• Home
  • »
  • News
  • »
  • entertainment
  • »
  • Dhruva Sarja: ಧ್ರುವ ಸರ್ಜಾ-ಪ್ರೇರಣಾಗೆ ಹೆಣ್ಣು ಮಗು! ನಾರ್ಮಲ್ ಡೆಲಿವರಿ

Dhruva Sarja: ಧ್ರುವ ಸರ್ಜಾ-ಪ್ರೇರಣಾಗೆ ಹೆಣ್ಣು ಮಗು! ನಾರ್ಮಲ್ ಡೆಲಿವರಿ

ಧ್ರುವ ಸರ್ಜಾಗೆ ಹೆಣ್ಣು ಮಗು

ಧ್ರುವ ಸರ್ಜಾಗೆ ಹೆಣ್ಣು ಮಗು

ಸ್ಯಾಂಡಲ್​ವುಡ್ ನಟ ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿ ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ. ಸಿಹಿ ಸುದ್ದಿಯನ್ನು ನಟ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

  • Share this:

ಸ್ಯಾಂಡಲ್​ವುಡ್ ನಟ ಧ್ರುವ ಸರ್ಜಾ (Dhruva Sarja) ಅವರು ಹೆಣ್ಣು ಮಗುವಿಗೆ  (Baby Girl) ತಂದೆಯಾಗಿದ್ದಾರೆ. ಪತ್ನಿ ಪ್ರೇರಣಾ ಹೆಣ್ಣು ಮಗುವಿಗೆ ಜನ್ಮ ನೀಡಿರುವುದಾಗಿ ಅವರು ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಧ್ರುವ ಸರ್ಜಾ ಪತ್ನಿ ಪ್ರೇರಣಾ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದು ನಾರ್ಮಲ್ ಡೆಲಿವರಿ (Normal Delivery) ಆಗಿದೆ. ಹೆರಿಗೆಗೆಂದು ಕೆಆರ್ ರಸ್ತೆಯಲ್ಲಿರೋ (KR Road) ಅಕ್ಷಾ ಆಸ್ಪತ್ರೆಗೆ ಪ್ರೇರಣಾ  (Prerana)ಅವರನ್ನು ದಾಖಲಿಸಲಾಗಿತ್ತು. ಇಂದು ಡೆಲಿವರಿ ಆಗಿದೆ. ಪ್ರೇರಣಾ ಗರ್ಭಿಣಿ ಆಗಿರುವ ವಿಚಾರವನ್ನು ಧ್ರುವ ಸರ್ಜಾ ಹಂಚಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದರು.


ಪತ್ನಿ ಪ್ರೇರಣಾ ಅವರೊಂದಿಗೆ ಫೋಟೋಶೂಟ್ ಮಾಡಿಸುವ ಮೂಲಕ ನಾವು ಈ ತಿಂಗಳಲ್ಲೇ ಅಪ್ಪ ಅಮ್ಮರಾಗಲಿದ್ದೇವೆ ಎಂದು ಖುಷಿಯನ್ನು ಹಂಚಿಕೊಂಡಿದ್ದರು.
ನಾವು ಜೀವನದ ಹೊಸ ಹಂತವನ್ನು ಪ್ರವೇಶಿಸುತ್ತಿದ್ದೇವೆ. ದೈವಿಕವಾಗಿ ನಮ್ಮನ್ನು ಆಶೀರ್ವದಿಸಿ ಎಂದು ಧ್ರುವ ಸರ್ಜಾ ವಿಡಿಯೊ ಪೋಸ್ಟ್‌ ಮಾಡಿ ಬರೆದುಕೊಂಡಿದ್ದರು. 2019, ನವೆಂಬರ್ 24ರಂದು ಈ ಜೋಡಿ ಮದುವೆಯಾಗಿತ್ತು. ಇದೀಗ ಧ್ರುವ, ಪ್ರೇರಣಾ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.


ತನ್ನ ಆಸೆಯಂತೆಯೇ ಮನೆಗೆ ಲಕ್ಷ್ಮಿಯನ್ನು ಸ್ವಾಗತಿಸಿದ ಆ್ಯಕ್ಷನ್ ಪ್ರಿನ್ಸ್


ಧ್ರುವ ಅವರಿಗೆ ಹೆಣ್ಣು ಮಗು ಬೇಕೆಂಬ ಆಸೆ ಇತ್ತು. ಅದರಂತೆಯೇ ಅವರು ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಅಣ್ಣನ ಮಗನೇ ನಮ್ಮ ಮಗ. ನಮಗೆ ಹೆಣ್ಣು ಮಗು ಬೇಕು ಎಂದು ಈ ಹಿಂದೆ ಧ್ರುವ ಹೇಳಿದ್ದರು. ಈಗ ಅವರ ಆಸೆಯಂತೆಯೇ ಅವರಿಗೆ ಹೆಣ್ಣು ಮಗುವಾಗಿದೆ.


ಇದನ್ನೂ ಓದಿ: Dhruva Sarja-Prerana: ಮೊದಲ ಮಗುವಿನ ನಿರೀಕ್ಷೆಯಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ; ಪ್ರೇರಣಾ ಬೇಬಿ ಬಂಪ್ ಫೋಟೋಸ್

Published by:Divya D
First published: