಡಿಕೊಂಡಿದ್ದರು. ಇದೀಗ ವಿಡಿಯೋ ಮೂಲಕ ಧನ್ಯವಾದ ತಿಳಿಸಿದ ದಿಗಂತ್​, ‘ಗೋವಾದಲ್ಲಿ ನಡೆದ ಘಟನೆಯಿಂದ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾದೆ. ಈ ನಿಟ್ಟಿನಲ್ಲಿ ಹಲವರಿಗೆ ನಾನು ಧನ್ಯವಾದಗಳನ್ನು ಹೇಳಬೇಕಿದೆ. ಮುಖ್ಯವಾಗಿ ವೆಂಕಟ್ ನಾರಾಯಣ್ ಅವರ ಸಹಾಯವನ್ನು ಜೀವನ ಪರ್ಯಂತ ನಾನು ಮರೆಯುವುದಿಲ್ಲ. ಅಲ್ಲದೇ ಗೋವಾದ ಸಿಎಂ ಪ್ರಮೋದ್ ಸಾವಂತ್‌ ಅವರಿಗೂ ಧನ್ಯವಾದ. ನನ್ನನ್ನು ಏರ್‌ಲಿಫ್ಟ್ ಮಾಡಲು ಅವರು ಸಾಕಷ್ಟು ಸಹಾಯ ಮಾಡಿದ್ದಾರೆ‘ ಎಂದಿದ್ದಾರೆ.

ಎಲ್ಲರಿಗೂ ಕೃತಜ್ಞತೆಗಳು ಸಲ್ಲಿಸಿದ ದಿಗಂತ್:

ಇನ್ನು, ದಿಗಂತ್​ ಅವರಿಗೆ ಚಿಕಿತ್ಸೆ ನೀಡಿದ ವೈದ್ಯ ವಿದ್ಯಾಧರ್‌ಗೆ ದಿಗಂತ್ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ. ಗೋವಾದ ಮತ್ತು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯವರಿಗೆ ವಿಶೇಷ ಧನ್ಯವಾದ ಹೇಳಬೇಕು. ಅದರಲ್ಲೂ ಡಾ. ವಿದ್ಯಾಧರ್ ಅವರಿಗೆ ವಿಶೇಷ ಧನ್ಯವಾದ ಹೇಳುತ್ತೇನೆ. ವಿದ್ಯಾಧರ್ ಅವರು ನನ್ನ ಪಾಳಿಗೆ ದೇವರಂತೆ. ಸಣ್ಣ ಶಸ್ತ್ರಚಿಕಿತ್ಸೆಯನ್ನು ಸೂಕ್ತ ಸಮಯದಲ್ಲಿ ಮಾಡುವ ಮೂಲಕ ನನ್ನನ್ನು ಮತ್ತೆ ಮೊದಲಿನಂತೆ ಮಾಡಿದ್ದಾರೆ. ಇದಲ್ಲದೇ ನನ್ನ ಅಭಿಮಾನಿಗಳು, ನನ್ನ ಕುಟುಂಬದವರು, ಚಿತ್ರರಂಗದ ನನ್ನ ಗೆಳೆಯರು, ನನ್ನ ಸಹಪಾಠಿಗಳು ಎಲ್ಲರೂ ನನ್ನ ಚೇತರಿಕೆಗಾಗಿ ಪ್ರಾರ್ಥಿಸಿದ್ದೀರ. ನಿಮ್ಮ ಪ್ರಾರ್ಥನೆಗಳಿಂದಲೇ ನಾನು ಇಷ್ಟು ಬೇಗ ಚೇತರಿಸಿಕೊಳ್ಳಲು ಸಾಧ್ಯವಾಗಿದೆ. ಇನ್ನೊಂದು ಎರಡು ವಾರದಲ್ಲಿ ಸಂಪೂರ್ಣ ಚೇರಿಸಿಕೊಳ್ಳುತ್ತೇನೆ‘ ಎಂದಿದ್ದಾರೆ.

ಇದನ್ನೂ ಓದಿ: Diganth Health: ಆರಾಮಾಗಿದ್ದಾರಂತೆ ದಿಗಂತ್, ಲೇಟೆಸ್ಟ್ ಫೊಟೊ ಹಂಚಿಕೊಂಡ ಐಂದ್ರಿತಾ - ದೂದ್ ಪೇಡಾ ಸ್ಮೈಲಿಂಗ್!

ಐಂದ್ರಿತಾ ಸಹ ಧನ್ಯವಾದ ತಿಳಸಿದ್ದರು:

ಕುಟುಂಬದ ಜೊತೆ ಪ್ರವಾಸಕ್ಕೆಂದು ಗೋವಾಗೆ ಹೋಗಿದ್ದ ನಟ ದಿಗಂತ್, ಕತ್ತಿಗೆ ಏಟು ಮಾಡಿಕೊಂಡಿದ್ದರು. ಈ ಸಮಯದಲ್ಲಿ ಅವರಿಗೆ ತುರ್ತಾಗಿ ಶಸ್ತ್ರ ಚಿಕಿತ್ಸೆ ಮಾಡಬೇಕಿತ್ತು, ಅವರನ್ನು ತಕ್ಷಣವೇ ಬೆಂಗಳೂರಿಗೆ ಕರೆದುಕೊಂಡು ಬರುವ ಪರಿಸ್ಥಿತಿ ಬಂದಿತ್ತು. ಆಗ ಅವರನ್ನು ತಕ್ಷಣವೇ ಹೇಗೆ ಬೆಂಗಳೂರಿಗೆ ಕರೆದುಕೊಂಡು ಬರಬೇಕು ಎಂಬ ಚಿಂತೆಯಲ್ಲಿದ್ದ ದಿಗಂತ್ ಕುಟುಂಬಕ್ಕೆ ನಿರ್ಮಾಪಕ ಹಾಗೂ ಉದ್ಯಮಿಯೊಬ್ಬರು ಸಹಾಯ ಮಾಡಿದ್ದರಂತೆ.

ಹೌದು, ಕೆವಿಎನ್ ಪ್ರೊಡಕ್ಷನ್ ಮಾಲೀಕರಾದ ವೆಂಕಟ್ ಕೆ ನಾರಾಯಣ್ ಅವರು ಚಿಂತೆಯಲ್ಲಿದ್ದ ದಿಗಂತ್ ಕುಟುಂಬಕ್ಕೆ ಧೈರ್ಯ ತುಂಬಿ ಏರ್​ ಲಿಫ್ಟ್​ ಮಾಡಲು ಸಹಾಯ ಮಾಡಿದ್ದರಂತೆ. ಈ ಬಗ್ಗೆ ಐಂದ್ರಿತಾ ಸ್ವತಃ ಹೇಳಿಕೊಂಡಿದ್ದು, ಅವರನ್ನು ದೇವರೇ ಕಳುಹಿಸಿದಂತಿದೆ. ಅವರಿಗೆ ಅದೆಷ್ಟೇ ಧನ್ಯವಾದ ಹೇಳಿದರೂ ಸಾಲದು ಎಂದು ಬರೆದುಕೊಂಡಿದ್ದಾರೆ.
Published by:shrikrishna bhat
First published: