Dhanveer: ಕೆಟ್ಟ ಪದಗಳಿಂದ ಬೈಯ್ತಿದ್ದ.. ನಾನ್​ ಕೈ ಮಾಡಿಲ್ಲ, ಇದರ ಹಿಂದೆ ಯಾರದ್ದೋ ಕುಮ್ಮಕ್ಕಿದೆ ಎಂದ ಧನ್ವೀರ್​!

ಗಲಾಟೆ ವಿಚಾರಕ್ಕೆ ಇದೀಗ ನಟ ಧನ್ವೀರ್​ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದೆಲ್ಲ ನನ್ನ ವಿರುದ್ಧ ಷಡ್ಯಂತ್ರ. ಇದರ ಹಿಂದೆ ಯಾರಿದ್ದಾರೆ ಎಂದು  ನನಗೆ ಗೊತ್ತಿದೆ ಎಂದು ನಟ ಧನ್ವೀರ್​ ಕಿಡಿಕಾರಿದ್ದಾರೆ.

ನಟ ಧನ್ವೀರ್​

ನಟ ಧನ್ವೀರ್​

  • Share this:
ನಟ ಧನ್ವೀರ್ (Dhanveer) ಮತ್ತು ಶ್ರೀಲೀಲಾ (Sreeleela) ಜೋಡಿಯಾಗಿ ನಟಿಸಿರುವ ಸಿನಿಮಾ 'ಬೈಟು ಲವ್' (Bytwo Love) ರಾಜ್ಯಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ನಿರ್ದೇಶಕರು ವಿಭಿನ್ನ ಕಾನ್ಸೆಪ್ಟ್‌(Diffrent Concept) ಮೂಲಕ ಯುವಕರ ಮನಸ್ಸು ಮುಟ್ಟಿದೆ. ಹಾಗೇ ಪ್ರತಿಯೊಬ್ಬರೂ ಕುಟುಂಬ ಸಮೇತರಾಗಿ ನೋಡಬೇಕಾದ ಸಿನಿಮಾವಿದು ಎಂದು ಪ್ರೀ-ರಿಲೀಸ್ ಕಾರ್ಯಕ್ರಮ ಮತ್ತು ಖಾಸಗಿ ಸಂದರ್ಶನಗಳಲ್ಲಿ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು ಹೇಳಿದ್ದಾರೆ. ಆದರೆ, ಈ ಸಿನಿಮಾಗಿಂತ, ಸಿನಿಮಾ ನಟನ ಬಗ್ಗೆಯೇ ಹೆಚ್ಚು ಸುದ್ದಿಯಾಗುತ್ತಿದೆ. ಹೌದು, ನಟ ಧನ್ವೀರ್​ ಅಭಿಮಾನಿ(Fan)ಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಎಫ್​ಐಆರ್(FIR)​ ದಾಖಲಾಗಿದೆ.ಏಟು ತಿಂದ ಯುವಕ ಪೊಲೀಸ್(Police) ಠಾಣೆಯಲ್ಲಿ ದೂರು ನೀಡಿದ್ದಾರೆ. ಅನುಪಮಾ(Anupama) ಚಿತ್ರಮಂದಿರದ ಬಳಿ ತಮ್ಮ ಮೇಲೆ ನಟ ಧನ್ವೀರ್ ಹಾಗೂ ಅವರ ಬೌನ್ಸರ್(Bouncer) ಹಲ್ಲೆ ಮಾಡಿದ್ದಾರೆ ಎಂದು ಚಂದ್ರಶೇಖರ್(Chandrasekar) ಹೆಸರಿನ ಯುವಕ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಗಲಾಟೆ ಬಗ್ಗೆ ನಟ ಧನ್ವೀರ್​ ಫಸ್ಟ್​ ರಿಯಾಕ್ಷನ್​!

ಈ ವಿಚಾರಕ್ಕೆ ಇದೀಗ ನಟ ಧನ್ವೀರ್​ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದೆಲ್ಲ ನನ್ನ ವಿರುದ್ಧ ಷಡ್ಯಂತ್ರ. ಇದರ ಹಿಂದೆ ಯಾರಿದ್ದಾರೆ ಎಂದು  ನನಗೆ ಗೊತ್ತಿದೆ ಎಂದು ನಟ ಧನ್ವೀರ್​ ಕಿಡಿಕಾರಿದ್ದಾರೆ. ಇದೀಗ ಪ್ರಕರ್ತರೊಟ್ಟಿಗೆ ನಟ ಧನ್ವೀರ್ ಈ ಘಟನೆ ಬಗ್ಗೆ ಮಾತನಾಡಿದ್ದಾರೆ. ‘ಇದನೆಲ್ಲ ಬೇಕು ಅಂತಲೇ ಯಾರೋ ಹೇಳಿ ಮಾಡಿಸಿದ್ದಾರೆ’ ಎಂದು ನಟ ಅವರು ಹೇಳಿದ್ದಾರೆ. ಖಾಸಗಿ ಯುಟ್ಯೂಬ್‌ ಚಾನೆಲ್ ವೆಬ್‌ಬಝ್‌ನಲ್ಲಿ ಫೋನ್‌ಕಾಲ್ ಮೂಲಕ ಕೊಟ್ಟಿರುವ ಸ್ಪಷ್ಟನೆ ವೈರಲ್ ಆಗುತ್ತಿದೆ. ಘಟನೆ ಬಗ್ಗೆ ಎಳೆಎಳೆಯಾಗಿ ಧನ್ವೀರ್​ ಬಿಚ್ಚಿಟ್ಟಿದ್ದಾರೆ. ಹಾಗಿದ್ದರೆ ಅವರು ಏನು ಹೇಳಿದ್ದಾರೆ ಅಂತ ಮುಂದೆ ಇದೆ ನೋಡಿ..

ನಶೆಯಲ್ಲಿ ಸೊಂಟದ ಕೆಳಗಿನ ಭಾಷೆಯಲ್ಲಿ ಬೈತ್ತಿದ್ದ!

‘ನಾವು ಗುರುವಾರ ರಾತ್ರಿ ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿದ್ದೆವು. ನಾಯಕಿ ಶ್ರೀಲೀಲಾ, ನಿರ್ದೇಶಕ ಹರಿ ಸಂತೋಶ್ ಸೇರಿ ಇನ್ನೂ ಕೆಲವರು ಜೊತೆ ಇದ್ದರು. ಅನುಪಮಾ ಚಿತ್ರದ ಒಳಗೆ ನಾವು ಕೆಲವು ವಿಡಿಯೋ ರೆಕಾರ್ಡ್‌ಗಳನ್ನು ಮಾಡಿಕೊಳ್ಳುತ್ತಿದ್ದೆವು. ಅದೇ ಸಮಯಕ್ಕೆ ಕೆಲವರು ಗೇಟ್‌ ಬಳಿ ಬಂದು ಪೋಟೋ ಬೇಕು ಎಂದು ಕೇಳಿದರು. ರೆಕಾರ್ಡಿಂಗ್​ ಮುಗಿದ ಮೇಲೆ ಬರುತ್ತೆನೆ ಎಂದು ಹೇಳಿದೆ.ಆದರೆ ಇಬ್ಬರು ಯುವಕರು ಅದರಲ್ಲೂ ಒಬ್ಬಾತ ಬಹಳ ಗಲಾಟೆ ಮಾಡಿದ. ಹುಡುಗಿಯರ ಬಗ್ಗೆ ತೀರ ಅಸಭ್ಯವಾಗಿ, ಸೊಂಟದ ಕೆಳಗಿನ ಭಾಷೆ ಬಳಸಿ ಮಾತನಾಡಿದ. ಆಗ ಅವನಿಗೆ ಸ್ವಲ್ಪ ಬುದ್ಧಿ ಹೇಳಿದೆ. ಆತ ಬಹಳ ನಶೆಯಲ್ಲಿದ್ದ ಇದಾದ ಬಳಿಕ ನಾನು ಅಲ್ಲಿಂದ ಒಳಗೆ ಹೋದೆ’ ಎಂದು ನಟ ಧನ್ವೀರ್​ ಹೇಳಿದ್ದಾರೆ.

ಇದನ್ನೂ ಓದಿ: ನಟ ಧನ್ವೀರ್ ವಿರುದ್ಧ ಅಭಿಮಾನಿ ಮೇಲೆ ಹಲ್ಲೆ ಆರೋಪ, ಅನುಪಮಾ ಥಿಯೇಟರ್ ಬಳಿ ನಡೆದಿದ್ದಾರೂ ಏನು ಗೊತ್ತಾ?

ನೀನ್ಯಾವ ಸೀಮೆ ಹೀರೋ ಎಂದು ಹೇಳಿದ್ದನಂತೆ ಅಭಿಮಾನಿ!

‘ನೀನ್ಯಾವ ಸೀಮೆ ಹೀರೋ ನನ್ನ ನಮಗೆ ಹೀರೋ ಇದ್ದಾನೆ. ನಿನಗೆ ಸರಿಯಾಗಿ ಮಾಡಿ ತೋರಿಸ್ತೀನಿ ನೋಡ್ತಿರು ಎಂದು ಕೆಟ್ಟದಾಗಿ ಬೈಯ್ದ. ನಂತರ ನಮ್ಮ ನಿರ್ದೇಶಕರು ನಮ್ಮನ್ನೆಲ್ಲ ಕರೆದುಕೊಂಡು ಅಲ್ಲಿಂದ ಹೊರಟು ಬಿಟ್ಟರು. ನಾವು ಅಲ್ಲಿಂದ ಬಂದ ಮೇಲೆ ಅಲ್ಲಿ ಮತ್ತೆ ಜಗಳ ಆಗಿ ಯಾರೋ ಹುಡುಗರು ಆ ಹುಡುಗನನ್ನು ಹಿಡಿದುಕೊಂಡು ಹೊಡೆದರಂತೆ. ಈ ಬಗ್ಗೆ ನನಗೆ ಅನುಪಮಾ ಚಿತ್ರಮಂದಿರದವರು ಹೇಳಿದ್ದರು ಎಂದು ಧನ್ವೀರ್​ ಗಲಾಟೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ‘ದಳಪತಿ’ ನೋಡಲು ಮುಗಿಬಿದ್ದ ಫ್ಯಾನ್ಸ್, ತಮಿಳು ನಟ ವಿಜಯ್ ಕೈ ಮುಗಿದು ಕ್ಷಮೆಯಾಚಿಸಿದ್ದು ಯಾಕೆ ಗೊತ್ತಾ?

‘100% ನನ್ನ ಹಿಂದೆ ಷಡ್ಯಂತ್ರ ನಡೀತಿದೆ. ಯಾರ್ ಮಾಡ್ತಿದ್ದಾರೆ, ಅಂತಾನೂ ಗೊತ್ತಾಗಿದೆ. ಅದೆಲ್ಲಾ ಮಾಹಿತಿ ಪಡೆದುಕೊಂಡು, ನಿಮ್ಮ ಮುಂದೆ ಕೂರುತ್ತೇನೆ. ಆ ಪ್ರೆಸ್‌ಮೀಟ್‌ನಲ್ಲಿ ಎಲ್ಲವನ್ನೂ ಬಹಿರಂಗ ಮಾಡ್ತೀನಿ. ಕೆಲವರು ರೌಡಿಸಮ್ ಮಾಡದಕ್ಕೆ ಅಂತಾನೇ ಬಂದು ಕೂತಿದ್ದಾರೆ,' ಎಂದು ಧನ್ವೀರ್ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
Published by:Vasudeva M
First published: